ನಿನಗಾಗಿ ಇಲ್ಲಿಯೇ ಕಾಯುತ್ತಿರುವೆ, ಉಗಮದ ಕಾಲದ ನಿರೀಕ್ಷೆಯ ಪ್ರಯಾಣಮಾದರಿ
ನಾವು ನಿರೀಕ್ಷಿಸುತ್ತಿರುವಾಗ ದೇವರು ಕಾರ್ಯ ಮಾಡುತ್ತಾರೆ
ಆಲೋಚನೆ
ನಾವು ಪ್ರಾಮಾಣಿಕವಾಗಿ ಯೋಚಿಸುವುದಾದರೆ, ನಾವು ಕಾಯುವುದಕ್ಕೆ ಇಷ್ಟ ಪಡುವುದಿಲ್ಲ. ವಾಸ್ತವವಾಗಿ, ಹಲವು ಬಾರಿ ನಾವು ಈ ರೀತಿ ಯಾವುದನ್ನಾದರೂ ಹೇಳುತ್ತಿರುತ್ತೇವೆ, "ಇದು ಇಷ್ಟೊಂದು ಸಮಯ ತೆಗೆದುಕೊಳ್ಳುತ್ತಿದೆ ಎಂದರೆ ನನಗೆ ನಂಬಲಸಾಧ್ಯ; ನನ್ನ ಬಳಿಯಿಲ್ಲದ ಸಮಯವನ್ನು ಇದು ವ್ಯಯ ಮಾಡುತ್ತಿದೆ!" ಏಕೆಂದರೆ ನಮ್ಮಲ್ಲಿ ಹಲವರಿಗೆ ಕಾಯುವ ಸಮಯವು ವ್ಯರ್ಥವಾದ ಸಮಯವೆಂದು ಪರಿಗಣಿಸುತ್ತೇವೆ. ಆದರೆ ನಮ್ಮ ದೇವರಿಗೆ ಹಾಗಲ್ಲ.
ನಾವು ನಿರೀಕ್ಷಿಸುತ್ತಿರುವಾಗಲೇ ದೇವರು ಕಾರ್ಯ ಮಾಡುತ್ತಾನೆ. ನಿಮಗೆ ಆತನು ಮಾಡುವ ಕಾರ್ಯಗಳು ಕಾಣಿಸದೇ ಇದ್ದರೂ, ದೇವರು ನಿಮ್ಮ ಜೀವನದಲ್ಲಿ ತನ್ನ ಉದ್ದೇಶಗಳನ್ನು ನೆರವೇರಿಸಲು ಪರಲೋಕದ ಮತ್ತು ಈ ಲೋಕದ ಘಟನೆಗಳನ್ನು ಏರ್ಪಡಿಸುತ್ತಾರೆ. ಆತನ ಸೋಲಿಲ್ಲದ ಪ್ರೀತಿಯ ಮೇಲೆ ಭರವಸೆಯಿಡಿ—ನಿಮ್ಮನ್ನು ಪುನಃಸ್ಥಾಪಿಸಲು ಮತ್ತು ರಕ್ಷಿಸಲು ಪರಲೋಕದಿಂದ ಒಬ್ಬ ರಕ್ಷಕನನ್ನು ಕಳುಹಿಸುವಂತೆ ಆತನನ್ನು ಪ್ರೇರೇಪಿಸಿದ ಪ್ರೀತಿ. ನಿಮ್ಮ ಜೀವನಕ್ಕಾಗಿ ದೇವರ ಯೋಜನೆಗಳು ಕುಂಠಿತವಾಗುವುದಿಲ್ಲ. ತಾಳ್ಮೆಯಿಂದ ನಿರೀಕ್ಷಿಸಿರಿ, ನೀವು ದೇವರಲ್ಲಿ ನಿರೀಕ್ಷೆಯಿಟ್ಟಿದ್ದರೆ ಆ ನಿರೀಕ್ಷಣೆಯ ಕಾಲವು ವ್ಯರ್ಥವಾಗುವುದಿಲ್ಲ ಎಂದು ತಿಳಿದುಕೊಳ್ಳಿ.
ಧ್ಯಾನ
ಬಹುಕಾಲ ನಿರೀಕ್ಷಿತ ಯೇಸುವೇ ಬನ್ನಿ
ಬನ್ನಿ, ಬಹುಕಾಲ ನಿರೀಕ್ಷಿತ ಯೇಸುವೆ
ನಿಮ್ಮ ಜನರನ್ನು ಬಿಡುಗಡೆ ಮಾಡಲು;
ನಮ್ಮ ಅಂಜಿಕೆಗಳಿಂದ ಮತ್ತು ಪಾಪಗಳಿಂದ ಬಿಡಿಸಲು ಜನಿಸಿರುವವ,
ನಿಮ್ಮಲ್ಲಿ ನಾವು ವಿಶ್ರಾಂತಿಯನ್ನು ಕಂಡುಕೊಳ್ಳುವರಾಗಿದ್ದೇವೆ
ಇಸ್ರಾಯೇಲರ ಶಕ್ತಿ ಮತ್ತು ಸಮಾಧಾನ,
ಲೋಕದ ಭರವಸೆಯೂ ಆಗಿರುವ ನೀವು;
ಪ್ರತಿಯೊಂದು ದೇಶದ ಆಸೆ,
ನಿರೀಕ್ಷಿಸುತ್ತಿರುವ ಪ್ರತಿಯೊಂದು ಹೃದಯದ ಆನಂದವೂ ಆಗಿದ್ದೀರಿ.
ನತನ್ನ ಜನರನ್ನು ಬಿಡಿಸಲು,
ರಾಜನೂ ಆಗಿರುವ ಒಂದು ಮಗು ಹುಟ್ಟಿದೆ,
ನಮ್ಮಲ್ಲಿ ನಿರಂತರ ಆಳ್ವಿಕೆ ನೆಡೆಸಲು,
ನಿಮ್ಮ ರಾಜ್ಯವು ಬರಲಿ.
ನಿಮ್ಮದೇ ನಿತ್ಯತ್ವದ ಆತ್ಮದಿಂದ
ನಮ್ಮೆಲ್ಲರ ಹೃದಯಗಳಲ್ಲಿ ಆಳ್ವಿಕೆ ಮಾಡಿ;
ನಿಮ್ಮ ತಕ್ಕವಾದ ಶ್ರೇಷ್ಠತೆಯಿಂದ,
ನಿಮ್ಮ ಮಹಿಮೆಯುಳ್ಳ ಸಿಂಹಾಸನಕ್ಕೆ ನಮ್ಮನ್ನು ಏರಿಸಿ.
ಚಾರ್ಲ್ಸ್ ವೇಸ್ಲಿ, 1707–1788
ಪ್ರಾರ್ಥನೆ
ತಂದೆಯೇ, ನಾನು ನಿಮಗಾಗಿ ಇಲ್ಲಿಯೇ ಕಾಯುತ್ತಿದ್ದೇನೆ. ನನ್ನ ಜೀವನಕ್ಕಾಗಿ ಇಟ್ಟಿರುವ ನಿಮ್ಮ ಚಿತ್ತ ಮತ್ತು ಯೋಜನೆಗಳಿಗೆ ನನ್ನ ಹೃದಯ ಮತ್ತು ಕೈಗಳು ತೆರೆದಿವೆ. ನನಗೆ ಅತ್ಯಾವಶ್ಯಕವಾಗಿರುವ ನಿಮ್ಮ ತಾಳ್ಮೆಯನ್ನು ನೀಡಿರಿ ಮತ್ತು ನನ್ನನ್ನು ನನ್ನ ಕಾಯುವಿಕೆಯಲ್ಲಿ ನೆಡೆಸಿರಿ. ನನ್ನ ಭಾವನೆಗಳು ಅಲ್ಲಿಲ್ಲವೆಂದರೂ, ಈ ಕ್ಷಣದಲ್ಲಿ ನನ್ನ ಪರವಾಗಿ ನೀವು ಚಲಿಸುತ್ತಿದ್ದೀರಿ, ರಕ್ಷಿಸುತ್ತಿದ್ದೀರಿ, ಕಾಪಾಡುತ್ತಿದ್ದೀರಿ, ಸಿದ್ಧ ಮಾಡುತ್ತಿದ್ದೀರಿ, ನೀಡುತ್ತಿದ್ದೀರಿ ಎಂದು ನಾನು ನಂಬುತ್ತೇನೆ. ನನ್ನ ಸುತ್ತಲೂ ಬೀಸುತ್ತಿರುವ ಈ ಅನುಮಾನದ ಬಿರುಗಾಳಿಯ ನಡುವೆಯೂ ನಿಮ್ಮಲ್ಲಿ ಭರವಸೆಯನ್ನು ಇಡಲು ನಿಮ್ಮ ಕೃಪೆಯನ್ನು ಅನುಗ್ರಹಿಸಿ. ನನ್ನ ಹ್ರದಯವನ್ನು ನಿಮ್ಮಲ್ಲಿ ದೃಢವಾಗಿ ಬಂಧಿಸಿ. ಅಮೆನ್.
Scripture
About this Plan
ಕ್ರಿಸ್ಮಸ್ ಉಗಮದ ಕಾಲವು ನಿರೀಕ್ಷಣೆಯಿಂದ ಕಾಯುವ ಮತ್ತು ಸಿದ್ಧತೆ ಮಾಡಿಕೊಳ್ಳುವ ಕಾಲ. ನೀವು ಕರ್ತನಲ್ಲಿ ನಿರೀಕ್ಷೆಯುಳ್ಳವರಾಗಿದ್ದರೆ ನಿಮ್ಮ ನಿರೀಕ್ಷಣೆಯ ಕಾಲವು ವ್ಯರ್ಥವಾದ ಕಾಲವಲ್ಲ ಎಂದು ಅನ್ವೇಷಿಸುವ ಉಗಮದ ಕಾಲದ ಪ್ರಯಾಣದಲ್ಲಿ ಸಭಾಪಾಲಕರು ಮತ್ತು ಲೇಖಕರು ಆಗಿರುವ ಲೂಯೀ ಗಿಗ್ಲಿಯೋ ಅವರ ಜೊತೆ ಸೇರಿಕೊಳ್ಳಿ. ಉಗಮದ ಕಾಲದ ಪ್ರಯಾಣದ ಮೂಲಕ ಕೊಡುಗೆಯಾಗಿ ಬರುವ ಅಪಾರವಾದ ನಿರೀಕ್ಷೆಯನ್ನು ಪಡೆದುಕೊಳ್ಳುವ ಅವಕಾಶವನ್ನು ಹಿಡಿದಿಟ್ಟುಕೊಳ್ಳಿ. ಇನ್ನೂ ಮುಂದಿನ ಏಳು ದಿನಗಳಲ್ಲಿ ನಿರೀಕ್ಷೆಯು ಸ್ತೋತ್ರಕ್ಕೆ ದಾರಿಯಾದಾಗ ನಿಮ್ಮ ಆತ್ಮಕ್ಕೆ ಶಾಂತಿ ಮತ್ತು ಪ್ರೋತ್ಸಾಹವನ್ನು ನೀವು ಕಂಡುಕೊಳ್ಳುವಿರಿ!
More