ನಿನಗಾಗಿ ಇಲ್ಲಿಯೇ ಕಾಯುತ್ತಿರುವೆ, ಉಗಮದ ಕಾಲದ ನಿರೀಕ್ಷೆಯ ಪ್ರಯಾಣಮಾದರಿ
ಉನ್ನತದಲ್ಲಿ ಮಹಿಮೆ
ಆಲೋಚನೆ
ದೇವರಿಗೆ ಸಮಾನರಿಲ್ಲ. ಪ್ರತಿಸ್ಪರ್ಧಿಗಳಿಲ್ಲ. ಕೊರತೆಗಳಿಲ್ಲ. ಅಗತ್ಯತೆಗಳಿಲ್ಲ. ಆತನು ಎಲ್ಲರಿಗಿಂತಲೂ ಮುಂಚಿನವನು ಮತ್ತು ಎಲ್ಲವೂ ಮುಗಿದ ನಂತರ ಆತನೊಬ್ಬನ್ನೇ ಕೊನೆಯದಾಗಿ ನಿಂತಿರುವವನು ಆಗಿದ್ದಾನೆ. ಲೋಕವು ದೋಷಪೂರಿತ ದೇವರುಗಳಿಂದ ತುಂಬಿದೆ, ಆದರೆ ನಮ್ಮ ದೇವರು ಆಕಾಶವನ್ನು ಮತ್ತು ಭೂಮಿಯನ್ನು ಸೃಷ್ಟಿಸಿದವನು ಆಗಿದ್ದಾನೆ. ಆತನಿಗೆ ಯಾರು ಹೋಲಿಕೆ ಆಗುವುದಿಲ್ಲ. ಆತನ ಹತ್ತಿರಕ್ಕೂ ಯಾರೂ ಬರಲಾರರು.
ಹಾಗಾಗಿ ನೀವು ಆತನನ್ನು ಈ ದಿನ ನಿರೀಕ್ಷಿಸುತ್ತಿರುವಾಗ, ಆತನನ್ನು ಸ್ತುತಿಸಿರಿ. ಬಹುಶಃ ನಿಮ್ಮ ಪರಿಸ್ಥಿತಿಗಳು ತಲೆಕೆಳಗಾಗಿ ಕಾಣುತ್ತಿರಬಹುದು, ಆದರೆ ಆತನ ಸಿಂಹಾಸನವು ತಲೆ ಎತ್ತಿಯೇ ಅದೆ! ನಿರೀಕ್ಷಣೆಯಲ್ಲಿ ಆತನನ್ನು ಸ್ತುತಿಸಿರಿ. ನಿಮ್ಮ ಯೋಚನೆಯ ಕಾಲದಲ್ಲಿ ಆತನನ್ನು ಮೇಲಕ್ಕೆತ್ತಿರಿ. ಹಾಗಾಗಿ ಈ ದಿನ ಹೆಚ್ಚಾಗಿ ಏನನ್ನೂ ಕೇಳಿಕೊಳ್ಳಬೇಡಿರಿ, ಆತನ ನಾಮವನ್ನು ಎಲ್ಲಾ ನಾಮಗಳಿಗಿಂತಲೂ ಮೇಲಕ್ಕೆ ಎತ್ತಿ ಸ್ತುತಿಸಿರಿ. ಆ ನಾಮವು ನಿಮ್ಮ ಹೃದಯದಲ್ಲಿ ನೆಲೆಗೊಳ್ಳಲ್ಲಿ ಮತ್ತು ನಿಮ್ಮ ಆತ್ಮವನ್ನು ಶಾಂತಗೊಳಿಸಲಿ. ನಿಮ್ಮ ಸ್ತುತಿಯು ನಿಮ್ಮ ನಿಷ್ಠೆ ಮತ್ತು ವಾತ್ಸಲ್ಯಕ್ಕಾಗಿ ಸೆಣೆಸಾಡುವವರನ್ನು ಮುಳುಗಿಸಲಿ. ನೀವು ಹಾಗೆ ಮಾಡುವವರಾದರೆ, ನಿಮ್ಮ ಸ್ತೋತ್ರ ಗೀತೆಯು ನಿಮ್ಮ ಆಲೋಚನೆಗಳನ್ನು ಅತ್ಯುನ್ನತ ಸ್ಥಾನಕ್ಕೆ ಎತ್ತಲ್ಪಡುತ್ತದೆ.
ಧ್ಯಾನ
ಉನ್ನತದಲ್ಲಿ ಮಹಿಮೆ
ನೀನೇ ಆದಿಯು
ನೀನು ಮುಂದೆ ಹೋಗುವವನು
ನೀನೇ ಅಂತ್ಯವು
ಕರ್ತನೆ, ನೀನೇ ಉದ್ಗಾರ
ನಿನ್ನ ನಾಮವು ಎಲ್ಲರಿಗೂ ಕಾಣಲೆಂದು ಬೆಳಕಿನಲ್ಲಿಡಲ್ಪಟ್ಟಿದೆ
ನಕ್ಷತ್ರೋಪಾದಿಯಲ್ಲಿನ ದೂತರು ನಿನ್ನ ಮಹಿಮೆಯನ್ನು ಸಾರಿ ಹೇಳುವರು
ಉನ್ನತದಲ್ಲಿ ಮಹಿಮೆ
ಉನ್ನತದಲ್ಲಿ ಮಹಿಮೆ
ಉನ್ನತದಲ್ಲಿ ಮಹಿಮೆ
ನಿನ್ನ ಹೊರತಾಗಿ ಬೇರೆ ದೇವರಿಲ್ಲ
ಲೋಕದ ಬೆಳಕು
ಪ್ರಕಾಶವುಳ್ಳ ನಕ್ಷತ್ರವೂ
ಎಲ್ಲರಿಗೂ ಕಾಣಲೆಂದು ನಿನ್ನ ನಾಮವು ಪ್ರಕಾಶಿಸುವುದು
ನೀನೊಬ್ಬನೇ
ನೀನೇ ನನ್ನ ಮಹಿಮೆಯು
ಮತ್ತೆ ಯಾರೊಬ್ಬರೂ ಹೋಲಿಕೆ ಮಾಡಲಿಕ್ಕಾಗುವುದೇ ಇಲ್ಲ
ನಿನಗಾಗಿಯೇ, ಕರ್ತನೆ
ಎಲ್ಲಾ ಭೂನಿವಾಸಿಗಳೂ ಒಟ್ಟಾಗಿ...
ಉನ್ನತದಲ್ಲಿ ಮಹಿಮೆ ಎಂದು ಘೋಷಿಸುತ್ತವೆ... ನಿನಗೆ, ಕರ್ತನೆ
ಎಲ್ಲಾ ಭೂನಿವಾಸಿಗಳೂ ನಿನ್ನನ್ನು ಸ್ತುತಿಸುವರು
ಚಂದ್ರನು ಮತ್ತು ನಕ್ಷತ್ರಗಳು, ಸೂರ್ಯನು ಮತ್ತು ಮಳೆಯು
ಪ್ರತಿಯೊಂದು ದೇಶವು
ನೀನೇ ದೇವರು ಮತ್ತು ನೀನೊಬ್ಬನೇ ಆಳ್ವಿಕೆ ಮಾಡುವವನು ಎಂದು ಸಾರುವವು
ಮಹಿಮೆ, ಮಹಿಮೆ ಹಲ್ಲೆಲೂಯಾ
ಮಹಿಮೆ, ಮಹಿಮೆ ನಿನಗೆ, ಕರ್ತನೆ
ಮಹಿಮೆ, ಮಹಿಮೆ ಹಲ್ಲೆಲೂಯಾ
ಹಲ್ಲೆಲೂಯಾ
Chris Tomlin, Matt Redman, Jesse Reeves, Daniel Carson, Ed Cash
ಪ್ರಾರ್ಥನೆ
ತಂದೆಯೇ, ನಿನಗೆ ನಾನೇನು ಹೇಳಲಿ? ನಿನಗೆ ಸಮಾನರಿಲ್ಲ ಮತ್ತು ಪ್ರತಿಸ್ಪರ್ಧಿಗಲಿಲ್ಲ. ನಿನಗೆ ಹೋಲಿಸಿದರೆ ನನ್ನ ಮಾತುಗಳು ಮತ್ತು ನನ್ನ ಆಲೋಚನೆಗಳು ಬಹಳ ಚಿಕ್ಕದು. ನಕ್ಷತ್ರಗಳ ರಾತ್ರಿಯನ್ನು ನಾ ಕಂಡಿದ್ದೇನೆ ಮತ್ತು ಅವುಗಳು ನಿನ್ನ ಮಹಿಮೆಯ ಎದಿರು ಒಂದು ದೀಪವನ್ನು ಸಹ ಹಿಡಿಯಲಾರವು. ನನ್ನ ನಂಬಿಕೆಯನ್ನು ಅಗಾಧ ಮಾಡು ಮತ್ತು ನಿನ್ನ ಮಹಿಮೆಯ ವಚನಗಾನದಲ್ಲಿ ನಾನು ಪಾಲ್ಗೊಳ್ಳಲು ಎದುರುನೋಡುವಾಗ ನನಗೆ ಪದಗಳನ್ನು ನೀಡು.
ಎಲ್ಲಾ ಮಹಿಮೆಯೂ ನಿನ್ನದೆ, ಇಂದಿಗೂ ಎಂದೆಂದಿಗೂ. ಈ ಸತ್ಯದಲ್ಲಿ ನಾನು ಇಂದಿನಿಂದ ನಡೆಯುತ್ತೇನೆ. ನಾನು ಇದನ್ನು ನಂಬುತ್ತೇನೆ. ಮತ್ತು ಅದರಂತೆಯೇ ನಡೆದುಕೊಳ್ಳುತ್ತೇನೆ. ಮತ್ತು ನೀಡುತ್ತೇನೆ. ಮತ್ತು ನಿನ್ನ ಹಾಗೆ ಯಾರೂ ಇಲ್ಲವೆಂದು ಅರಿತು ನಿನಗೆ ಮಹಿಮೆ ಸಲ್ಲಿಸುತ್ತೇನೆ. ಆಮೆನ್!
Scripture
About this Plan
ಕ್ರಿಸ್ಮಸ್ ಉಗಮದ ಕಾಲವು ನಿರೀಕ್ಷಣೆಯಿಂದ ಕಾಯುವ ಮತ್ತು ಸಿದ್ಧತೆ ಮಾಡಿಕೊಳ್ಳುವ ಕಾಲ. ನೀವು ಕರ್ತನಲ್ಲಿ ನಿರೀಕ್ಷೆಯುಳ್ಳವರಾಗಿದ್ದರೆ ನಿಮ್ಮ ನಿರೀಕ್ಷಣೆಯ ಕಾಲವು ವ್ಯರ್ಥವಾದ ಕಾಲವಲ್ಲ ಎಂದು ಅನ್ವೇಷಿಸುವ ಉಗಮದ ಕಾಲದ ಪ್ರಯಾಣದಲ್ಲಿ ಸಭಾಪಾಲಕರು ಮತ್ತು ಲೇಖಕರು ಆಗಿರುವ ಲೂಯೀ ಗಿಗ್ಲಿಯೋ ಅವರ ಜೊತೆ ಸೇರಿಕೊಳ್ಳಿ. ಉಗಮದ ಕಾಲದ ಪ್ರಯಾಣದ ಮೂಲಕ ಕೊಡುಗೆಯಾಗಿ ಬರುವ ಅಪಾರವಾದ ನಿರೀಕ್ಷೆಯನ್ನು ಪಡೆದುಕೊಳ್ಳುವ ಅವಕಾಶವನ್ನು ಹಿಡಿದಿಟ್ಟುಕೊಳ್ಳಿ. ಇನ್ನೂ ಮುಂದಿನ ಏಳು ದಿನಗಳಲ್ಲಿ ನಿರೀಕ್ಷೆಯು ಸ್ತೋತ್ರಕ್ಕೆ ದಾರಿಯಾದಾಗ ನಿಮ್ಮ ಆತ್ಮಕ್ಕೆ ಶಾಂತಿ ಮತ್ತು ಪ್ರೋತ್ಸಾಹವನ್ನು ನೀವು ಕಂಡುಕೊಳ್ಳುವಿರಿ!
More