ದೇವರು + ಗುರಿಗಳು: ಕ್ರೈಸ್ತರಾಗಿ ಗುರಿಗಳನ್ನು ಇಟ್ಟುಕೊಳ್ಳುವುದು ಹೇಗೆಮಾದರಿ
ದಿನ 3: ನಂಬಿಕೆಯಿಂದ-ಉತ್ತೇಜಿಸಲ್ಪಟ್ಟ ಗುರಿಗಳು ಹೇಗೆ ಕಾಣುತ್ತವೆ?
ದೇವರ-ಮಾರ್ಗದರ್ಶಿತ ಗುರಿಗಳು ಹೇಗೆ ಕಾಣುತ್ತವೆ? ಸೇವೆಗೆ ಸ್ಪಷ್ಟವಾಗಿ ಸಂಬಂಧ ಪಡದೇ ಇರುವ ಗುರಿಗಳನ್ನು ನೀವು ಇಟ್ಟುಕೊಳ್ಳಬಹುದೇ—ಉದಾಹರಣೆಗೆ ದೇಹದಾರ್ಢ್ಯ ಅಥವಾ ಶಾಲೆಗೆ ಮರಳುವುದು? ಅಥವಾ, ನಿಮ್ಮ ಎಲ್ಲಾ ಗುರಿಗಳು "ಹೆಚ್ಚಾಗಿ ಪ್ರಾರ್ಥಿಸಿ", "ಸೇವೆಯ ಪ್ರವಾಸಕ್ಕೆ ಹೋಗಿ", ಮತ್ತು "ನನ್ನ ಸಭೆಯಲ್ಲಿ ಸೇವೆ ಮಾಡಿ" ಎಂದೇ ಇರಬೇಕೇ?
ಕೆಲವು ಗುರಿಗಳು ಮತ್ತು ಅಭ್ಯಾಸಗಳು ನಮಗಾಗಿ ಸತ್ಯವೇದದಲ್ಲಿ ತೆರೆದಿಡಲ್ಪಟ್ಟಿವೆ, ಅವುಗಳು ಸಹಾಯಕವಾಗಿವೆ ಕೂಡ: ನಿಮ್ಮ ಸತ್ಯವೇದವನ್ನು ಓದಿರಿ (ಕೀರ್ತನೆಗಳು 119:9), ಪ್ರಾರ್ಥನೆಯಲ್ಲಿ ಸಮಯವನ್ನು ಕಳೆಯಿರಿ (1 ಥೆಸಲೋನಿಕದವರಿಗೆ 5:17-18), ಇತರೆ ನಂಬಿಗಸ್ತರೊಂದಿಗೆ ಇರಿ (ಇಬ್ರಿಯರಿಗೆ 10:25), ಮತ್ತು ನಿಮ್ಮ ನಂಬಿಕೆಯನ್ನು ಹಂಚಿಕೊಳ್ಳಿರಿ (ಕೀರ್ತನೆಗಳು 96:3). ದೇವರು ಈ ಕಾರ್ಯಗಳಿಂದ ನಮ್ಮನ್ನು ಆತನ ಹತ್ತಿರ ಇಟ್ಟುಕೊಳ್ಳಲು ನಮ್ಮಿಂದ ಅಪೇಕ್ಷಿಸುತ್ತಾರೆ—ನಮ್ಮನ್ನು ಫಲಭರಿತರಾಗಿ ಮತ್ತು ನಂಬಿಗಸ್ತರಾಗಿ ಇಡಲು. ಇದು ನಾವು ಮಾಡಬೇಕಾದ ಕೆಲಸದ ಪಟ್ಟಿ ಅಲ್ಲ, ಆದರೆ ದೇವರ ಕೃಪೆಯಿಂದ ಮಾರ್ಪಾಡಾಗಿರುವ ಹೃದಯದ ಫಲಿತಾಂಶವಾಗಿದೆ. ಆತನು ನಮ್ಮನ್ನು ಅತಿ ಹೆಚ್ಚಾಗಿ ಪ್ರೀತಿಸುವುದರಿಂದ ನಾವು ಇದನ್ನೆಲ್ಲಾ ಮಾಡಲೇಬೇಕಾದ ಭಾರವಿರುತ್ತದೆ.
ಆದರೆ ನಮ್ಮ ಉಳಿದಿರುವ ಜೀವನದ ಕಥೆ ಏನು? ದೇವರು ಇದನ್ನೆಲ್ಲಾ ಆತನ ಮಹಿಮೆಗಾಗಿ ಮಾಡಬೇಕೆಂದು ಬಯಸುತ್ತಾರೆ (1 ಕೊರಿಂಥದವರಿಗೆ 10:31)—ನಮಗಾಗಿ ಆತನ ಬಳಿ ಇರುವ ಅತಿ ದೊಡ್ಡ ಗುರಿಗಳು ಮತ್ತು ತೋರಿಕೆಯಲ್ಲಿ ಪ್ರಾಪಂಚಿಕ ಕಾರ್ಯಗಳು. ಒಂದು ವ್ಯವಹಾರವನ್ನು ಕಟ್ಟುವ ವಿಷಯವಾಗಿರಬಹುದು, ಪದವಿ ಪೂರ್ಣಗೊಳಿಸುವುದಾಗಿರಬಹುದು, ಮಕ್ಕಳಿಗೆ ತಾಯಿಯಾಗುವುದಿರಬಹುದು, ಜ್ಞಾನವುಳ್ಳ ಆರ್ಥಿಕ ನಿರ್ಧಾರಗಳನ್ನು ಮಾಡುವುದಿರಬಹುದು, ನಿಮ್ಮ ದೇಹದ ಆರೈಕೆ ಮಾಡುವುದಾಗಿರಬಹುದು, ಅಥವಾ ನಿಮ್ಮ ಎಲ್ಲಾ ಕೊಳೆ ಬಟ್ಟೆಗಳನ್ನು ಒಗೆಯುವುದಕ್ಕೆ ಹಾಕುವುದಿರಬಹುದು (ಆತ್ಮಿಕವಾದ ಕೊಳೆ ಬಟ್ಟೆಗಳೇ? ಹೌದು!), ಇವೆಲ್ಲವನ್ನೂ ದೇವರಿಗೆ ಮೆಚ್ಚುಗೆ ಆಗಲಿ ಎಂಬ ಗುರಿಯಿಂದ ಮಾಡುವುದಾದರೆ, ಇವುಗಳನ್ನು ನೀವು ಆತನಿಗಾಗಿ ಒಂದು ಬೆಳಕಿನ ರೀತಿಯಲ್ಲಿ ಉಪಯೋಗಿಸಬಹುದು. ಈ ವಿಷಯಗಳಲ್ಲಿ ನಮ್ಮ ನಡತೆಯಲ್ಲಿ ಅಥವಾ ಪ್ರಗತಿಯಲ್ಲಿ ನಾವು ಸರಿಯಾಗಿರಲೇಬೇಕು ಎಂಬ ಅರ್ಥವಲ್ಲ, ನಾವು ಬರಿ ನಂಬಿಗಸ್ತರಾಗಿರಬೇಕು.
ಆತನ ಮಹಿಮೆಗಾಗಿ ನಾವು ಎಲ್ಲವನ್ನೂ ಮಾಡಿದಾಗ, ನಮ್ಮಲ್ಲಿ ಜನರು ಯಾವುದೋ ಒಂದು ವ್ಯತ್ಯಾಸ ಗಮನಿಸುತ್ತಾರೆ. ನಮಗೆ ನಮ್ಮ ನಿರೀಕ್ಷೆ ಎಲ್ಲಿಂದ ಬರುತ್ತದೆ ಎಂದು ಅವರು ಆಶ್ಚರ್ಯ ಪಡುತ್ತಾರೆ ಮತ್ತು, ಕರ್ತನ ಚಿತ್ತವಿದ್ದರೆ, ಆ ನಿರೀಕ್ಷೆಯ ಮೂಲದ ಬಗ್ಗೆ ಹಂಚಿಕೊಳ್ಳಲು ನಮಗೆ ಒಂದು ಅವಕಾಶ ದೊರೆಯುತ್ತದೆ. ಹಾಗಾದರೆ, ನಿಮ್ಮ ಗುರಿಗಳು ಸೇವೆಗೆ ಮತ್ತು ಸಭೆಯ ಸಹಾಯಕ್ಕೆ ಮಾತ್ರವೇ ಆಗಿರಬೇಕೇ? ಕರ್ತನು ನಿಮ್ಮನ್ನು ಎಲ್ಲಿ ಇರಿಸಿದ್ದಾನೋ, ನಿಮ್ಮನ್ನು ನೆಡಲಾದ ಸ್ಥಳದಲ್ಲಿಯೇ ಅರಳಿರಿ. ನೀವು ಕೆಲಸ ಮಾಡುವಾಗ ಹರ್ಷಧ್ವನಿ ಮೊಳಗಿಸಿ, ಮತ್ತು ನೀವು ಮಾಡುವ ದೈನಂದಿನ ಪ್ರಾಪಂಚಿಕ ಕೆಲಸಗಳೂ ಕೂಡ ಅರ್ಥಪೂರ್ಣವಾಗುತ್ತವೆ!
ನನ್ನೊಂದಿಗೆ ಪ್ರಾರ್ಥಿಸಿ:ತಂದೆಯೇ, ನಾನಿರುವಲ್ಲಿ ಸರಿಯಾಗಿ ನನ್ನನ್ನು ನೆಟ್ಟಿದ್ದಕ್ಕೆ ನಿನಗೆ ಸ್ತೋತ್ರ. ನನಗೆ ನಿಯೋಜಿಸಿರುವ ಕೆಲಸ ಯಾವುದೇ ಇರಲಿ, ಅವುಗಳನ್ನು ಆತ್ಮಿಕ ಕಣ್ಣಿನಿಂದ ದೇವರ-ನಿರ್ದೇಶಿತ ಗುರಿಗಳೆಂದು ನೋಡಲು, ನನ್ನ ಎದಿರು ಇರಿಸಿರುವ ಅವುಗಳಿಗಾಗಿ ನನ್ನ ಕಾರ್ಯಗಳನ್ನು ಮಾಡಲು ನನಗೆ ಸಹಾಯ ಮಾಡು. ನಾನು ಮಾಡುವ ಪ್ರತಿಯೊಂದು ಕೆಲಸವೂ ನಿನ್ನ ಕಡೆಗೆ ತೋರಿಸಲಿ—ನಾನು ಪಾಪ ಮಾಡಿ ಕೆಳಗೆ ಬಿದ್ದರೂ ಸಹ. ಈ ವಿಷಯಗಳಲ್ಲಿ ನಾನು ಸರಿಯಾಗಿರಬೇಕು ಎಂದಲ್ಲ, ಆದರೂ ಇದೆಲ್ಲವೂ ನಿನ್ನ ಕುರಿತಾದದ್ದು—ನನ್ನ ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ, ಎಂದು ಅರ್ಥ ಮಾಡಿಕೊಂಡು ನಾನು ಪ್ರಗತಿ ಹೊಂದುವಾಗ ನಿನ್ನ ಕೃಪೆಯೇ ನನ್ನ ತೋರುಧ್ವಜವಾಗಲಿ. ಯೇಸುವಿನ ನಾಮದಲ್ಲಿ. ಆಮೆನ್!
About this Plan
ಕ್ರೈಸ್ತರಾಗಿ ಗುರಿಗಳನ್ನು ಇಟ್ಟುಕೊಳ್ಳುವುದು ಸರಿಯೇ? ಒಂದು ಗುರಿಯು ದೇವರಿಂದ ಬಂದದ್ದೋ ಅಥವಾ ನಿಮ್ಮ ಸ್ವಂತದಿಂದ ಬಂದದ್ದೋ ಎಂದು ನಿಮಗೆ ಹೇಗೆ ತಿಳಿಯುತ್ತದೆ? ಮತ್ತು ಕ್ರೈಸ್ತರ ಗುರಿಗಳು ಹೇಗಿರುತ್ತದೆ? ಈ 5-ದಿನದ ಓದುವ ಯೋಜನೆಯಲ್ಲಿ, ನೀವು ವಾಕ್ಯದಲ್ಲಿ ಆಳವಾಗಿ ಇಳಿದು ಕೃಪೆ-ಭರಿತ ಗುರಿಗಳನ್ನು ಇಟ್ಟುಕೊಳ್ಳುವುದಕ್ಕೆ ಸ್ಪಷ್ಟತೆ ಮತ್ತು ಮಾರ್ಗದರ್ಶನವನ್ನು ಕಂಡುಕೊಳ್ಳುತ್ತೀರಿ!
More