ದೇವರಿಗಾಗಿ ನಿಮ್ಮ ಸಮಯವನ್ನು ಬಳಕೆ ಮಾಡುವುದುಮಾದರಿ

Using Your Time for God

DAY 1 OF 4

ನಿಮ್ಮ ಸಮಯವನ್ನು ಲಾಭದಾಯಕವಾಗಿ ಬಳಸಿಕೊಳ್ಳುವುದು

ನಾನು ಪ್ರಾಥಮಿಕ ಶಾಲೆಯಲ್ಲಿ ಮಗುವಾಗಿದ್ದಾಗ, ಜನರು ನನ್ನನ್ನು ಬಹಳಷ್ಟು ಬಾರಿ ಕೇಳುತ್ತಿದ್ದರು, "ನಿನಗೆ ಅತ್ಯಂತ ಪ್ರಿಯವಾದ ವಿಷಯ ಯಾವುದು?" ಏಕರೂಪವಾಗಿ ನನ್ನ ಪ್ರತ್ಯುತ್ತರವೂ ಎರಡರಲ್ಲಿ ಒಂದಾಗಿರುತ್ತಿತ್ತು. ನಾನು, "ವಿರಾಮ" ಅಥವಾ "ವ್ಯಾಯಾಮ" ಎನ್ನುತ್ತಿದ್ದೆ. ನನ್ನ ಉತ್ತರವೂ ನನ್ನ ಆಳವಾದ ವಿಶೇಷ ಆಸಕ್ತಿಯನ್ನು ಬಯಲು ಮಾಡುತ್ತಿತ್ತು. ನಾನು ಕೆಲಸದ ಬದಲಾಗಿ ಆಟವನ್ನು ಅರಿಸಿಕೊಳ್ಳುತ್ತಿದ್ದೆ. ನಿಶ್ಚಯವಾಗಿ, ಜಗತ್ತಿನ "ಯಾಕೆ?" ಪ್ರಶ್ನೆಗಳಿಗೆ ನನ್ನ ಎಳಸಾದ ತತ್ವ ಚಿಂತನೆಗಳು, ಸರ್ಕಸ್ ನಲ್ಲಿ ಹಗ್ಗದ ಮೇಲೆ ನಡೆಯುವ ಸಾಹಸಿ ನಾನೇ ಎಂಬ ಭಾವನೆಯಿಂದ, ಶಾಲೆಗೆ ತುದಿಗಾಲಿನಲ್ಲಿ ನಡೆದುಕೊಂಡು ಹೋಗುವಾಗ ಜರುಗುತ್ತಿದ್ದವು.

ವಾರಾಂತ್ಯದಲ್ಲಿ ಆಟವಾಡಲು ನನಗೆ ಇಷ್ಟವಿಲ್ಲದ್ದನ್ನು ಮಾಡುತ್ತಾ ವಾರದ ಐದು ದಿನಗಳನ್ನು ಕಳೆಯಬೇಕಿತ್ತು ಇದರಲ್ಲಿ ಜೀವನದ ಅರ್ಥವೇನು ಎಂದು ನನಗೆ ನಾನೇ ಕೇಳಿಕೊಂಡೆನು. ನಾನು ಯಾವಾಗಲೂ ಶಾಲೆಯ ಅಂಗಳದಲ್ಲಿ ಶಾಲೆ ಪ್ರಾರಂಭವಾಗುವ ಒಂದು ಗಂಟೆ ಮುಂಚೆಯೇ ಇರುತ್ತಿದ್ದೆ—ನನ್ನ ವಿದ್ಯಾಭ್ಯಾಸದಲ್ಲಿ ಮುನ್ನುಗ್ಗುವ ಹುರುಪಿನಲ್ಲಿ ಅಲ್ಲ, ಆದರೆ ದೈನಂದಿನ ತೀಡಿನಿಂದ "ಬಿಡಿಸಿಕೊಳ್ಳಲು" ಆಟದ ಮೈದಾನದಲ್ಲಿ ಶಾಲೆಯ ಘಂಟೆಯು ಬಾರಿಸುವ ಮುಂಚೆ ಒಂದು ಗಂಟೆಯ ಮೋಜನ್ನು ತೆಗೆದುಕೊಳ್ಳುತ್ತಿದ್ದೆ. ನನಗೆ, ಸಮಯವನ್ನು ಬಿಡಿಸಿಕೊಳ್ಳುವುದು ಎಂದರೆ ಅಗತ್ಯವಿರುವ ಕೆಲಸದ ಗಂಟೆಗಳಿಂದ ಅಮೂಲ್ಯವಾದ ಆಟದ ನಿಮಿಷಗಳನ್ನು ಬಿಡಿಸಿಕೊಳ್ಳುವುದು ಎಂಬ ಭಾವನೆ ಇತ್ತು.

ಆಪೋಸ್ತಾಲನಾದ ಪೌಲನು ತನ್ನ ಓದುಗರಿಗೆ, "ಈ ದಿನಗಳು ಕೆಟ್ಟವುಗಳಾಗಿವೆ; ಆದದರಿಂದ ಕಾಲವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿಕೊಳ್ಳಿರಿ (ಬಿಡಿಸಿಕೊಳ್ಳಿರಿ)." (ಎಫೆಸದವರಿಗೆ 5:16) ಎಂದು ಹೇಳುವಾಗ, ನನ್ನ ಅಭ್ಯಾಸಗಳು ಆತನ ಮನಸ್ಸಿನಲ್ಲಿದ್ದವು ಆಗಿರಲಿಲ್ಲ ಎಂದು ನಾನು ಅರಿತುಕೊಂಡೆನು. ಕ್ರಿಸ್ತನ ರಾಜ್ಯಕ್ಕಾಗಿ ಕೆಲಸ ಮಾಡಲು ತನ್ನ ಸಮಯವನ್ನು ಲಾಭದಾಯಕವಾಗಿ ಬಳಸಿಕೊಳ್ಳುವ ಮಹತ್ವಪೂರ್ಣ ಕರೆಯು ಆತನಿಗೆ ಕೊಡಲ್ಪಟ್ಟಿತ್ತು.

Coram Deo: ದೇವರ ಸಮ್ಮುಖದಲ್ಲಿ ಬದುಕುವುದು

ದೇವರ ರಾಜ್ಯಕ್ಕಾಗಿ ನಿಮ್ಮ ಸಮಯವನ್ನು ಲಾಭದಾಯಕವಾಗಿ ನೀವು ಬಳಸುತ್ತಿರಾ?

Copyright © Ligonier Ministries. R.C. Sproul ಅವರಿಂದ ಒಂದು ಉಚಿತ ಪುಸ್ತಕವನ್ನು ಇಲ್ಲಿ ಪಡೆಯಿರಿ Ligonier.org/freeresource.

ದಿನ 2

About this Plan

Using Your Time for God

ದೇವರಿಗಾಗಿ ನಿಮ್ಮ ಸಮಯವನ್ನು ಬಳಕೆ ಮಾಡುವುದರ ಕುರಿತಾಗಿ R.C. Sproul ಅವರಿಂದ 4-ದಿನದ ಸತ್ಯವೇದ ಧ್ಯಾನ. ಪ್ರತಿಯೊಂದು ಧ್ಯಾನವು ನಿಮ್ಮನ್ನು ದೇವರ ಸಮ್ಮುಖದಲ್ಲಿ, ದೇವರ ಅಧಿಕಾರದ ಅಡಿಯಲ್ಲಿ, ದೇವರ ಮಹಿಮೆಗಾಗಿ ಬದುಕಲು ಕರೆ ನೀಡುತ್ತವೆ.

More

ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು Ligonier Ministries ಅವರಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು Ligonier.org/youversion ಗೆ ಭೇಟಿ ನೀಡಿ