BibleProject | ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ / ಭಾಗ 1 - ಲೂಕನುPrøve
"ಲೂಕನು ಈ ಮುಂದಿನ ವಿಭಾಗದಲ್ಲಿ, ಯೇಸು ತನ್ನ ರಾಜ್ಯವು ಈ ಲೋಕದ ಸ್ಥಿತಿಗತಿ ಹೇಗೆ ತಲೆಕೆಳಗಾಗಿ ಮಾಡುತ್ತದೆ ಎಂಬುದನ್ನು ವಿವರಿಸುವ ಕಥೆಯನ್ನು ಹೇಳುತ್ತಿರುವನು, ಆ ಕಥೆಯು ಹೀಗಿದೆ.
ಸುಂದರವಾದ ಉಡುಗೆ ತೊಡುಗೆ ಧರಿಸಿಕೊಳ್ಳುವ ಮತ್ತು ಸುತ್ತಲು ಗೋಡೆ ಹಾಕಿರುವ ಮನೆಯನ್ನು ಸ್ವಂತವಾಗಿ ಹೊಂದಿರುವ ಧನಿಕನಾದ ಒಬ್ಬ ವ್ಯಕ್ತಿಯಿದ್ದನು. ಈ ಶ್ರೀಮಂತನ ಮನೆಯ ಹೊರಗೆ ಕುಳಿತು ಅವನ ಊಟದ ಮೇಜಿನಿಂದ ಬೀಳುವ ಎಂಜಲಿಗಾಗಿ ಕಾಯುತ್ತಿದ್ದ, ಕಡು ಬಡವನಾದ ಲಾಜರನೆಂಬ ವ್ಯಕ್ತಿ ಇದ್ದನು. ಆದರೆ ಧನಿಕನು ಅವನಿಗೆ ಏನನ್ನೂ ಕೊಡುತ್ತಿರಲಿಲ್ಲ, ಆದರೆ ಕೊನೆಗೆ ಅವರಿಬ್ಬರೂ ಸತ್ತುಹೋದರು. ಲಾಜರನನ್ನು ನಿತ್ಯ ಸುಖಸಂತೋಷವಿರುವ ಸ್ಥಳಕ್ಕೆ ಕರೆದುಕೊಂಡು ಹೋದರು, ಆದರೆ ಧನಿಕನಾದ ವ್ಯಕ್ತಿಯು ಯಾತನೆ ಸ್ಥಳದಲ್ಲಿ ಇದ್ದನು. ಹೇಗೋ ಧನಿಕನಾದ ವ್ಯಕ್ತಿಗೆ ಲಾಜರನನ್ನು ನೋಡಬಹುದಾಗಿತ್ತು, ಅವನು ಲಾಜರನನ್ನು ನೋಡಿದ ಕೂಡಲೇ, ನೀರಿನಲ್ಲಿ ತುದಿ ಬೆರಳನ್ನು ಅದ್ದಿ ತನ್ನ ನಾಲಗೆಯನ್ನು ತಣ್ಣಗೆ ಮಾಡಲು ಲಾಜರನನ್ನು ಕಳುಹಿಸಬೇಕೆಂದು ಕೇಳಿಕೊಂಡನು. ಆದರೆ ಹಾಗೆ ಮಾಡಲು ಆಗುವುದಿಲ್ಲವೆಂದು ಧನಿಕನಾದ ವ್ಯಕ್ತಿಗೆ ಹೇಳಲಾಯಿತು, ಅವನ ಭೂಮಿಯ ಮೇಲಿನ ಜೀವನದ ಕುರಿತೂ, ಲಾಜರನಿಗೆ ಅವನ ಸಹಾಯದ ಅಗತ್ಯತೆ ಇದ್ದಾಗಲೂ ಅವನು ಹೇಗೆ ಐಷಾರಾಮಿಯಾಗಿ ಜೀವಿಸುತ್ತಿದ್ದನು ಎಂಬುದರ ಕುರಿತೂ ಅವನಿಗೆ ನೆನಪಿಸಲಾಯಿತು. ಆದ್ದರಿಂದ ಧನಿಕನಾದ ವ್ಯಕ್ತಿಯು ತನ್ನ ಕುಟುಂಬವು ಈ ಯಾತನೆಯ ಸ್ಥಳದ ಬಾರದಂತೆ ಅವರನ್ನು ಎಚ್ಚರಿಸಲು ಲಾಜರನನ್ನು ಭೂಮಿಗೆ ತನ್ನ ಕುಟುಂಬದ ಬಳಿಗೆ ಕಳುಹಿಸಿಕೊಡಬೇಕೆಂದು ಬೇಡಿಕೊಂಡನು. ಆದರೆ ಇಬ್ರಿಯರ ಪ್ರವಾದಿಗಳ ಬರೆದಿರುವ ಗ್ರಂಥಗಳಲ್ಲಿ ಅವರ ಕುಟುಂಬಕ್ಕೆ ಅಗತ್ಯವಾಗಿರುವ ಎಲ್ಲಾ ಎಚ್ಚರಿಕೆಗಳಿವೆ ಎಂದು ಅವನಿಗೆ ಹೇಳಲಾಯಿತು. ಲಾಜರನು ಸತ್ತವರೊಳಗಿಂದ ಎದ್ದು ಹೋದರೆ ಖಂಡಿತವಾಗಿಯೂ ತನ್ನ ಕುಟುಂಬಕ್ಕೆ ಅದು ಮನವರಿಕೆಯನ್ನು ಉಂಟುಮಾಡುತ್ತದೆ ಎಂದು ಧನಿಕನಾದ ವ್ಯಕ್ತಿಯು ಒತ್ತಾಯಿಸಿದನು. ಆದರೆ ಅದು ನಡೆಯುವುದಿಲ್ಲ ಎಂದು ಅವನಿಗೆ ಹೇಳಲಾಯಿತು. ಮೋಶೆಯ ಮತ್ತು ಪ್ರವಾದಿಗಳ ಮಾತನ್ನು ಕೇಳಲು ನಿರಾಕರಿಸುವವರು ಒಬ್ಬ ವ್ಯಕ್ತಿ ಮರಣದಿಂದ ಎದ್ದು ಬಂದರೂ ಸಹ ಅವರು ಅದನ್ನು ಒಪ್ಪುವುದಿಲ್ಲ.
ಯೇಸು ಈ ಕಥೆಯನ್ನು ಹೇಳಿದ ತರುವಾಯ, ಬೇರೆಯವರಿಗೆ ತೊಡಕನ್ನು ಉಂಟುಮಾಡುವವರಿಗೆ ಸಂಭವಿಸುವಂಥ ತೊಡಕುಗಳ ಕುರಿತು ಯೇಸು ಎಲ್ಲರಿಗೂ ಎಚ್ಚರಿಸಿದನು. ಈ ತೊಡಕುಗಳನ್ನು ದೂರಮಾಡಲು, ಒಬ್ಬರ ವಿಷಯದಲ್ಲಿ ಮತ್ತೊಬ್ಬರು ಎಚ್ಚರಿಕೆಯಿಂದಿರಬೇಕೆಂದೂ ಗುರಿ ತಪ್ಪಿಹೋದವರನ್ನು ತಿದ್ದಿ ಸರಿಪಡಿಸಬೇಕೆಂದೂ ಆತನು ಎಲ್ಲರಿಗೂ ಕಲಿಸಿದನು. ತಿದ್ದಿ ಸರಿಪಡಿಸುವವರ ಮಾತನ್ನು ಕೇಳುವವರು ಕ್ಷಮಾಪಣೆಯನ್ನು ಹೊಂದುವರು, ಆ ಕ್ಷಮಾಪಣೆಯ ಅಗತ್ಯವು ಪದೇ ಪದೇ ಇದ್ದರೂಸಹ ಅವರು ಅದನ್ನು ಹೊಂದಿಕೊಳ್ಳುವರು. ಯೇಸು ಕರುಣಾಮಯನು. ಸಮಯ ಮೀರಿಹೋಗುವುದಕ್ಕಿಂತ ಮೊದಲು ಎಲ್ಲರೂ ಆತನಿಗೆ ಕಿವಿಗೊಡಬೇಕೆಂದು ಆತನು ಬಯಸುತ್ತಾನೆ. ಯೇಸು ಶ್ರಮೆಸಂಕಷ್ಟಗಳನ್ನು ಬದಲಾಯಿಸಲು ಬಂದನು ಆದರೆ ಆತನು ಅದನ್ನು ಹೇಗೆ ಮಾಡುತ್ತಾನೆ? ಆತನು ಸತ್ಯವನ್ನು ಕಲಿಸಿ ಅದನ್ನು ಸ್ವೀಕರಿಸುವ ಎಲ್ಲರಿಗೂ ತ್ಯಾಗಪೂರ್ವಕವಾಗಿ ಕ್ಷಮಾಪಣೆಯನ್ನು ದಯಪಾಲಿಸುತ್ತಾನೆ. ಅದೇ ರೀತಿಯಲ್ಲಿ, ಆತನ ಹಿಂಬಾಲಕರು ಇತರರಿಗೆ ಕಲಿಸುವವರೂ ಕ್ಷಮಿಸುವವರೂ ಆಗಿರಬೇಕು.
ಯೇಸುವಿನ ಶಿಷ್ಯರು ಇದನ್ನೆಲ್ಲ ಕೇಳಿಸಿಕೊಂಡು, ಯೇಸುವಿನ ಮಾತುಗಳನ್ನು ಕೈಕೊಂಡು ನಡೆಯಲು ಬೇಕಾದ ದೈವ ನಂಬಿಕೆಯು ತಮ್ಮಲ್ಲಿ ಇಲ್ಲವೆಂದು ಅರಿತುಕೊಂಡಿದ್ದರಿಂದ ಅವರು ನಂಬಿಕೆಯನ್ನು ಹೆಚ್ಚಿಸು ಎಂದು ಬೇಡಿಕೊಂಡರು.
ಓದಿರಿ, ಯೋಚಿಸಿರಿ ಮತ್ತು ಪ್ರತಿಕ್ರಿಯಿಸಿರಿ:
•ಯೇಸು ಲೂಕನ ಸುವಾರ್ತೆ 16: 19-31 ರಲ್ಲಿ ಹೇಳಿರುವ ಕಥೆಯನ್ನು ಸೂಕ್ಷ್ಮವಾಗಿ ಅವಲೋಕಿಸಿರಿ. ಯೇಸು ಹೇಳಿದ ಕಥೆಯು ಹೇಗೆ ನಿಮಗೆ ಅನ್ವಯವಾಯಿಸುತ್ತದೆ ಮತ್ತುಲೂಕನ ಸುವಾರ್ತೆ 17:1-4 ರಲ್ಲಿರುವ ಆತನ ಬೋಧನೆಗಳನ್ನು ಪ್ರಶಂಸಿಸಲು ಹೇಗೆ ಸಹಾಯ ಮಾಡುತ್ತದೆ? ನೀವು ಆ ಕಥೆಯಲ್ಲಿ ಒಂದು ಪಾತ್ರವಾಗಿದ್ದರೆ, ಲಾಜರನ ಮತ್ತು ಶ್ರೀಮಂತನೊಂದಿಗಿನ ನಿಮ್ಮ ಮಾತುಕತೆಯನ್ನು ಯೇಸು ಹೇಗೆ ವಿವರಿಸುತ್ತಿದ್ದನು ಎಂದು ನೀವು ಭಾವಿಸುತ್ತೀರಿ?
•ಲೂಕ 17: 3 ರಲ್ಲಿರುವ ಯೇಸುವಿನ ಮಾತುಗಳ ಕುರಿತು ಯೋಚಿಸಿರಿ. ಯಾರಾದರೂ ನಿಮಗೆ ವಿರುದ್ಧವಾಗಿ ಪಾಪ ಮಾಡಿದರೆ ನೀವು ಏನು ಮಾಡುತ್ತೀರಿ? ಒಳ್ಳೆಯ ರೀತಿಯ ಎದುರಿಸುವಿಕೆಯು ಹೇಗೆ ಪ್ರೀತಿಯ ಕ್ರಿಯೆಯಾಗುತ್ತದೆ? ಅದನ್ನು ಮಾಡಲು ಏಕೆ ಅಷ್ಟೊಂದು ಕಷ್ಟ? ಯಾರಾದರೂ ನಿಮ್ಮನ್ನು ತಿದ್ದಿ ಕ್ಷಮಿಸಿದ ಒಂದು ಸಂದರ್ಭದ ಕುರಿತು ಯೋಚಿಸಿ ನೋಡಿರಿ. ಅದು ಯಾವ ರೀತಿಯಲ್ಲಿತ್ತು?
•ನಿಮಗೆ ಕ್ಷಮಾಪಣೆ ಏಕೆ ಬೇಕು? ನಿಮ್ಮ ಕ್ಷಮಾಪಣೆಯ ಅಗತ್ಯವು ಯಾರಿಗಿದೆ?
•ನಿಮ್ಮ ಓದುವಿಕೆಯೂ ಪ್ರತಿಫಲನವೂ ಪ್ರಾರ್ಥಿಸುವಂತೆ ನಿಮ್ಮನ್ನು ಪ್ರೇರೇಪಿಸಲಿ. ದೇವರ ತ್ವರಿತವಾದ ಮತ್ತು ಪ್ರೀತಿಪೂರ್ಕವಾದ ಎಚ್ಚರಿಕೆಯ ಮಾತುಗಳಿಗಾಗಿ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿರಿ, ನೀವು ಇತರರಿಗೆ ನೋವನ್ನುಂಟುಮಾಡಿದ ರೀತಿಗಳಿಗಾಗಿ ಕ್ಷಮೆಯನ್ನು ಕೇಳಿರಿ, ನಿಮ್ಮನ್ನು ನೋಯಿಸಿದವರನ್ನು ಕ್ಷಮಿಸಿರಿ, ಮತ್ತು ಜಗತ್ತಿನಲ್ಲಿ ಸಂಕಷ್ಟವನ್ನು ಬದಲಾಯಿಸುವ ಯೇಸುವಿನ ಸೇವಾಕಾರ್ಯದಲ್ಲಿ ಸೇರಲು ನಿಮಗೆ ಬೇಕಾದ ನಂಬಿಕೆಯನ್ನು ಆತನ ಬಳಿ ಕೇಳಿಕೊಳ್ಳಿರಿ."
Skriften
Om denne planen
ಲೂಕನ ಸುವಾರ್ತೆಯನ್ನು 20 ದಿನಗಳಲ್ಲಿ ಓದುವಂತೆ ವ್ಯಕ್ತಿಗಳನ್ನು, ಸಣ್ಣ ಗುಂಪುಗಳನ್ನು ಮತ್ತು ಕುಟುಂಬಗಳನ್ನು ಪ್ರೇರೇಪಿಸಲು ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ ಭಾಗ 1 ಅನ್ನು ಬೈಬಲ್ ಪ್ರಾಜೆಕ್ಟ್ ರಚಿಸಿದೆ. ಅದರಲ್ಲಿ ಪಾಲ್ಗೊಳ್ಳುವವರು ಯೇಸುವನ್ನು ಕಂಡುಕೊಳ್ಳುವುದಕ್ಕೆ ಮತ್ತು ಲೂಕನ ಅತ್ಯುತ್ತವಾದ ಸಾಹಿತ್ಯ ರಚನೆಯನ್ನೂ ವಿಚಾರಧಾರೆಯನ್ನೂ ತಿಳಿದುಕೊಳ್ಳುವುದಕ್ಕೆ ಸಹಾಯ ಮಾಡಲು ಈ ಯೋಜನೆಯಲ್ಲಿ ಅನಿಮೇಟೆಡ್ ವೀಡಿಯೊಗಳು, ಗಹನವಾದ ಜ್ಞಾನವುಳ್ಳ ಸಾರಾಂಶಗಳು ಮತ್ತು ಚಿಂತನಾತ್ಮಕ ಪ್ರಶ್ನೆಗಳು ಇವೆ.
More