BibleProject | ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ / ಭಾಗ 1 - ಲೂಕನುPrøve

BibleProject | ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ / ಭಾಗ 1 - ಲೂಕನು

Dag 14 av 20

"ಲೂಕನ ಸುವಾರ್ತೆಯ ಈ ಮುಂದಿನ ವಿಭಾಗದಲ್ಲಿ, ದೇವರ ತಲೆಕೆಳಗಾದ ಅಥವಾ ವಿಭಿನ್ನವಾದ ರಾಜ್ಯದಲ್ಲಿ ಜೀವಿಸುವುದು ಎಂದರೇನು ಎಂಬುದರ ಕುರಿತು ಆತ್ಮಿಕ ದೃಷ್ಟಿಯನ್ನು ಕೊಡುತ್ತಿರುವ ಅದೇ ಸಮಯದಲ್ಲಿ ಯೇಸು ಕುರುಡರಿಗೆ ದೈಹಿಕ ದೃಷ್ಟಿಯನ್ನು ಕೊಟ್ಟನು. ಆದರೆ ಯಾವನೇ ಆಗಲಿ ಬಡವರಿಗೆ ಪ್ರಾರ್ಥನೆಯನ್ನೂ ಉದಾರತೆಯನ್ನು ತೋರಿಸುತ್ತಾ ದೇವರ ರಾಜ್ಯದಲ್ಲಿ ಜೀವಿಸಲು ಪ್ರಾರಂಭಿಸುವುದಕ್ಕಿಂತ ಮುಂಚೆ, ಅವನು ಮೊದಲು ಅದರಲ್ಲಿ ಪ್ರವೇಶಿಸಬೇಕು. ದೇವರ ಮೇಲೆ ಸಂಪೂರ್ಣವಾಗಿ ಆತುಕೊಳ್ಳುವುದಕ್ಕಾಗಿ ಅವನು ಮೊದಲು ತನ್ನನ್ನು ತಾನು ತಗ್ಗಿಸಿಕೊಳ್ಳದ ಹೊರತು ಯಾರಿಗೂ ದೇವರ ರಾಜ್ಯದಲ್ಲಿ ಪ್ರವೇಶಿಸಲು ಆಗುವುದಿಲ್ಲ. ಕೆಲವರು ಇದನ್ನು ಅರ್ಥಮಾಡಿಕೊಳ್ಳದೆ ತಮ್ಮಲ್ಲಿ ತಾವು ನಂಬಿಕೆಯನ್ನಿಡುತ್ತಾರೆ, ಆದ್ದರಿಂದ ಆತನು ಈ ಸಾಮ್ಯವನ್ನು ಹೇಳಿದನು. ಅದು ಹೀಗಿದೆ.

ಒಂದು ದಿನ ಇಬ್ಬರು ವ್ಯಕ್ತಿಗಳು ಪ್ರಾರ್ಥನೆ ಮಾಡಲು ದೇವಾಲಯಕ್ಕೆ ಹೋದರು. ಅವರಲ್ಲಿ ಒಬ್ಬನು ಫರಿಸಾಯನು, ಅವನಿಗೆ ಪವಿತ್ರಶಾಸ್ತ್ರಗಳ ಅರಿವು ಚೆನ್ನಾಗಿದ್ದರಿಂದ ಮತ್ತು ದೇವಾಲಯದಲ್ಲಿ ಅವನು ವಹಿಸಿದ ನಾಯಕತ್ವದ ನಿಮಿತ್ತ ಅವನು ಹೆಸರುವಾಸಿಯಾಗಿದ್ದನು, ಮತ್ತೊಬ್ಬನು ಸುಂಕದವನು, ಅವನು ಭ್ರಷ್ಟತೆಯುಳ್ಳ ರೋಮನ್ ವೃತ್ತಿಯನ್ನು ಮಾಡುತ್ತಿದ್ದವನು, ದ್ರೋಹಿಯೆಂದು ಎಲ್ಲರಿಂದಲೂ ತಿರಸ್ಕರಿಸಲ್ಪಟ್ಟನು ಆಗಿದ್ದನು. ಫರಿಸಾಯನು ತಾನು ಬೇರೆ ಎಲ್ಲರಿಗಿಂತ ಪರಿಶುದ್ಧನಾಗಿರುವ ಎಲ್ಲ ರೀತಿಗಳ ಕುರಿತು ತನಗೆ ತಾನು ಪ್ರಾರ್ಥಿಸಿಕೊಂಡನು. ಇದಕ್ಕಾಗಿ ಅವನು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿದನು. ಆದರೆ ಸುಂಕದವನಾದ ಮತ್ತೊಬ್ಬ ವ್ಯಕ್ತಿಯು ಪ್ರಾರ್ಥಿಸುವಾಗ ಮೇಲಕ್ಕೆ ನೋಡಲು ಸಹ
ಆಗದೆ, ದುಃಖದಿಂದ ತನ್ನ ಎದೆಯನ್ನು ಬಡಿದುಕೊಳ್ಳುತ್ತಾ "ದೇವರೇ, ಪಾಪಿಯಾದ ನನ್ನ ಮೇಲೆ ಕರುಣೆ ತೋರಿಸು!" ಅಂದನು. ಆ ದಿನ ಸುಂಕದವನು ಮಾತ್ರವೇ ದೇವರ ಮುಂದೆ ನೀತಿವಂತನಾಗಿ ಮನೆಗೆ ತಿರುಗಿ ಹೋದನು ಎಂದು ಹೇಳಿ ಯೇಸು ಆ ಕಥೆಯನ್ನು ಮುಗಿಸಿದನು. ಸ್ಥಿತಿಗತಿಗಳನ್ನು ದಿಗಿಲುಂಟುಮಾಡುವ ರೀತಿಯಲ್ಲಿ ಬದಲಾಯಿಸುವ ಸಂಗತಿಯು ತನ್ನ ರಾಜ್ಯದಲ್ಲಿ ಹೇಗೆ ಕಾರ್ಯಮಾಡುತ್ತದೆ ಎಂಬುದನ್ನು ಆತನು ಹೀಗೆ ವಿವರಿಸಿದನು: “ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನೂ ತಗ್ಗಿಸಲ್ಪಡುವನು, ಆದರೆ ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು.”
ಯೇಸುವಿನ ಜೀವನದಲ್ಲಿ ನಡೆದ ಮತ್ತೊಂದು ಘಟನೆಯ ಮೂಲಕ ಯೇಸುವಿನ ಮಾತುಗಳನ್ನುಬಳಸಿಕೊಂಡು ಲೂಕನು ದೀನತೆ ಎಂಬ ವಿಷಯದ ಕುರಿತು ಒತ್ತಿಹೇಳುತ್ತಿರುವನು. ಒಮ್ಮೆ, ತಂದೆತಾಯಂದಿರು ತಮ್ಮ ಮಕ್ಕಳನ್ನು ಆಶೀರ್ದಿಸಬೇಕೆಂದು ಯೇಸುವಿನ ಬಳಿಗೆ ಕರೆತಂದದ್ದನ್ನು ಲೂಕನು ವಿವರಿಸುತ್ತಿರುವನು. ಈ ರೀತಿಯಾಗಿ ಅವರು ಬಂದು ಯೇಸುವನ್ನು ತೊಂದರೆಪಡಿಸುವುದು ಸರಿಯಲ್ಲವೆಂದು ಶಿಷ್ಯರು ಭಾವಿಸಿ, ಆ ಕುಟುಂಬಗಳನ್ನು ಗದರಿಸಿ ಕಳುಹಿಸಲು ಪ್ರಯತ್ನಿಸಿದರು. ಆದರೆ ಯೇಸು ಚಿಕ್ಕ ಮಕ್ಕಳ ಪರವಾಗಿ ನಿಂತು, “ಮಕ್ಕಳು ನನ್ನ ಬಳಿಗೆ ಬರಲು ಬಿಡಿರಿ, ಅವರಿಗೆ ಅಡ್ಡಿಮಾಡಬೇಡಿರಿ, ಏಕೆಂದರೆ ದೇವರ ರಾಜ್ಯವು ಇಂಥವರದೇ” ಅಂದನು. “ಯಾವನು ಶಿಶುಭಾವದಿಂದ ದೇವರ ರಾಜ್ಯವನ್ನು ಅಂಗೀಕರಿಸುವುದಿಲ್ಲವೋ ಅವನು ಅದರಲ್ಲಿ ಸೇರನು”ಎಂಬ ಎಚ್ಚರಿಕೆಯೊಂದಿಗೂ ಆಹ್ವಾನದೊಂದಿಗೂ ತನ್ನ ಮಾತನ್ನು ಮುಗಿಸಿದನು.

ಓದಿರಿ, ಯೋಚಿಸಿರಿ ಮತ್ತು ಪ್ರತಿಕ್ರಿಯಿಸಿರಿ:

•ಲೂಕ 18:10-14 ರಲ್ಲಿ ಯೇಸುವಿನ ಕಥೆಯನ್ನು ಗಮನದಿಂದ ಓದಿ ನೋಡಿರಿ. ನೀವು ಅದರಲ್ಲಿ ಏನು ಗಮನಿಸಿದ್ದೀರಿ? ನಿಮ್ಮನ್ನು ನೀವು ಹೇಗೆ ಫರಿಸಾಯನೊಂದಿಗೂ ಸುಂಕದವನೊಂದಿಗೂ ಹೋಲಿಸಿ ನೋಡಿಕೊಳ್ಳಬಹುದು? ಅಹಂಕಾರ ಮತ್ತು ಹೋಲಿಕೆ ಮಾಡುವುದರಲ್ಲಿರುವ ಅಪಾಯಗಳು ಯಾವುವು? ಫರಿಸಾಯನಂತೆ, ನಾವೂ ಸಹ ನಮ್ಮ ಕ್ರಿಯೆಗಳಿಂದ ದೇವರ ಮುಂದೆ ನಮ್ಮನ್ನು ನಾವು ನೀತಿವಂತರನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸಬಹುದು, ಆದರೆ ಅದಕ್ಕೆ ಬದಲಾಗಿ ದೇವರು ನಮ್ಮ ಜೀವನವನ್ನು ತನ್ನ ದಯೆಯುಳ್ಳ ಕ್ರಿಯೆಗಳಿಂದ ನೀತಿವಂತರನ್ನಾಗಿ ಮಾಡುವುದು ಎಂದರೇನು?

•ಮಕ್ಕಳಲ್ಲಿರುವ ಆತುಕೊಳ್ಳುವ ಸ್ವಭಾವದ ಬಗ್ಗೆ ಯೋಚಿಸಿರಿ. ಮಗುವಿನಂತೆ ಆಗುವುದು ಎಂಬುದರ ಅರ್ಥವನ್ನು ನೀವು ಹೇಗೆ ವಿವರಿಸುತ್ತೀರಿ? ಯೇಸುವಿನ ಕಥೆಯನ್ನು ಆಲಿಸುತ್ತಿದ್ದ ಗರ್ವವುಳ್ಳ ಹೃದಯಗಳವರ ಕುರಿತಾದ ಲೂಕನ ವಿವರಣೆಯೊಂದಿಗೆ ಮಗುವಿನಂತಹ ಆತುಕೊಳ್ಳುವ ಭಾವವನ್ನು ಹೋಲಿಸಿ ನೋಡಿರಿ (ಲೂಕ 18:9 ನೋಡಿರಿ). ನೀವು ಅದರಲ್ಲಿ ಏನನ್ನು ಗಮನಿಸಿದ್ದೀರಿ?

•ನಿಮ್ಮ ಓದುವಿಕೆಯೂ ಪ್ರತಿಫಲನವೂ ಪ್ರಾರ್ಥಿಸುವಂತೆ ನಿಮ್ಮನ್ನು ಪ್ರೇರೇಪಿಸಲಿ. ಅಪಾರವಾದ ಕರುಣೆಗಾಗಿ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿರಿ, ಆತನ ಮೇಲೆ ಮಾತ್ರ ಆತುಕೊಳ್ಳಲು ನಿರ್ಧರಿಸಿರಿ, ಮತ್ತು ಆತನು ನಿಮಗೆ ಕೊಡುವ ಅದೇ ಕರುಣೆಯಿಂದ ಬೇರೆಯವರನ್ನು ನೋಡುವಂಥ ದೃಷ್ಟಿಯನ್ನು ಕೊಡಬೇಕೆಂದು ಬೇಡಿಕೊಳ್ಳಿರಿ."

Dag 13Dag 15

Om denne planen

BibleProject | ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ / ಭಾಗ 1 - ಲೂಕನು

ಲೂಕನ ಸುವಾರ್ತೆಯನ್ನು 20 ದಿನಗಳಲ್ಲಿ ಓದುವಂತೆ ವ್ಯಕ್ತಿಗಳನ್ನು, ಸಣ್ಣ ಗುಂಪುಗಳನ್ನು ಮತ್ತು ಕುಟುಂಬಗಳನ್ನು ಪ್ರೇರೇಪಿಸಲು ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ ಭಾಗ 1 ಅನ್ನು ಬೈಬಲ್ ಪ್ರಾಜೆಕ್ಟ್ ರಚಿಸಿದೆ. ಅದರಲ್ಲಿ ಪಾಲ್ಗೊಳ್ಳುವವರು ಯೇಸುವನ್ನು ಕಂಡುಕೊಳ್ಳುವುದಕ್ಕೆ ಮತ್ತು ಲೂಕನ ಅತ್ಯುತ್ತವಾದ ಸಾಹಿತ್ಯ ರಚನೆಯನ್ನೂ ವಿಚಾರಧಾರೆಯನ್ನೂ ತಿಳಿದುಕೊಳ್ಳುವುದಕ್ಕೆ ಸಹಾಯ ಮಾಡಲು ಈ ಯೋಜನೆಯಲ್ಲಿ ಅನಿಮೇಟೆಡ್ ವೀಡಿಯೊಗಳು, ಗಹನವಾದ ಜ್ಞಾನವುಳ್ಳ ಸಾರಾಂಶಗಳು ಮತ್ತು ಚಿಂತನಾತ್ಮಕ ಪ್ರಶ್ನೆಗಳು ಇವೆ.

More