BibleProject | ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ / ಭಾಗ 1 - ಲೂಕನುPrøve
"ಇದಾದ ಮೇಲೆ, ಯೇಸು ಅರಣ್ಯಕ್ಕೆ ಹೋಗಿ, ಆಹಾರವಿಲ್ಲದೆ ನಲವತ್ತು ದಿನಗಳ ಕಾಲ ಅಲ್ಲಿರುತ್ತಾನೆ. ಯೇಸು ಇಸ್ರಾಯೇಲರು ಅರಣ್ಯದಲ್ಲಿ ನಲವತ್ತು ವರ್ಷಗಳ ಕಾಲ ಪ್ರಯಾಣ ಮಾಡಿದಾಗ ಯೆಹೋವನಿಗೆ ವಿರುದ್ಧವಾಗಿ ತಿರುಗಿಬಿದ್ದು ಗೊಣಗುಟ್ಟಿದ್ದನ್ನು ಸೂಚಿಸುತ್ತಿದ್ದಾನೆ. ಆದರೆ ಇಸ್ರಾಯೇಲರು ಸೋತುಹೋದ ಸ್ಥಳದಲ್ಲಿ, ಯೇಸು ಜಯಹೊಂದಿದನು. ಯೇಸು ತಾನು ಪರೀಕ್ಷಿಸಲ್ಪಟ್ಟಾಗ, ತನ್ನನ್ನು ಕಾಪಾಡಿಕೊಳ್ಳಲು ತನ್ನ ದೈವಿಕ ಗುರುತನ್ನು ಬಳಸಲು ನಿರಾಕರಿಸಿದನು, ಅದಕ್ಕೆ ಬದಲಾಗಿ ಮನುಷ್ಯರ ಸಂಕಷ್ಟಗಳೊಂದಿಗೆ ತನ್ನನ್ನು ತಾನು ಗುರುತಿಸಿಕೊಂಡನು. ಆತನು ಯೆಹೋವನಲ್ಲಿ ನಂಬಿಕೆಯಿಟ್ಟು, ಇಸ್ರಾಯೇಲರ ಮತ್ತು ಇಡೀ ಮಾನವಕುಲದ ವೈಫಲ್ಯಗಳನ್ನು ಸರಿಪಡಿಸುವಾತನು ತಾನೇ ಎಂದು ನಿರೂಪಿಸಿದನು.
ಇದಾದ ನಂತರ, ಯೇಸು ತನ್ನ ಸ್ವಂತ ಊರಾದ ನಜರೇತಿಗೆ ಹಿಂದಿರುಗಿ ಬಂದನು. ಆತನು ಸಭಾಮಂದಿರಕ್ಕೆ ಬಂದಾಗ, ಇಬ್ರಿಯರ ಪವಿತ್ರಗ್ರಂಥಗಳನ್ನು ಓದುವುದಕ್ಕಾಗಿ ಆತನನ್ನು ಆಹ್ವಾನಿಸಿದರು. ಆತನು ಯೆಶಾಯನ ಗ್ರಂಥದ ಸುರುಳಿಯನ್ನು ತೆರೆದು ಓದಿ ಕುಳಿತುಕೊಳ್ಳುವುದಕ್ಕಿಂತ ಮೊದಲು, “ಈ ಹೊತ್ತು ನೀವು ನನ್ನ ಮಾತನ್ನು ಕೇಳುವಲ್ಲಿ ಈ ವೇದೋಕ್ತಿ ನೆರವೇರಿದೆ” ಎಂದು ಹೇಳಿದನು.ಎಂದು ಹೇಳಿದನು. ಅಲ್ಲಿದ್ದುಕೊಂಡು ಕೇಳಿಸಿಕೊಳ್ಳುತ್ತಿದ್ದವರು ಆಶ್ಚರ್ಯಚಕಿತರಾದರು ಮತ್ತು ಅವರ ಕಣ್ಣುಗಳು ಆತನ ಮೇಲೆಯೇ ನಾಟಿದ್ದವು. ಯೆಶಾಯನು ಆತನು ಕುರಿತು, ಬಡವರಿಗೆ ಶುಭವಾರ್ತೆಯನ್ನು ಸಾರಿ, ರೋಗಿಗಳನ್ನು ಗುಣಪಡಿಸಿ, ಶೋಷಿತರನ್ನು ಅವರ ಅವಮಾನದ ಬಿಡಿಸುವ ಅಭಿಷಿಕ್ತನು ಆತನೇ ಎಂದು ಹೇಳಿದ್ದಾನೆ. ಲೋಕವನ್ನು ತಲೆಕೆಳಗಾಗಿ ಮಾಡುವ ತನ್ನ ರಾಜ್ಯವನ್ನು ಸ್ಥಾಪಿಸುವವನು, ಲೋಕದಲ್ಲಿರುವ ತಪ್ಪನ್ನು ನಿವಾರಿಸಿ ಲೋಕವನ್ನು ಮತ್ತೆ ಸರಿಪಡಿಸುವವನುಆತನೇ.
ಓದಿರಿ, ಯೋಚಿಸಿರಿ ಮತ್ತು ಪ್ರತಿಕ್ರಿಯಿಸಿರಿ:
•ದೇವರು ಕೊಟ್ಟಿರುವ ಗುರುತನ್ನೂ ಸಾಮರ್ಥ್ಯವನ್ನೂ ನಿಮ್ಮ ಸ್ವಂತ ಲಾಭಕ್ಕಾಗಿ ಅಥವಾ ನೀವು ಶಕ್ತರೆಂದು ತೋರಿಸಿಕೊಳ್ಳುವುದಕ್ಕಾಗಿ ಬಳಸಿಕೊಳ್ಳುವ ವಿಷಯದಲ್ಲಿ ನೀವು ಎಂಥ ಶೋಧನೆಯನ್ನು ಎದುರಿಸಿದ್ದೀರಿ?ಯೇಸು ದೇವರ ಮಾತುಗಳ ಮೇಲೆ ಆತುಕೊಂಡು ಅವುಗಳನ್ನು ಹೇಳುವ ಮೂಲಕ ಸೈತಾನನನ್ನು ಹೇಗೆ ವಿರೋಧಿಸಿದನೆಂದು ಗಮನಿಸಿರಿ. ನೀವು ಶೋಧನೆಗೆ ಒಳಗಾದಾಗ ದೇವರ ಸತ್ಯವನ್ನು ನೆನಪಿಸಿಕೊಳ್ಳುವಂತೆ ಸತ್ಯವೇದದಲ್ಲಿರುವ ಯಾವ ವಾಕ್ಯಭಾಗಗಳು ನಿಮಗೆ ಸಹಾಯ ಮಾಡುತ್ತವೆ? ಅವುಗಳನ್ನು ಬರೆಯಿರಿ.
•ಯೇಸು ಯೆಶಾಯನ ಗ್ರಂಥದಲ್ಲಿ ಬರೆದಿರುವುದನ್ನು ನೆರವೇರಿಸಿದನು. ಇದನ್ನು ಮನದಲ್ಲಿಟ್ಟುಕೊಂಡು ಯೆಶಾಯನ ಗ್ರಂಥದ 61ನೇ ಅಧ್ಯಾಯವನ್ನು ಓದಿರಿ. ನೀವು ಅಲ್ಲಿ ಏನನ್ನು ಗಮನಿಸಿದ್ದೀರಿ?
•22 ನೇ ವಾಕ್ಯದಲ್ಲಿ ಯೇಸು ತಿಳಿಸಿದ ಶುಭವಾರ್ತೆಗೆ 29 ನೇ ವಾಕ್ಯದಲ್ಲಿ ಜನಸಮೂಹವು ತೋರಿದ ಪ್ರತಿಕ್ರಿಯೆಯನ್ನು ಹೋಲಿಸಿ ನೋಡಿರಿ. ಇಂದು ಯೇಸುವಿನ ಸಂದೇಶಕ್ಕೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ?
•ನಿಮ್ಮ ಓದುವಿಕೆಯೂ ಪ್ರತಿಫಲನವೂ ಪ್ರಾರ್ಥಿಸುವಂತೆ ನಿಮ್ಮನ್ನು ಪ್ರೇರೇಪಿಸಲಿ. ಯೇಸು ನಿಮ್ಮ ನೋವಿನಲ್ಲಿ ನಿಮ್ಮೊಂದಿಗೆ ತನ್ನನ್ನು ಗುರುತಿಸಿಕೊಂಡು ನಿಮ್ಮ ಅವಮಾನವನ್ನು ತೆಗೆದುಹಾಕಿದ್ದಕ್ಕಾಗಿ ಆತನಿಗೆ ಕೃತಜ್ಞತೆಯನ್ನು ಸಲ್ಲಿಸಿರಿ. ಈ ವಾರದಲ್ಲಿ ಶೋಧನೆಯನ್ನು ಜಯಿಸುವುದಕ್ಕೆ ಬೇಕಾದ ಸಹಾಯವನ್ನು ಆತನ ಬಳಿ ಬೇಡಿಕೊಳ್ಳಿರಿ."
Om denne planen
ಲೂಕನ ಸುವಾರ್ತೆಯನ್ನು 20 ದಿನಗಳಲ್ಲಿ ಓದುವಂತೆ ವ್ಯಕ್ತಿಗಳನ್ನು, ಸಣ್ಣ ಗುಂಪುಗಳನ್ನು ಮತ್ತು ಕುಟುಂಬಗಳನ್ನು ಪ್ರೇರೇಪಿಸಲು ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ ಭಾಗ 1 ಅನ್ನು ಬೈಬಲ್ ಪ್ರಾಜೆಕ್ಟ್ ರಚಿಸಿದೆ. ಅದರಲ್ಲಿ ಪಾಲ್ಗೊಳ್ಳುವವರು ಯೇಸುವನ್ನು ಕಂಡುಕೊಳ್ಳುವುದಕ್ಕೆ ಮತ್ತು ಲೂಕನ ಅತ್ಯುತ್ತವಾದ ಸಾಹಿತ್ಯ ರಚನೆಯನ್ನೂ ವಿಚಾರಧಾರೆಯನ್ನೂ ತಿಳಿದುಕೊಳ್ಳುವುದಕ್ಕೆ ಸಹಾಯ ಮಾಡಲು ಈ ಯೋಜನೆಯಲ್ಲಿ ಅನಿಮೇಟೆಡ್ ವೀಡಿಯೊಗಳು, ಗಹನವಾದ ಜ್ಞಾನವುಳ್ಳ ಸಾರಾಂಶಗಳು ಮತ್ತು ಚಿಂತನಾತ್ಮಕ ಪ್ರಶ್ನೆಗಳು ಇವೆ.
More