BibleProject | ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ / ಭಾಗ 1 - ಲೂಕನುPrøve
"ನಾವು ಇಂದಿನ ವಾಕ್ಯಭಾಗವನ್ನು ಓದುವುದನ್ನು ಪ್ರಾರಂಭಿಸುವುದಕ್ಕಿಂತ ಮೊದಲು, ಒಂಬತ್ತನೆಯ ಅಧ್ಯಾಯವನ್ನು ನೋಡಿಕೊಳ್ಳೋಣ, ಅದರಲ್ಲಿ ಯೆಶಾಯ 53 ನೇ ಅಧ್ಯಾಯದಲ್ಲಿ ತಿಳಿಸಿರುವ ಶ್ರಮೆ ಸಂಕಟಗಳನ್ನು ಅನುಭವಿಸುವ ಸೇವಕನಾಗುವ ಮೂಲಕ ಇಸ್ರಾಯೇಲಿನ ಮೇಲೆ ತನ್ನ ಆಳ್ವಿಕೆಯನ್ನು ಸ್ಥಾಪಿಸುವುದಾಗಿ ಯೇಸು ಮಾಡಿಕೊಂಡಿದ್ದ ಆಶ್ಚರ್ಯಚಕಿತವಾದ ಯೋಜನೆಯನ್ನು ಲೂಕನು ತಿಳಿಯಪಡಿಸುತ್ತಿದ್ದಾನೆ. ಎಲೀಯನೂ ಮೋಶೆಯೂ ಯೇಸು ಮರಣ ಅಥವಾ “ನಿರ್ಗಮನದ" ಕುರಿತು ಮಾತನಾಡುತ್ತಿರುವುದನ್ನು ಲೂಕನು ತಿಳಿಸುತ್ತಿರುವನು. ಯೇಸು ತನ್ನ ನಿರ್ಗಮನದ (ಮರಣ) ಮೂಲಕ ಇಸ್ರಾಯೇಲ್ಯರನ್ನು ಪಾಪದ ಮತ್ತು ದುಷ್ಟತನದ ಪ್ರಭುತ್ವದಿಂದಲೂ ಅದರ ಎಲ್ಲಾ ತರಹದ ಕಾರ್ಯಗಳಿಂದಲೂ ಬಿಡಿಸುವ ಹೊಸ ಮೋಶೆಯಾಗಿದ್ದಾನೆ. ದಿಗ್ಭ್ರಮೆ ಹಿಡಿಸುವ ಈ ಪ್ರಕಟಣೆಯ ನಂತರ, ಪಸ್ಕ ಹಬ್ಬಕ್ಕಾಗಿ ಯೇಸು ರಾಜಧಾನಿಯತ್ತ ಮಾಡಿದ ಸುದೀರ್ಘ ಪ್ರಯಾಣದ ಕಥೆಯನ್ನು ಲೂಕನು ಹೇಳಲು ಪ್ರಾರಂಭಿಸುತ್ತಿರುವನು, ಅಲ್ಲಿ ಆತನು ಸಾಯುವ ಮೂಲಕ ಇಸ್ರಾಯೇಲರ ನಿಜವಾದ ರಾಜನಾಗಿ ಸಿಂಹಾಸನವನ್ನೇರುವನು.
ನಾವು ಇವತ್ತು 22 ನೇ ಅಧ್ಯಾಯನವನ್ನು ಓದುವಾಗ, ದೇವರು ಇಸ್ರಾಯೇಲರನ್ನು ದಾಸತ್ವದಿಂದ ಹೇಗೆ ಬಿಡಿಸಿದನೆಂಬುದನ್ನು ಸ್ಮರಿಸುವುದಕ್ಕಾಗಿ ಆಚರಿಸುವ ಯೆಹೂದ್ಯರ ವಾರ್ಷಿಕ ಹಬ್ಬವಾದ ಪಸ್ಕ ಹಬ್ಬವನ್ನು ಆಚರಿಸಲು ಯೇಸು ಯೆರೂಸಲೇಮಿಗೆ ಬಂದು ತಲುಪಿರುವುದನ್ನು ನಾವು ಕಾಣುತ್ತೇವೆ. ಸಾಂಪ್ರದಾಯಿಕ ಹಬ್ಬವಾದ ಪಸ್ಕ ಹಬ್ಬವನ್ನು ಆಚರಿಸುವುದಕ್ಕಾಗಿ ಯೇಸು ತನ್ನ ಹನ್ನೆರಡು ಮಂದಿ ಶಿಷ್ಯರೊಂದಿಗೆ ಒಟ್ಟಾಗಿ ಸೇರಿರುವಾಗ, ಆತನು ರೊಟ್ಟಿಯ ಮತ್ತು ಪಾತ್ರೆಯಲ್ಲಿದ್ದ ದ್ರಾಕ್ಷಾರಸದ ಸಾಂಕೇತಿಕವಾದ ಅರ್ಥವನ್ನು ತನ್ನ ಶಿಷ್ಯರು ಹಿಂದೆಂದೂ ಕೇಳಿರದ ರೀತಿಯಲ್ಲಿ ವಿವರಿಸಿದನು, ಆದರೆ ವಿಮೋಚನಕಾಂಡದ ಕಥೆಯು ಯಾವಾಗಲೂ ಅದನ್ನೇ ಸೂಚಿಸುತ್ತಿತ್ತು. ಮುರಿದ ರೊಟ್ಟಿಯು ತನ್ನ ದೇಹವನ್ನುಪ್ರತಿನಿಧಿಸುತ್ತದೆ ಮತ್ತು ದ್ರಾಕ್ಷಾರಸವು ದೇವರ ಮತ್ತು ಇಸ್ರಾಯೇಲರ ನಡುವೆ ಹೊಸ ಒಡಂಬಡಿಕೆಯ ಸಂಬಂಧವನ್ನು ಸ್ಥಾಪಿಸುವಂಥ ತನ್ನ ರಕ್ತವನ್ನು ಪ್ರತಿನಿಧಿಸುತ್ತದೆ ಎಂದು ತನ್ನ ಶಿಷ್ಯರಿಗೆ ಹೇಳಿದನು. ಇದರಲ್ಲಿ, ಯೇಸು ತನಗೆ ಸಂಭವಿಸಲಿಕ್ಕಿರುವ ಮರಣದ ಅರ್ಥವನ್ನು ತಿಳಿಯಪಡಿಸಲು ಪಸ್ಕ ಹಬ್ಬದ ಗುರುತುಗಳನ್ನು ಬಳಸಿದನು, ಆದರೆ ಶಿಷ್ಯರಿಗೆ ಅದು ಅರ್ಥವಾಗಲಿಲ್ಲ. ಅದಾದ ಕೂಡಲೇ ಅವರು ದೇವರ ರಾಜ್ಯದಲ್ಲಿ ಯಾರು ದೊಡ್ಡವರು ಎಂಬುದರ ಬಗ್ಗೆ ವಾದ ಮಾಡತೊಡಗಿದರು, ಅನಂತರ ಆ ರಾತ್ರಿಯಲ್ಲಿ ಎಚ್ಚರವಾಗಿದ್ದು ಯೇಸುವಿನೊಂದಿಗೆ ಪ್ರಾರ್ಥಿಸಲು ಸಹ ಅವರಿಂದ ಆಗಲಿಲ್ಲ. ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನು ಯೇಸುವನ್ನು ಕೊಲ್ಲುವುದಕ್ಕಾಗಿ ಸಹಾಯ ಮಾಡಿದನು ಮತ್ತೊಬ್ಬ ಶಿಷ್ಯನು ತನಗೆ ಯೇಸು ಯಾರೆಂದು ಗೊತ್ತಿಲ್ಲವೆಂದು ಆತನನ್ನು ಅಲ್ಲಗೆಳೆದನು.
ಓದಿರಿ, ಯೋಚಿಸಿರಿ ಮತ್ತು ಪ್ರತಿಕ್ರಿಯಿಸಿರಿ:
•ಯೇಸು ಈ ಲೋಕದ ಪದ್ಧತಿಗಳನ್ನೂ ಅಧಿಕಾರದ ವ್ಯವಸ್ಥೆಗಳನ್ನೂ ತಲೆಕೆಳಗಾಗಿ ಮಾಡಿದನು. ಆತನ ರಾಜ್ಯದಲ್ಲಿ, ರಾಜನು ಒಂದು ಪ್ರಾಂತ್ಯವನ್ನು ಗೆದ್ದು ಸಿಂಹಾಸನವನ್ನೇರಲು ಕೊಲೆಯನ್ನು ಮಾಡುವುದಿಲ್ಲ, ಅದಕ್ಕೆ ಬದಲಾಗಿ ಆತನೇ ಕೊಲಲ್ಪಟ್ಟು ಶ್ರಮೆಯನ್ನುಭವಿಸುವ ಸೇವಕನಾಗಿ ಸಾಯುತ್ತಾನೆ. ಹಾಗೆಯೇ, ಆತನ ರಾಜ್ಯದಲ್ಲಿನ ನಾಯಕರು ಉನ್ನತ ಸ್ಥಾನಕ್ಕೆ ಏರಲು ಇತರರನ್ನು ತುಳಿಯುವುದಿಲ್ಲ, ಅದಕ್ಕೆ ಬದಲಾಗಿ ಅವರು ಇತರರನ್ನು ತಮಗಿಂತ ಶ್ರೇಷ್ಟರೆಂದು ಎಣಿಸಿ ಸೇವೆ ಮಾಡಲು ತೀರ್ಮಾನಿಸುತ್ತಾರೆ (22:24-27 ಅನ್ನು ನೋಡಿರಿ). ಇದು ಇಂದು ನಿಮ್ಮನ್ನು ಹೇಗೆ ಪ್ರೋತ್ಸಾಹಿಸುತ್ತದೆ ಅಥವಾ ನಿಮಗೆ ಸವಾಲು ಹಾಕುತ್ತದೆ?
•ಲೂಕ 22:28-30 ಅನ್ನು ಓದಿ ಅವಲೋಕಿಸಿರಿ. ತನ್ನ ಶಿಷ್ಯರು ಬಹು ಬೇಗನೇ ಎಡವಿ ಬೀಳುತ್ತಾರೆಂದು ಯೇಸುವಿಗೆ ತಿಳಿದಿದ್ದರೂ ಸಹ ಆತನು ಈ ಆಶ್ಚರ್ಯಕರವಾದ ಮಾತನ್ನು ತಿಳಿಸಿದನು! ಇದು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಯೇಸು ಮತ್ತು ಆತನ ರಾಜ್ಯದ ಬಗ್ಗೆ ಇದು ನಿಮಗೆ ಏನನ್ನು ಹೇಳುತ್ತದೆ?
•ಪೇತ್ರನ ದೃಢವಲ್ಲದ ಭರವಸೆಯೊಂದಿಗೆ ನಿಮ್ಮನ್ನು ನೀವು ಹೇಗೆ ಗುರುತಿಸಿಕೊಳ್ಳುವಿರಿ (22:33 ನೋಡಿರಿ)? ಯೇಸುವಿಗೆ ನೀವು ಮಾಡಿರುವ ನಿಮ್ಮ ಸಮರ್ಪಣೆಯುಯ ಹೇಗೆ ಪರೀಕ್ಷಿಸಲ್ಪಟ್ಟಿದೆ? ನೀವು ಹೇಗೆ ಎಡವಿ ಬಿದ್ದಿದ್ದೀರಿ (22:54-62 ನೋಡಿರಿ)? ನಿಮಗಾಗಿ ಯೇಸು ಮಾಡಿದ ಪ್ರಾರ್ಥನೆಗಳು ಯಾವ ರೀತಿ ಸಫಲವಾಗುವುದನ್ನು ನೀವು ನೋಡಿದ್ದೀರಿ? ಇವೆಲ್ಲದರಲ್ಲಿ ನೀವು ಏನನ್ನು ಕಲಿತಿದ್ದೀರಿ ಮತ್ತು ಇತರರನ್ನು ಬಲಪಡಿಸಲು ನೀವು ಕಲಿತದ್ದನ್ನು ಅವರೊಂದಿಗೆ ಹೇಗೆ ಹಂಚಿಕೊಳ್ಳುವಿರಿ (22:32 ನೋಡಿರಿ)?
•ನಿಮ್ಮ ಓದುವಿಕೆಯೂ ಪ್ರತಿಫಲನವೂ ಪ್ರಾರ್ಥಿಸುವಂತೆ ನಿಮ್ಮನ್ನು ಪ್ರೇರೇಪಿಸಲಿ. ಪಾಪದ ದಾಸತ್ವದಿಂದ ಮನುಷ್ಯರನ್ನು ಬಿಡಿಸಲು ಶ್ರಮೆ ಸಂಕಟವನ್ನು ಅನುಭವಿಸಿದ್ದಕ್ಕಾಗಿ ಯೇಸುವಿಗೆ ಕೃತಜ್ಞತೆಯನ್ನು ಸಲ್ಲಿಸಿರಿ, ಈ ಸ್ವಾತಂತ್ರ್ಯವನ್ನು ಹೊಂದಿಕೊಳ್ಳಲು ಅಥವಾ ಅನುಭವಿಸಲು ನೀವು ಯಾವ ವಿಷಯದಲ್ಲಿ ತೊಂದರೆ ಪಡುತ್ತಿದ್ದೀರಿ ಎಂಬುದನ್ನು ಮತ್ತು ಇಂದು ನಿಮಗೆ ಬೇಕು ಎಂಬುದನ್ನು ಆತನಿಗೆ ಪ್ರಾಮಾಣಿಕವಾಗಿ ತಿಳಿಸಿರಿ."
Skriften
Om denne planen
ಲೂಕನ ಸುವಾರ್ತೆಯನ್ನು 20 ದಿನಗಳಲ್ಲಿ ಓದುವಂತೆ ವ್ಯಕ್ತಿಗಳನ್ನು, ಸಣ್ಣ ಗುಂಪುಗಳನ್ನು ಮತ್ತು ಕುಟುಂಬಗಳನ್ನು ಪ್ರೇರೇಪಿಸಲು ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ ಭಾಗ 1 ಅನ್ನು ಬೈಬಲ್ ಪ್ರಾಜೆಕ್ಟ್ ರಚಿಸಿದೆ. ಅದರಲ್ಲಿ ಪಾಲ್ಗೊಳ್ಳುವವರು ಯೇಸುವನ್ನು ಕಂಡುಕೊಳ್ಳುವುದಕ್ಕೆ ಮತ್ತು ಲೂಕನ ಅತ್ಯುತ್ತವಾದ ಸಾಹಿತ್ಯ ರಚನೆಯನ್ನೂ ವಿಚಾರಧಾರೆಯನ್ನೂ ತಿಳಿದುಕೊಳ್ಳುವುದಕ್ಕೆ ಸಹಾಯ ಮಾಡಲು ಈ ಯೋಜನೆಯಲ್ಲಿ ಅನಿಮೇಟೆಡ್ ವೀಡಿಯೊಗಳು, ಗಹನವಾದ ಜ್ಞಾನವುಳ್ಳ ಸಾರಾಂಶಗಳು ಮತ್ತು ಚಿಂತನಾತ್ಮಕ ಪ್ರಶ್ನೆಗಳು ಇವೆ.
More