BibleProject | ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ / ಭಾಗ 1 - ಲೂಕನುPrøve

BibleProject | ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ / ಭಾಗ 1 - ಲೂಕನು

Dag 1 av 20

"ಲೂಕನು ಯೇಸುವಿನ ಜೀವನವನ್ನು ಮೊದಲಿನಿಂದ ಪ್ರತ್ಯಕ್ಷವಾಗಿ ಕಂಡಂಥ ಅನೇಕ ಸಾಕ್ಷಿಗಳನ್ನು ವಿಚಾರಿಸಿ ಈ ಕಥಾ ವಿವರಣೆಯನ್ನು ಬರೆದಿದ್ದಾನೆ. ಯೆರೂಸಲೇಮಿನ ಬೆಟ್ಟಗಳಲ್ಲಿ ಈ ಕಥೆಯು ಪ್ರಾರಂಭವಾಯಿತು, ದೇವರು ತಾನೇ ತನ್ನ ರಾಜ್ಯವನ್ನು ಭೂಮಿಯ ಎಲ್ಲ ಕಡೆ ಸ್ಥಾಪಿಸುವುದಕ್ಕಾಗಿ ಒಂದು ದಿನ ಬರುತ್ತಾನೆ ಎಂದು ಇಸ್ರಾಯೇಲಿನ ಹಳೆ ಕಾಲದ ಪ್ರವಾದಿಗಳು ಹೇಳಿದ ಸ್ಥಳವು ಇದೇ.

ಒಂದಾನೊಂದು ದಿನ ಯೆರೂಸಲೇಮಿನ ದೇವಾಲಯದಲ್ಲಿ ಜಕರೀಯ ಎಂಬ ಒಬ್ಬ ಯಾಜಕನು ಸೇವೆ ಮಾಡುತ್ತಿದ್ದಾಗ ಅವನಿಗೆ ಒಂದು ದರ್ಶನವಾಯಿತು ಅದು ಅವನನ್ನು ಭಯಭ್ರಾಂತನನ್ನಾಗಿಸಿತು. ಒಬ್ಬ ದೇವದೂತನು ಪ್ರತ್ಯಕ್ಷನಾಗಿ ಅವನಿಗೂ ಅವನ ಹೆಂಡತಿಗೂ ಒಬ್ಬ ಮಗ ಹುಟ್ಟುವನು ಎಂದು ಹೇಳಿದನು. ಇದು ವಿಚಿತ್ರವಾದದ್ದು ಏಕೆಂದರೆ ಜಕರೀಯನೂ ಅವನ ಹೆಂಡತಿಯೂ ತುಂಬಾ ವಯಸ್ಸಾದವರು ಆಗಿದ್ದರು ಮತ್ತು ಅವರಿಗೆ ಮಕ್ಕಳಾಗುವ ಸಾಧ್ಯತೆಯಿರಲಿಲ್ಲ ಎಂದು ಲೂಕನು ಹೇಳುತ್ತಾನೆ. ಈ ವಿವರಣೆಯೊಂದಿಗೆ, ಇಲ್ಲಿ ಲೂಕನು ಇಸ್ರಾಯೇಲಿನ ಪೂರ್ವಿಕರಾದ ಅಬ್ರಹಾಮನ, ಸಾರಾಳ ಕಥೆಯನ್ನು ಅವರ ಕಥೆಯೊಂದಿಗೆ ಹೋಲಿಕೆ ಮಾಡುತ್ತಿದ್ದಾನೆ. ಅವರೂ ಸಹ ತುಂಬಾ ವಯಸ್ಸಾದವರೂ ಆಗಿದ್ದರು. ದೇವರು ಅವರಿಗೆ ಅದ್ಭುತಕರವಾಗಿ ಇಸಾಕ ಎಂಬ ಮಗನನ್ನು ಕೊಡುವವರೆಗೂ ಅವರಿಗೆ ಮಕ್ಕಳಾಗುವ ಸಾಧ್ಯತೆಯಿರಲಿಲ್ಲ, ಆತನ ಮೂಲಕವೇ ಇಸ್ರಾಯೇಲಿನ ಚರಿತ್ರೆಯು ಪ್ರಾರಂಭವಾಯಿತು. ಆದ್ದರಿಂದ ದೇವರು ಮತ್ತೊಮ್ಮೆ ಈ ಜನರಿಗಾಗಿ ಮಹತ್ತಾದ ಕಾರ್ಯವನ್ನು ಮಾಡಲಿದ್ದಾನೆ ಎಂದು ಲೂಕನು ಇಲ್ಲಿ ಸೂಚಿಸುತ್ತಿದ್ದಾನೆ. ಆ ಮಗನಿಗೆ ಯೋಹಾನನು ಎಂದು ಹೆಸರಿಡಬೇಕೆಂದು ದೇವದೂತನು ಜಕರೀಯನಿಗೆ ಹೇಳಿದನು.
ಈ ಮಗನು ಇಸ್ರಾಯೇಲಿನ ಹಳೆ ಕಾಲದ ಪ್ರವಾದಿಗಳು ನುಡಿದಿದ್ದ ವಾಗ್ದಾನವನ್ನು ನೆರವೇರಿಸುವನು ಎಂದು ದೂತನು ಅವನಿಗೆ ಹೇಳಿದನು: ಅದೇನಂದರೆ ದೇವರು ಯೆರೂಸಲೇಮಿನಲ್ಲಿ ಆಳ್ವಿಕೆಮಾಡಲು ಬರುವಾಗ ಅತನನ್ನು ಸಂಧಿಸಲು ಇಸ್ರಾಯೇಲ್ಯರನ್ನು ಸಿದ್ಧಪಡಿಸುವದಕ್ಕಾಗಿ ಒಬ್ಬನು ಬರುತ್ತಾನೆ ಎಂಬುದೇ,ಜಕರೀಯನಿಗೆ ಅದನ್ನು ನಂಬಲು ಸಾಧ್ಯವಾಗಲೇ ಇಲ್ಲ ಮತ್ತು ಯೋಹಾನನು ಹುಟ್ಟುವವರೆಗೂ ಅವನು ಮೂಕನಾಗಿದ್ದನು.

ಅದೇ ದೇವದೂತನು ಮರಿಯಳು ಎಂಬ ಕನ್ನಿಕೆಯನ್ನು ಸಂಧಿಸಿ ಬೆಚ್ಚಿಬೀಳಿಸುವ ಸುದ್ದಿಯನ್ನುಆಕೆಗೆ ತಿಳಿಸಿದನು. ಇಸ್ರಾಯೇಲಿನ ಪ್ರವಾದಿಗಳು ವಾಗ್ದಾನ ಮಾಡಿದಂತೆಯೇ ಆಕೆಯು ಕೂಡ ಅದ್ಭುತಕರವಾಗಿ ಮಗನನ್ನು ಹೆರುವಳು. ಆತನಿಗೆ ಯೇಸು ಎಂದು ಹೆಸರಿಡಬೇಕೆಂದು ಮತ್ತು ಆತನು ದಾವೀದನಂತೆ ರಾಜನಾಗಿ, ದೇವರ ಜನರನ್ನು ಸದಾಕಾಲ ಆಳುವನು ಎಂದು ದೇವದೂತನು ಆಕೆಗೆ ಹೇಳಿದನು. ತನ್ನ ಗರ್ಭಧಲ್ಲಿ ರೂಪಗೊಂಡು ಜನಿಸುವ ಮೆಸ್ಸೀಯನ ಮೂಲಕ ದೇವರು ಮಾನವಕುಲದೊಂದಿಗೆ ಸಂಬಂಧವನ್ನು ಬೆಸೆಯುವನು ಎಂದು ಆಕೆ ತಿಳಿದುಕೊಂಡಳುಹೀಗೆ ಯಾವುದೋ ಕುಗ್ರಾಮದಲ್ಲಿದ್ದ ಮರಿಯಳೆಂಬ ಹುಡುಗಿಯು ಮಂಬರಲಿರುವ ರಾಜನ ತಾಯಿಯಾಗುವಳು. ಅವಳು ಆಶ್ಚರ್ಯಚಕಿತಳಾಗಿ, ತನ್ನ ಸಾಮಾಜಿಕ ಸ್ಥಾನಮಾನಕ್ಕೆ ಉಂಟಾದ ಉನ್ನತಿಯು ಮುಂಬರಲಿರುವ ಮಹಾ ಬದಲಾವಣೆಯನ್ನು ಹೇಗೆ ಸೂಚಿಸುತ್ತದೆ ಎಂಬುದರ ಕುರಿತು ಅವಳು ಒಂದು ಹಾಡನ್ನು ಹಾಡಿದಳು. ಆಕೆಯ ಮಗನ ಮೂಲಕ ದೇವರು ಪ್ರಭುಗಳನ್ನು ಅವರ ಸಿಂಹಾಸನಗಳಿಂದ ಕೆಳಗಿಳಿಸಿ ದೀನದರಿದ್ರರನ್ನೂ ಮೇಲೆತ್ತುವನು. ಆತನು ಇಡೀ ಲೋಕದ ವ್ಯವಸ್ಥೆಯನ್ನು ತಲೆಕೆಳಗಾಗಿ ಮಾಡುವನು.

ಓದಿರಿ, ಯೋಚಿಸಿರಿ ಮತ್ತು ಪ್ರತಿಕ್ರಿಯಿಸಿರಿ:

•ಜಕರೀಯನ ಮತ್ತು ಎಲಿಸಬೇತಳ ಅನುಭವಗಳನ್ನು ಅಬ್ರಹಾಮನ ಮತ್ತು ಸಾರಾಳ ಅನುಭವಗಳೊಂದಿಗೆ ಹೋಲಿಸಿ ನೋಡಿರಿ. ದೇವರ ವಾಗ್ದಾನಗಳನ್ನು ನಂಬಲು ಎರಡು ಕುಟುಂಬಗಳು ಹೇಗೆ ಹೋರಾಡಿ ಜಯಿಸಿದರು? ಲೂಕನು 1:5-25 ಮತ್ತು ಆದಿಕಾಂಡ 15:1-6, 16:1-4, 17:15-22, 18:9-15, 21:1-7 ನೋಡಿರಿ.

•ದೇವದೂತನು ತಿಳಿಸಿದ ಬೆಚ್ಚಿಬೀಳಿಸುವಂತಹ ಸುದ್ದಿಗೆ ಮರಿಯಳು ಮತ್ತು ಜಕರೀಯನು ಹೇಗೆ ಪ್ರತಿಕ್ರಿಯಿಸಿದರು? ಅವರು ದೇವದೂತನಿಗೆ ಕೇಳಿದ ಪ್ರಶ್ನೆಗಳಲ್ಲಿರುವ ವ್ಯತ್ಯಾಸಗಳನ್ನು ಗಮನಿಸಿರಿ. ಅದು ಸಂಭವಿಸುತ್ತದೆ ಎಂದು ತಾನು ಹೇಗೆ ದೃಢಪಡಿಸಿಕೊಳ್ಳಬಹುದು ಎಂಬುದನ್ನು ಜಕರೀಯನು ತಿಳಿಯಲು ಬಯಸಿದನು, ಆದರೆ ಮರಿಯಳು ಅದು ಸಂಭವಿಸುವ ರೀತಿಯನ್ನು ತಿಳಿಯಲು ಬಯಸಿದಳು. ಒಬ್ಬರಿಗೆ ಸಂದೇಹವಿದೆ, ಮತ್ತೊಬ್ಬರಿಗೆ ಕುತೂಹಲವಿದೆ. ದೇವರ ರಾಜ್ಯದ ಕುರಿತಾದ ಸಾರಲ್ಪಡುವಿಕೆ ನಿಮ್ಮ ಪ್ರತಿಕ್ರಿಯೆ ಏನು?

•ಮರಿಯಳ ಹಾಡನ್ನು (ಲೂಕನು 1:46-55) ಹನ್ನಳ ಹಾಡಿನೊಂದಿಗೆ (1 ಸಮುವೇಲನು 2:1-10) ಹೋಲಿಸಿ ನೋಡಿರಿ. ನೀವು ಏನನ್ನು ಗಮನಿಸಿದ್ದೀರಿ? ಮರಿಯಳ ಮತ್ತು ಹನ್ನಳ ಹಾಡುಗಳು ತಲೆಕೆಳಗಾಗಿ ಮಾಡುವ ದೇವರ ರಾಜ್ಯದ ಸ್ವಭಾವವನ್ನು ಹೇಗೆ ತಿಳಿಯಪಡಿಸುತ್ತವೆ?

•ನಿಮ್ಮ ಓದುವಿಕೆಯೂ ಪ್ರತಿಫಲನವೂ ಪ್ರಾರ್ಥಿಸುವಂತೆ ನಿಮ್ಮನ್ನು ಪ್ರೇರೇಪಿಸಲಿ. ನಿಮಗೆ ಸ್ಪೂರ್ತಿಕೊಟ್ಟಂತಹ ಆಶ್ಚರ್ಯಕರವಾದ ವಿಷಯದ ಕುರಿತು, ಮತ್ತು ಆತನ ಸಂದೇಶವನ್ನು ಹೇಗೆ ಒಪ್ಪಿಕೊಳ್ಳುತ್ತೀರಿ ಎಂಬುದರ ಕುರಿತು ದೇವರೊಡನೆ ಮಾತನಾಡಿರಿ. ನಿಮ್ಮ ಸಂದೇಹಗಳನ್ನು ಯಥಾರ್ಥವಾಗಿ ತಿಳಿಸಿರಿ, ಮತ್ತು ನಿಮಗೆ ಬೇಕಾದುದ್ದನ್ನು ಆತನಲ್ಲಿ ಬೇಡಿಕೊಳ್ಳಿರಿ."

Dag 2

Om denne planen

BibleProject | ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ / ಭಾಗ 1 - ಲೂಕನು

ಲೂಕನ ಸುವಾರ್ತೆಯನ್ನು 20 ದಿನಗಳಲ್ಲಿ ಓದುವಂತೆ ವ್ಯಕ್ತಿಗಳನ್ನು, ಸಣ್ಣ ಗುಂಪುಗಳನ್ನು ಮತ್ತು ಕುಟುಂಬಗಳನ್ನು ಪ್ರೇರೇಪಿಸಲು ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ ಭಾಗ 1 ಅನ್ನು ಬೈಬಲ್ ಪ್ರಾಜೆಕ್ಟ್ ರಚಿಸಿದೆ. ಅದರಲ್ಲಿ ಪಾಲ್ಗೊಳ್ಳುವವರು ಯೇಸುವನ್ನು ಕಂಡುಕೊಳ್ಳುವುದಕ್ಕೆ ಮತ್ತು ಲೂಕನ ಅತ್ಯುತ್ತವಾದ ಸಾಹಿತ್ಯ ರಚನೆಯನ್ನೂ ವಿಚಾರಧಾರೆಯನ್ನೂ ತಿಳಿದುಕೊಳ್ಳುವುದಕ್ಕೆ ಸಹಾಯ ಮಾಡಲು ಈ ಯೋಜನೆಯಲ್ಲಿ ಅನಿಮೇಟೆಡ್ ವೀಡಿಯೊಗಳು, ಗಹನವಾದ ಜ್ಞಾನವುಳ್ಳ ಸಾರಾಂಶಗಳು ಮತ್ತು ಚಿಂತನಾತ್ಮಕ ಪ್ರಶ್ನೆಗಳು ಇವೆ.

More