BibleProject | ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ / ಭಾಗ 1 - ಲೂಕನುSample

"ಯೇಸು ತನ್ನ ಎಲ್ಲಾ ಶಿಷ್ಯರ ಮಧ್ಯದಿಂದ ಹನ್ನೆರಡು ಮಂದಿಯನ್ನು ಆರಿಸಿಕೊಂಡು, ತನ್ನ ಸೇವೆಯಲ್ಲಿ ಸಹಾಯ ಮಾಡುವುದಕ್ಕಾಗಿ ಅವರನ್ನು ನಾಯಕರನ್ನಾಗಿ ನೇಮಿಸಿದನು. ಹೊಸ ಇಸ್ರಾಯೇಲರನ್ನು ರೂಪಿಸುವ ಮೂಲಕ ಇಸ್ರಾಯೇಲಿನ ಹನ್ನೆರಡು ಕುಲಗಳನ್ನು ವಿಮೋಚಿಸುತ್ತೇನೆ ಎಂದು ತೋರಿಸಲು ಯೇಸು ಉದ್ದೇಶಪೂರ್ವಕವಾಗಿ ಹನ್ನೆರಡು ಮಂದಿಯನ್ನು ಆರಿಸಿಕೊಂಡನು. ಆದರೆ ಮೊದಲ ನೋಟದಲ್ಲಿ, ಈ ಹೊಸ ಇಸ್ರಾಯೇಲರು ನೂತನರಾದವರಂತೆ ಕಾಣುತ್ತಿಲ್ಲ. ಯೇಸು ಅಸ್ತವ್ಯಸ್ತವಾದ ಅನೇಕ ವಿಧವಾದ ಜನರಿರುವ ಗುಂಪನ್ನು ಆರಿಸಿಕೊಂಡನು, ಅದರಲ್ಲಿ ವಿದ್ಯಾವಂತರೂ ಅವಿದ್ಯಾವಂತರೂ, ಶ್ರೀಮಂತರೂ ಬಡವರೂ ಇದ್ದಾರೆ. ರೋಮನ್ನರಿಗಾಗಿ ಕೆಲಸ ಮಾಡಿದ್ದ ಮಾಜಿ ತೆರಿಗೆ ವಸೂಲಿಗಾರನು, ರೋಮನ್ನರಿಗೆ ವಿರುದ್ಧವಾಗಿ ತಿರುಗಿಬಿದ್ದು ಹೋರಾಟ ಮಾಡಿದ ಮಾಜಿ (ಮತಾವಲಂಬಿಯನ್ನು) ಪ್ರತಿಭಟನಕಾರನನ್ನೂ ಸಹ ಯೇಸು ಆರಿಸಿಕೊಂಡನು! ಹೊರಗಿನವರ ಮತ್ತು ಬಡವರ ಮೇಲಿನ ದೇವರ ಪ್ರೀತಿಯು ಒಟ್ಟುಗೂಡಲು ಸಾಧ್ಯವಿಲ್ಲದಂಥ ಜನರನ್ನು ಒಟ್ಟುಗೂಡಿಸಿತು.ಈ ವ್ಯಕ್ತಿಗಳು ಹೊಂದಿಕೊಂಡು ಹೋಗುವುದಕ್ಕೆ ಆಗುವುದೇ ಇಲ್ಲ, ಆದರೆ ಬದ್ಧ ಶತ್ರುಗಳಾಗಿದ್ದವರು ಯೇಸುವನ್ನು ಹಿಂಬಾಲಿಸಲೂ ಹೊಸ ಲೋಕದ ಕ್ರಮದಲ್ಲಿ ಸೇರಲೂ ಎಲ್ಲವನ್ನೂ ಬಿಟ್ಟು ಬಂದರು, ಅದರಲ್ಲಿ ಒಬ್ಬರ ಸಂಗಡಲೊಬ್ಬರು ಸಮಾಧಾನವುಳ್ಳರಾಗಿ ಒಗ್ಗಟ್ಟಿನಿಂದ ಜೀವಿಸಬೇಕೆಂದು ಆತನು ಅವರನ್ನು ಕರೆದನು.
ಲೋಕದ ವ್ಯವಸ್ಥೆಯನ್ನು ತಲೆಕೆಳಗಾಗಿ ಮಾಡುವ ರಾಜ್ಯದ ಕುರಿತು ಯೇಸು ಮಾಡಿದ ಬೋಧನೆಗಳಲ್ಲಿ ಈ ಹೊಸ ಲೋಕದ ಕ್ರಮವು ಏನಾಗಿದೆ ಎಂಬುದನ್ನು ಲೂಕನು ನಮಗೆ ತೋರಿಸುತ್ತಿದ್ದಾನೆ. ಯೇಸು ಆ ಬೋಧನೆಗಳಲ್ಲಿ, ಬಡವರಾದ ನೀವು ಧನ್ಯರು ಏಕೆಂದರೆ ದೇವರ ರಾಜ್ಯವು ನಿಮ್ಮದೇ ಮತ್ತು ಅಳುವವರಾದ ನೀವು ನಗುವಿರಿ ಎಂದು ಹೇಳಿದನು. ಹೊಸ ಲೋಕದ ಕ್ರಮದಲ್ಲಿ,ಶಿಷ್ಯರು ತಮ್ಮ ಶತ್ರುಗಳನ್ನು ಪ್ರೀತಿಸಬೇಕು; ತಮ್ಮನ್ನು ಇಷ್ಟಪಡದ ಜನರಿಗೂ ಸಹ ಸೋಜಿಗವೆನಿಸುವಂತೆ ಉಪಕಾರವನ್ನು ಮಾಡಬೇಕು; ಕ್ಷಮಿಸಿ ಕರುಣೆಯನ್ನು ತೋರಿಸಬೇಕು ಎಂಬುದಕ್ಕಾಗಿ ಕರೆಯಲ್ಪಟ್ಟರು. ಇದೊಂದು ವಿಭಿನ್ನವಾದ ಜೀವನದ ರೀತಿಯಾಗಿದೆ,ಯೇಸು ಇದೆಲ್ಲದರ ಬಗ್ಗೆ ಬೋಧಿಸಿದ್ದು ಮಾತ್ರವಲ್ಲ, ಆತನು ತಾನೇ ಮಾದರಿಯಾಗಿದ್ದು ನಡೆಸುವೆನೆಂದು, ತನ್ನ ಪ್ರಾಣವನ್ನುಪರಮ ಯಜ್ಞವಾಗಿ ಸಮರ್ಪಿಸುವ ಮೂಲಕ ತನ್ನ ಶತ್ರುಗಳನ್ನು ಪ್ರೀತಿಸಿದನು.
ಓದಿರಿ, ಯೋಚಿಸಿರಿ ಮತ್ತು ಪ್ರತಿಕ್ರಿಯಿಸಿರಿ:
•ನೀವು ಇಷ್ಟಪಡದಿರುವಂಥ ಜನರೊಂದಿಗೆ ಯೇಸು ನಿಮ್ಮನ್ನು ಆರಿಸಿಕೊಂಡಿದ್ದಾನೆಯೇ? ತಲೆಕೆಳಗಾಗಿ ಮಾಡುವ ರಾಜ್ಯದ ಕುರಿತು ಯೇಸು ಮಾಡಿರುವ ಬೋಧನೆಗಳು (ಲೂಕ 6:20-38) ಆ ಸಂಬಂಧದ ವಿಷಯದಲ್ಲಿ ಯಾ ರೀತಿಯಲ್ಲಿ ಮಾತನಾಡುತ್ತವೆ? ಅವನಿಗೆ/ಅವಳಿಗೆ ಕರುಣೆಯನ್ನೂ ಪ್ರೀತಿಯನ್ನೂ ತೋರಿಸಲು ನೀವು ಇಂದು ತೆಗೆದುಕೊಳ್ಳಬಹುದಾದ ಮಹತ್ವದ ಹೆಜ್ಜೆ ಯಾವುದು?
• ನಿಮ್ಮ ಓದುವಿಕೆಯೂ ಪ್ರತಿಫಲನವೂ ಪ್ರಾರ್ಥಿಸುವಂತೆ ನಿಮ್ಮನ್ನು ಪ್ರೇರೇಪಿಸಲಿ. ಇತರರಿಗೆ ಯೇಸುವಿನ ಕರುಣೆಯು ದೊರಕಲಿ ಎಂದು ನೀವು ಪ್ರಾರ್ಥಿಸುವಾಗ ಆತನ ಉದಾರವಾದ ಕರುಣೆಯನ್ನು ನೀವು ಹೊಂದಿಕೊಳ್ಳಿರಿ. ಈ ವಿಷಯದಲ್ಲಿ ನಿಮಗೆ ಎಲ್ಲಿ ಸಹಾಯ ಬೇಕು ಎಂಬುದರ ಬಗ್ಗೆ ನೀವು ಆತನಿಗೆ ಪ್ರಾಮಾಣಿಕವಾಗಿ ತಿಳಿಸಿರಿ. ಆತನು ನಿಮ್ಮ ಪ್ರಾರ್ಥನೆಯನ್ನು ಕೇಳುತ್ತಿದ್ದಾನೆ."
Scripture
About this Plan

ಲೂಕನ ಸುವಾರ್ತೆಯನ್ನು 20 ದಿನಗಳಲ್ಲಿ ಓದುವಂತೆ ವ್ಯಕ್ತಿಗಳನ್ನು, ಸಣ್ಣ ಗುಂಪುಗಳನ್ನು ಮತ್ತು ಕುಟುಂಬಗಳನ್ನು ಪ್ರೇರೇಪಿಸಲು ತಲೆಕೆಳಗೆ ಮಾಡುವ ವಿಭಿನ್ನ ರಾಜ್ಯ ಭಾಗ 1 ಅನ್ನು ಬೈಬಲ್ ಪ್ರಾಜೆಕ್ಟ್ ರಚಿಸಿದೆ. ಅದರಲ್ಲಿ ಪಾಲ್ಗೊಳ್ಳುವವರು ಯೇಸುವನ್ನು ಕಂಡುಕೊಳ್ಳುವುದಕ್ಕೆ ಮತ್ತು ಲೂಕನ ಅತ್ಯುತ್ತವಾದ ಸಾಹಿತ್ಯ ರಚನೆಯನ್ನೂ ವಿಚಾರಧಾರೆಯನ್ನೂ ತಿಳಿದುಕೊಳ್ಳುವುದಕ್ಕೆ ಸಹಾಯ ಮಾಡಲು ಈ ಯೋಜನೆಯಲ್ಲಿ ಅನಿಮೇಟೆಡ್ ವೀಡಿಯೊಗಳು, ಗಹನವಾದ ಜ್ಞಾನವುಳ್ಳ ಸಾರಾಂಶಗಳು ಮತ್ತು ಚಿಂತನಾತ್ಮಕ ಪ್ರಶ್ನೆಗಳು ಇವೆ.
More