ನಿನಗಾಗಿ ಇಲ್ಲಿಯೇ ಕಾಯುತ್ತಿರುವೆ, ಉಗಮದ ಕಾಲದ ನಿರೀಕ್ಷೆಯ ಪ್ರಯಾಣಮಾದರಿ
ಸುಮ್ಮನಿರಿ
ಕರ್ತನಲ್ಲಿ ನಿರೀಕ್ಷೆಯಿಟ್ಟು ಕಾಯುವಾಗ ಇರುವ ಸ್ತಬ್ದ ಕಾಲ.
ಆಲೋಚನೆ
ಶಾಂತ ಕ್ಷಣಗಳು ಅಪರೂಪ ಮತ್ತು ಅದರಲ್ಲಿ ನಿಶ್ಯಬ್ದತೆಯನ್ನು ಹುಡುಕುವುದು ಕಷ್ಟವಾಗಬಹುದು, ಆದರೆ ಈ ದಿನ ಕೆಲ ನಿಮಿಷಗಳನ್ನು ನಿಶ್ಯಬ್ಡವಾಗಿ ಮತ್ತು ಗಾಢವಾಗಿ ಕರ್ತನನ್ನು ಅರಿತುಕೊಳ್ಳಲು ತೆಗೆದುಕೊಳ್ಳಿ. ಓದುವುದಕ್ಕೆ ಅಥವಾ ಅಧ್ಯಾಯನ ಮಾಡುವುದಕ್ಕೆ ಅಥವಾ ವಿಚಲಿತರಾಗದೇ ಇರಲು ಪ್ರಯತ್ನಿಸಿ—ಸುಮ್ಮನೆ ಇರಿ ಮತ್ತು ಯೇಸುವಿನ ಸ್ವಭಾವದ ಕುರಿತು ಹಾಗೂ ಆತನು ನಿಮಗೆ ಮಾಡಿರುವ ಎಲ್ಲಾ ವಿಷಯಗಳ ಕುರಿತು ಧ್ಯಾನ ಮಾಡಿರಿ. ಆತನ ಜನನದ ಬಗ್ಗೆ ಯೋಚಿಸಿರಿ, ಆತನ ಬಾಲ್ಯಾವಸ್ತೆಯ ಬಗ್ಗೆ ಯೋಚಿಸಿರಿ, ಹಾಗೂ ಕತ್ತಲು ಕವಿದ ಮತ್ತು ಬಳಲಿದ ಲೋಕದ ಮೇಲೆ ಉದಯಿಸುವ ಬೆಳಕಿನ ಬಗ್ಗೆ ಯೋಚಿಸಿರಿ. ಆತನ ಮರಣ ಮತ್ತು ತ್ಯಾಗದ ಬಗ್ಗೆ, ಮತ್ತು ನಿಮಗಾಗಿ ಆತನು ವಿಸ್ತರಿಸಿ ಇಟ್ಟಿರುವ ನಿತ್ಯಜೀವದ ಉಡುಗೊರೆಯ ಬಗ್ಗೆ ಯೋಚಿಸಿರಿ. ಆತನ ಪುನರುತ್ಥಾನದ ಕುರಿತು, ಅಂಧಕಾರದ ಮೇಲೆ ಮತ್ತು ಸಾವಿನ ಮೇಲೆ ಸಾಧಿಸಿದ ಆತನ ಶಕ್ತಿಯ ಕುರಿತು ಧ್ಯಾನ ಮಾಡಿರಿ. ಆತನ ಪ್ರಸನ್ನತೆಯಲ್ಲಿಯೇ ಪಾನ ಮಾಡಿರಿ ಮತ್ತು ಅದೇ ನಿಶ್ಯಬ್ದತೆಯಲ್ಲಿ ಆತನ ಮುಖವನ್ನು ಹುಡುಕಿರಿ. ಹಾಗೆಯೇ ಆತನ ಬರುವಣದಲ್ಲಿ, ನೀವು ಆತನನ್ನು ಮುಖಾ ಮುಖಿ ನೋಡುತ್ತೀರೆಂದು ನೆನೆಸಿ ಅದರ ಕುರಿತು ಯೋಚಿಸಿರಿ.
ಧ್ಯಾನ
ಕೆಲ ಕಾಲ ಆತನ ಎದಿರು ನಿಶ್ಯಬ್ದತೆಯಿಂದ ಇರಿ. ಯೇಸುವಿನ ಬಗ್ಗೆ ಯೋಚಿಸಿರಿ ಮತ್ತು ಆತನಲ್ಲಿ ವಿಶ್ವಾಸ ಇಟ್ಟುಕೊಳ್ಳಿರಿ.
ಪ್ರಾರ್ಥನೆ
ತಂದೆಯೇ, ನಿನಗಾಗಿ ನಾನು ಕಾಯುತ್ತಿದ್ದೇನೆ. ನನ್ನ ನಿಶ್ಯಬ್ದತೆಯಲ್ಲಿ ನನ್ನನು ಕಾಣು, ಈ ಕ್ಷಣದಲ್ಲಿ ನನ್ನನ್ನು ಕಾಣು. ನಿನ್ನ ಮಗನ ಮೂಲಕ ಮತ್ತು ನಿನ್ನ ಆತ್ಮನ ಮೂಲಕ ನನ್ನನ್ನು ಕಾಣು. ಆಮೆನ್
Scripture
About this Plan
ಕ್ರಿಸ್ಮಸ್ ಉಗಮದ ಕಾಲವು ನಿರೀಕ್ಷಣೆಯಿಂದ ಕಾಯುವ ಮತ್ತು ಸಿದ್ಧತೆ ಮಾಡಿಕೊಳ್ಳುವ ಕಾಲ. ನೀವು ಕರ್ತನಲ್ಲಿ ನಿರೀಕ್ಷೆಯುಳ್ಳವರಾಗಿದ್ದರೆ ನಿಮ್ಮ ನಿರೀಕ್ಷಣೆಯ ಕಾಲವು ವ್ಯರ್ಥವಾದ ಕಾಲವಲ್ಲ ಎಂದು ಅನ್ವೇಷಿಸುವ ಉಗಮದ ಕಾಲದ ಪ್ರಯಾಣದಲ್ಲಿ ಸಭಾಪಾಲಕರು ಮತ್ತು ಲೇಖಕರು ಆಗಿರುವ ಲೂಯೀ ಗಿಗ್ಲಿಯೋ ಅವರ ಜೊತೆ ಸೇರಿಕೊಳ್ಳಿ. ಉಗಮದ ಕಾಲದ ಪ್ರಯಾಣದ ಮೂಲಕ ಕೊಡುಗೆಯಾಗಿ ಬರುವ ಅಪಾರವಾದ ನಿರೀಕ್ಷೆಯನ್ನು ಪಡೆದುಕೊಳ್ಳುವ ಅವಕಾಶವನ್ನು ಹಿಡಿದಿಟ್ಟುಕೊಳ್ಳಿ. ಇನ್ನೂ ಮುಂದಿನ ಏಳು ದಿನಗಳಲ್ಲಿ ನಿರೀಕ್ಷೆಯು ಸ್ತೋತ್ರಕ್ಕೆ ದಾರಿಯಾದಾಗ ನಿಮ್ಮ ಆತ್ಮಕ್ಕೆ ಶಾಂತಿ ಮತ್ತು ಪ್ರೋತ್ಸಾಹವನ್ನು ನೀವು ಕಂಡುಕೊಳ್ಳುವಿರಿ!
More