ದೇವರಿಗಾಗಿ ನಿಮ್ಮ ಸಮಯವನ್ನು ಬಳಕೆ ಮಾಡುವುದುಮಾದರಿ

ಗಡಿಯಾರವನ್ನು ಸೋಲಿಸುವುದು
ಗಡಿಯಾರವನ್ನು ಸೋಲಿಸುವುದಕ್ಕೆ ನನಗೆ ನಾನೇ ಸಹಾಯ ಮಾಡಿಕೊಳ್ಳಲು ಕೆಲವು ತಂತ್ರಗಳನ್ನು ಕಲಿತಿದ್ದೇನೆ. ಅವುಗಳು ನಿಮಗೂ ಸಹಾಯಕವಾಗಬಹುದು.
ನನ್ನ ಎಲ್ಲಾ ಸಮಯವು ದೇವರ ಸಮಯ ಮತ್ತು ನನ್ನ ಎಲ್ಲಾ ಸಮಯವು ಆತನ ನಿಯೋಜನೆಯಿಂದ ಆಗುವ ನನ್ನ ಸಮಯ. ದೇವರು ನನ್ನನ್ನು ಮತ್ತು ನನ್ನ ಸಮಯವನ್ನು ಹೊಂದಿದ್ದಾರೆ. ಆದರೂ, ನಾನು ಉಸ್ತುವಾರಿ ವಹಿಸಿಬೇಕಾಗಿರುವ ಸಮಯದ ಅಳತೆಯನ್ನು ಆತನು ನನಗೆ ನೀಡಿದ್ದಾನೆ. ನಾನು ಆ ಸಮಯವನ್ನು ಇತರೆ ಜನರಿಗಾಗಿ ಕೆಲಸ ಮಾಡಲು, ಇತರೆ ಜನರನ್ನು ಭೇಟಿ ಮಾಡಲು ಒಪ್ಪಿಸಬಹುದು ಆದರೆ ಆ ಸಮಯದ ಲೆಕ್ಕವನ್ನು ನಾನು ಕೊಡಬೇಕು.
ಸಮಯವನ್ನು ಏಕಾಗ್ರತೆ ಮತ್ತು ಕೇಂದ್ರೀಕರಣದಿಂದ ಬಿಡಿಸಿಕೊಳ್ಳಬಹುದು. ಸಮಯದ ಅತ್ಯಂತ ವ್ಯರ್ಥಗಳಲ್ಲಿ ಒಂದು ಮಾನವನ ಮನಸ್ಸಿನಲ್ಲಿ ಉಂಟಾಗುತ್ತದೆ. ನಮ್ಮ ಕೈಗಳು ಕಾರ್ಯನಿರತವಾಗಿರಬಹುದು ಆದರೆ ನಮ್ಮ ಮನಸ್ಸು ಸ್ತಬ್ಧವಾಗಿರುತ್ತದೆ. ಅದೇ ರೀತಿ, ನಮ್ಮ ಮನಸ್ಸು ಕಾರ್ಯನಿರತವಾಗಿರುವಾಗ ನಮ್ಮ ಕೈಗಳು ಸ್ತಬ್ಧವಾಗಿರಬಹುದು. ಉಣ್ಣೆ ಸಂಗ್ರಹಣೆ, ಹಗಲು ಕನಸು ಕಾಣುವುದು, ಮತ್ತು ನಿಷ್ಪ್ರಯೋಜಕವಾಗಿರುವ ಅತಿರೇಕದ ಕಲ್ಪನೆಗಳು ಸೇರಿದಂತೆ ಇವೆಲ್ಲವೂ ನೈಜ ಸಮಯದಲ್ಲಿ ಯೋಚನೆಗಳು ವ್ಯರ್ಥವಾಗುವ ದಾರಿಗಳು. ಕೈಯಲ್ಲಿ ಇರುವ ಕೆಲಸದ ಮೇಲೆ ನಮ್ಮ ಮನಸ್ಸನ್ನು ಕೇಂದ್ರೀಕರಿಸುವುದು—ಭಯಂಕರ ಏಕಾಗ್ರತೆಯೊಂದಿಗೆ—ಸಮಯದ ಫಲದಾಯಕ ಉಪಯೋಗವನ್ನು ಮಾಡಿಸುತ್ತದೆ.
ಸಾಧಾರಣ ಅಥವಾ ಚೂಟಿಯಾಗಿರುವ ಕಾರ್ಯಗಳಿಂದ ಕಳೆದುಹೋದ ಬೆಲೆವುಳ್ಳ ಸಮಯವನ್ನು ನಮ್ಮ ಮನಸ್ಸು ಬಿಡಿಸಬಹುದು. ಉದಾಹರಣೆಗೆ, ಸ್ನಾನ ಮಾಡುವ ಯಂತ್ರವಿಜ್ಞಾನವು ಕಷ್ಟವಲ್ಲ. ಈ ವ್ಯವಸ್ಥೆಯಲ್ಲಿ, ಮನಸ್ಸು ಲೆಕ್ಕ ಬಿಡಿಸುವುದಕ್ಕೆ, ಸೃಜನಶೀಲ ಯೋಚನೆಗಳಿಗೆ, ಅಥವಾ ನಿರೂಪಣ ವಿಷಯಗಳ ಸಂಯೋಜನೆ ಮಾಡಲು ಬಿಡುವಾಗಿರುತ್ತದೆ. ನನ್ನ ಬಹುತೇಕ ಸಂದೇಶಗಳು ಮತ್ತು ಬೋಧನೆಗಳು ಸ್ನಾನದ ಸಮಯದಲ್ಲೇ ಚಿಗುರೊಡೆಯುತ್ತವೆ. ನಾನು ಅತಿ ಹೆಚ್ಚು ಗಾಲ್ಫ್ ಆಟವನ್ನು ಆಡುವಾಗ, ಶಾಟ್ ಗಳ ನಡುವೆ ಇದ್ದ ಸಮಯವು ನನ್ನ ಮನಸ್ಸಿನಲ್ಲಿಯೇ ಸಂದೇಶಗಳನ್ನು ಸಂಯೋಜಿಸಲು ಇರುವ ಉತ್ತಮ ಸಮಯವೆಂದು ನಾನು ಕಂಡುಕೊಂಡೆ.
Coram Deo: ದೇವರ ಸಮ್ಮುಖದಲ್ಲಿ ಬದುಕುವುದು
ಈ ದಿನ ನೀವು ನಿಮ್ಮ ಮನಸ್ಸನ್ನು ಎಲ್ಲಿ ಕೇಂದ್ರೀಕರಿಸುವಿರಿ ಎಂಬುದರ ಬಗ್ಗೆ ಎಚ್ಚರವಿರಲಿ. ಸಾಧಾರಣ ಮತ್ತು ಚೂಟಿಯಾಗಿರುವ ಕಾರ್ಯಗಳಲ್ಲಿ ವ್ಯಯವಾದ ನಿಮ್ಮ ಬೆಲೆಯುಳ್ಳ ಸಮಯವನ್ನು ಶಾಶ್ವತವಾಗಿ ಬೆಲೆ ಹೊಂದಿರುವ ವಿಷಯಗಳ ಕುರಿತು ಯೋಚಿಸುತ್ತ ಬಿಡಿಸಿಕೊಳ್ಳಲು ಪ್ರಯತ್ನಿಸಿ.
Copyright © Ligonier Ministries. R.C. Sproul ಅವರಿದ ಉಚಿತ ಪುಸ್ತಕವನ್ನು ಇಲ್ಲಿ ಪಡೆಯಿರಿ Ligonier.org/freeresource.
ದೇವರ ವಾಕ್ಯ
About this Plan

ದೇವರಿಗಾಗಿ ನಿಮ್ಮ ಸಮಯವನ್ನು ಬಳಕೆ ಮಾಡುವುದರ ಕುರಿತಾಗಿ R.C. Sproul ಅವರಿಂದ 4-ದಿನದ ಸತ್ಯವೇದ ಧ್ಯಾನ. ಪ್ರತಿಯೊಂದು ಧ್ಯಾನವು ನಿಮ್ಮನ್ನು ದೇವರ ಸಮ್ಮುಖದಲ್ಲಿ, ದೇವರ ಅಧಿಕಾರದ ಅಡಿಯಲ್ಲಿ, ದೇವರ ಮಹಿಮೆಗಾಗಿ ಬದುಕಲು ಕರೆ ನೀಡುತ್ತವೆ.
More
ವೈಶಿಷ್ಟ್ಯದ ಯೋಜನೆಗಳು

Believing God Is Good No Matter What

Listening To God

Time Management Principles From God’s Word

Seeking Daily The Heart Of God - Wisdom

Finding Your Way Back To God

A Life Of Integrity

Live By The Spirit: Devotions With John Piper

Pursuing Peace

Meaningful Work in Seasons of Transition
