BibleProject | ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ / ಭಾಗ 1 - ಲೂಕನುSample

"ಮರಿಯಳು ತುಂಬು ಗರ್ಭಿಣಿಯಾಗಿದ್ದಾಗ, ಕೈಸರನಾದ ಔಗುಸ್ತನು ಹೊರಡಿಸಿದ ಆಜ್ಞೆಗೆ ಅನುಸಾರವಾಗಿ ಜನಗಣತಿಯಲ್ಲಿ ನೋಂದಾಯಿಸಿಕೊಳ್ಳುವುದಕ್ಕಾಗಿ ಅವಳು ಮತ್ತು ಅವಳಿಗೆ ನಿಶ್ಚಯಿಸಲ್ಪಟ್ಟಿದ್ದ ವರನಾದ ಯೋಸೇಫನು ಬೇತ್ಲೆಹೇಮಿಗೆ ಹೋಗಬೇಕಾಗಿ ಬಂತು. ಅವರು ಅಲ್ಲಿಗೆ ತಲುಪುತ್ತಿದ್ದಂತೆಯೆ ಮರಿಯಳಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಅವರಿಗೆ ಇಳಿದುಕೊಳ್ಳಲು ಕೋಣೆಯು ಸಿಗಲಿಲ್ಲ, ಅವರಿಗೆ ಸಿಕ್ಕಂಥ ಏಕೈಕ ಸ್ಥಳವು ದನಕರುಗಳು ವಾಸಿಸುತ್ತಿದ್ದ ಸ್ಥಳವಾಗಿತ್ತು. ಮರಿಯಳು ಇಸ್ರಾಯೇಲಿನ ಮುಂದಿನ ರಾಜನಿಗೆ ಜನ್ಮ ನೀಡಿ ಆತನನ್ನು ಗೋದಲಿಯಲ್ಲಿ ಮಲಗಿಸಿದಳು.
ಅಲ್ಲಿ ಹತ್ತಿರದಲ್ಲಿ ಕೆಲವು ಕುರುಬರು ತಮ್ಮ ಮಂದೆಗಳನ್ನು ಕಾಯುತ್ತಿದ್ದಾಗ, ಪ್ರಕಾಶಮಾನವಾದ ದೇವದೂತನು ಅವರಿಗೆ ಪ್ರತ್ಯಕ್ಷನಾದನು. ಅದು ನಿಜವಾಗಿಯೂ ಅವರಿಗೆ ತುಂಬಾ ಭಯವನ್ನು ಉಂಟುಮಾಡಿತು. ಆದರೆ ದೇವದೂತನು ಅವರಿಗೆ ರಕ್ಷಕನೊಬ್ಬನು ಹುಟ್ಟಿದ್ದಾನೆ ಆದ್ದರಿಂದ ಸಂತೋಷಿಸಿರಿ ಎಂದು ಹೇಳಿದನು. ಬಟ್ಟೆಯಲ್ಲಿ ಸುತ್ತಿ ಗೋದಲಿಯಲ್ಲಿ ಮಲಗಿರುವ ಮಗುವನ್ನು ಅವರು ಕಾಣುವರು ಎಂದು ಅವರಿಗೆ ಹೇಳಲಾಯಿತು. ತನ್ನ ಸಮಾಧಾನವನ್ನು ಭೂಮಿಗೆ ತಂದ ದೇವರನ್ನು ಸ್ತುತಿಸುವ ಹಾಡನ್ನು ಹಾಡುತ್ತಾ ದೇವದೂತರ ದೊಡ್ಡ ಗುಂಪು ಆ ಸಂಭ್ರಮಾಚರಣೆಯನ್ನು ಪ್ರಾರಂಭಿಸಿತು. ಕುರುಬರು ಒಂದು ನಿಮಿಷವನ್ನೂ ಸಹ ಹಾಳು ಮಾಡದೆ ಮಗುವನ್ನು ಹುಡುಕಲು ಪ್ರಾರಂಭಿಸಿದರು. ದೇವದೂತನು ಹೇಳಿದಂತೆಯೇ ಅವರು ನವಜಾತ ಯೇಸುವನ್ನು ಗೋದಲಿಯಲ್ಲಿ ಕಂಡುಕೊಂಡರು. ಅವರು ಬೆರಗಾದರು. ತಾವು ಅನುಭವಿಸಿದ್ದನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದನ್ನು ನಿಲ್ಲಿಸಲು ಅವರಿಂದಾಗಲಿಲ್ಲ, ಮತ್ತು ಅವರು ತಿಳಿಸಿದ ಸುದ್ದಿಯನ್ನು ಕೇಳಿದ ಪ್ರತಿಯೊಬ್ಬರೂ ದಿಗ್ಭ್ರಮೆಗೊಂಡರು.
ಈ ರೀತಿಯಾಗಿ ದನಕರುಗಳ ಕೊಟ್ಟಿಗೆಯಲ್ಲಿ, ಒಬ್ಬ ಕನ್ನಿಕೆಯಲ್ಲಿ ಹುಟ್ಟಿ, ಹೆಸರಿಲ್ಲದ ಕುರುಬರು ಆಚರಿಸಿದ ಹಬ್ಬದ ಸಂಭ್ರಮದಲ್ಲಿ ದೇವರು ಬರುತ್ತಾನೆ ಎಂದು ನೀವು ನಿರೀಕ್ಷಿಸುವುದಿಲ್ಲ. ಲೂಕನ ಕಥೆಯಲ್ಲಿ ಎಲ್ಲವೂ ವ್ಯತಿರಿಕ್ತವಾಗಿ ಸಾಗುತ್ತಿದೆ, ಅದುವೇ ಅದರ ಪ್ರಮುಖ ಅಂಶವಾಗಿದೆ. ದೇವರ ರಾಜ್ಯವು ವಿಧವೆಯರ, ಬಡವರ ಮಧ್ಯದಲ್ಲಿ ಈ ಕೊಳಕಾದ ಸ್ಥಳಗಳಲ್ಲಿ ಮೊದಲು ಹೇಗೆ ಬಂತು ಎಂಬುದನ್ನು ಅವನು ತೋರಿಸುತ್ತಿದ್ದಾನೆ, ಏಕೆಂದರೆ ಯೇಸು ನಮ್ಮ ಲೋಕದ ವ್ಯವಸ್ಥೆಯನ್ನು ತಲೆಕೆಳಗಾಗಿ ಮಾಡುವ ಮೂಲಕ ರಕ್ಷಣೆಯನ್ನು ಉಂಟುಮಾಡುವನು.
ಓದಿರಿ, ಯೋಚಿಸಿರಿ ಮತ್ತು ಪ್ರತಿಕ್ರಿಯಿಸಿರಿ:
•ದೇವದೂತರು ತಿಳಿಸಿದ ಅಚ್ಚರಿ ಸುದ್ದಿಗೆ ಕುರುಬರು ಹೇಗೆ ಪ್ರತಿಕ್ರಿಯಿಸಿದರು? ನೀವು ಅವರ ಸ್ಥಾನದಲ್ಲಿ ಇದ್ದಿದ್ದರೆ ನಿಮಗೆ ಹೇಗನಿಸುತ್ತಿತ್ತು? ಗೋದಲಿಯಲ್ಲಿ ಮಲಗಿರುವ ಮಗುವಾಗಿ ದೇವರ ಸಮಾಧಾನವು ಭೂಮಿಗೆ ಬರುತ್ತಿದೆ ಎಂಬ ಸಾರೋಣಕ್ಕೆ ನಿಮ್ಮ ಪ್ರತಿಕ್ರಿಯೆ ಏನು?
•ಶಿಶುವಾದ ಯೇಸು ದೇವಾಲಯಕ್ಕೆ ಬಂದಾಗ ಸಿಮೆಯೋನನು ಮತ್ತು ಅನ್ನಳು ಹೇಗೆ ಪ್ರತಿಕ್ರಿಯಿಸಿದರು? ಆತನು ಇಸ್ರಾಯೇಲಿನ ರಾಜನೆಂದು ಅವರು ಹೇಗೆ ತಿಳಿದುಕೊಂಡರು?
•ಒಬ್ಬ ರಾಜಾದಿ ರಾಜನು ಹೇಗೆ ಬರಬಹುದು ಎಂದು ನೀವು ನಿರೀಕ್ಷಿಸುವಿರಿ? ಯೇಸುವಿನ ಆಗಮನದ ಸಂದರ್ಭಗಳು ದೇವರ ರಾಜ್ಯದ ಸ್ವರೂಪದ ಬಗ್ಗೆ ಏನು ಬಹಿರಂಗಪಡಿಸುತ್ತವೆ?
•ನಿಮ್ಮ ಓದುವಿಕೆಯೂ ಪ್ರತಿಫಲನವೂ ಪ್ರಾರ್ಥಿಸುವಂತೆ ನಿಮ್ಮನ್ನು ಪ್ರೇರೇಪಿಸಲಿ. ಯೇಸುವಿನ ರೂಪದಲ್ಲಿ ದೇವರು ಬಂದಿದ್ದಕ್ಕಾಗಿ ಆತನಿಗೆ ಕೃಜ್ಞತೆಯನ್ನು ಸಲ್ಲಿಸಿರಿ. ಆತನ ಸಂದೇಶವನ್ನು ಹೇಗೆ ಒಪ್ಪಿಕೊಳ್ಳುತ್ತೀರಿ ಎಂಬುದರ ಕುರಿತು ದೇವರೊಡನೆ ಮಾತನಾಡಿರಿ, ನೀವು ಯಾವ ವಿಷಯದಲ್ಲಿ ನಂಬಲು ಕಷ್ಟಪಡುತ್ತಿದ್ದೀರಿ ಮತ್ತು ಇಂದು ನಿಮಗೆ ಬೇಕಾದುದ್ದು ಏನು ಎಂಬುದನು ಆತನಿಗೆ ತಿಳಿಸಿರಿ."
Scripture
About this Plan

ಲೂಕನ ಸುವಾರ್ತೆಯನ್ನು 20 ದಿನಗಳಲ್ಲಿ ಓದುವಂತೆ ವ್ಯಕ್ತಿಗಳನ್ನು, ಸಣ್ಣ ಗುಂಪುಗಳನ್ನು ಮತ್ತು ಕುಟುಂಬಗಳನ್ನು ಪ್ರೇರೇಪಿಸಲು ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ ಭಾಗ 1 ಅನ್ನು ಬೈಬಲ್ ಪ್ರಾಜೆಕ್ಟ್ ರಚಿಸಿದೆ. ಅದರಲ್ಲಿ ಪಾಲ್ಗೊಳ್ಳುವವರು ಯೇಸುವನ್ನು ಕಂಡುಕೊಳ್ಳುವುದಕ್ಕೆ ಮತ್ತು ಲೂಕನ ಅತ್ಯುತ್ತವಾದ ಸಾಹಿತ್ಯ ರಚನೆಯನ್ನೂ ವಿಚಾರಧಾರೆಯನ್ನೂ ತಿಳಿದುಕೊಳ್ಳುವುದಕ್ಕೆ ಸಹಾಯ ಮಾಡಲು ಈ ಯೋಜನೆಯಲ್ಲಿ ಅನಿಮೇಟೆಡ್ ವೀಡಿಯೊಗಳು, ಗಹನವಾದ ಜ್ಞಾನವುಳ್ಳ ಸಾರಾಂಶಗಳು ಮತ್ತು ಚಿಂತನಾತ್ಮಕ ಪ್ರಶ್ನೆಗಳು ಇವೆ.
More