ದೇವರು + ಗುರಿಗಳು: ಕ್ರೈಸ್ತರಾಗಿ ಗುರಿಗಳನ್ನು ಇಟ್ಟುಕೊಳ್ಳುವುದು ಹೇಗೆಮಾದರಿ
ದಿನ 1: ಕ್ರೈಸ್ತರಾಗಿ ಗುರಿಗಳನ್ನು ಇಟ್ಟುಕೊಳ್ಳುವುದು ಸರಿಯೇ?
ನೀವು ದೇವರನ್ನು ಹಿಂಬಾಲಿಸಬೇಕು ಹಾಗೂ ಉದ್ದೇಶದೊಂದಿಗೆ ಗುರಿಗಳನ್ನು ಸಾಧಿಸಬೇಕು. ಆದರೆ ನಿಮಗಾಗಿ ದೇವರು ಇಟ್ಟಿರುವ ತನ್ನ ಯೋಜನೆಯಿಂದ ನೀವು ನಿಮ್ಮ ಗುರಿಯ ದೆಸೆಯಿಂದ ದೂರ ಹೋಗಬಹುದೆಂದು ನಿಮಗೆ ಚಿಂತೆಯಿರಬಹುದು. ಹಾಗಾಗಿ, ನೀವು ಯೋಚಿಸುತ್ತಿರಬಹುದು, "ಕ್ರೈಸ್ತರಾಗಿ ಗುರಿಗಳನ್ನು ಇಟ್ಟುಕೊಳ್ಳುವುದು ಸರಿಯೇ? ದೇವರ ವಾಕ್ಯವು ಇದನ್ನು ಹೇಗೆ ಮಾಡಬಹುದು ಮತ್ತು ದೇವರ ಚಿತ್ತದ ಮಾರ್ಗದಲ್ಲೇ ನಿಂತುಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಏನು ಹೇಳುತ್ತದೆ?" ಗುರಿಗಳ ಬಗ್ಗೆ, ಉದ್ದೇಶಪೂರ್ವಕ ಯೋಜನೆ, ಮತ್ತು ನಮಗೆ ಕೊಡಲ್ಪಟ್ಟಿರುವುದರ ಬಗ್ಗೆ ಮನೆವಾರ್ತೆಯನ್ನು ಉತ್ತಮವಾಗಿ ಇಟ್ಟುಕೊಳ್ಳುವುದರ ಬಗ್ಗೆ ದೇವರ ಬಳಿ ಹೇಳುವುದಕ್ಕೆ ಬಹಳಷ್ಟಿದೆ.
ಚಿಕ್ಕ ಉತ್ತರ: ಗುರಿಗಳು ಒಳ್ಳೆಯದು! ಯೇಸುವಿಗೂ ಸಹ ಗುರಿಗಳಿದ್ದವು. ನಾವು ನಮ್ಮ ಜೀವನವನ್ನು ಉದ್ದೇಶದೊಂದಿಗೆ ಬದುಕಬೇಕೆಂದು ದೇವರು ಬಯಸುತ್ತಾರೆಯೇ ಹೊರತು ಆಕಸ್ಮಿಕವಾಗಿ ಬದುಕಬೇಕೆಂದಲ್ಲ. ನೀವು ಆತನ ಚಿತ್ತವನ್ನು ಕೇಳುತ್ತಿರುವ ಮತ್ತು ಹುಡುಕುತ್ತಿರುವುದರ ಅರ್ಥವು ನೀವು ಈ ಜೀವನದಲ್ಲಿ ಉತ್ತಮವಾಗಿ ಮಾಡಬೇಕೆಂದು. ಆತನ ವಾಕ್ಯವು ನಿಮಗೆ ಸರಿಯಾದ ಗುರಿಗಳನ್ನು ಇಟ್ಟುಕೊಳ್ಳುವುದರ ಬಗ್ಗೆ ಮತ್ತು ಅದನ್ನು ಸಾಧಿಸುವುದರ ಬಗ್ಗೆ ಯಾವಾಗಲೂ ಪ್ರೇರೇಪಿತರಾಗಿರುವುದು ಹೇಗೆ ಎಂಬುದರ ಬಗ್ಗೆ ಶೀಘ್ರದಲ್ಲೇ ಪ್ರಕಾಶಿಸುತ್ತದೆ.
ಆದರೆ, ಸತ್ಯವೇದದಲ್ಲಿ ಗುರಿಯನ್ನು ಇಟ್ಟುಕೊಳ್ಳುವುದರ ಕುರಿತು ಹೊಂದಿಕೆಪಟ್ಟಿ ಅಥವಾ ತ್ವರಿತ ಪರಿಹಾರ ಸೂತ್ರವನ್ನು ಕಂಡುಕೊಳ್ಳುತ್ತೀರಿ ಎಂಬ ನಿರೀಕ್ಷೆಯನ್ನು ಇಟ್ಟುಕೊಳ್ಳಬೇಡಿ. ಅದು ಅಷ್ಟು ಸುಲಭದ್ದಾಗಿದ್ದರೆ, ನಾವು ಆ ಪಟ್ಟಿಯನ್ನು ಬಹುಶಃ ಓದುತ್ತಿದ್ದೆವು, ಮುಗಿಯಿತು ಎಂದು ಬರೆಯುತ್ತಿದ್ದೆವು, ಮತ್ತು ಆ ಯೋಜನೆಗಳ ಬಗ್ಗೆ ನಾವು ಎಂದಿಗೂ ದೇವರ ಬಳಿಗೆ ಹೋಗುತ್ತಿರಲಿಲ್ಲ. ಅದು ನಿಯಮಗಳನ್ನು ಪಾಲಿಸುವುದರ ಬಗ್ಗೆ ಅಲ್ಲ, ಅದು ನಿಮ್ಮನ್ನು ವಿಶಿಷ್ಟ ಉಡುಗೊರೆಗಳೊಂದಿಗೆ ಮತ್ತು ಉಪಯೋಗಿಸಬೇಕಾದ ಪ್ರತಿಭೆಯೊಂದಿಗೆ ಸೃಷ್ಟಿಸಿದಾತ, ದೇವರಾದ ಆತನ ಜೊತೆ ಸಂಬಂಧವನ್ನು ಇಟ್ಟುಕೊಳ್ಳುವುದು.
ಗುರಿಗಳನ್ನು ಇಟ್ಟುಕೊಳ್ಳುವುದಕ್ಕೆ ಪರ್ಯಾಯ? ಗುರಿಯಿಲ್ಲದೆ ಅಲೆದಾಡುತ್ತಿರುವುದು, ಜೀವನ ಹೇಗೋ ಸಾಗಲಿ ಎಂದು ಬಿಡುವುದು. ಇದರ ಬಗ್ಗೆ ಯೋಚಿಸಿ. ಸತ್ಯವೇದದಲ್ಲಿದ್ದ ಪ್ರಮುಖ ವ್ಯಕ್ತಿಗಳು ಏನೂ ಮಾಡದೆ ಸುಮ್ಮನೆ ಕುಳಿತಿದ್ದರೆ? ಖಂಡಿತವಾಗಿಯೂ, ಅವರೆಲ್ಲರೂ ಎಡವಿದ್ದರು, ಆದರೂ ಮೋಶೆ, ದಾವೀದನು, ಸೊಲೊಮೋನನು, ಎಸ್ತೇರಳು, ರೂತಳು, ಯೋಹಾನನು, ಪೇತ್ರನು, ಮತ್ತು ಯೇಸುವಿಗೂ ಗುರಿಗಳಿದ್ದವು, ಮತ್ತು ಅವರೆಲ್ಲರೂ ದೇವರ ಬಲದೊಂದಿಗೆ ಹಾಗೂ ಜ್ಞಾನದೊಂದಿಗೆ ಆ ಗುರಿಗಳನ್ನು ಮುಟ್ಟಿದರು. ನೀವು ಸಹ ಈಗ ಅದನ್ನೇ ಮಾಡಲಿದ್ದೀರಿ, ಒಂದೊಂದೇ ಚಿಕ್ಕ ಹೆಜ್ಜೆ ಮತ್ತು ನಂಬಿಕೆಯ ಜಿಗಿತದೊಂದಿಗೆ.
ನನ್ನೊಂದಿಗೆ ಪ್ರಾರ್ಥಿಸಿ: ಕರ್ತನೆ, ನಾನು ನಿನ್ನನ್ನು ಹಿಂಬಾಲಿಸಬೇಕು, ನಿನ್ನ ಚಿತ್ತದೊಂದಿಗೆ ಸರಿಹೊಂದುವ ಗುರಿಗಳನ್ನು ನನ್ನ ಜೀವನದಲ್ಲಿ ನಾನು ಇಟ್ಟುಕೊಳ್ಳಬೇಕು. ನಿನ್ನ ಮಹೋನ್ನತ ಉದ್ದೇಶಕ್ಕಾಗಿ ನನ್ನನ್ನು ಬಳಸಿಕೊಳ್ಳಲು ವಿಶಿಷ್ಟ ಉಡುಗೊರೆಗಳೊಂದಿಗೆ ಮತ್ತು ಪ್ರತಿಭೆಗಳೊಂದಿಗೆ ನನ್ನನ್ನು ಸೃಷ್ಟಿಸಿದ್ದಕ್ಕೆ ನಿನಗೆ ಸ್ತೋತ್ರ. ನೀನು ಹೋಗುವ ಕಡೆ ನಾನು ಬರಬೇಕು. ನಿನಗೆ ಬೇಕಾದ ರೀತಿಯಲ್ಲಿ ನನ್ನ ಗುರಿಗಳನ್ನು ಹೇಗೆ ಇಟ್ಟುಕೊಳ್ಳಬೇಕು ಎಂದು ನನಗೆ ದಯಮಾಡಿ ತೋರಿಸು. ನನಗೆ ಯೋಜನೆಯನ್ನು ರೂಪಿಸಲು ಮತ್ತು ಉದ್ದೇಶವನ್ನು ಇಟ್ಟುಕೊಳ್ಳಲು ನಿನ್ನ ಜ್ಞಾನವೂ ಬೇಕಾಗಿದೆ ಮತ್ತಿದರಿಂದ ನೀನು ನನಗೆ ನೀಡಿರುವ—ನನ್ನ ಸಮಯ, ನನ್ನ ಹಣ, ನನ್ನ ಕೆಲಸ, ನನ್ನ ಸಂಬಂಧಗಳು, ನನ್ನ ಆರೋಗ್ಯ—ನಾನಿರುವಲ್ಲಿಯೇ ಅವುಗಳನ್ನು ಮನೆವಾರ್ತೆಮಾಡಲು ಸಾಧ್ಯವಾಗುತ್ತದೆ. ನನ್ನ ಕಣ್ಣುಗಳನ್ನು ನಿನ್ನ ಸತ್ಯವನ್ನು ನೋಡುವುದಕ್ಕೆ ತೆರೆ ಮತ್ತು ಅದು ನನ್ನ ತಲೆಯಿಂದ ಮನಸ್ಸಿಗೆ ಮನಸ್ಸಿನಿಂದ ಕೈಗಳಿಗೆ ಬರುವಂತೆ ಸಹಾಯ ಮಾಡು. ಯೇಸುವಿನ ನಾಮದಲ್ಲಿ. ಆಮೆನ್!
About this Plan
ಕ್ರೈಸ್ತರಾಗಿ ಗುರಿಗಳನ್ನು ಇಟ್ಟುಕೊಳ್ಳುವುದು ಸರಿಯೇ? ಒಂದು ಗುರಿಯು ದೇವರಿಂದ ಬಂದದ್ದೋ ಅಥವಾ ನಿಮ್ಮ ಸ್ವಂತದಿಂದ ಬಂದದ್ದೋ ಎಂದು ನಿಮಗೆ ಹೇಗೆ ತಿಳಿಯುತ್ತದೆ? ಮತ್ತು ಕ್ರೈಸ್ತರ ಗುರಿಗಳು ಹೇಗಿರುತ್ತದೆ? ಈ 5-ದಿನದ ಓದುವ ಯೋಜನೆಯಲ್ಲಿ, ನೀವು ವಾಕ್ಯದಲ್ಲಿ ಆಳವಾಗಿ ಇಳಿದು ಕೃಪೆ-ಭರಿತ ಗುರಿಗಳನ್ನು ಇಟ್ಟುಕೊಳ್ಳುವುದಕ್ಕೆ ಸ್ಪಷ್ಟತೆ ಮತ್ತು ಮಾರ್ಗದರ್ಶನವನ್ನು ಕಂಡುಕೊಳ್ಳುತ್ತೀರಿ!
More