ನಿನಗಾಗಿ ಇಲ್ಲಿಯೇ ಕಾಯುತ್ತಿರುವೆ, ಉಗಮದ ಕಾಲದ ನಿರೀಕ್ಷೆಯ ಪ್ರಯಾಣಮಾದರಿ

Waiting Here for You, An Advent Journey of Hope

DAY 7 OF 7

ದೀನತೆ ಎಲ್ಲರಿಗೂ ಚೆನ್ನಾಗಿ ಕಾಣುತ್ತದೆ

ಆಲೋಚನೆ

ಯೇಸುವು ರಾಜಾಧಿ ರಾಜನು, ಆದರೂ ಆತನು ಸಾಧಾರಣ ಸೇವಕನಾಗಿ ಬಂದನು. ದೀನತೆ ಎಂದರೆ ನಿಮ್ಮ ಬಗ್ಗೆ ನೀವು ಕೀಳರಿಮೆಯನ್ನು ಹೊಂದುವುದು ಎಂದರ್ಥವಲ್ಲ, ಅದು ಯೇಸುವೇ ನಿಮ್ಮನ್ನು ಹೆಚ್ಚಾಗಿ ಮಾಡಿದನು ಎಂಬ ವಿಷಯವನ್ನು ಮರೆಯದೇ ಇರುವುದು. ಹಾಗಾಗಿ, ನೀವು ಯೇಸುವಿನಂತೆ ಆಗುವುದು ಹೇಗೆ? ದೀನ ಸ್ವಭಾವದ ಆತ್ಮವನ್ನು ಹೇಗೆ ಬೆಳೆಸಿಕೊಳ್ಳುವುದು?

ನಮ್ರತೆಯು ಯೇಸುವಿನೊಂದಿಗೆ ಇದ್ದಾಗ ಬರುವ ಉಪ ಪದಾರ್ಥ. ಯಾರು ಆತನೊಂದಿಗೆ ಆಪ್ತ ಸಂಬಂಧದಿಂದ ನಡೆಯುತ್ತಿರುತ್ತಾರೋ, ಅವರು ತಮ್ಮನ್ನು ಅಗತ್ಯಕ್ಕಿಂತಲೂ ಹೆಚ್ಚಾಗಿ ಹಿಗ್ಗಿಸಿಕೊಳ್ಳುವುದಿಲ್ಲ. ನಾವು ಸರಿಯಾದ ಆಕೃತಿಯಲ್ಲಿ ಇರಬೇಕಾದರೆ ಮತ್ತು ಆತನ ದಯೆ ಹಾಗೂ ಕೃಪೆಯನ್ನು ಅಂಗೀಕರಿಸಬೇಕಾದರೆ, ಯೇಸುವಿನಿಂದ ಪ್ರೀತಿಸಲ್ಪಟ್ಟು ಆತನೊಂದಿಗೆ ಸಂಬಂಧವನ್ನು ಇಟ್ಟುಕೊಳ್ಳುವುದಷ್ಟೇ ನಮಗೆ ಬೇಕಾಗಿರುವುದು.

ದೀನತೆಯಿಂದ ಇರಬೇಕೆಂದರೆ ದುರ್ಬಲವಾಗಿರಬೇಕೆಂದು ಅರ್ಥವಲ್ಲ. ದೇವರು ನೀವು ಆತನಂತೆಯೇ ಆತ್ಮವಿಶ್ವಾಸಿಯಾಗಿ ಬದುಕಬೇಕೆಂದು ನಿಮಗೆ ಅಗತ್ಯವಿರುವ ಎಲ್ಲವನ್ನೂ ನೀಡಿದ್ದಾನೆ. ಗರ್ವದಿಂದ ಇರುವವರು ತಮ್ಮ ಸ್ತುತಿಯಲ್ಲಿ ದೇವರ ನಾಮವನ್ನು ನಿಜವಾಗಿಯೂ ಮೇಲೆತ್ತಲು ಸಾಧ್ಯವಿಲ್ಲ. ಆದರೆ ದೇವರು ದೀನ ಸ್ವಭಾವದವರನ್ನು ಮೇಲೆತ್ತುವವನಾಗಿದ್ದಾನೆ.

ದ್ಯಾನ ಮತ್ತು ಪ್ರಾರ್ಥನೆ

ಏಕಾಂತದ ದೀನತೆಯ ಪ್ರಾರ್ಥನೆ

ಪ್ರಶಂಸೆಗೆ ಪಾತ್ರರಾಗುವ ಬಯಕೆಯಿಂದ, ನನ್ನನ್ನು ಬಿಡಿಸು, ಯೇಸುವೆ.
ಗೌರವವನ್ನು ಸ್ವೀಕರಿಸುವ ಆಸೆಯಿಂದ, ನನ್ನನ್ನು ಬಿಡಿಸು, ಯೇಸುವೆ.

ಆದ್ಯತೆಯನ್ನು ಪಡೆದುಕೊಳ್ಳುವ ಆಸೆಯಿಂದ, ನನ್ನನ್ನು ಬಿಡಿಸು, ಯೇಸುವೆ.
ಸಲಹೆ ಹೇಳುವವರಾಗಬೇಕೆನ್ನುವ ಬಯಕೆಯಿಂದ, ನನ್ನನ್ನು ಬಿಡಿಸು, ಯೇಸು.
ಸ್ವೀಕೃತರಾಗಬೇಕೆಂಬ ಬಯಕೆಯಿಂದ, ನನ್ನನ್ನು ಬಿಡಿಸು, ಯೇಸುವೆ.

ಹಾಯಾಗಿ ಮತ್ತು ಸುಲಲಿತವಾಗಿ ಇರಬೇಕೆಂಬ ಬಯಕೆಯಿಂದ, ನನ್ನನ್ನು ಬಿಡಿಸು, ಯೇಸುವೆ.
ಅವಮಾನವನ್ನು ಅನುಭವಿಸುಬಹುದೆಂಬ ಆತಂಕದಿಂದ, ನನ್ನನ್ನು ಬಿಡಿಸು, ಯೇಸುವೆ.
ತೆಗಳಿಕೆಯನ್ನು ಅನುಭವಿಸುವ ಭಯದಿಂದ, ನನ್ನನ್ನು ಬಿಡಿಸು, ಯೇಸುವೆ.
ಹಿಂದುಳಿದಿದ್ದೇನೆ ಎಂಬ ಭಯದಿಂದ, ನನ್ನನ್ನು ಬಿಡಿಸು, ಯೇಸುವೆ.
ಎಲ್ಲರೂ ನನ್ನನ್ನು ಮರೆಯಬಹುದು ಎಂಬ ಭಯದಿಂದ, ನನ್ನನ್ನು ಬಿಡಿಸು, ಯೇಸುವೆ.
ಒಂಟಿ ತನದ ಭಯದಿಂದ, ನನ್ನನ್ನು ಬಿಡಿಸು, ಯೇಸುವೆ.

ನೋವಿನಿಂದ ಬಳಲುವ ಭಯದಿಂದ, ನನ್ನನ್ನು ಬಿಡಿಸು, ಯೇಸುವೆ.
ಶ್ರಮ ಪಡಬೇಕಾಗುತ್ತದೆ ಎಂಬ ಭಯದಿಂದ, ನನ್ನನ್ನು ಬಿಡಿಸು, ಯೇಸುವೆ.

ಬೇರೆಯವರು ನನಗಿಂತಲೂ ಹೆಚ್ಚಾಗಿ ಪ್ರೀತಿಸಲ್ಪಡಬೇಕು ಎಂದು ಆಸೆ ಪಡಲು,
ಯೇಸುವೇ, ನಿನ್ನ ಕೃಪೆಯನ್ನು ನನಗೆ ದಯಪಾಲಿಸು
ನನ್ನನ್ನು ತಿರಸ್ಕರಿಸಿದರೂ ಬೇರೆಯವರು ಆಯ್ಕೆಯಾಗಬೇಕೆಂಬ ಆಸೆ ಪಡಲು,
ಯೇಸುವೇ, ನಿನ್ನ ಕೃಪೆಯನ್ನು ನನಗೆ ದಯಪಾಲಿಸು.
ನಾನು ಕಡೆಗಣಿಸಲ್ಪಟ್ಟರೂ ಬೇರೆಯವರು ಕೊಂಡಾಡಲ್ಪಡಬೇಕು ಎಂದು ಆಸೆ ಪಡಲು,
ಯೇಸುವೇ, ನಿನ್ನ ಕೃಪೆಯನ್ನು ನನಗೆ ದಯಪಾಲಿಸು.

ತಗ್ಗಿದ ಮತ್ತು ದೀನ ಹೃದಯವುಳ್ಳ, ಓ ಯೇಸುವೇ, ನಿನ್ನ ಹೃದಯದಂತೆ ನನ್ನ ಹೃದಯವನ್ನು ಮಾರ್ಪಡಿಸು.
ತಗ್ಗಿದ ಮತ್ತು ದೀನ ಹೃದಯವುಳ್ಳ, ಓ ಯೇಸುವೇ, ನಿನ್ನ ಆತ್ಮದಿಂದ ನನ್ನನ್ನು ಬಲಗೊಳಿಸು.
ತಗ್ಗಿದ ಮತ್ತು ದೀನ ಹೃದಯವುಳ್ಳ, ಓ ಯೇಸುವೇ, ನಿನ್ನ ಮಾರ್ಗಗಳನ್ನು ನನಗೆ ಬೋಧಿಸು.

ತಗ್ಗಿದ ಮತ್ತು ದೀನ ಹೃದಯವುಳ್ಳ, ಓ ಯೇಸುವೇ,
ನನ್ನ ಸ್ವಪ್ರತಿಷ್ಠೆಯನ್ನು ಪಕ್ಕಕ್ಕೆ ಇಡಲು
ನಿನ್ನ ತಂದೆಯ ಬಿಡಾರದ ಪ್ರಸನ್ನತೆಯನ್ನು ಸಾಧ್ಯ ಮಾಡುವಂತಹ
ಸಹಕಾರ ಬೇರೆಯವರಿಗೆ ಮಾಡುವುದಕ್ಕೆ ಕಲಿಯಲು ಸಹಾಯ ಮಾಡು. ಅಮೆನ್.

 

Rafael ಎಂಬುವವರ ಪ್ರಾರ್ಥನೆಯಿಂದ ಆರಿಸಲ್ಪಟ್ಟಿದೆ,
Cardinal Merry Del Val, 1865–1930

ದಿನ 6

About this Plan

Waiting Here for You, An Advent Journey of Hope

ಕ್ರಿಸ್ಮಸ್ ಉಗಮದ ಕಾಲವು ನಿರೀಕ್ಷಣೆಯಿಂದ ಕಾಯುವ ಮತ್ತು ಸಿದ್ಧತೆ ಮಾಡಿಕೊಳ್ಳುವ ಕಾಲ. ನೀವು ಕರ್ತನಲ್ಲಿ ನಿರೀಕ್ಷೆಯುಳ್ಳವರಾಗಿದ್ದರೆ ನಿಮ್ಮ ನಿರೀಕ್ಷಣೆಯ ಕಾಲವು ವ್ಯರ್ಥವಾದ ಕಾಲವಲ್ಲ ಎಂದು ಅನ್ವೇಷಿಸುವ ಉಗಮದ ಕಾಲದ ಪ್ರಯಾಣದಲ್ಲಿ ಸಭಾಪಾಲಕರು ಮತ್ತು ಲೇಖಕರು ಆಗಿರುವ ಲೂಯೀ ಗಿಗ್ಲಿಯೋ ಅವರ ಜೊತೆ ಸೇರಿಕೊಳ್ಳಿ. ಉಗಮದ ಕಾಲದ ಪ್ರಯಾಣದ ಮೂಲಕ ಕೊಡುಗೆಯಾಗಿ ಬರುವ ಅಪಾರವಾದ ನಿರೀಕ್ಷೆಯನ್ನು ಪಡೆದುಕೊಳ್ಳುವ ಅವಕಾಶವನ್ನು ಹಿಡಿದಿಟ್ಟುಕೊಳ್ಳಿ. ಇನ್ನೂ ಮುಂದಿನ ಏಳು ದಿನಗಳಲ್ಲಿ ನಿರೀಕ್ಷೆಯು ಸ್ತೋತ್ರಕ್ಕೆ ದಾರಿಯಾದಾಗ ನಿಮ್ಮ ಆತ್ಮಕ್ಕೆ ಶಾಂತಿ ಮತ್ತು ಪ್ರೋತ್ಸಾಹವನ್ನು ನೀವು ಕಂಡುಕೊಳ್ಳುವಿರಿ!

More

ನಿನಗಾಗಿ ಇಲ್ಲಿಯೇ ಕಾಯುತ್ತಿದ್ದೇನೆ (ಪ್ಯಾಷನ್ ಪ್ರಕಾಶನ) ಎಂಬ ಪುಸ್ತಕದ ಲೇಖಕರಾಗಿರುವ, ಲೂಯೀ ಗಿಗ್ಲಿಯೋ ಅವರಿಗೆ, ಈ ಯೋಜನೆಯನ್ನು ನೀಡಿದ್ದಕ್ಕೆ ನಾವು ಧನ್ಯವಾದವನ್ನು ಹೇಳಲು ಇಷ್ಟಪಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ಸಂಪರ್ಕಿಸಿ: www.passionresources.com