ದೇವರು + ಗುರಿಗಳು: ಕ್ರೈಸ್ತರಾಗಿ ಗುರಿಗಳನ್ನು ಇಟ್ಟುಕೊಳ್ಳುವುದು ಹೇಗೆಮಾದರಿ

GOD + GOALS: How To Set Goals As A Christian

DAY 4 OF 5

ದಿನ 4: ನಾನು ನನ್ನ ಗುರಿಗಳನ್ನು ದೇವರ ಚಿತ್ತವನ್ನು ಮೀರದೇ ಪೂರೈಸಿಕೊಳ್ಳುವುದು ಹೇಗೆ? 

ನೀವು ಆರಂಭಿಕ ಸಾಲಿನಲ್ಲಿ ನಿಂತಿದ್ದೀರಿ, ದೇವರ-ಮಾರ್ಗದರ್ಶಿತ ಗುರಿಗಳನ್ನು ಬೆನ್ನತ್ತಿ ಹೋಗಬೇಕು, ಮತ್ತು... ನೀವು ಹೆದರಿದ್ದೀರಿ. ಆ ಗುರಿಗಳ ಕುರಿತಾಗಿ ಕ್ರಿಯೆಗಳನ್ನು ಮಾಡಲು ನೀವು ಭಯ ಪಟ್ಟಿದ್ದೀರಿ, ಅವುಗಳನ್ನು ಸಾಧಿಸಲು ಸಂಪೂರ್ಣ ಗಮನವಿಟ್ಟು ದೇವರನ್ನೇ ಆ ಪ್ರಕ್ರಿಯೆಯಿಂದ ಹೊರದಬ್ಬಿರುತ್ತೀರಿ. ನಿಮ್ಮ ಗಮನವನ್ನು ದೇವರ ಮೇಲೆ ಮತ್ತು ನಿಮ್ಮ ಗುರಿಗಳನ್ನು ಸಾಧಿಸುವುದರ ಮೇಲೆ ಒಂದೇ ಸಮಯದಲ್ಲಿ ಹೇಗೆ ಇಡುವುದು?

ಮೊದಲನೆಯದಾಗಿ, ಸರಿಯಾದ ಗುರಿಗಳು ನಿಮ್ಮನ್ನು ಆತನ ಮಾರ್ಗಗಳಿಗೆ ನಡೆಸುತ್ತವೆ, ಆತನ ದಾರಿಗಳಲ್ಲಿ ನಡೆಸುತ್ತದೆ, ಆತನಿಂದ ದೂರವಲ್ಲ. 

ಎರಡನೆಯದಾಗಿ, ನೀವು ಗುರಿಗಳನ್ನು ಇಟ್ಟುಕೊಂಡು ಅಲ್ಲಿಂದಲೇ ದಡ ಸೇರಲು ತೆರಳಬೇಡಿರಿ. ದೇವರು ನಿಮ್ಮ ಮಾರ್ಗದ ಪ್ರತಿಯೊಂದು ಹೆಜ್ಜೆಯಲ್ಲೂ ನೀವು ಆತನೊಂದಿಗೆ ಸಂಪರ್ಕದಲ್ಲಿರಬೇಕು ಎಂದು ಬಯಸುತ್ತಾನೆ, ಮತ್ತು ಆತನು ನಿಮ್ಮನ್ನು ಮಾರ್ಗದರ್ಶಿಸುತ್ತಾನೆ. ಅಂತಿಮವಾಗಿ, ಆತನೇ ನಿಮ್ಮ ಗುರಿ. ಆತನು ನಮಗಾಗಿ ಇಟ್ಟಿರುವ ಉದ್ದೇಶಗಳನ್ನು ಹಿಂಬಾಲಿಸುವುದು ಎಂದರೆ ಆತನು ಸೃಷ್ಟಿಸಿರುವ ನಕ್ಷೆಯನ್ನು ಹಿಂಬಾಲಿಸುವ ಹಾಗೆ. ಆತನಿಗೆ ಮಾರ್ಗವು ತಿಳಿದಿದೆ. 

ನೀವು ಬಹುದೂರದ ಪ್ರವಾಸದಲ್ಲಿ ಮಾಡುವ ರೀತಿಯಲ್ಲಿಯೇ, ನೀವು ಸರಿಯಾದ ದಾರಿಯಲ್ಲಿಯೇ ಇದ್ದೀರಿ ಎಂದು ಖಚಿತ ಪಡಿಸಿಕೊಳ್ಳಲು ನಕ್ಷೆಯನ್ನು ಆಗಾಗ್ಗೆ ಪರಿಶೀಲಿಸುತ್ತಿರಿ. ಆ ಯೋಜನೆಯಿಂದ ನೀವು ನಿಮ್ಮ ದೃಷ್ಟಿಯನ್ನು ಕಳೆದುಕೊಂಡರೆ, ಒಂದು ಅಪರಿಚಿತ ಬೀದಿಯಲ್ಲಿ ನಿಮ್ಮನ್ನು ನೀವು ಕಾಣುತ್ತೀರಿ. ಆದರೆ, ಅದೇ ಸಮಯದಲ್ಲಿ ಅದನ್ನು ಹಿಂತಿರುಗಿ ಎತ್ತುಕೊಳ್ಳಿ, ಮತ್ತು ನೀವು ದಾರಿಯಲ್ಲಿ ಹಿಂದಿರುಗುತ್ತೀರಿ! ದೇವರು ನೀವು ಒಂದು ಗುರಿಯನ್ನು ಸರಿಯಾಗಿ ಪೂರ್ಣಮಾಡುಬಹುದೇ ಎಂಬ ಚಿಂತೆ ಮಾಡುವುದಿಲ್ಲ; ಆತನಿಗೆ ನಿಮ್ಮ ಹೃದಯವು ಬೇಕಿದೆ. ಮತ್ತು ಒಂದೊಂದೇ ಹೆಜ್ಜೆಯಿಟ್ಟು, ಒಂದೊಂದೇ ಪ್ರಾರ್ಥನೆಯಿಂದ, ಒಂದೊಂದೇ ಕ್ಷಣದಲ್ಲಿ ಆತನನ್ನು ನೀವು ಹುಡುಕುವಾಗ, ನೀವು ಸರಿಯಾದ ಮಾರ್ಗದಲ್ಲಿಯೇ ಇರುತ್ತೀರಿ. ಆತನೊಂದಿಗಿನ ನಿಮ್ಮ ಸಂಪರ್ಕ ನಿಮ್ಮನ್ನು ಆತನೊಂದಿಗೆ ಸರಿಯಾಗಿಡುತ್ತದೆ.

ನನ್ನೊಟ್ಟಿಗೆ ಪ್ರಾರ್ಥಿಸಿ: ಕರ್ತನೆ, ನಿನ್ನದಲ್ಲದ ಮಾರ್ಗದಲ್ಲಿ ತೆರಳಲು ನಾನು ಹೆದರುತ್ತೇನೆ. ದಯವಿಟ್ಟು ನನಗೆ ಹೇಡಿತನದ ಆತ್ಮವನ್ನು ನೀಡದೇ, ಬಲ, ಪ್ರೀತಿ, ಮತ್ತು ಶಿಕ್ಷಣದ ಆತ್ಮವನ್ನು ನೀಡು (2 ತಿಮೊಥೆಯನಿಗೆ 1:7). ನಿನ್ನ ನಕ್ಷೆ—ನಿನ್ನ ವಾಕ್ಯ—ಮತ್ತು ನಿನಗೆ ನೇರವಾಗಿ ಪ್ರಾರ್ಥಿಸುವ ಸಾಮರ್ಥ್ಯ ನೀಡಿದ್ದಕ್ಕೆ ನಿನಗೆ ಸ್ತೋತ್ರ! ದಯವಿಟ್ಟು ನನ್ನ ಗುರಿಯಾಗಿರುವ ನಿನ್ನ ಮೇಲೆ ನನ್ನ ಗಮನವನ್ನು ಇಟ್ಟುಕೊಳ್ಳಬೇಕೆ ಹೊರತು ಇತರರ ಮೆಚ್ಚುಗೆ ಮೇಲಾಗಲಿ, ಪುರಸ್ಕಾರಗಳ ಮೇಲಾಗಲಿ, ಅಥವಾ ಕೆಲಸಗಳ ಪಟ್ಟಿಯನ್ನು ಮುಗಿಸಿದ ಖುಷಿಯ ಮೇಲಾಗಲಿ ನನ್ನ ಗಮನ ಹೋಗದಂತೆ ಸಹಾಯ ಮಾಡು. ನಿನಗಾಗಿ ಸರಿಯಾದ ಕಾರಣಗಳಿಗೋಸ್ಕರ ನಾನು ಕಷ್ಟ ಪಡಬೇಕು. ನಿನ್ನ ಮಾರ್ಗದಲ್ಲಿ ನನ್ನನ್ನು ಮಾರ್ಗದರ್ಶಿಸಿದ್ದಕ್ಕಾಗಿ ಮತ್ತು ಇರಿಸಿದ್ದಕ್ಕಾಗಿ ನಿನಗೆ ಸ್ತೋತ್ರ! ಯೇಸುವಿನ ನಾಮದಲ್ಲಿ. ಆಮೆನ್.

ದಿನ 3ದಿನ 5

About this Plan

GOD + GOALS: How To Set Goals As A Christian

ಕ್ರೈಸ್ತರಾಗಿ ಗುರಿಗಳನ್ನು ಇಟ್ಟುಕೊಳ್ಳುವುದು ಸರಿಯೇ? ಒಂದು ಗುರಿಯು ದೇವರಿಂದ ಬಂದದ್ದೋ ಅಥವಾ ನಿಮ್ಮ ಸ್ವಂತದಿಂದ ಬಂದದ್ದೋ ಎಂದು ನಿಮಗೆ ಹೇಗೆ ತಿಳಿಯುತ್ತದೆ? ಮತ್ತು ಕ್ರೈಸ್ತರ ಗುರಿಗಳು ಹೇಗಿರುತ್ತದೆ? ಈ 5-ದಿನದ ಓದುವ ಯೋಜನೆಯಲ್ಲಿ, ನೀವು ವಾಕ್ಯದಲ್ಲಿ ಆಳವಾಗಿ ಇಳಿದು ಕೃಪೆ-ಭರಿತ ಗುರಿಗಳನ್ನು ಇಟ್ಟುಕೊಳ್ಳುವುದಕ್ಕೆ ಸ್ಪಷ್ಟತೆ ಮತ್ತು ಮಾರ್ಗದರ್ಶನವನ್ನು ಕಂಡುಕೊಳ್ಳುತ್ತೀರಿ!

More

ಈ ಯೋಜನೆಯನ್ನು ಒದಗಿಸಿದಕ್ಕಾಗಿ Cultivate What Matters ಅವರಿಗೆ ಧನ್ಯವಾದ ಅರ್ಪಿಸಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಭೇಟಿ ನೀಡಿ: http://www.cultivatewhatmatters.com/youversion