YouVersion Logo
Search Icon

ಕೀರ್ತನೆಗಳು 61

61
ಪ್ರವಾಸಿಗಳಾದ ಸದ್ಭಕ್ತರು ತಮಗಾಗಿಯೂ ತಮ್ಮ ಅಧಿರಾಜನಿಗಾಗಿಯೂ ಮಾಡುವ ವಿಜ್ಞಾಪನೆ
(ಕೀರ್ತ. 63)
ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ತೆಗೆದದ್ದು; ತಂತಿವಾದ್ಯದೊಡನೆ ಹಾಡತಕ್ಕದ್ದು; ದಾವೀದನ ಕೀರ್ತನೆ
1ದೇವರೇ, ನನ್ನ ಕೂಗನ್ನು ಕೇಳಿ ನನ್ನ ಪ್ರಾರ್ಥನೆಗೆ ಕಿವಿಗೊಡು.
2ನಾನು ಎದೆಗುಂದಿದವನಾಗಿ ಭೂವಿುಯ ಕಡೇ ಭಾಗದಿಂದ ನಿನಗೆ ಮೊರೆಯಿಡುತ್ತೇನೆ;
ನಾನು ಹತ್ತಲಾರದ ಆಶ್ರಯಗಿರಿಯ ಮೇಲೆ ನನ್ನನ್ನು ಹತ್ತಿಸು.
3ನೀನು ನನಗೆ ಶರಣನೂ ಶತ್ರುಗಳಿಂದ ತಪ್ಪಿಸುವ ಭದ್ರವಾದ ಬುರುಜೂ ಆಗಿದ್ದೀ.
4ನನಗೆ ನಿರಂತರವೂ ನಿನ್ನ ಗುಡಾರದಲ್ಲಿ ಬಿಡಾರವಾಗಲಿ;
ನಿನ್ನ ರೆಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವಂತೆ ಅನುಗ್ರಹಿಸು. ಸೆಲಾ.
5ದೇವರೇ, ನೀನು ನನ್ನ ಹರಕೆಗಳಿಗೆ ಲಕ್ಷ್ಯಕೊಟ್ಟಿದ್ದೀ;
ನಿನ್ನಲ್ಲಿ ಭಯಭಕ್ತಿಯುಳ್ಳವರಿಗೆ ಸಿಕ್ಕತಕ್ಕ ಬಾಧ್ಯತೆಯನ್ನು ನನಗೂ ದಯಪಾಲಿಸಿದ್ದೀ.
6ಅರಸನಿಗೆ ದೀರ್ಘಕಾಲದ ಬಾಳಿಕೆಯನ್ನು ಅನುಗ್ರಹಿಸು;
ಅವನ ಆಯುಸ್ಸು ಅನೇಕ ತಲೆಗಳವರೆಗೆ ವೃದ್ಧಿಯಾಗಲಿ.
7ಅವನು ನಿನ್ನ ಸಾನ್ನಿಧ್ಯವನ್ನು ಪಡೆದು ಸದಾಕಾಲವೂ ಸಿಂಹಾಸನಾರೂಢನಾಗಿರಲಿ;
ನಿನ್ನ ಪ್ರೇಮಸತ್ಯತೆಗಳು ಅವನ ಬೆಂಗಾವಲಾಗಿರಲಿ.
8ಹೀಗಾದರೆ ನಾನು ಪ್ರತಿದಿನವೂ ನನ್ನ ಹರಕೆಗಳನ್ನು ಸಲ್ಲಿಸುವವನಾಗಿ
ನಿನ್ನ ನಾಮವನ್ನು ಸದಾ ಸ್ಮರಿಸಿ ಕೀರ್ತಿಸುತ್ತಿರುವೆನು.

Highlight

Share

Copy

None

Want to have your highlights saved across all your devices? Sign up or sign in

Videos for ಕೀರ್ತನೆಗಳು 61