ದೇವರು + ಗುರಿಗಳು: ಕ್ರೈಸ್ತರಾಗಿ ಗುರಿಗಳನ್ನು ಇಟ್ಟುಕೊಳ್ಳುವುದು ಹೇಗೆಮಾದರಿ

GOD + GOALS: How To Set Goals As A Christian

DAY 2 OF 5

ದಿನ 2: ಒಂದು ಗುರಿಯು ದೇವರಿಂದ ಬಂದದ್ದೋ ಅಥವಾ ನಿಮ್ಮ ಸ್ವಂತದಿಂದ ಬಂದದ್ದೋ ಎಂದು ತಿಳಿಯುವುದು ಹೇಗೆ?

ನೀವು ಇದನ್ನು ನೋಡಲು ಪ್ರಾರಂಭಿಸಿದ್ದೀರಿ: ಗುರಿಗಳಿಲ್ಲದೆ, ಜೀವನದಲ್ಲಿ ಗುರಿಯಿಲ್ಲದೆ ನೀವು ಅಲೆದಾಡುವಂತಾಗಬಹುದು. ದೇವರ-ಮಾರ್ಗದರ್ಶಿತ ಗುರಿಗಳು ಒಳ್ಳೆಯದು. ಆದರೆ! ಅದು ದೇವರ-ಮಾರ್ಗದರ್ಶಿತವೋ ಅಥವಾ ನಿಮ್ಮ ಸ್ವಂತದಿಂದ ಬಂದದ್ದೋ ಎಂದು ನಿಮಗೆ ಹೇಗೆ ತಿಳಿಯುತ್ತದೆ? ನಿಮಗೆ ಆ ವ್ಯತ್ಯಾಸವನ್ನು ಹೇಳಲು ಹೇಗೆ ಸಾಧ್ಯ? ನೀವು ತಪ್ಪಾದ ಗುರಿಗಳನ್ನು ಆರಿಸಿಕೊಳ್ಳುವಿರಿ ಎಂಬ ಭಯವು ನಿಮ್ಮಲ್ಲಿದೆ!

ದೇವರ ಬಗೆಗಿನ ಒಂದು ಆಶ್ಚರ್ಯಕರವಾದ ವಿಷಯದ ಬಗ್ಗೆ ನಿಮಗೆ ತಿಳಿದಿದೆಯೋ? ಬಹಳಷ್ಟಿದೆ, ಆದರೆ ಹೆಸರಿಗೆ, ಆತನು ನಿಮ್ಮೊಂದಿಗೆ ಈ ಜೀವನವನ್ನು ನೆಡೆಸಲು ಇಷ್ಟಪಡುತ್ತಾನೆ. ನಿಮ್ಮ ಗುರಿಗಳಲ್ಲಿ ಮತ್ತು ಉದ್ದೇಶಗಳಲ್ಲಿ ಕಳೆದುಹೋಗಿದ್ದೀರಿ ಅಥವಾ ಯಾವ ಮಾರ್ಗವನ್ನು ಆರಿಸಿಕೊಳ್ಳಬೇಕು ಎಂದು ತಿಳಿಯದೆ ಕಳೆದುಹೋಗಿದ್ದೀರಿ ಎಂಬ ಭಾವನೆ ನಿಮಗೆ ಬಂದರೆ, ನೀವು ಆತನ ಸಹಾಯ ಕೇಳಬೇಕೆಂದು ಆತನು ಬಯಸುತ್ತಾನೆ—ಮತ್ತು ಆತನು ಕೊಡಲು ಇಷ್ಟಪಡುತ್ತಾನೆ! ಯಾಕೋಬನು ನಮಗೆ ತಿಳಿಸುತ್ತಾನೆ, "ನಿಮ್ಮಲ್ಲಿ ಯಾವನಿಗಾದರೂ ಜ್ಞಾನ ಕಡಿಮೆಯಾಗಿದ್ದರೆ ಅವನು ದೇವರನ್ನು ಕೇಳಿಕೊಳ್ಳಲಿ, ಅದು ಅವನಿಗೆ ದೊರಕುವದು; ದೇವರು ಹಂಗಿಸದೆ ಎಲ್ಲರಿಗೂ ಉದಾರ ಮನಸ್ಸಿನಿಂದ ಕೊಡುವವನಾಗಿದ್ದಾನೆ" (ಯಾಕೋಬನು 1:5). 

ನಿಮ್ಮ ಯೋಜನೆಗಳು ಗುರಿಯಾಗುವುದಕ್ಕೆ ಒಳಿತೋ ಇಲ್ಲವೋ ಎಂದು ನಿಮಗೆ ಗೊತ್ತಿಲ್ಲವೇ?

ಒಂದು ಸಣ್ಣ ಪರಿಶೀಲನೆ ಮಾಡಿರಿ:

  • ದೇವರ ವಾಕ್ಯವನ್ನು ತೆರೆಯಿರಿ ಮತ್ತು ನಿಮ್ಮ ಮನಸ್ಸಿನಲ್ಲಿರುವ ಗುರಿಯನ್ನು ದೃಢೀಕರಿಸುವ ನಿರ್ದಿಷ್ಟ ವಾಕ್ಯಗಳು ಅಥವಾ ಕಥೆಗಳನ್ನು ಸತ್ಯವೇದದಲ್ಲಿ ಹುಡುಕಿರಿ. ನಿಮ್ಮ ಗುರಿಯು ಸತ್ಯವೇದಕ್ಕೆ-ಅನುಗುಣವಾಗಿದೆಯೇ? ಯಾವುದಾದರು ಕೆಲವು ನಿರ್ದಿಷ್ಟ ವಾಕ್ಯಗಳು ಅದನ್ನು ದೃಢೀಕರಿಸುತ್ತವೆಯೇ? 'ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ' (2 ತಿಮೊಥೆಯನಿಗೆ 3:16).
  • ಆತನನ್ನು ಕೇಳಿರಿ! ಪ್ರಾರ್ಥಿಸಿರಿ ಮತ್ತು ದೇವರು ಬಯಸುತ್ತಿರುವ ನೀವು ಹೋಗಬೇಕಾದ ದಾರಿಯನ್ನು ತೋರಿಸಲು ಕೇಳಿರಿ. 'ನಿನ್ನನ್ನು ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವೆನು; ನಿನ್ನನ್ನು ಕಟಾಕ್ಷಿಸಿ ಆಲೋಚನೆ ಹೇಳುವೆನು' (ಕೀರ್ತನೆಗಳು 32:8).
  • ನಂಬಿಗಸ್ತ ಸ್ನೇಹಿತರನ್ನು ಕೇಳಿರಿ ಅಥವಾ ದೇವರನ್ನು-ಪ್ರೀತಿಸುವ ಮಾರ್ಗದರ್ಶಿಗಳನ್ನು ಮಾರ್ಗದರ್ಶನಕ್ಕಾಗಿ ಕೇಳಿರಿ. 'ಯೋಚನೆ ಹೇಳುವವರಿಲ್ಲದೆ ಉದ್ದೇಶಗಳು ನೆರವೇರವು, ಬಹುಮಂದಿ ಆಲೋಚನಾಪರರಿರುವಲ್ಲಿ ಈಡೇರುವವು' (ಜ್ಞಾನೋಕ್ತಿಗಳು 15:22).

ನೆನಪಿಡಿ, ದೇವರನ್ನು ಹೊರತುಪಡಿಸಿ ಒಂದು-ಗಾತ್ರವು-ಎಲ್ಲಾದಕ್ಕೂ-ಹೊಂದಿಕೊಳ್ಳುತ್ತದೆ ಎನ್ನುವ ಯಾವು ಜಾದೂ ಸೂತ್ರವೂ ಇಲ್ಲ. ಉತ್ತರಗಳ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲದಿದ್ದರೆ, ಕೈಬಿಡಬೇಡಿ! ಆತನು ನಿಮ್ಮನ್ನು ಕರೆದೊಯ್ಯುವ ಪ್ರಕ್ರಿಯೆಯ ಒಂದು ಭಾಗವೂ ಇದಾಗಿರಬಹುದು. ನಿರೀಕ್ಷಿಸುತ್ತಿರುವಾಗ, ಮುಂದೆ ಬರುವದರ ಸಲುವಾಗಿ ನಾವು ಪರಿಷ್ಕರಿಸಲ್ಪಡುತ್ತೇವೆ ಮತ್ತು ಸಿದ್ದವಾಗುತ್ತೇವೆ. ಆತನ ಜ್ಞಾನದ ಮೇಲೆ ನಿರೀಕ್ಷಿಸಿರಿ, ಮತ್ತು ಆತನು ಉತ್ತರವನ್ನು ಆತನ ಸರಿಯಾದ ಸಮಯದಲ್ಲಿ ನಿಮಗೆ ನೀಡುತ್ತಾನೆ!

ನನ್ನೊಂದಿಗೆ ಪ್ರಾರ್ಥಿಸಿ: ಕರ್ತನೆ, ನಿನ್ನ ವಾಕ್ಯಕ್ಕಾಗಿ ನಿನಗೆ ಸ್ತೋತ್ರ! ನಿನ್ನ ಸ್ಪಷ್ಟ ಮಾರ್ಗದರ್ಶನಕ್ಕಾಗಿ ಮತ್ತು ಜ್ಞಾನಕ್ಕಾಗಿ ನಾನು ಕೃತಜ್ಞನಾಗಿದ್ದೇನೆ/ಕೃತಜ್ಞಳಾಗಿದ್ದೇನೆ. ನಿನಗಾಗಿ ನನ್ನ ಪ್ರೀತಿಯಿಂದ ಬಂದ ಮತ್ತು ಬೇರೆಯವುಗಳ ಮೇಲೆ ಇರುವ ಪ್ರೀತಿಯಿಂದ ಬಂದ ಗುರಿಗಳ ಮತ್ತು ಯೋಜನೆಗಳ ವ್ಯತ್ಯಾಸವನ್ನು ವಿಂಗಡಣೆ ಮಾಡಲು ನನಗೆ ದಯವಿಟ್ಟು ಸಹಾಯ ಮಾಡು. ನಿನ್ನ ಧ್ವನಿಯನ್ನು ತಿಳಿದುಕೊಳ್ಳುವುದಕ್ಕೆ, ನಿನ್ನ ನಿರ್ದೇಶನಗಳಲ್ಲಿ ನಂಬಿಕೆ ಇಡಲು, ಮತ್ತು ಉಳಿದೆಲ್ಲವುಗಳ ಮೇಲೆ ನಿನ್ನನ್ನು ಹುಡುಕಲು ನನಗೆ ಸಹಾಯ ಮಾಡು. ಯೇಸುವಿನ ನಾಮದಲ್ಲಿ. ಆಮೆನ್!

ದಿನ 1ದಿನ 3

About this Plan

GOD + GOALS: How To Set Goals As A Christian

ಕ್ರೈಸ್ತರಾಗಿ ಗುರಿಗಳನ್ನು ಇಟ್ಟುಕೊಳ್ಳುವುದು ಸರಿಯೇ? ಒಂದು ಗುರಿಯು ದೇವರಿಂದ ಬಂದದ್ದೋ ಅಥವಾ ನಿಮ್ಮ ಸ್ವಂತದಿಂದ ಬಂದದ್ದೋ ಎಂದು ನಿಮಗೆ ಹೇಗೆ ತಿಳಿಯುತ್ತದೆ? ಮತ್ತು ಕ್ರೈಸ್ತರ ಗುರಿಗಳು ಹೇಗಿರುತ್ತದೆ? ಈ 5-ದಿನದ ಓದುವ ಯೋಜನೆಯಲ್ಲಿ, ನೀವು ವಾಕ್ಯದಲ್ಲಿ ಆಳವಾಗಿ ಇಳಿದು ಕೃಪೆ-ಭರಿತ ಗುರಿಗಳನ್ನು ಇಟ್ಟುಕೊಳ್ಳುವುದಕ್ಕೆ ಸ್ಪಷ್ಟತೆ ಮತ್ತು ಮಾರ್ಗದರ್ಶನವನ್ನು ಕಂಡುಕೊಳ್ಳುತ್ತೀರಿ!

More

ಈ ಯೋಜನೆಯನ್ನು ಒದಗಿಸಿದಕ್ಕಾಗಿ Cultivate What Matters ಅವರಿಗೆ ಧನ್ಯವಾದ ಅರ್ಪಿಸಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಭೇಟಿ ನೀಡಿ: http://www.cultivatewhatmatters.com/youversion