ದೇವರಿಗಾಗಿ ನಿಮ್ಮ ಸಮಯವನ್ನು ಬಳಕೆ ಮಾಡುವುದುಮಾದರಿ
ನಿಮ್ಮ ಸಮಯವನ್ನು ಬಿಡಿಸಿಕೊಳ್ಳುವುದು
ಸಮಯವು ಅತಿ ದೊಡ್ಡ ಸಮಕಾರಕ. ಇದು ಸಂಪೂರ್ಣ ಸಮತಾವಾದದ ಪರಿಭಾಷೆಯಲ್ಲಿ ಹಂಚಿಕೆಯಾದ ಒಂದು ಸಂಪನ್ಮೂಲವಾಗಿದೆ. ಜೀವಂತವಿರುವ ಪ್ರತಿಯೊಬ್ಬ ಮಾನವನಿಗೂ ಪ್ರತಿ ದಿನವೂ ಬಳಸಬಹುದಾದ ಗಂಟೆಗಳು ಒಂದೇ ಆಗಿದೆ. ಕಾರ್ಯನಿರತ ಜನರಿಗೆ ಒಂದು ದಿನದಲ್ಲಿ ವಿಶೇಷವಾದ ಸಮಯದ ಇನಾಮು ಇರುವುದಿಲ್ಲ. ಗಡಿಯಾರಕ್ಕೆ ಯಾವುದೇ ಮೆಚ್ಚುಗೆ ವಸ್ತುಗಳಿಲ್ಲ.
ಪ್ರತಿದಿನವು ನಮಗೆಲ್ಲರಿಗೂ ಸಮವಾದ ಸಮಯದ ಅಳತೆ ಇರುತ್ತದೆ. ನಾವು ಒಬ್ಬರಿಂದೊಬ್ಬರು ಭಿನ್ನವಾಗುವುದು ನಮಗೆ ಹಂಚಿಕೆಯಾಗಿರುವ ಸಮಯವನ್ನು ಹೇಗೆ ಬಿಡಿಸಿಕೊಳ್ಳುತ್ತೇವೆ ಎನ್ನುವುದರಲ್ಲಿ. ಯಾವುದಾದರೊಂದು ಬಿಡಿಗಡೆಯಾದಾಗ, ಒಂದು ನಕಾರಾತ್ಮಕ ಸ್ಥಿತಿಯಿಂದ ಅದನ್ನು ರಕ್ಷಿಸಲಾಗಿರುತ್ತದೆ ಅಥವಾ ಖರೀದಿಸಲಾಗಿರುತ್ತದೆ. ನಾವು ಚಿಂತಿಸುವ ಒಂದು ಮೂಲವಾದ ನಕಾರಾತ್ಮಕ ಸ್ಥಿತಿಯು ವ್ಯರ್ಥ ಸ್ಥಿತಿ. ಸಮಯವನ್ನು ವ್ಯರ್ಥ ಮಾಡುವುದು ಎಂದರೆ ಅದನ್ನು ಕಡಿಮೆ ಬೆಲೆಯುಳ್ಳ ಅಥವಾ ಬೆಲೆಯೇ ಇಲ್ಲದ ವಸ್ತುಗಳಿಗೆ ಖರ್ಚು ಮಾಡುವುದು ಎನ್ನುವ ಅರ್ಥ.
ದಿವಂಗತ ವಿನ್ಸಿ ಲೋಂಬಾರ್ದಿ ಅವರು ಈ ಗಾದೆಯನ್ನು ಪರಿಚಯಿಸಿದ್ದರು, "ನಾನು ಎಂದಿಗೂ ಯಾವ ಆಟವನ್ನೂ ಸೋತಿಲ್ಲ; ನನ್ನ ಸಮಯ ಮೀರಿತ್ತು ಅಷ್ಟೇ." ಈ ವಿವರಣೆಯು ನನ್ನನ್ನು ಕ್ರೀಡೆಯಲ್ಲಿನ ಅತ್ಯಂತ ನಾಟಕೀಯ ವಿಷಯಕ್ಕೆ ತಿರುಗಿಸುತ್ತದೆ—ಸಮಯದ ವಿರುದ್ಧದ ಓಟ. ನಿಗದಿ ಪಡಿಸಿರುವ ಸಮಯದಲ್ಲಿ ಅತಿ ಹೆಚ್ಚು ಕೆಲಸ ಮಾಡುವ ತಂಡವು ಆಟವನ್ನು ಗೆಲ್ಲುವ ತಂಡವಾಗುತ್ತದೆ. ಖಂಡಿತವಾಗಿ, ಕ್ರೀಡೆಯಲ್ಲಿ, ಜೀವನಕ್ಕಿಂತ ಭಿನ್ನವಾಗಿ, ಸಮಯವು ಮುಗುದಿದೆ ಎಂಬ ಕರೆಯನ್ನು ಕೂಗಲು ನಿಬಂಧನೆಗಳಿರುತ್ತವೆ. ಕ್ರೀಡೆಯಲ್ಲಿನ ಗಡಿಯಾರವನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಬಹುದು. ಆದರೆ ನಿಜ ಜೀವನದಲ್ಲಿ, ಸಮಯ ಮೀರಿದೆ ಎನ್ನುವ ಸೂಚನೆಗಳಿಲ್ಲ.
Coram Deo: ದೇವರ ಸಮ್ಮುಖದಲ್ಲಿ ಜೀವಿಸುವುದು
ಕಡಿಮೆ ಬೆಲೆಯುಳ್ಳ ಅಥವಾ ಬೆಲೆಯೇ ಇಲ್ಲದ ವಸ್ತುಗಳ ಮೇಲೆ ನೀವು ಖರ್ಚು ಮಾಡುತ್ತಿರುವ ಸಮಯವನ್ನು ಬಿಡಿಸಿಕೊಳ್ಳಲು ಇರುವ ಮಾರ್ಗಗಳನ್ನು ತೋರಿಸಲು ದೇವರನ್ನು ಬೇಡಿಕೊಳ್ಳಿರಿ..
Copyright © Ligonier Ministries. R.C. Sproul ಅವರಿಂದ ಉಚಿತ ಪುಸ್ತಕವನ್ನು ಇಲ್ಲಿ ಪಡೆಯಿರಿ Ligonier.org/freeresource.
Scripture
About this Plan
ದೇವರಿಗಾಗಿ ನಿಮ್ಮ ಸಮಯವನ್ನು ಬಳಕೆ ಮಾಡುವುದರ ಕುರಿತಾಗಿ R.C. Sproul ಅವರಿಂದ 4-ದಿನದ ಸತ್ಯವೇದ ಧ್ಯಾನ. ಪ್ರತಿಯೊಂದು ಧ್ಯಾನವು ನಿಮ್ಮನ್ನು ದೇವರ ಸಮ್ಮುಖದಲ್ಲಿ, ದೇವರ ಅಧಿಕಾರದ ಅಡಿಯಲ್ಲಿ, ದೇವರ ಮಹಿಮೆಗಾಗಿ ಬದುಕಲು ಕರೆ ನೀಡುತ್ತವೆ.
More