ಆದಿಕಾಂಡ 10
10
ಜನಾಂಗಗಳ ಬೆಳವಣಿಗೆ ಮತ್ತು ವಿಸ್ತರಣೆ
1ನೋಹನ ಗಂಡುಮಕ್ಕಳು: ಶೇಮ್, ಹಾಮ್ ಮತ್ತು ಯೆಫೆತ್. ಜಲಪ್ರಳಯದ ನಂತರ ಈ ಮೂವರು ಅನೇಕ ಗಂಡುಮಕ್ಕಳನ್ನು ಪಡೆದರು. ಶೇಮನಿಗೂ ಹಾಮನಿಗೂ ಯೆಫೆತನಿಗೂ ಹುಟ್ಟಿದ ಗಂಡುಮಕ್ಕಳು:
ಯೆಫೆತನ ಸಂತತಿಯವರು
2ಯೆಫೆತನ ಗಂಡುಮಕ್ಕಳು: ಗೋಮೆರ್, ಮಾಗೋಗ್, ಮಾದಯ್, ಯಾವಾನ್, ತೂಬಲ್, ಮೆಷೆಕ್ ಮತ್ತು ತೀರಾಸ್.
3ಗೋಮೆರನ ಗಂಡುಮಕ್ಕಳು: ಅಷ್ಕೆನಸ್, ರೀಫತ್ ಮತ್ತು ತೋಗರ್ಮ.
4ಯಾವಾನನ ಗಂಡುಮಕ್ಕಳು: ಎಲೀಷಾ, ತಾರ್ಷೀಸ್, ಕಿತ್ತೀಮ್ ಮತ್ತು ದೋದಾನೀಮ್.
5ತೀರ ಪ್ರದೇಶದ#10:5 ತೀರ ಪ್ರದೇಶ ಮೆಡಿಟೇರಿಯನ್ ಸಮುದ್ರದ ಸುತ್ತಮುತ್ತಲಿನ ಪ್ರದೇಶಗಳು. ಜನರೆಲ್ಲರು ಯೆಫೆತನ ಮಕ್ಕಳ ಸಂತಾನಕ್ಕೆ ಸೇರಿದವರು. ಅವನ ಪ್ರತಿಯೊಬ್ಬ ಮಗನಿಗೂ ಸ್ವಂತ ಭೂಮಿ ಇತ್ತು. ಅವರೆಲ್ಲರ ಕುಟುಂಬಗಳು ವೃದ್ಧಿಗೊಂಡು ಅನೇಕ ಜನಾಂಗಗಳಾದವು. ಪ್ರತಿಯೊಂದು ಜನಾಂಗಕ್ಕೂ ಸ್ವಂತ ಭಾಷೆಯಿತ್ತು.
ಹಾಮನ ಸಂತತಿಯವರು
6ಹಾಮನ ಗಂಡುಮಕ್ಕಳು: ಕೂಷ್, ಮಿಚ್ರಯಿಮ್, ಪೂತ್ ಮತ್ತು ಕಾನಾನ್.
7ಕೂಷನ ಗಂಡುಮಕ್ಕಳು: ಸೆಬಾ, ಹವೀಲ, ಸಬ್ತಾ, ರಗ್ಮ ಮತ್ತು ಸಬ್ತಕಾ.
ರಗ್ಮನ ಗಂಡುಮಕ್ಕಳು: ಶೆಬಾ ಮತ್ತು ದೆದಾನ್.
8ಕೂಷನಿಗೆ ನಿಮ್ರೋದನೆಂಬ ಗಂಡುಮಗನಿದ್ದನು. ನಿಮ್ರೋದನು ಭೂಲೋಕದಲ್ಲಿ ಮಹಾಬಲಶಾಲಿಯಾಗಿದ್ದು ಮೊದಲನೆಯ ಭೂರಾಜನಾದನು. 9ಯೆಹೋವನ ಮುಂದೆ ಅವನು ಚತುರ ಬೇಟೆಗಾರನಾಗಿದ್ದನು. ಆದ್ದರಿಂದ ಜನರು ಬೇರೆಯವರನ್ನು ಅವನಿಗೆ ಹೋಲಿಸಿ, “ಅವನು ನಿಮ್ರೋದನಂತೆ, ಯೆಹೋವನ ಮುಂದೆ ಚತುರ ಬೇಟೆಗಾರ” ಎಂದು ಹೇಳುತ್ತಿದ್ದರು.
10ನಿಮ್ರೋದನ ರಾಜ್ಯವು ಶಿನಾರ್ ದೇಶದಲ್ಲಿರುವ ಬಾಬಿಲೋನಿನಲ್ಲಿ, ಯೆರೆಕ್‌ನಲ್ಲಿ ಮತ್ತು ಅಕ್ಕದ್ ಮತ್ತು ಕಲ್ನೇ ಎಂಬ ಪಟ್ಟಣಗಳಲ್ಲಿ ಪ್ರಾರಂಭವಾಯಿತು. 11-12ನಿಮ್ರೋದನು ಅಶ್ಶೂರಕ್ಕೂ ಹೋದನು. ಅಶ್ಶೂರದಲ್ಲಿ ನಿನೆವೆ, ರೆಹೋಬೋತೀರ್, ಕೆಲಹ ಮತ್ತು ರೆಸೆನ್ ಎಂಬ ಪಟ್ಟಣಗಳನ್ನು ಕಟ್ಟಿದನು. ರೆಸೆನ್ ಪಟ್ಟಣವು ನಿನೆವೆಗೂ ದೊಡ್ಡಪಟ್ಟಣವಾದ ಕೆಲಹಕ್ಕೂ ಮಧ್ಯದಲ್ಲಿದೆ.
13-14ಮಿಚ್ರಯಿಮನು ಲೂದ್, ಅನಾಮ್, ಲೆಹಾಬ್, ನಪ್ತಹ್, ಪತ್ರುಸ್, ಕಸ್ಲುಹ್ಯ ಮತ್ತು ಕಪ್ತೋರ್ಯ ಎಂಬವರ ತಂದೆ. ಕಸ್ಲುಹ್ಯರು ಫಿಲಿಷ್ಟಿಯರ ಪಿತೃಗಳು.
15ಕಾನಾನನು ಸೀದೋನನ ತಂದೆ. ಕಾನಾನನ ಮೊದಲನೆಯ ಮಗನೇ ಸೀದೋನ್. ಇವನು ಹಿತ್ತಿಯರ ಮೂಲಪಿತೃ. 16-18ಕಾನಾನನು ಯೆಬೂಸಿಯರಿಗೆ, ಅಮೋರಿಯರಿಗೆ, ಗಿರ್ಗಾಷಿಯರಿಗೆ, ಹಿವ್ವಿಯರಿಗೆ, ಅರ್ಕಿಯರಿಗೆ, ಸೀನಿಯರಿಗೆ, ಅರ್ವಾದಿಯರಿಗೆ, ಚೆಮಾರಿಯರಿಗೆ ಮತ್ತು ಹಮಾತಿಯರಿಗೆ ಮೂಲಪುರುಷನು.
ಕಾನಾನನ ಕುಟುಂಬಗಳು ಪ್ರಪಂಚದ ನಾನಾ ಭಾಗಗಳಲ್ಲಿ ಹರಡಿಕೊಂಡಿದ್ದವು. 19ಕಾನಾನ್ಯರ ಸೀಮೆಯು ಸೀದೋನಿನ ಉತ್ತರದಿಂದಿಡಿದು ಗೆರಾರಿನ ದಕ್ಷಿಣದವರೆಗೂ, ಗಾಜಾದಿಂದ ಪೂರ್ವದ ಸೊದೋಮ್ ಗೊಮೋರ ಪಟ್ಟಣಗಳವರೆಗೂ, ಅದ್ಮಾ ಮತ್ತು ಚೆಬೋಯಿಮ್‌ಗಳಿಂದ ಲೆಷಾದವರೆಗೆ ವಿಸ್ತರಿಸಿತ್ತು.
20ಅವರೆಲ್ಲರೂ ಹಾಮನ ಸಂತತಿಯವರು. ಆ ಕುಟುಂಬಗಳವರೆಲ್ಲರು ತಮ್ಮ ಸ್ವಂತ ಭಾಷೆಗಳನ್ನು ಮತ್ತು ತಮ್ಮ ಸ್ವಂತ ನಾಡುಗಳನ್ನು ಹೊಂದಿದ್ದರು. ಅವುಗಳೆಲ್ಲ ಪ್ರತ್ಯೇಕ ಜನಾಂಗಗಳಾದರು.
ಶೇಮನ ಸಂತತಿಯವರು
21ಶೇಮನು ಯೆಫೆತನ ಅಣ್ಣ. ಶೇಮನ ಸಂತತಿಯವರಲ್ಲಿ ಎಬರನೂ ಒಬ್ಬನು. ಎಬರನು ಹೀಬ್ರೂ ಜನರ ಮೂಲಪಿತೃ.
22ಶೇಮನ ಗಂಡುಮಕ್ಕಳು: ಏಲಾಮ್, ಅಶ್ಶೂರ್, ಅರ್ಪಕ್ಷದ್, ಲೂದ್ ಮತ್ತು ಅರಾಮ್.
23ಅರಾಮನ ಗಂಡುಮಕ್ಕಳು: ಊಸ್, ಹೂಲ್, ಗೆತೆರ್ ಮತ್ತು ಮಷ್.
24ಅರ್ಪಕ್ಷದನು ಶೆಲಹನ ತಂದೆ,
ಶೆಲಹನು ಎಬರನ ತಂದೆ.
25ಎಬರನಿಗೆ ಇಬ್ಬರು ಗಂಡುಮಕ್ಕಳಿದ್ದರು. ಮೊದಲನೆಯ ಮಗನು ಹುಟ್ಟಿದ ಕಾಲದಲ್ಲಿ ಭೂಮಿಯ ಜನಾಂಗಗಳು ವಿಂಗಡವಾದದ್ದರಿಂದ ಅವನಿಗೆ ಪೆಲೆಗ್ ಎಂದು ಹೆಸರಿಟ್ಟನು; ಎರಡನೆಯ ಮಗನ ಹೆಸರು ಯೊಕ್ತಾನ್.
26ಯೊಕ್ತಾನನ ಗಂಡುಮಕ್ಕಳು: ಅಲ್ಮೋದಾದ್, ಶೆಲೆಪ್, ಹಚರ್ಮಾವೆತ್ ಮತ್ತು ಯೆರಹ, 27ಹದೋರಾಮ್, ಊಜಾಲ್, ದಿಕ್ಲಾ. 28ಓಬಾಲ್, ಅಬೀಮಯೇಲ್, ಶೆಬಾ, 29ಓಫೀರ್, ಹವೀಲ ಮತ್ತು ಯೋಬಾಬ್. 30ಇವರೆಲ್ಲರೂ ಮೇಶಾ ಸೀಮೆಯನ್ನು ಮೊದಲುಗೊಂಡು ಪೂರ್ವದ ಬೆಟ್ಟಗುಡ್ಡದ ಪ್ರದೇಶದಲ್ಲಿ ವಾಸಿಸಿದರು. ಸೆಫಾರಿಗೆ ಹೋಗುವ ದಿಕ್ಕಿನಲ್ಲಿ ಮೇಶಾ ಸೀಮೆಯಿತ್ತು.
31ಇವರೆಲ್ಲರೂ ಶೇಮನ ಕುಟುಂಬಕ್ಕೆ ಸೇರಿದವರು. ಇವರೆಲ್ಲರು ಕುಟುಂಬಾನುಸಾರವಾಗಿಯೂ ಭಾಷಾನುಸಾರವಾಗಿಯೂ ದೇಶಾನುಸಾರವಾಗಿಯೂ ಜನಾಂಗಗಳಿಗನುಸಾರವಾಗಿಯೂ ಹರಡಿಕೊಂಡಿದ್ದರು.
32ನೋಹನ ಗಂಡುಮಕ್ಕಳಿಂದ ಉಂಟಾದ ವಂಶಗಳವರ ಪಟ್ಟಿಯಿದು. ಅವರು ತಮ್ಮ ಜನಾಂಗಗಳಿಗನುಸಾರವಾಗಿ ಹರಡಿಕೊಂಡಿದ್ದರು. ಜಲಪ್ರಳಯದ ನಂತರ ಭೂಮಿಯಲ್ಲೆಲ್ಲಾ ಹರಡಿಕೊಂಡವರು ಈ ವಂಶಗಳವರೇ.
Выбрано:
ಆದಿಕಾಂಡ 10: KERV
Выделить
Поделиться
Копировать
Хотите, чтобы то, что вы выделили, сохранялось на всех ваших устройствах? Зарегистрируйтесь или авторизуйтесь
Kannada Holy Bible: Easy-to-Read Version
All rights reserved.
© 1997 Bible League International