YouVersion Logo
Search Icon

ಕೀರ್ತನೆಗಳು 60

60
ಪರಾಜಿತರು ದೈವೋತ್ತರವನ್ನು ಆಧಾರಮಾಡಿಕೊಂಡು ಪ್ರಾರ್ಥಿಸುವದು ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ತೆಗೆದದ್ದು; ಷೂಷನ್#60.0 ಶಿರೋಲೇಖ - ಧರ್ಮಬೋಧೆಯೆಂಬ ನೈದಿಲೆ ಹೂವು ಎಂದು ಅರ್ಥವಿಸಬಹುದು; ಕೀರ್ತ. 45; 69; 80. ಎದೂತೆಂಬ ರಾಗ; ದಾವೀದನು ಎರಡು ನದಿಗಳ ಮಧ್ಯದಲ್ಲಿರುವ ಮತ್ತು ಸೋಬ ಎಂಬ ರಾಜಧಾನಿಯುಳ್ಳ ಅರಾಮ್ ರಾಜ್ಯಗಳ ಸಂಗಡ ಕಾದುವಷ್ಟರೊಳಗೆ ಯೋವಾಬನು ಹಿಂದಿರುಗಿ ಹೋಗಿ ಉಪ್ಪಿನ ತಗ್ಗಿನಲ್ಲಿ ಹನ್ನೆರಡು ಸಾವಿರ ಎದೋಮ್ಯರನ್ನು ಹೊಡೆದಾಗ ದಾವೀದನು ರಚಿಸಿದ ಕಾವ್ಯ. ಬಾಯಿಪಾಠ ಮಾಡಿಸತಕ್ಕದ್ದು
(2 ಸಮು. 8.3-13)
1ದೇವರೇ, ಕೋಪದಿಂದ ನಮ್ಮನ್ನು ತಳ್ಳಿಕೆಡವಿ ಬಿಟ್ಟಿದ್ದೀ;
ನಮ್ಮನ್ನು ಎತ್ತಿ ನಿಲ್ಲಿಸು.
2ನೀನು ದೇಶವನ್ನು ಕಂಪನಗೊಳಿಸಿ ಒಡೆದು ಬಿಟ್ಟಿದ್ದೀ.
ಅದರ ಒಡಕುಗಳನ್ನು ಸರಿಮಾಡು; ಅದು ನಡುಗುತ್ತಿರುವದಲ್ಲಾ.
3ನಿನ್ನ ಜನರನ್ನು ಸಂಕಟಕ್ಕೆ ಗುರಿಪಡಿಸಿದ್ದೀ;
ನೀನು ನಮಗೆ ಭ್ರಮಣಮದ್ಯವನ್ನು ಕುಡಿಸಿದ್ದೀ.
4ನೀನು#60.4 ಅಥವಾ, ನೀನು ನಿನ್ನ ಭಕ್ತರಿಗೆ ಸತ್ಯದ ಪರವಾಗಿ ಎತ್ತುವದಕ್ಕೋಸ್ಕರ ಧ್ವಜವನ್ನು ಕೊಟ್ಟಿದ್ದೀ. ನಿನ್ನ ಭಕ್ತರಿಗೆ ಧ್ವಜವನ್ನು ಕೊಟ್ಟದ್ದು
ಅವರು ಬಿಲ್ಲುಗಾರರಿಗೆ ಹೆದರಿ ಓಡುವದಕ್ಕೋ? ಸೆಲಾ.
5ನಿನ್ನ ಪ್ರಿಯರಾದ ನಮ್ಮ ಮೊರೆಯನ್ನು ಲಾಲಿಸಿ ರಕ್ಷಿಸು.
ನಿನ್ನ ಭುಜಬಲದಿಂದ ನಮ್ಮನ್ನು ಜಯಗೊಳಿಸು.
6ದೇವರು ತನ್ನ ಪವಿತ್ರತ್ವವನ್ನು#60.6 ಅಥವಾ: ಪರಿಶುದ್ಧಸ್ಥಳದಲ್ಲಿ. ಕೀರ್ತ. 89.35; ಆಮೋ. 4.2. ಸಾಕ್ಷಿಮಾಡಿ ನುಡಿದಿದ್ದಾನೆ.
ಜಯಘೋಷಮಾಡುವೆನು; ಶೆಖೆಮ್ ಪ್ರದೇಶವನ್ನು ಹಂಚುವೆನು.
ಸುಖೋತ್ ಬೈಲನ್ನು ಅಳೆದುಕೊಡುವೆನು.
7ಗಿಲ್ಯಾದ್ ಸೀಮೆಯೂ ಮನಸ್ಸೆಯ ದೇಶವೂ ನನ್ನವು;
ಎಫ್ರಾಯೀಮ್ ಗೋತ್ರವು ನನಗೆ ಶಿರಸ್ತ್ರಾಣವು.
ನನ್ನ ರಾಜದಂಡವು ಯೆಹೂದಕುಲವೇ.
8ಮೋವಾಬ್ ಪ್ರದೇಶವು ನನ್ನ ಸ್ನಾನಪಾತ್ರೆಯು;
ಎದೋಮ್ ಸೀಮೆಯು ನನ್ನ ಕೆರಗಳನ್ನು ಬಿಡುವ ಸ್ಥಳ.
ಫಿಲಿಷ್ಟಿಯರು ನನ್ನ ವಿಷಯವಾಗಿ ಕೂಗಿಕೊಳ್ಳಲಿ.
9ಕೋಟೆಕೊತ್ತಲುಗಳುಳ್ಳ ನಗರಕ್ಕೆ ನನ್ನನ್ನು ಕರೆದುಕೊಂಡು ಹೋಗುವವರು ಯಾರು?
ಎದೋಮ್ ಪ್ರಾಂತದೊಳಗೆ ನನ್ನನ್ನು ಸೇರಿಸುವವರು ಯಾರು?
10ದೇವರೇ, ನೀನು ನಮ್ಮ ಸೈನ್ಯಗಳ ಸಂಗಡ ಬರಲಿಲ್ಲವಲ್ಲಾ!
ದೇವರೇ, ನಮ್ಮನ್ನು ಕೈಬಿಟ್ಟಿಯಾ?
11ನಮಗೆ ಕೈಕೊಟ್ಟು ಶತ್ರುಬಾಧೆಯಿಂದ ಪಾರುಮಾಡು;
ಮನುಷ್ಯರ ಸಹಾಯವು ವ್ಯರ್ಥ.
12ದೇವರಿಂದ ಶೂರಕೃತ್ಯಗಳನ್ನು ನಡಿಸುವೆವು;
ನಮ್ಮ ವೈರಿಗಳನ್ನು ತುಳಿದುಬಿಡುವವನು ಆತನೇ.

Highlight

Share

Copy

None

Want to have your highlights saved across all your devices? Sign up or sign in

Videos for ಕೀರ್ತನೆಗಳು 60