YouVersion Logo
Search Icon

ಆದಿಕಾಂಡ 26

26
ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನಗಳನ್ನು ಇಸಾಕನಿಗೂ ಮಾಡಿದ್ದು
1ಅಬ್ರಹಾಮನ ಕಾಲದಲ್ಲಿ ಬಂದ ಮೊದಲನೆಯ ಬರವಲ್ಲದೆ ಇನ್ನೂ ಒಂದು ಬರವು ಕಾನಾನ್‍ದೇಶಕ್ಕೆ ಬಂತು. ಆಗ ಇಸಾಕನು ಫಿಲಿಷ್ಟಿಯರ ಅರಸನಾದ ಅಬೀಮೆಲೆಕನ ಬಳಿಗೆ ಗೆರಾರಿಗೆ ಹೋದನು. 2ಅಲ್ಲಿ ಯೆಹೋವನು ಅವನಿಗೆ ದರ್ಶನಕೊಟ್ಟು - ನೀನು ಐಗುಪ್ತದೇಶಕ್ಕೆ ಇಳಿದುಹೋಗಬೇಡ; ನಾನು ಹೇಳುವ ದೇಶದಲ್ಲಿ ನೀನು ವಾಸಮಾಡಬೇಕು. 3ನೀನು ಈ ದೇಶದಲ್ಲಿ ಪ್ರವಾಸಿಯಾಗಿರು; ನಾನು ನಿನ್ನ ಬಳಿಯಲ್ಲಿದ್ದು ನಿನ್ನನ್ನು ಅಭಿವೃದ್ಧಿಪಡಿಸಿ ನಿನಗೂ ನಿನ್ನ ಸಂತತಿಯವರಿಗೂ ಈ ಪ್ರದೇಶಗಳನ್ನೆಲ್ಲಾ ಕೊಡುವೆನು. 4ನಿನ್ನ ತಂದೆಯಾದ ಅಬ್ರಹಾಮನು ನನ್ನ ಮಾತನ್ನು ಕೇಳಿ ನಾನು ಹೇಳಿದಂತೆ ಮಾಡಿ ನನ್ನ ಆಜ್ಞಾನೇಮವಿಧಿಗಳನ್ನು ಕೈಕೊಂಡು ನಡೆದದರಿಂದ ನಾನು ಅವನಿಗೆ ಮಾಡಿದ ಪ್ರಮಾಣವನ್ನು ನೆರವೇರಿಸಿ 5ನಿನ್ನ ಸಂತತಿಯವರನ್ನು ಆಕಾಶದಲ್ಲಿರುವ ನಕ್ಷತ್ರಗಳಷ್ಟಾಗಿ ಮಾಡಿ ಅವರಿಗೆ ಈ ಪ್ರದೇಶಗಳನ್ನೆಲ್ಲಾ ಕೊಡುವೆನು. ಭೂವಿುಯ#26.5 ಅಥವಾ: ಎಲ್ಲಾ ಜನಾಂಗಗಳೂ ನಿನ್ನ ಸಂತತಿಗಿರುವಂಥ ಆಶೀರ್ವಾದವೇ ತಮಗೂ ಆಗಬೇಕೆಂದು ಕೋರುವವು; ಆದಿ. 12.3 ನೋಡಿರಿ. ಎಲ್ಲಾ ಜನಾಂಗಗಳಿಗೂ ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವದು ಅಂದನು.
ಇಸಾಕನು ಗೆರಾರಿನಲ್ಲಿ ತನ್ನ ಹೆಂಡತಿಯನ್ನು ತಂಗಿಯೆಂದು ಹೇಳಿದ್ದು
6,7ಇಸಾಕನು ಗೆರಾರಿನಲ್ಲಿ ವಾಸವಾಗಿದ್ದಾಗ ಆ ಸ್ಥಳದ ಜನರು ಅವನ ಹೆಂಡತಿಯನ್ನು ನೋಡಿ ಆಕೆಯ ವಿಷಯದಲ್ಲಿ ವಿಚಾರಿಸಿದಾಗ ಅವನು - ರೆಬೆಕ್ಕಳು ಸುಂದರಿಯಾಗಿರುವದರಿಂದ ಈ ಸ್ಥಳದ ಜನರು ಈಕೆಯ ನಿವಿುತ್ತ ನನ್ನನ್ನು ಕೊಂದಾರು ಅಂದುಕೊಂಡು ಆಕೆಯನ್ನು ತನ್ನ ಹೆಂಡತಿ ಎಂದು ಹೇಳುವದಕ್ಕೆ ಭಯಪಟ್ಟು ತಂಗಿಯಾಗಬೇಕು ಎಂದು ಹೇಳಿದನು. 8ಅವನು ಆ ಸ್ಥಳದಲ್ಲಿ ಬಹಳ ದಿವಸ ಇದ್ದ ಮೇಲೆ ಒಂದು ದಿನ ಫಿಲಿಷ್ಟಿಯರ ಅರಸನಾದ ಅಬೀಮೆಲೆಕನು ಕಿಟಕಿಯಿಂದ ನೋಡಿದಾಗ ಇಸಾಕನು ತನ್ನ ಹೆಂಡತಿಯಾದ ರೆಬೆಕ್ಕಳ ಸಂಗಡ ಸರಸವಾಡುವದನ್ನು ಕಂಡನು. 9ಆಗ ಅವನು ಇಸಾಕನನ್ನು ಕರೆಸಿ - ನಿಶ್ಚಯವಾಗಿ ಈಕೆಯು ನಿನ್ನ ಹೆಂಡತಿಯಲ್ಲವೇ, ತಂಗಿ ಅಂತ ಯಾಕೆ ಹೇಳಿದಿ ಎಂದು ಕೇಳಲು ಇಸಾಕನು - ಜನರು ಈಕೆಯ ನಿವಿುತ್ತ ನನ್ನನ್ನು ಕೊಂದಾರೆಂದು ಹಾಗೆ ಹೇಳಿದೆನು ಅಂದನು. 10ಅದಕ್ಕೆ ಅಬೀಮೆಲೆಕನು - ನೀನು ನಮಗೆ ಹೀಗೆ ಯಾಕೆ ಮಾಡಿದಿ? ಜನರಲ್ಲಿ ಒಬ್ಬನು ನಿನ್ನ ಹೆಂಡತಿಯೊಡನೆ ಕೂಡುವದಕ್ಕೆ ಆಸ್ಪದವಾಗಿತ್ತು. ನಿನ್ನ ಮೂಲಕ ನಮಗೆ ದೋಷ ಪ್ರಾಪ್ತವಾಗುತ್ತಿತ್ತಲ್ಲಾ ಎಂದು ಹೇಳಿ ತನ್ನ ಪ್ರಜೆಗಳಿಗೆ - 11ಈ ಮನುಷ್ಯನಿಗಾಗಲಿ ಇವನ ಹೆಂಡತಿಗಾಗಲಿ ಕೇಡುಮಾಡುವವನಿಗೆ ತಪ್ಪದೆ ಮರಣದಂಡನೆಯಾಗುವದು ಎಂದು ಆಜ್ಞೆಮಾಡಿದನು.
ಫಿಲಿಷ್ಟಿಯರು ಹೊಟ್ಟೆಕಿಚ್ಚುಪಟ್ಟು ಇಸಾಕನನ್ನು ತಮ್ಮ ದೇಶದಿಂದ ಹೊರಡಿಸಿದ್ದು
12ಇಸಾಕನು ಆ ದೇಶದಲ್ಲಿ ಬೀಜವನ್ನು ಬಿತ್ತಿ ಅದೇ ವರುಷದಲ್ಲಿ ನೂರರಷ್ಟು ಬೆಳೆಯನ್ನು ಹೊಂದಿದನು; ಯೆಹೋವನು ಅವನನ್ನು ಅಭಿವೃದ್ಧಿಪಡಿಸಿದನು; 13ಅವನ ಐಶ್ವರ್ಯವು ದಿನೇ ದಿನೇ ಹೆಚ್ಚಿದ್ದರಿಂದ ಬಹು ಧನವಂತನಾದನು; 14ಅವನಿಗೆ ದನಕುರಿಗಳ ಸಂಪತ್ತೂ ಅನೇಕ ಸೇವಕಜನವೂ ಇದ್ದವು. ಇದನ್ನು ನೋಡಿ ಫಿಲಿಷ್ಟಿಯರು ಹೊಟ್ಟೆಕಿಚ್ಚುಪಟ್ಟರು. 15(ಅವನ ತಂದೆಯಾದ ಅಬ್ರಹಾಮನ ಸೇವಕರು ಅಬ್ರಹಾಮನ ಕಾಲದಲ್ಲೇ ತೋಡಿದ್ದ ಬಾವಿಗಳನ್ನು ಫಿಲಿಷ್ಟಿಯರು ಮಣ್ಣು ಹಾಕಿ ಮುಚ್ಚಿದ್ದರು.) 16ಹೀಗಿರಲಾಗಿ ಅಬೀಮೆಲೆಕನು ಇಸಾಕನಿಗೆ - ನೀನು ನಮಗಿಂತ ಬಹು ಬಲಿಷ್ಟನಾಗಿದ್ದೀ; 17ಆದದರಿಂದ ನಮ್ಮ ಬಳಿಯಿಂದ ಹೊರಟುಹೋಗಬೇಕು ಎಂದು ಹೇಳಲು ಇಸಾಕನು ಅಲ್ಲಿಂದ ಹೋಗಿ ಗೆರಾರ್ ತಗ್ಗಿನ ಬೈಲಿನಲ್ಲಿ ಬೀಡಾರ ಮಾಡಿಕೊಂಡು ಅಲ್ಲಿ ವಾಸವಾಗಿದ್ದನು. 18ಅಬ್ರಹಾಮನು ತೋಡಿಸಿದ್ದ ಬಾವಿಗಳನ್ನು ಅವನು ಸತ್ತ ಮೇಲೆ ಫಿಲಿಷ್ಟಿಯರು ಮುಚ್ಚಿಹಾಕಿದ್ದರಿಂದ ಇಸಾಕನು ಅವುಗಳನ್ನು ತಿರಿಗಿ ತೆಗಿಸಿ ತಂದೆ ಇಟ್ಟಿದ್ದ ಹೆಸರುಗಳನ್ನೇ ಇಟ್ಟನು. 19ಇಸಾಕನ ಸೇವಕರು ತಗ್ಗಿನಲ್ಲಿ ಅಗೆಯುವಾಗ ಅವರಿಗೆ ಸೆಲೆ ನೀರಿನ ಬಾವಿಯು ಸಿಕ್ಕಿತು. 20ಗೆರಾರಿನ ದನಕಾಯುವವರು ಬಂದು ಆ ನೀರು ತಮ್ಮದು ಎಂದು ಹೇಳಿ ಇಸಾಕನ ದನಕಾಯುವವರ ಸಂಗಡ ಜಗಳವಾಡಿದ್ದರಿಂದ ಇಸಾಕನು ಆ ಬಾವಿಗೆ ಏಸೆಕ್#26.20 ಏಸೆಕ್ ಅಂದರೆ, ಜಗಳ. ಎಂದು ಹೆಸರಿಟ್ಟನು. 21ತರುವಾಯ ಅವನ ಜನರು ಬೇರೊಂದು ಬಾವಿಯನ್ನು ತೋಡಿದಾಗ ಆ ದೇಶದವರು ಅದಕ್ಕಾಗಿಯೂ ಜಗಳವಾಡಿದ್ದರಿಂದ ಅವನು ಅದಕ್ಕೆ ಸಿಟ್ನಾ#26.21 ಸಿಟ್ನಾ ಅಂದರೆ, ದ್ವೇಷ. ಎಂದು ಹೆಸರಿಟ್ಟನು. 22ಅವನು ಅಲ್ಲಿಂದ ಹೊರಟು ಮತ್ತೊಂದು ಬಾವಿಯನ್ನು ಅಗೆಸಿದಾಗ ಅದರ ವಿಷಯದಲ್ಲಿ ಯಾರೂ ಜಗಳವಾಡದೆ ಹೋದದರಿಂದ ಅವನು - ಈಗ ಯೆಹೋವನು ನಮಗೋಸ್ಕರ ಸ್ಥಳ ಮಾಡಿದ್ದಾನಾದದರಿಂದ ಅಭಿವೃದ್ಧಿಯಾಗುವೆವು ಎಂದು ಹೇಳಿ ಅದಕ್ಕೆ ರೆಹೋಬೋತ್#26.22 ರೆಹೋಬೋತ್ ಅಂದರೆ, ವಿಶಾಲ ಸ್ಥಳ. ಎಂದು ಹೆಸರಿಟ್ಟನು.
ಇಸಾಕನು ಬೇರ್ಷೆಬದಲ್ಲಿ ತಿರಿಗಿ ದೇವರಿಂದ ವಾಗ್ದಾನವನ್ನು ಹೊಂದಿದ್ದು; ಅಬೀಮೆಲೆಕನು ಅವನ ಸಂಗಡ ಒಡಂಬಡಿಕೆಯನ್ನು ಮಾಡಿಕೊಂಡದ್ದು
23ಇಸಾಕನು ಅಲ್ಲಿಂದ ಹೊರಟು ಗಟ್ಟಾ ಹತ್ತಿ ಬೇರ್ಷೆಬಕ್ಕೆ ಬಂದನು. 24ಆ ರಾತ್ರಿ ಯೆಹೋವನು ಅವನಿಗೆ ಕಾಣಿಸಿಕೊಂಡು - ನಾನು ನಿನ್ನ ತಂದೆಯಾದ ಅಬ್ರಹಾಮನ ದೇವರು; ನೀನು ಭಯಪಡಬೇಡ; ನಾನು ನಿನ್ನ ಬಳಿಯಲ್ಲಿದ್ದೇನೆ; ನನ್ನ ಸೇವಕನಾದ ಅಬ್ರಹಾಮನ ನಿವಿುತ್ತ ನಿನ್ನನ್ನು ಆಶೀರ್ವದಿಸಿ ನಿನ್ನ ಸಂತತಿಯನ್ನು ಹೆಚ್ಚಿಸುವೆನು ಎಂದು ಹೇಳಲಾಗಿ 25ಇಸಾಕನು ಯಜ್ಞವೇದಿಯನ್ನು ಕಟ್ಟಿಸಿ ಯೆಹೋವನ ಹೆಸರನ್ನು ಹೇಳಿಕೊಂಡು ಆರಾಧಿಸಿ ಅಲ್ಲಿ ತನ್ನ ಗುಡಾರವನ್ನು ಹಾಕಿಸಿಕೊಂಡನು.
26ಅಲ್ಲಿಯೂ ಅವನ ಸೇವಕರು ಬಾವಿಯನ್ನು ಅಗೆದರು. ಆ ಸಮಯದಲ್ಲಿ ಅಬೀಮೆಲೆಕನು ತನ್ನ ಮಂತ್ರಿಯಾದ ಅಹುಜ್ಜತನನ್ನೂ ಸೇನಾಪತಿಯಾದ ಫೀಕೋಲನನ್ನೂ ಸಂಗಡ ಕರೆದುಕೊಂಡು ಗೆರಾರಿನಿಂದ ಇಸಾಕನ ಬಳಿಗೆ ಬರಲು ಇಸಾಕನು - 27ನೀವು ನನ್ನನ್ನು ದ್ವೇಷಿಸಿ ನಿಮ್ಮ ಬಳಿಯಿಂದ ಕಳುಹಿಸಿಬಿಟ್ಟಿರಲ್ಲಾ; ಈಗ ನನ್ನ ಬಳಿಗೆ ಯಾಕೆ ಬಂದಿರಿ ಎಂದು ಅವರನ್ನು ಕೇಳಿದ್ದಕ್ಕೆ ಅವರು - 28ಯೆಹೋವನು ನಿನ್ನ ಸಂಗಡ ಇದ್ದಾನೆ ಎಂದು ನಮಗೆ ಸ್ಪಷ್ಟವಾಗಿ ಕಂಡುಬಂದದರಿಂದ ನೀನೂ ನಾವೂ ಒಬ್ಬರಿಗೊಬ್ಬರು ಪ್ರಮಾಣಪೂರ್ವಕವಾಗಿ ಒಡಂಬಡಿಕೆ ಮಾಡಿಕೊಳ್ಳೋಣವೆಂದು ಆಲೋಚಿಸಿದೆವು. 29ನಾವು ನಿನಗೆ ಯಾವ ಕೇಡನ್ನೂ ಮಾಡದೆ ಹಿತವನ್ನೇ ಮಾಡಿ ನಿನ್ನನ್ನು ಸಮಾಧಾನದೊಡನೆ ಕಳುಹಿಸಿದೆವಲ್ಲಾ; ಅದರಂತೆ ನೀನು ನಮಗೆ ಕೇಡನ್ನು ಮಾಡುವದಿಲ್ಲವೆಂಬದಾಗಿ ಪ್ರಮಾಣಮಾಡಬೇಕು. ನೀನು ಈಗ ಯೆಹೋವನ ದಯೆಯನ್ನು ಹೊಂದಿದವನಾಗಿದ್ದೀಯಷ್ಟೆ ಎಂದು ಹೇಳಿದರು. 30ಆಗ ಇಸಾಕನು ಅವರಿಗೆ ಔತಣವನ್ನು ಮಾಡಿಸಿದನು; ಅವರೆಲ್ಲರೂ ಭೋಜನೋಪಚಾರಗಳನ್ನು ತೀರಿಸಿಕೊಂಡು 31ಬೆಳಿಗ್ಗೆ ಎದ್ದು ಒಬ್ಬರಿಗೊಬ್ಬರು ಪ್ರಮಾಣಮಾಡಿಕೊಂಡರು. ಇಸಾಕನು ಅವರನ್ನು ಸಾಗಕಳುಹಿಸಲು ಅವರು ಸಮಾಧಾನದೊಡನೆ ಹೊರಟುಹೋದರು.
32ಅದೇ ದಿನದಲ್ಲಿ ಇಸಾಕನ ಸೇವಕರು ಬಂದು - ನಮಗೆ ನೀರು ಸಿಕ್ಕಿತು ಎಂದು ಹೇಳಿ ತಾವು ತೋಡಿದ್ದ ಬಾವಿಯ ಸಂಗತಿಯನ್ನು ತಿಳಿಸಲು 33ಅವನು ಆ ಬಾವಿಗೆ ಷಿಬಾ ಎಂದು ಹೆಸರಿಟ್ಟನು. ಆದದರಿಂದ ಅಲ್ಲಿರುವ ಊರಿಗೆ ಇಂದಿನವರೆಗೂ ಬೇರ್ಷೆಬ ಎಂದು ಹೆಸರಾಯಿತು.
ಏಸಾವನು ಹಿತ್ತಿಯರಲ್ಲಿ ಹೆಣ್ಣು ತೆಗೆದುಕೊಂಡದ್ದು
34ಏಸಾವನು ನಾಲ್ವತ್ತು ವರುಷದವನಾದಾಗ ಹಿತ್ತಿಯನಾದ ಬೇರಿಯ ಮಗಳಾದ ಯೆಹೂದೀತಳನ್ನೂ ಹಿತ್ತಿಯನಾದ ಏಲೋನನ ಮಗಳಾದ ಬಾಸೆಮತಳನ್ನೂ ಮದುವೆಮಾಡಿಕೊಂಡನು. 35ಇವರ ದೆಸೆಯಿಂದ ಇಸಾಕನಿಗೂ ರೆಬೆಕ್ಕಳಿಗೂ ಮನೋವ್ಯಥೆಯುಂಟಾಯಿತು.

Highlight

Share

Copy

None

Want to have your highlights saved across all your devices? Sign up or sign in