ದೇವರು + ಗುರಿಗಳು: ಕ್ರೈಸ್ತರಾಗಿ ಗುರಿಗಳನ್ನು ಇಟ್ಟುಕೊಳ್ಳುವುದು ಹೇಗೆಮಾದರಿ

GOD + GOALS: How To Set Goals As A Christian

DAY 5 OF 5

ದಿನ 5: ನಾನು ಹಿಂಬಾಲಿಸದೇ ಹೋದರೆ ಎನಾಗಬಹುದು? 

ನಿಮ್ಮ ಮನಸಿನಲ್ಲಿ ಕೆಲವು ಒಳ್ಳೆ ಗುರಿಗಳಿವೆ, ಮತ್ತು ಕರ್ತನು ನಿಮ್ಮನ್ನು ನಡೆಸುವನು ಎಂದು ನೀವು ಭರವಸೆ ಇಟ್ಟಿದ್ದೀರಿ. ಆದರೆ, ನೀವು ವಿಫಲರಾದರೆ? ನೀವು ಹಿಂಬಾಲಿಸಲಾರಿರಿ, ನೀವು ಹಾಳು ಮಾಡಿಕೊಳ್ಳುತ್ತೀರಿ, ಮತ್ತು ನೀವು ದೇವರಿಗೆ ನಿರಾಶೆ ಮಾಡುತ್ತೀರಿ ಎಂಬ ಭಯ ನಿಮಗಿದೆ.

ಒಂದು ಜನಪ್ರಿಯವಾದ ಮಾತಿದೆ, "ಆಕೆ ಮಾಡುತ್ತಾಳೆ ಎಂದು ಆಕೆಯೇ ನಂಬಿದ್ದರಿಂದ ಆಕೆ ಮಾಡಿದಳು." ಆದರೂ, ದೇವರ ವಾಕ್ಯವು ನಮಗೆ ಆಳವಾದ, ಬಿಡುಗಡೆ ನೀಡುವ ಸತ್ಯವೊಂದನ್ನು ನಮಗೆ ತೆರೆದಿಡುತ್ತದೆ: ಆಕೆಗೆ ತಾನು  ಮಾಡಲಾರಳು ಎಂದು ನಂಬಿದ್ದಳು, ಅದಕ್ಕಾಗಿ ದೇವರೇ ಮಾಡಿದರು. ನನ್ನ ಸ್ನೇಹಿತರೇ, ನೀವೇ ಎಲ್ಲವನ್ನೂ ಮಾಡಬೇಕಾಗಿಲ್ಲ. ದೇವರು ನೀವು ಸರಿಯಾಗಿ ಇರಬೇಕೆಂದು ಅಪೇಕ್ಷೆ ಪಡುವುದಿಲ್ಲ. ಆ ಕಾರಣಕ್ಕಾಗಿಯೇ ಆತನು ಯೇಸುವನ್ನು ನಮ್ಮನ್ನು ರಕ್ಷಿಸಲು ಕಳುಹಿಸಿದನು—ನಾವು ಬಲಹೀನರಾಗಿದ್ದಾಗ ಬಲವನ್ನು ನೀಡಲು, ಮಾರ್ಗದರ್ಶಿಸಲು, ನಮಗೆ ದಾರಿ ತೋರಿಸಲು, ಮತ್ತು ನಮ್ಮ ಪಾಪಗಳಿಗೆ ಶಿಕ್ಷೆ ಅನುಭವಿಸಲು ನಾಮಗೊಬ್ಬ ರಕ್ಷಕನ ಅವಶ್ಯಕತೆ ಇದೆ ಎಂದು ಆತನಿಗೆ ತಿಳಿದಿದೆ. ದೇವರ-ಮಾರ್ಗದರ್ಶಿತ ಗುರಿಗಳು ಸುವಾರ್ತೆಯಿಂದ ಶಕ್ತಿ ಪಡೆಯುತ್ತವೆ, ಮತ್ತು ಅದು ನಾವು ಎಡವಿ ಬಿದ್ದಾಗ ನಡೆಯುವ ದಾರಿಗೆ ಮರಳಿ ಬರಲು ಬೇಕಾದ ಉತ್ತೇಜನವನ್ನು ಉಂಟು ಮಾಡಲು ಸಹಾಯ ಮಾಡುತ್ತದೆ. ನಿಮಗೆ ಅಸಾಧ್ಯವಾದ ಸ್ಥಳದಲ್ಲಿ, ಆತನಿಗೆ ಸಾಧ್ಯ. ವಾಸ್ತವವಾಗಿ, ಆತನು ಶಿಲುಬೆಯ ಮೇಲೆ ಆ ಕೆಲಸವನ್ನು ಆಗಲೇ ಮಾಡಿದ್ದಾನೆ. ನೀವು ಏನಾದರೂ ಸಾಧನೆ ಮಾಡಿರಿ ಅಥವಾ ಮಾಡದಿದ್ದರೂ ಸರಿ, ದೇವರು ನಿಮಗಾಗಿ ಮತ್ತು ನನಗಾಗಿ ಮರಣದ ಮೇಲೆ ಅಂತಿಮವಾದ ಜಯವನ್ನು ಸಾಧಿಸಿದ್ದಾರೆ! ಆತನು ಸುಂದರವಾಗಿ ಮಾಡಲಾಗದ ತಪ್ಪನ್ನು ನೀವು ಮಾಡಿರುವುದೇ ಇಲ್ಲ.

ಎಲ್ಲವನ್ನೂ ಈಗ ಒಟ್ಟುಗೂಡಿಸಿ ನೋಡೋಣ:

  • ದೇವರ-ಮಾರ್ಗದರ್ಶಿತ ಗುರಿಗಳು ಮತ್ತು ಜ್ಞಾನವಂತಿಕೆಯ ಯೋಜನೆಗಳ ಸಲುವಾಗಿಆತನ ಜ್ಞಾನವನ್ನು ಹುಡುಕಿರಿ . ಆತನು ನಿಮಗೆ ಖಂಡಿತವಾಗಿಯೂ ನೀಡುವನು! ದೊಡ್ಡ ಗುರಿಗಳಲ್ಲಿ ಮತ್ತು ತೋರಿಕೆಯಲ್ಲಿ-ಪ್ರಾಪಂಚಿಕವಾದ ಹೆಜ್ಜೆಗಳೂ ಸೇರಿಸಿ
  • ನಂಬಿಕೆಯಿಂದ ಹೆಜ್ಜೆಗಳನ್ನು ಇಡಿ.
  • ಮತ್ತು ಆತನು ನೀವು ದಾರಿಯುದ್ದಕ್ಕೂ ಮಾಡಬಹುದಾದ ತಪ್ಪುಗಳಿಗೆ ನಿಮ್ಮ ಮೇಲೆ ಆತನ ಕೃಪೆಯನ್ನು ಸುರಿಯುತ್ತಾನೆಂದು ಭರವಸೆ ಇಡಿರಿ—ಏಕೆಂದರೆ ನೀವು ತಪ್ಪು ಖಂಡಿತವಾಗಿಯೂ ಮಾಡುತ್ತೀರಿ! ಆದರೆ, ನಿಮ್ಮ ಗುರಿಗಳು ಸರಿಯಾಗಿ ಆತನ ಕಡೆಗೆ ತಿರುಗಿಕೊಂಡಿದ್ದರೆ, ನೀವು ಹಡಗಿನಿಂದ ಜಿಗಿಯಲಾರಿರಿ. ನೀವು ಶಕ್ತಿಗಾಗಿ ಮತ್ತು ಜ್ಞಾನಕ್ಕಾಗಿ ಆತನ ಕಡೆಗೆ ತಿರುಗಿಕೊಳ್ಳುತ್ತೀರಿ, ಹೇಗೆ ನೀವು ಆ ಗುರಿಗಳನ್ನು ಸಾಧಿಸುತ್ತೀರಿ ಎನ್ನುವುದು ಯಾಕೆ ಎನ್ನುವಷ್ಟು ಮುಖ್ಯವಲ್ಲ ಎಂದು ಅರ್ಥ ಮಾಡಿಕೊಳ್ಳುತ್ತೀರಿ.

ನನ್ನೊಂದಿಗೆ ಪ್ರಾರ್ಥಿಸಿ: ಕರ್ತನೆ, ನಿನ್ನ ಜೀವ-ನೀಡುವ ವಾಕ್ಯದಲ್ಲಿ ಎಂತಹ ಸಾಹಸವಿತ್ತು! ನಾನು ಓದಿದ್ದರಲ್ಲಿ ಯಾವುದಾದರೊಂದನ್ನು ಮಾಡಲು ಸಹಾಯ ಮಾಡಿರಿ ಮತ್ತು ಎಲ್ಲಕ್ಕಿಂತಲೂ ಮುಖ್ಯವಾಗಿ, ಯೇಸುವಿನ ಸುವಾರ್ತೆಯನ್ನು ಹಂಚಿಕೊಳ್ಳಲು ಸಹಾಯ ಮಾಡು. ನನ್ನ ಗುರಿಗಳು, ದೊಡ್ಡವೂ ಮತ್ತು ಚಿಕ್ಕವು, ನನ್ನನ್ನು ನಿನ್ನ ಪಾದದ ಕಡೆಗೆ ಎಳೆದೊಯ್ಯಲಿ. ಮತ್ತು ನಾನು ತೊದಳುತ್ತಾ ಹೇಳುವ ಸಂದರ್ಭದಲ್ಲಿ, ನಿನ್ನ ಪರಿವರ್ತಿಸುವ ಕೃಪೆಯ ಕುರಿತಾಗಿ ನನಗೆ ನೆನಪಿಸು. ಆ ಕೃಪೆಯು ನೀನು ನನ್ನ ಜೀವನಕ್ಕಾಗಿ ಇಟ್ಟಿರುವ ಯೋಜನೆಯನ್ನು ಪರಿಪೂರ್ಣವಾಗಿ ಜೀವಿಸಲಿಕ್ಕಾಗಿ ಒತ್ತಾಯ ಮಾಡಲಿ! ಯೇಸುವಿನ ನಾಮದಲ್ಲಿ, ಆಮೆನ್!

ದಿನ 4

About this Plan

GOD + GOALS: How To Set Goals As A Christian

ಕ್ರೈಸ್ತರಾಗಿ ಗುರಿಗಳನ್ನು ಇಟ್ಟುಕೊಳ್ಳುವುದು ಸರಿಯೇ? ಒಂದು ಗುರಿಯು ದೇವರಿಂದ ಬಂದದ್ದೋ ಅಥವಾ ನಿಮ್ಮ ಸ್ವಂತದಿಂದ ಬಂದದ್ದೋ ಎಂದು ನಿಮಗೆ ಹೇಗೆ ತಿಳಿಯುತ್ತದೆ? ಮತ್ತು ಕ್ರೈಸ್ತರ ಗುರಿಗಳು ಹೇಗಿರುತ್ತದೆ? ಈ 5-ದಿನದ ಓದುವ ಯೋಜನೆಯಲ್ಲಿ, ನೀವು ವಾಕ್ಯದಲ್ಲಿ ಆಳವಾಗಿ ಇಳಿದು ಕೃಪೆ-ಭರಿತ ಗುರಿಗಳನ್ನು ಇಟ್ಟುಕೊಳ್ಳುವುದಕ್ಕೆ ಸ್ಪಷ್ಟತೆ ಮತ್ತು ಮಾರ್ಗದರ್ಶನವನ್ನು ಕಂಡುಕೊಳ್ಳುತ್ತೀರಿ!

More

ಈ ಯೋಜನೆಯನ್ನು ಒದಗಿಸಿದಕ್ಕಾಗಿ Cultivate What Matters ಅವರಿಗೆ ಧನ್ಯವಾದ ಅರ್ಪಿಸಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಭೇಟಿ ನೀಡಿ: http://www.cultivatewhatmatters.com/youversion