ನಿನಗಾಗಿ ಇಲ್ಲಿಯೇ ಕಾಯುತ್ತಿರುವೆ, ಉಗಮದ ಕಾಲದ ನಿರೀಕ್ಷೆಯ ಪ್ರಯಾಣಮಾದರಿ
![Waiting Here for You, An Advent Journey of Hope](/_next/image?url=https%3A%2F%2Fimageproxy.youversionapi.com%2Fhttps%3A%2F%2Fs3.amazonaws.com%2Fyvplans%2F1237%2F1280x720.jpg&w=3840&q=75)
ಸರಿಯಾದ ಸಮಯ
ಆಲೋಚನೆ
ಶತಮಾನಗಳಿಂದ ದೇವಜನರಿಗೆ ಒಬ್ಬ ರಕ್ಷಕನ ವಾಗ್ಧಾನ ಮಾಡಲ್ಪಟ್ಟಿತ್ತು. ರಕ್ಷಣೆಗಾಗಿ ಅವರು ನಿರೀಕ್ಷಿಸಿದರು ಮತ್ತು ಪ್ರಾರ್ಥಿಸಿದರು. ಮತ್ತು ಒಂದು ಸರಿಯಾದ ದಿನದಂದು, ಒಂದು ಸರಿಯಾದ ಸ್ಥಳದಲ್ಲಿ, ಒಂದು ಸರಿಯಾದ ಸಮಯದಲ್ಲಿ, ಯೇಸು ಜನಿಸಿದನು. ದೇವರು ನಮಗೆ ನಿಶ್ಚಯ ಮಾಡಿದ ದಿನದಂದು ಅಪರೂಪಕ್ಕೆ ಬರುವವನಾದರೂ, ಆತನು ಸರಿಯಾದ ಸಮಯದಲ್ಲಿ ಬರುವವನಾಗಿದ್ದಾನೆ.
ನಾವೆಲ್ಲರೂ ಯಾವುದಾದರೊಂದು ವಿಷಯಕ್ಕಾಗಿ ಕಾಯುತ್ತಿರುತ್ತೇವೆ, ಹಲವು ಬಾರಿ ದೇವರು ನಮ್ಮನ್ನು ಮರೆತುಬಿಟ್ಟಿರಬಹುದು ಎಂದು ಯೋಚಿಸುತ್ತಿರುತ್ತೇವೆ. ನಿಮ್ಮ ಕಾಯುವಿಕೆಯ ಕಾಲದಲ್ಲಿ, ಕ್ರಿಸ್ತನ ಜನನವು ನಿಮ್ಮನ್ನು ಪ್ರೋತ್ಸಾಹಿಸಲಿ. ದೇವರು ಇಲ್ಲಿಯವರೆಗೂ (ನಿಮಗೆ ಕಾಣಿಸುವಷ್ಟು ದೂರ) ಬರಲಿಲ್ಲವೆಂಬ ಮಾತ್ರಕ್ಕೆ, ಆತನು ನಿಮ್ಮನ್ನು ಕೈಬಿಟ್ಟಿದ್ದಾನೆಂಬ ಅರ್ಥವಲ್ಲ. ಆತನಿಗೆ ಒಂದು ದಿನವು ಒಂದು ಸಾವಿರ ವರ್ಷಗಳಿಗೆ ಸಮಾನವಾದದ್ದು ಮತ್ತು ಒಂದು ಸಾವಿರ ವರ್ಷಗಳು ಒಂದು ದಿನಕ್ಕೆ ಸಮಾನವಾದದ್ದು. ಈ ಕ್ಷಣದಲ್ಲಿ ಕೂಡ ಆತನು ತನ್ನ ಮಹಿಮೆಗಾಗಿ ಮತ್ತು ನಿಮ್ಮ ಒಳಿತಿಗಾಗಿ ಕಾರ್ಯಾಮಾಡುತ್ತಿದ್ದಾನೆ. ಪರಿಸ್ಥಿತಿಗಳು ಬೇರೆಯೇ ಹೇಳಿದರೂ, ದೇವರು ನಿಶ್ಚಿತ ಕಾಲಕ್ಕೆ, ನಿಮಗಾಗಿ ಇಟ್ಟಿರುವ ಆತನ ಬಹುಕಾಲ-ನಿರೀಕ್ಷಿತ ಯೋಜನೆಗಳೊಂದಿಗೆ ಬರುವವನಾಗಿದ್ದಾನೆ. ಸರಿಯಾದ ಸಮಯವು ಜರುಗುವ ಮೊದಲೇ ಧೃತಿಗೆಡಬೇಡಿರಿ.
ಗೋದಲಿಯಲ್ಲಿ ಭರವಸೆಯನ್ನು ಇಟ್ಟುಕೊಳ್ಳಿ ಮತ್ತು ಪರಿಪೂರ್ಣ ಸಮಯದಲ್ಲಿ ನಿಮಗಾಗಿ ಪರಲೋಕದಿಂದ ಕೆಳಗಿಳಿದು ಬಂದ ದೇವರು ನಿಮ್ಮನ್ನು ಪ್ರೀತಿಸುತ್ತಾರೆ ಮತ್ತು ಬಹುಮಾನ ಕೊಡುವವರಾಗಿದ್ದಾರೆ ಎಂಬುದನ್ನು ಅರಿತುಕೊಳ್ಳಿ.
ಧ್ಯಾನ
ಸಂತೋಷದ ಧ್ವನಿಯನ್ನು ಆಲಿಸಿರಿ
ಸಂತೋಷದ ಧ್ವನಿಯನ್ನು ಆಲಿಸಿರಿ! ರಕ್ಷಕನು ಬರುತ್ತಾನೆ,
ಬಹುಕಾಲದಿಂದ ವಾಗ್ಧಾನ ಮಾಡಿರುವ ರಕ್ಷಕನು;
ಪ್ರತಿಯೊಂದು ಹೃದಯವು ಸಿಂಹಾಸನವನ್ನು,
ಮತ್ತು ಪ್ರತಿಯೊಂದು ಧ್ವನಿಯು ಒಂದು ಗೀತೆಯನ್ನು ಸಿದ್ಧಮಾಡಿಕೊಳ್ಳಲಿ.
ಬಂಧಿತರನ್ನು ಬಿಡಿಸಲು,
ಸೈತಾನನ ಬಂಧನದಿಂದ ಬಿಡುಗಡೆ ನೀಡಲು ಬರುತ್ತಾನೆ.
ಆತನ ಎದಿರು ಹಿತ್ತಾಳೆಯ ಬಾಗಿಲುಗಳು ಒಡೆದುಹೋಗ್ವವು,
ಕಬ್ಬಿಣದ ಬೇಡಿಗಳು ಶರಣಾಗುವವು.
ಆತನು ಒಡೆದ ಹೃದಯಗಳನ್ನು ಸೇರಿಸಲು,
ರಕ್ತಸುರಿಸುತ್ತಿರುವ ಆತ್ಮವನ್ನು ಗುಣಪಡಿಸಲು,
ಮತ್ತು ಆತನ ಕೃಪೆಯ ಐಶ್ವರ್ಯಗಳೊಂದಿಗೆ
ದೀನ ಸ್ವಭಾವದ ಬಡವರನ್ನು ಉದ್ಧರಿಸಲು ಬರುತ್ತಾನೆ.
ನಮ್ಮ ಸಂತೋಷವುಳ್ಳ ಆನಂದ ಘೋಷಗಳು, ಸಮಾಧಾನದ ಪ್ರಭುವೆ,
ನಿಮ್ಮ ಸ್ವಾಗತವನ್ನು ಸಾರಿಹೇಳುತ್ತವೆ,
ಮತ್ತು ಪರಲೋಕದ ನಿತ್ಯತ್ವದ ದ್ವಾರಗಳು
ನಿಮ್ಮ ಪ್ರೀತಿಯ ನಾಮವನ್ನು ಕೊಂಡಾಡುತ್ತವೆ.
ಫಿಲಿಪ್ ಡೊಡ್ರಿಜ್, 1702-1751
ಪ್ರಾರ್ಥನೆ
ತಂದೆಯೇ, ನನಗೆ ಪೂರ್ತಿಯಾಗಿ ಗೋಚರವಾಗದ ಸ್ಥಳಕ್ಕೆ ನಾನು ಕಾತುರದಿಂದ ನಿರೀಕ್ಷಿಸುವಾಗ, ನನ್ನ ಕಾಯುವಿಕೆಯಲ್ಲಿ ನನ್ನನ್ನು ಭೇಟಿ ಮಾಡು. ನನ್ನ ಮನಸ್ಸನ್ನು ಸ್ಥಿರ ಮಾಡು ಮತ್ತು ನೀನು ನನ್ನ ಬಳಿಯಲ್ಲಿಯೇ ಇದ್ದೀಯಾ ಎಂದು ತಿಳಿದುಕೊಳ್ಳುವ ಸಾಮರ್ಥ್ಯವನ್ನು ನನಗೆ ನೀಡು. ನಿನ್ನ ಯೋಜನೆಗಳು ಉತ್ತಮವಾದವು ಎಂದು ನಾನು ನಂಬುತ್ತೇನೆ. ಅದನ್ನು ನಾನು ನಿನ್ನ ಒಬ್ಬನೇ ಮಗನ ಜನನದಲ್ಲಿ ನೋಡುತ್ತಿದ್ದೇನೆ.
ಆದರೆ ಕೆಲವು ಬಾರಿ ನನ್ನನ್ನು ಸುತ್ತುವರೆದಿರುವ ಮುಸುಕಿನ ಆಚೆಗೆ ನೋಡಲು ನಾನು ಕಷ್ಟಪಡುತ್ತೇನೆ. ನಿನ್ನ ಕಡೆಗೆ ನಾನು ಕಣ್ಣೆತ್ತಿ ನೋಡುವಾಗ ನನ್ನ ಆತ್ಮಸ್ಥೈರ್ಯವನ್ನು ಹೊಸದಾಗಿಸು. ಈ ನಿರೀಕ್ಷೆಯ ಕಾಲದಲ್ಲಿ ನನ್ನ ಜೀವನದಲ್ಲಿ ನೀನು ಮಹಿಮೆ ಹೊಂದಿಕೊ. ಆಮೆನ್.
ದೇವರ ವಾಕ್ಯ
About this Plan
![Waiting Here for You, An Advent Journey of Hope](/_next/image?url=https%3A%2F%2Fimageproxy.youversionapi.com%2Fhttps%3A%2F%2Fs3.amazonaws.com%2Fyvplans%2F1237%2F1280x720.jpg&w=3840&q=75)
ಕ್ರಿಸ್ಮಸ್ ಉಗಮದ ಕಾಲವು ನಿರೀಕ್ಷಣೆಯಿಂದ ಕಾಯುವ ಮತ್ತು ಸಿದ್ಧತೆ ಮಾಡಿಕೊಳ್ಳುವ ಕಾಲ. ನೀವು ಕರ್ತನಲ್ಲಿ ನಿರೀಕ್ಷೆಯುಳ್ಳವರಾಗಿದ್ದರೆ ನಿಮ್ಮ ನಿರೀಕ್ಷಣೆಯ ಕಾಲವು ವ್ಯರ್ಥವಾದ ಕಾಲವಲ್ಲ ಎಂದು ಅನ್ವೇಷಿಸುವ ಉಗಮದ ಕಾಲದ ಪ್ರಯಾಣದಲ್ಲಿ ಸಭಾಪಾಲಕರು ಮತ್ತು ಲೇಖಕರು ಆಗಿರುವ ಲೂಯೀ ಗಿಗ್ಲಿಯೋ ಅವರ ಜೊತೆ ಸೇರಿಕೊಳ್ಳಿ. ಉಗಮದ ಕಾಲದ ಪ್ರಯಾಣದ ಮೂಲಕ ಕೊಡುಗೆಯಾಗಿ ಬರುವ ಅಪಾರವಾದ ನಿರೀಕ್ಷೆಯನ್ನು ಪಡೆದುಕೊಳ್ಳುವ ಅವಕಾಶವನ್ನು ಹಿಡಿದಿಟ್ಟುಕೊಳ್ಳಿ. ಇನ್ನೂ ಮುಂದಿನ ಏಳು ದಿನಗಳಲ್ಲಿ ನಿರೀಕ್ಷೆಯು ಸ್ತೋತ್ರಕ್ಕೆ ದಾರಿಯಾದಾಗ ನಿಮ್ಮ ಆತ್ಮಕ್ಕೆ ಶಾಂತಿ ಮತ್ತು ಪ್ರೋತ್ಸಾಹವನ್ನು ನೀವು ಕಂಡುಕೊಳ್ಳುವಿರಿ!
More
ವೈಶಿಷ್ಟ್ಯದ ಯೋಜನೆಗಳು
![Crazy Love With Francis Chan](/_next/image?url=https%3A%2F%2Fimageproxy.youversionapi.com%2Fhttps%3A%2F%2Fs3.amazonaws.com%2Fyvplans%2F1285%2F320x180.jpg&w=640&q=75)
Crazy Love With Francis Chan
![All Is Calm: Receiving Jesus' Rest This Christmas](/_next/image?url=https%3A%2F%2Fimageproxy.youversionapi.com%2Fhttps%3A%2F%2Fs3.amazonaws.com%2Fyvplans%2F9212%2F320x180.jpg&w=640&q=75)
All Is Calm: Receiving Jesus' Rest This Christmas
![Believing God Is Good No Matter What](/_next/image?url=https%3A%2F%2Fimageproxy.youversionapi.com%2Fhttps%3A%2F%2Fs3.amazonaws.com%2Fyvplans%2F1930%2F320x180.jpg&w=640&q=75)
Believing God Is Good No Matter What
![Listening To God](/_next/image?url=https%3A%2F%2Fimageproxy.youversionapi.com%2Fhttps%3A%2F%2Fs3.amazonaws.com%2Fyvplans%2F1763%2F320x180.jpg&w=640&q=75)
Listening To God
![Using Your Time for God](/_next/image?url=https%3A%2F%2Fimageproxy.youversionapi.com%2Fhttps%3A%2F%2Fs3.amazonaws.com%2Fyvplans%2F1355%2F320x180.jpg&w=640&q=75)
Using Your Time for God
![The Comeback: It's Not Too Late And You're Never Too Far](/_next/image?url=https%3A%2F%2Fimageproxy.youversionapi.com%2Fhttps%3A%2F%2Fs3.amazonaws.com%2Fyvplans%2F1942%2F320x180.jpg&w=640&q=75)
The Comeback: It's Not Too Late And You're Never Too Far
![The Power of a Simple Prayer](/_next/image?url=https%3A%2F%2Fimageproxy.youversionapi.com%2Fhttps%3A%2F%2Fs3.amazonaws.com%2Fyvplans%2F1274%2F320x180.jpg&w=640&q=75)
The Power of a Simple Prayer
![Live By The Spirit: Devotions With John Piper](/_next/image?url=https%3A%2F%2Fimageproxy.youversionapi.com%2Fhttps%3A%2F%2Fs3.amazonaws.com%2Fyvplans%2F3841%2F320x180.jpg&w=640&q=75)
Live By The Spirit: Devotions With John Piper
![Goliath Must Fall: Winning The Battle Against Your Giants](/_next/image?url=https%3A%2F%2Fimageproxy.youversionapi.com%2Fhttps%3A%2F%2Fs3.amazonaws.com%2Fyvplans%2F4024%2F320x180.jpg&w=640&q=75)
Goliath Must Fall: Winning The Battle Against Your Giants
![Majesty In A Manger](/_next/image?url=https%3A%2F%2Fimageproxy.youversionapi.com%2Fhttps%3A%2F%2Fs3.amazonaws.com%2Fyvplans%2F3160%2F320x180.jpg&w=640&q=75)