ಜೆಕರ್ಯ 13
13
ದೇಶದ ಶುದ್ಧೀಕರಣ, ವಿುಥ್ಯಾಪ್ರವಾದನೆಯ ನಿರಾಕರಣ
1ಆ ದಿನದಲ್ಲಿ ಪಾಪವನ್ನೂ ಅಶುಚಿಯನ್ನೂ ಪರಿಹರಿಸತಕ್ಕ ಒಂದು ಬುಗ್ಗೆಯು
ದಾವೀದ ವಂಶದವರಿಗೂ ಯೆರೂಸಲೇವಿುನವರಿಗೂ ತೆರೆದಿರುವದು.
2ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ -
ಆ ದಿನದಲ್ಲಿ ನಾನು ವಿಗ್ರಹಗಳನ್ನು ದೇಶದೊಳಗಿಂದ ನಿರ್ನಾಮಮಾಡುವೆನು,
ಅವು ಇನ್ನು ಯಾರ ನೆನಪಿಗೂ ಬಾರವು;
ಅಲ್ಲದೆ ಪ್ರವಾದಿಗಳನ್ನೂ ದುರಾತ್ಮವನ್ನೂ ದೇಶದೊಳಗಿಂದ ತೊಲಗಿಸಿಬಿಡುವೆನು.
3ಆಗ ಯಾವನಾದರೂ ಮತ್ತೆ ಪ್ರವಾದನೆಮಾಡಿದರೆ
ಅವನ ಹೆತ್ತ ತಾಯಿತಂದೆಗಳು ಅವನಿಗೆ -
ನೀನುಳಿಯಬೇಡ;
ಯೆಹೋವನ ಹೆಸರೆತ್ತಿ ಸುಳ್ಳಾಡುತ್ತೀ ಎಂದು ಹೇಳಿ
ಆ ಹೆತ್ತ ತಾಯಿತಂದೆಗಳೇ ಅವನ ಪ್ರವಾದನೆಯ ನಿವಿುತ್ತ
ಅವನನ್ನು ಇರಿದುಬಿಡುವರು.
4ಆದಿನದಲ್ಲಿ ಯಾವ ಪ್ರವಾದಿಯೇ ಆಗಲಿ ಪ್ರವಾದನೆ ಮಾಡಬೇಕೆಂದಿರುವಾಗ
ತನಗಾದ ದರ್ಶನವನ್ನು ಪ್ರಕಟಿಸಲು ನಾಚಿಕೆಪಡುವನು;
ಯಾವನೂ ಮೋಸಕ್ಕಾಗಿ ಕಂಬಳಿಯನ್ನು#13.4 ಅಥವಾ: ತುಪ್ಪಟದ ತೊಗಲನ್ನು. 2 ಅರಸು. 1.8 ನೋಡಿರಿ. ಹೊದ್ದುಕೊಳ್ಳನು;
5ಒಬ್ಬನು - ನಾನು ಪ್ರವಾದಿಯಲ್ಲ, ಹೊಲದ ಕೆಲಸದವನು;
ಚಿಕ್ಕತನದಿಂದಲೂ ಗುಲಾಮನಾಗಿದ್ದೇನೆ ಎಂದು ಹೇಳಲು
6ಮತ್ತೊಬ್ಬನು ಅವನನ್ನು -
ನಿನ್ನ ಎದೆಯ#13.6 ಮೂಲ: ಕೈಗಳ ನಡುವಣ. ಮೇಲಿನ ಈ ಗಾಯಗಳೇನು ಎಂದು ಕೇಳಿದರೆ
ಅವನು - ವಿುತ್ರರ ಮನೆಯಲ್ಲಿ ನನಗಾದ ಗಾಯಗಳು ಎಂದುತ್ತರ ಕೊಡುವನು.
ಮಂದೆಗಾಗುವ ಹಿಂಸೆ, ಶೇಷಕ್ಕೆ ಲಭಿಸುವ ಸುಫಲ
7ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ -
ಖಡ್ಗವೇ, ನಾನು ನೇವಿುಸಿದ ಕುರುಬನೂ ನನ್ನ ಸಂಗಡಿಗನೂ
ಆಗಿರುವವನಿಗೆ ವಿರುದ್ಧವಾಗಿ ಎಚ್ಚರಗೊಳ್ಳು;
ಕುರುಬನನ್ನು ಹೊಡೆ,#13.7 ಪಾಠಾಂತರ: ಹೊಡೆಯುವೆನು. ಮತ್ತಾ. 26.31; ಮಾರ್ಕ. 14.27 ನೋಡಿರಿ. ಕುರಿಗಳು ಚದರಿಹೋಗುವವು;
ಮರಿಗಳ ಮೇಲೂ ಕೈಮಾಡಬೇಕೆಂದಿದ್ದೇನೆ.
8ದೇಶದೊಳಗೆಲ್ಲಾ ಮೂರರಲ್ಲಿ ಎರಡು ಭಾಗದವರು ಹತರಾಗಿ ಸಾಯುವರು,
ಮೂರನೆಯ ಭಾಗದವರು ಅಲ್ಲಿ ಉಳಿಯುವರು;
ಇದು ಯೆಹೋವನ ನುಡಿ.
9ಆ ಮೂರನೆಯ ಭಾಗದವರನ್ನು ನಾನು ಬೆಂಕಿಗೆ ಹಾಕಿ
ಬೆಳ್ಳಿಯಂತೆ ಶೋಧಿಸುವೆನು, ಬಂಗಾರದ ಹಾಗೆ ಶುದ್ಧಿಮಾಡುವೆನು;
ಅವರು ನನ್ನ ಹೆಸರೆತ್ತಿ ಪ್ರಾರ್ಥಿಸುವರು,
ನಾನು ಆಲಿಸುವೆನು;
ನಾನು - ಇವರು ನನ್ನ ಜನರು ಅಂದುಕೊಳ್ಳುವೆನು,
ಅವರು - ನಮ್ಮ ದೇವರಾದ ಯೆಹೋವನೇ ಅನ್ನುವರು.
Currently Selected:
ಜೆಕರ್ಯ 13: KANJV-BSI
Highlight
Share
Copy
Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.