BibleProject | ಲೂಕ ಮತ್ತು ಅಪೊಸ್ತಲರ ಕೃತ್ಯಗಳ ಮೂಲಕ ಪ್ರಯಾಣSample
ನಗರಗಳು ಮತ್ತು ಹಳ್ಳಿಗಳಿಗೆ ಯೇಸು ದೇವರ ರಾಜ್ಯವನ್ನು ಘೋಷಿಸಲು ಪ್ರಾರಂಭಿಸುತ್ತಾರೆ ಎಂದು ಲೂಕನು ಹೇಳುತ್ತಾನೆ. ಆದರೆ ಸಾಮಾನ್ಯ ರಾಜನಂತೆ ರಾಜ ಪಡೆಯೊಂದಿಗೆ ಪ್ರಯಾಣಿಸುವ ಬದಲು, ಯೇಸು ಅವರು ಆರಿಸಿದ ಹನ್ನೆರಡು ಜನರ ಅವ್ಯವಸ್ತ ತಂಡದೊಂದಿದೆ ಮತ್ತು ಅವರು ಗುಣಪಡಿಸಿ ಬಿಡುಗಡೆ ನೀಡಿದ ಕೆಲವು ಮಹಿಳೆಯರೊಂದಿಗೆ ಪ್ರಯಾಣಿಸುವರು. ಮತ್ತು ಯೇಸುವಿನ ಸಹಚರರು ಸವಾರಿಗಾಗಿ ಜೊತೆ ಹೋಗುವವರು ಮಾತ್ರವಲ್ಲ; ಅವರು ಭಾಗವಹಿಸುವವರು. ಯೇಸುವಿನ ಸುವಾರ್ತೆ, ಸ್ವಾತಂತ್ರ್ಯ ಮತ್ತು ಗುಣಪಡಿಸುವಿಕೆಯನ್ನು ಸ್ವೀಕರಿಸಿದವರೇ ಅದನ್ನು ಒಂದು ನಗರದಿಂದ ಮತ್ತೊಂದು ನಗರಕ್ಕೆ ಹಂಚಿಕೊಳ್ಳವ ಅವಕಾಶ ಪಡೆಯುತ್ತಾರೆ.
ಅವರ ಪ್ರವಾಸಗಳು ಅತ್ಯಾತ್ಸಹಿತ ಅನುಭವಗಳಿಂದ ತುಂಬಿವೆ. ಯೇಸು ಸಮುದ್ರದ ಬಿರುಗಾಳಿಯನ್ನು ಮೌನಗೊಳಿಸುತ್ತಾರೆ, ಒಬ್ಬ ವ್ಯಕ್ತಿಯನ್ನು ಸಾವಿರಾರು ದೆವ್ವಗಳಿಂದ ಮುಕ್ತಗೊಳಿಸುತ್ತಾರೆ, ಹನ್ನೆರಡು ವರ್ಷಗಳಿಂದ ಬಳಲುತ್ತಿದ್ದ ಮಹಿಳೆಯನ್ನು ಗುಣಪಡಿಸುತ್ತಾರೆ, ಹನ್ನೆರಡು ವರ್ಷದ ಬಾಲಕಿಯನ್ನು ಮರಣದಿಂದ ಎಬ್ಬಿಸುತ್ತಾರೆ ಮತ್ತು ಒಬ್ಬ ಹುಡುಗನ ಊಟದಿಂದ ಸಾವಿರಾರು ಜನರಿಗೆ ಆಹಾರವನ್ನು ನೀಡುತ್ತಾರೆ - ಎಲ್ಲರೂ ತಿಂದ ನಂತರ, ಅವರು ಹನ್ನೆರಡು ಬುಟ್ಟಿಗಳ ಉಳಿದ ಆಹಾರದೊಂದಿಗೆ ಹೊರಡುತ್ತಾರೆ!
ಇಂದಿನ ಭಾಗವನ್ನು ನೀವು ಓದುತ್ತಿರುವಾಗ, ಲೂಕನು “ಹನ್ನೆರಡು” ಎಂಬ ಪದವನ್ನು ಹಲವಾರು ಬಾರಿ ಹೇಗೆ ಪುನರಾವರ್ತಿಸುತ್ತಾನೆ ಎಂಬುದನ್ನು ಗಮನಿಸಿ. ನೆನಪಿದೆಯೇ, ಯೇಸು ಇಸ್ರೇಲಿನ ಹನ್ನೆರಡು ಗೋತ್ರಗಳನ್ನು ಸುಧಾರಿಸುತ್ತಿದ್ದಾರೆಂದು ತೋರಿಸಲು ಉದ್ದೇಶಪೂರ್ವಕವಾಗಿ ಹನ್ನೆರಡು ಶಿಷ್ಯರನ್ನು ನೇಮಿಸಿದರು. ಲೂಕನು ಈ ಸಂಗತಿಯನ್ನು ಎತ್ತಿತೋರಿಸಲು ಬಯಸುತ್ತಾನೆ, ಆದ್ದರಿಂದ ಅವನು ತನ್ನ ಸುವಾರ್ತೆ ವೃತ್ತಾಂತದಾದ್ಯಂತ “ಹನ್ನೆರಡು” ಎಂಬ ಪದವನ್ನು ಹನ್ನೆರಡು ಬಾರಿ ಪುನರಾವರ್ತಿಸುತ್ತಾನೆ. ಪ್ರತಿ ಬಾರಿಯೂ ಅವನು ಈ ಪದವನ್ನು ಬಳಸುವಾಗ, ಯೇಸು ಇಸ್ರಾಯೇಲಿನ ಹನ್ನೆರಡು ಗೋತ್ರಗಳ ಜನಾಂಗವನ್ನು ಉದ್ಧರಿಸುತ್ತಿದ್ದಾನೆ ಮತ್ತು ಇಸ್ರೇಲ್ ಮೂಲಕ ಇಡೀ ಜಗತ್ತನ್ನು.
ಇಸ್ರೇಲಿನ ಹನ್ನೆರಡು ಗೋತ್ರಗಳ ಜನಾಂಗದ ಮೂಲಕ ಎಲ್ಲಾ ರಾಷ್ಟ್ರಗಳು ಆಶೀರ್ವದಿಸಲ್ಪಡುತ್ತವೆ ಎಂದು ದೇವರು ವಾಗ್ದಾನ ಮಾಡಿದರು ಮತ್ತು ದೇವರು ಇಸ್ರೇಲನ್ನು ಎಲ್ಲಾ ರಾಷ್ಟ್ರಗಳಿಗೆ ಬೆಳಕಾಗಲು ಕರೆದರು. ಇಸ್ರೇಲ್ ತಮ್ಮ ಕಡೆಯಿಂದ ವಿಫಲರಾದರು, ಆದರೆ ದೇವರು ತನ್ನ ವಾಗ್ದಾನಗಳನ್ನು ಉಳಿಸಿಕೊಳ್ಳಲು ನಿಷ್ಠಾವಂತರಾಗಿರುವರು. ಜಗತ್ತನ್ನು ಆಶೀರ್ವದಿಸುವ ಇಸ್ರಾಯೇಲಿನ ಕರೆಯನ್ನು ಪುನಃಸ್ಥಾಪಿಸಲು ದೇವರ ರಾಜ್ಯವನ್ನು ಘೋಷಿಸಲು ಯೇಸು ಹನ್ನೆರಡು ಹೊಸ ಜನರನ್ನು ಕಳುಹಿಸಿದನು.
About this Plan
ಲ್ಯೂಕ್ ಮತ್ತು ಆ್ಯಕ್ಟ್ಸ್ ಮೂಲಕ ಪ್ರಯಾಣ, ವ್ಯಕ್ತಿಗಳನ್ನು, ಸಣ್ಣ ಗುಂಪುಗಳನ್ನು ಮತ್ತು ಕುಟುಂಬಗಳನ್ನು ಲ್ಯೂಕ್ ಮತ್ತು ಆ್ಯಕ್ಟ್ಸ್ ಪುಸ್ತಕಗಳನ್ನು 40 ದಿನಗಳಲ್ಲಿ ಓದಲು ಪ್ರೇರೇಪಿಸುತ್ತದೆ. ಭಾಗವಹಿಸುವವರು ಯೇಸುವನ್ನು ಎದುರಿಸಲು ಮತ್ತು ಲ್ಯೂಕ್ ಅವರ ಅದ್ಭುತ ಸಾಹಿತ್ಯ ವಿನ್ಯಾಸ ಹಾಗೂ ಚಿಂತನೆಯ ಹರಿವಿನೊಂದಿಗೆ ತೊಡಗಿಸಿಕೊಳ್ಳಲು ಈ ಯೋಜನೆ ಅನಿಮೇಟೆಡ್ ವಿಡಿಯೋ ಮತ್ತು ಒಳನೋಟವುಳ್ಳ ಸಾರಾಂಶವನ್ನು ಒಳಗೊಂಡಿದೆ.
More