ನಿನಗಾಗಿ ಇಲ್ಲಿಯೇ ಕಾಯುತ್ತಿರುವೆ, ಉಗಮದ ಕಾಲದ ನಿರೀಕ್ಷೆಯ ಪ್ರಯಾಣಮಾದರಿ
ಯೇಸುವೇ ನಮ್ಮ ಹಬ್ಬ
ಆಲೋಚನೆ
ಯೇಸುವು ನಿಮಗೆ ಬೇಕಾದ್ದನ್ನು ಮಾತ್ರವೇ ಕೊಡುವುದಿಲ್ಲ; ನಿಮಗೆ ಬೇಕಾಗಿರುವುದೇ ಯೇಸು. ನಿಮ್ಮ ಹೃದಯವು ಆತನಿಂದ, ಆತನಿಗಾಗಿ ಸೃಷ್ಟಿಸಲ್ಪಟ್ಟಿದೆ. ನೀವು ಈ ಲೋಕವನ್ನು ಪಡೆಯುವುದಕ್ಕೆ ಪಂಜ ಕಟ್ಟಿ ಹೊಡೆದಾಡಿದರೂ, ಯೇಸುವನ್ನು ಹೊರತುಪಡಿಸಿದರೆ, ನೀವು ಸಂಪೂರ್ಣವಾಗಿ ತೃಪ್ತರಾಗುವುದಿಲ್ಲ.
ನಿಮ್ಮ ಹೃದಯದ ಆಳದಲ್ಲಿ ಅತೃಪ್ತಿಯು ಬೆಳೆಯುತ್ತಿದ್ದರೆ—ಜನರಿಂದ, ಸುಖಗಳಿಂದ, ವಿನೋದ ಕೂಟಗಳಿಂದ, ಪ್ರಾಪಂಚಿಕ ವಸ್ತುಗಳಿಂದ, ಅಥವಾ ಸಾಧನೆಗಳಿಂದ ಸಂಪೂರ್ಣವಾಗಿ ತೃಪ್ತಿಪಡಿಸಲಾಗದೇ ಉಳಿದುಕೊಂಡಿರುವ ಆ ಹಸಿವು—ಈ ದಿನದಂದು ನೀವು ಯೇಸುವಿಗಾಗಿಯೇ ಸೃಷ್ಟಿಸಲ್ಪಟ್ಟಿದ್ದೀರಿ ಎಂಬ ಮನೋಭಾವನೆಗೆ ನಿಮ್ಮ ಹೃದಯವನ್ನು ತೆರೆಯಿರಿ. ಆದರೆ ನೀವು "ಕಡಿಮೆ" ಎನ್ನುವುದರಿಂದ ದೂರ ಸರಿದು, ಆತನನ್ನು ನಿಮ್ಮ "ಹೆಚ್ಚು" ಆಗಲು ಕೇಳಿಕೊಳ್ಳಿರಿ. ಯೇಸುವು ನಿಮಗೆ ಸಾಕು, ಮತ್ತು ಆತನು ಇಲ್ಲಿಯೇ ಇದ್ದಾನೆ.
ಧ್ಯಾನ
ಓ ಬನ್ನಿರಿ, ಓ ಬನ್ನಿರಿ, ಇಮ್ಮಾನುವೇಲ್
ಓ ಬನ್ನಿರಿ, ಓ ಬನ್ನಿರಿ, ಇಮ್ಮಾನುವೇಲ್,
ಮತ್ತು ಪಾಪ ವಿಮೋಚನೆಗೆ ಬಂಧಿಯಾಗಿ
ದೇವರ ಮಗನು ಕಾಣಿಸಿಕೊಳ್ಳುವವರೆಗೆ
ಇಲ್ಲಿಯೇ ಒಬ್ಬಂಟಿಯಾಗಿ ಸ್ವದೇಶಿ ತ್ಯಾಗಿಗಳು ಗೋಳಾಡುತ್ತಿರುವರು.
ಹರ್ಷಿಸು! ಹರ್ಷಿಸು!
ಇಸ್ರಾಯೇಲೇ, ಇಮ್ಮಾನುವೇಲ್ ನಿನ್ನ ಬಳಿಗೆ ಬರುತ್ತಾನೆ.
ಓ ಬನ್ನಿರಿ, ಓ ಇಷಯನ ಬುಡದಿಂದ ಹುಟ್ಟಿದ ಚಿಗುರೂ,
ನಿಮ್ಮಷ್ಟಕ್ಕೆ ನೀವೇ ಬಂದು ಅವರನ್ನೆಲ್ಲಾ ರಕ್ಷಿಸಿ!
ನರಕದ ಆಳದಿಂದ ನಿನ್ನ ಜನರನ್ನು ರಕ್ಷಿಸಿ,
ಅವರಿಗೆ ಗೋರಿಯ ಮೇಲೆ ಅಧಿಕಾರ ನೀಡು.
ಹರ್ಷಿಸು! ಹರ್ಷಿಸು!
ಇಸ್ರಾಯೇಲೇ, ಇಮ್ಮಾನುವೇಲ್ ನಿನ್ನ ಬಳಿಗೆ ಬರುತ್ತಾನೆ.
ಲಾಟಿನ್ ಭಾಷೆ, ಸಿ. 12ನೇ ಶತಮಾನ
Psalteriolum Cantionum Catholicarum, Köln, 1710
John Mason Neale ಅವರಿಂದ ಅನುವಾದ ಮಾಡಲಾಗಿದೆ, 1818–1866, ಕ್ರ.
1 & 4 ಚರಣಗಳು
ಪ್ರಾರ್ಥನೆ
ತಂದೆಯೇ, ನಾನು ತೃಪ್ತಿಯನ್ನು ಜನಗಳಲ್ಲಿ ಮತ್ತು ಈ ಲೋಕದ ವಿಷಯಗಳಲ್ಲಿ ಹುಡುಕುತ್ತಾ ಪಟ್ಟಿರುವ ಕಷ್ಟ ನಿನಗೆ ಮಾತ್ರವೇ ತಿಳಿದಿದೆ. ಆದರೆ ಅವೆಲ್ಲವೂ ಒಡೆದಿದೆ, ಅದರಲ್ಲಿ ನಾನೂ ಕೂಡ. ನೀನೊಬ್ಬನೇ ನನ್ನ ಹಸಿದ ಹೃದಯವನ್ನು ತುಂಬಿಸಲು ಸಾಧ್ಯ. ನಿನ್ನೊಬ್ಬನಲ್ಲಿ ಮಾತ್ರವೇ ಬೇರೆಲ್ಲೂ ಕಾಣದ ಪ್ರೀತಿಯನ್ನು ಕಂಡೆ. ನೀನೆಂದಿಗೂ ಬದಲಾಗುವುದಿಲ್ಲ. ಈ ದಿನ ನನ್ನ ಕಣ್ಣನ್ನು ತೆರೆ. ನಿನ್ನ ಐಶ್ವರ್ಯಗಳನ್ನು ಮತ್ತು ಮಹಿಮೆಯನ್ನು ತೋರಿಸು. ನಿನ್ನನ್ನು ಹೆಚ್ಚು ತಿಳಿದುಕೊಳ್ಳಲು ನನಗೆ ಸಹಾಯ ಮಾಡು. ನನ್ನೆದುರು ಇರಿಸಿರುವ ನಿನ್ನ ಉತ್ಸವವನ್ನು ನನಗೆ ತೋರಿಸು, ಅದರಿಂದ ನಾನು ನಿನ್ನಲ್ಲಿ ಮಾತ್ರವೇ ಆನಂದ ಪಡುವಂತೆ ಆಗಲಿ. ಅಮೆನ್.
Scripture
About this Plan
ಕ್ರಿಸ್ಮಸ್ ಉಗಮದ ಕಾಲವು ನಿರೀಕ್ಷಣೆಯಿಂದ ಕಾಯುವ ಮತ್ತು ಸಿದ್ಧತೆ ಮಾಡಿಕೊಳ್ಳುವ ಕಾಲ. ನೀವು ಕರ್ತನಲ್ಲಿ ನಿರೀಕ್ಷೆಯುಳ್ಳವರಾಗಿದ್ದರೆ ನಿಮ್ಮ ನಿರೀಕ್ಷಣೆಯ ಕಾಲವು ವ್ಯರ್ಥವಾದ ಕಾಲವಲ್ಲ ಎಂದು ಅನ್ವೇಷಿಸುವ ಉಗಮದ ಕಾಲದ ಪ್ರಯಾಣದಲ್ಲಿ ಸಭಾಪಾಲಕರು ಮತ್ತು ಲೇಖಕರು ಆಗಿರುವ ಲೂಯೀ ಗಿಗ್ಲಿಯೋ ಅವರ ಜೊತೆ ಸೇರಿಕೊಳ್ಳಿ. ಉಗಮದ ಕಾಲದ ಪ್ರಯಾಣದ ಮೂಲಕ ಕೊಡುಗೆಯಾಗಿ ಬರುವ ಅಪಾರವಾದ ನಿರೀಕ್ಷೆಯನ್ನು ಪಡೆದುಕೊಳ್ಳುವ ಅವಕಾಶವನ್ನು ಹಿಡಿದಿಟ್ಟುಕೊಳ್ಳಿ. ಇನ್ನೂ ಮುಂದಿನ ಏಳು ದಿನಗಳಲ್ಲಿ ನಿರೀಕ್ಷೆಯು ಸ್ತೋತ್ರಕ್ಕೆ ದಾರಿಯಾದಾಗ ನಿಮ್ಮ ಆತ್ಮಕ್ಕೆ ಶಾಂತಿ ಮತ್ತು ಪ್ರೋತ್ಸಾಹವನ್ನು ನೀವು ಕಂಡುಕೊಳ್ಳುವಿರಿ!
More