ಜೆಕರ್ಯ 12
12
ಶತ್ರುಗಳಿಗೆ ಯೆರೂಸಲೇವಿುನಿಂದಾಗುವ ಅಪಾಯ
1ಇಸ್ರಾಯೇಲಿನ ವಿಷಯವಾಗಿ ಯೆಹೋವನು ನುಡಿದ ದೈವೋಕ್ತಿ.
ಆಕಾಶಮಂಡಲವನ್ನು ಹರವಿ
ಭೂಲೋಕಕ್ಕೆ ಅಸ್ತಿವಾರವನ್ನು ಹಾಕಿ
ಮನುಷ್ಯನೊಳಗೆ ಜೀವಾತ್ಮವನ್ನು ಸೃಷ್ಟಿಸುವ
ಯೆಹೋವನು ಇಂತೆನ್ನುತ್ತಾನೆ -
2ಆಹಾ! ನಾನು ಯೆರೂಸಲೇಮನ್ನು ಸುತ್ತಣ ಸಕಲ ಜನಾಂಗಗಳಿಗೆ
ಅಮಲೇರಿಸಿ ಓಲಾಡಿಸುವ ಬೋಗುಣಿಯನ್ನಾಗಿ ಮಾಡುವೆನು;
ಯೆರೂಸಲೇವಿುಗೆ#12.2 ಅಥವಾ: ಆಗ ಯೆರೂಸಲೇವಿುಗೆ ಮುತ್ತಿಗೆ ಹಾಕುವವರೊಳಗೆ ಯೆಹೂದವೂ ಸೇರಿರುವದು. ಜೆಕ. 14.14. ಮುತ್ತಿಗೆಹಾಕುವಾಗ
ಯೆಹೂದಕ್ಕೆ ಇಕ್ಕಟ್ಟಾಗುವದು.
3ಆ ದಿನದಲ್ಲಿ ನಾನು ಯೆರೂಸಲೇಮನ್ನು ಸಮಸ್ತಜನಗಳಿಗೂ
ಭಾರೀ ಬಂಡೆಯನ್ನಾಗಿ ಮಾಡುವೆನು;
ಅದನ್ನೆತ್ತುವವರೆಲ್ಲರಿಗೂ ಕಡುಗಾಯವಾಗುವದು;
ಲೋಕದ ಸಕಲ ರಾಜ್ಯಗಳು ಅದನ್ನೆತ್ತಿಹಾಕಲು#12.3 ಮೂಲ: ಅದಕ್ಕೆ ವಿರುದ್ಧವಾಗಿ. ಕೂಡಿಬರುವವು.
4ಯೆಹೋವನು ಇಂತೆನ್ನುತ್ತಾನೆ -
ಆ ದಿನದಲ್ಲಿ ನಾನು ಎಲ್ಲಾ ಕುದುರೆಗಳಿಗೆ
ತಬ್ಬಿಬ್ಬನ್ನು ಉಂಟುಮಾಡುವೆನು,
ಸವಾರರನ್ನು ಭ್ರಮೆಗೊಳಿಸುವೆನು;
ಯೆಹೂದವಂಶವನ್ನು ಕಟಾಕ್ಷಿಸಿ
ಜನಾಂಗಗಳ ಅಶ್ವಗಳನ್ನೆಲ್ಲಾ ಕುರುಡು ಮಾಡುವೆನು.
5ಆಗ ಯೆಹೂದದ ಕುಲಪತಿಗಳು ಮನಸ್ಸಿನೊಳಗೆ -
ಯೆರೂಸಲೇವಿುನವರು ತಮ್ಮ ದೇವರೂ ಸೇನಾಧೀಶ್ವರನೂ ಆದ ಯೆಹೋವನಲ್ಲಿ ಬಲಗೊಂಡು
ನಮಗೆ ತ್ರಾಣವಾಗಿದ್ದಾರೆ ಅಂದುಕೊಳ್ಳುವರು.
6ಆ ದಿನದಲ್ಲಿ ನಾನು ಯೆಹೂದದ ಕುಲಪತಿಗಳನ್ನು
ಸೌದೆಯ ಮಧ್ಯದಲ್ಲಿನ ಅಗ್ಗಿಷ್ಟಿಕೆಯನ್ನಾಗಿಯೂ
ಸಿವುಡುಗಳ ನಡುವಣ ಪಂಜನ್ನಾಗಿಯೂ ಮಾಡುವೆನು;
ಅವರು ಸುತ್ತಣ ಜನಾಂಗಗಳನ್ನೆಲ್ಲಾ ಎಡಬಲಗಳಲ್ಲಿ ನುಂಗಿಬಿಡುವರು;
ಯೆರೂಸಲೇವಿುನವರು ತಮ್ಮ ಸ್ಥಳವಾದ ಯೆರೂಸಲೇವಿುನಲ್ಲಿಯೇ ಇನ್ನು ವಾಸಿಸುವರು.
7ದಾವೀದ ವಂಶದವರ ಮಹಿಮೆಯೂ ಯೆರೂಸಲೇವಿುನವರ ಮಹಿಮೆಯೂ
ಯೆಹೂದದ ಮಹಿಮೆಯನ್ನು ಮೀರದಂತೆ
ಯೆಹೋವನು ಯೆಹೂದದ ಪಾಳೆಯಗಳಿಗೆ ಮೊದಲು ಜಯವನ್ನುಂಟುಮಾಡುವನು;
8ಆ ದಿನದಲ್ಲಿ ಯೆಹೋವನು ಯೆರೂಸಲೇವಿುನವರನ್ನು ಸುತ್ತಲು ಕಾಪಾಡುವನು;
ಅವರೊಳಗೆ ಈಗಿನ ಕುಂಟನು ಆ ದಿನದಲ್ಲಿ ದಾವೀದನಂತಿರುವನು;
ದಾವೀದ ವಂಶವು ದೇವರಂತೆ, ಯೆಹೋವನ ದೂತನ ಹಾಗೆ
ಅವರಿಗೆ ಮುಂದಾಳಾಗುವದು.
9ಯೆರೂಸಲೇವಿುನ ಮೇಲೆ ಬೀಳುವ ಎಲ್ಲಾ ಜನಾಂಗಗಳ ಧ್ವಂಸಕ್ಕೆ
ಆ ದಿನದಲ್ಲಿ ಕೈಹಾಕುವೆನು.
ಇಸ್ರಾಯೇಲ್ಯರ ಪಶ್ಚಾತ್ತಾಪ
10ದಾವೀದ ವಂಶದವರಲ್ಲಿಯೂ ಯೆರೂಸಲೇವಿುನವರಲ್ಲಿಯೂ
ದೇವರ ದಯೆಯನ್ನು ಹಂಬಲಿಸಿ#12.10 ಅಥವಾ: ಬೇಡಿ ಒಲಿಸಿಕೊಳ್ಳುವ. ಬೇಡುವ ಭಾವವನ್ನು ಸುರಿಸುವೆನು;
ತಾವು ಇರಿದವನನ್ನು#12.10 ಪಾಠಾಂತರ: ಇರಿದ ನನ್ನನ್ನು. ದಿಟ್ಟಿಸಿ ನೋಡುವರು;
ಇದ್ದೊಬ್ಬ ಮಗನನ್ನು ಕಳೆದುಕೊಂಡಂತೆ ಅವನಿಗಾಗಿ ಗೋಳಾಡುವರು.
ಚೊಚ್ಚಲಮಗನ ವಿಯೋಗಕ್ಕೋಸ್ಕರ ದುಃಖಪಟ್ಟಂತೆ ಅವನಿಗಾಗಿ ದುಃಖಿಸುವರು.
11ಮೆಗಿದ್ದೋವಿನ ತಗ್ಗಿನೊಳಗೆ ಹದದ್ರಿಮ್ಮೋನಿನಲ್ಲಿ#12.11 ಅಥವಾ: ಹದದ್ರಿಮ್ಮೋನಿನ ವಿಷಯವಾಗಿ. ಗೋಳಾಟವಾಗುವಂತೆ
ಯೆರೂಸಲೇವಿುನಲ್ಲಿ ಆ ದಿನ ದೊಡ್ಡ ಗೋಳಾಟವಾಗುವದು.
12ದೇಶವೆಲ್ಲಾ ಗೋಳಾಡುವದು,
ಒಂದೊಂದು ಕುಟುಂಬವು ಬೇರೆ ಬೇರೆ ಗೋಳಾಡುವದು;
ದಾವೀದ ವಂಶದ ಕುಟುಂಬವು ಬೇರೆ,
ಅದರಲ್ಲಿ ಹೆಂಗಸರು ಗಂಡಸರು ಬೇರೆ ಬೇರೆ;
ನಾತಾನ ವಂಶದ ಕುಟುಂಬವು ಬೇರೆ,
ಅದರಲ್ಲಿ ಹೆಂಗಸರು, ಗಂಡಸರು ಬೇರೆ ಬೇರೆ;
13ಲೇವಿ ವಂಶದ ಕುಟುಂಬವು ಬೇರೆ,
ಅದರಲ್ಲಿ ಹೆಂಗಸರು ಗಂಡಸರು ಬೇರೆ ಬೇರೆ;
ಶಿಮ್ಮಿಯ ಸಂತಾನದ ಕುಟುಂಬವು ಬೇರೆ,
ಅದರಲ್ಲಿ ಹೆಂಗಸರು ಗಂಡಸರು ಬೇರೆ ಬೇರೆ;
14ವಿುಕ್ಕ ಕುಟುಂಬಗಳೆಲ್ಲಾ ಬೇರೆ ಬೇರೆ,
ಒಂದೊಂದರಲ್ಲಿಯೂ ಹೆಂಗಸರು ಗಂಡಸರು ಬೇರೆ ಬೇರೆ;
ಹೀಗೆ ಬೇರೆ ಬೇರೆಯಾಗಿಯೇ ಗೋಳಾಡುವರು.
Currently Selected:
ಜೆಕರ್ಯ 12: KANJV-BSI
Highlight
Share
Copy
Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.