BibleProject | ಲೂಕ ಮತ್ತು ಅಪೊಸ್ತಲರ ಕೃತ್ಯಗಳ ಮೂಲಕ ಪ್ರಯಾಣSample
ಲೂಕನು ಈ ಮುಂದಿನ ವಿಭಾಗದಲ್ಲಿ, ಯೇಸು ತನ್ನ ರಾಜ್ಯವು ಈ ಪ್ರಪಂಚದ ಸಂದರ್ಭಗಳನ್ನು ಹೇಗೆ ತಲೆಕೆಳಗಾಗಿ ತಿರುಗಿಸುತ್ತದೆ ಎಂಬುದನ್ನು ವಿವರಿಸುವ ಕಥೆಯನ್ನು ಹೇಳುತ್ತದೆ ಮತ್ತು ಅದು ಹೀಗಿದೆ .
ಅಲಂಕಾರಿಕ ಬಟ್ಟೆಗಳನ್ನು ಧರಿಸಿ ದೊಡ್ಡ ಗೋಡೆ ಹೊಂದಿರುವ ಮನೆಯಲ್ಲಿರುವ ಶ್ರೀಮಂತ ವ್ಯಕ್ತಿ ಒಬ್ಬನಿದ್ದನು. ಮತ್ತು ಈ ಶ್ರೀಮಂತನ ಮನೆಯ ಹೊರಗೆ ಕುಳಿತು ಅವನ ಊಟದ ಮೇಜಿನಿಂದ ಬರುವ ಎಂಜಲಿಗಾಗಿ ಕಾಯುತ್ತಿರುವ, ಬಡತನದ ನೋವಿನಿಂದ ಬಳಲುವ , ಲಜಾರಸ್ ಎಂಬ ವ್ಯಕ್ತಿ ಇರುವನು. ಆದರೆ ಶ್ರೀಮಂತನು ಅವನಿಗೆ ಏನನ್ನೂ ಕೊಡುವುದಿಲ್ಲ, ಮತ್ತು ಅಂತಿಮವಾಗಿ ಅವರಿಬ್ಬರೂ ಸಾಯುತ್ತಾರೆ. ಲಾಜರನನ್ನು ಶಾಶ್ವತ ನೆಮ್ಮದಿಯ ಸ್ಥಳಕ್ಕೆ ಕರೆದೊಯ್ಯಲಾಗುತ್ತದೆ, ಆದರೆ ಶ್ರೀಮಂತ ವ್ಯಕ್ತಿಯು ಎದ್ದು ನೋಡಿದಾಗ ಹಿಂಸೆಯ ಸ್ಥಳದಲ್ಲಿ ಇರುತ್ತಾನೆ. ಹೇಗೋ ಶ್ರೀಮಂತನು ಲಾಜರನನ್ನು ನೋಡಬಹುದು, ಮತ್ತು ಅವನು ನೋಡಿದ ಕೂಡಲೇ, ಅವನನ್ನು ತಣ್ಣಗಾಗಿಸಲು ಲಾಜರನನ್ನು ಅವನಿಗೆ ನೀರಿನ ಹನಿಗಳನ್ನು ಬಡಿಸಲು ಕಳುಹಿಸಬೇಕೆಂದು ವಿನಂತಿಸುತ್ತಾನೆ. ಆದರೆ ಶ್ರೀಮಂತನಿಗೆ ಇದು ಸಂಭವಿಸುವುದಿಲ್ಲ ಎಂದು ಹೇಳಲಾಗುತ್ತದೆ, ಮತ್ತು ಅವನಿಗೆ ಭೂಮಿಯ ಮೇಲಿನ ಜೀವನ, ಲಾಜರಸ್‌ಗೆ ಅವನ ಸಹಾಯದ ಅಗತ್ಯವಿದ್ದಾಗ ಅವನು ಐಷಾರಾಮಿಯಾಗಿ ಹೇಗೆ ವಾಸಿಸುತ್ತಿದ್ದನೆಂದು ನೆನಪಿಸಲಾಗುತ್ತದೆ. ಆದ್ದರಿಂದ ಶ್ರೀಮಂತ ವ್ಯಕ್ತಿ ತನ್ನ ಕುಟುಂಬಕ್ಕೆ ಈ ಸಂಕಟದ ಸ್ಥಳದ ಬಗ್ಗೆ ಎಚ್ಚರಿಕೆ ನೀಡಬಹುದು ಎಂಬುದಕ್ಕಾಗಿ, ಲಾಜರನನ್ನು ಭೂಮಿಯ ಮೇಲಿನ ತನ್ನ ಕುಟುಂಬಕ್ಕೆ ಕಳುಹಿಸಬೇಕೆಂದು ಬೇಡಿಕೊಳ್ಳುತ್ತಾನೆ. ಆದರೆ ಹೀಬ್ರೂ ಪ್ರವಾದಿಗಳ ಬರಹಗಳಲ್ಲಿ ಅವರ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ಎಚ್ಚರಿಕೆಗಳಿವೆ ಎಂದು ಅವನಿಗೆ ತಿಳಿಸಲಾಗುತ್ತದೆ. ಲಾಜರನು ಸತ್ತವರೊಳಗಿಂದ ಎದ್ದರೆ, ಅದು ಖಂಡಿತವಾಗಿಯೂ ಅವನ ಕುಟುಂಬಕ್ಕೆ ಮನವರಿಕೆಯಾಗುತ್ತದೆ ಎಂದು ಶ್ರೀಮಂತ ವ್ಯಕ್ತಿ ವಾದಿಸುತ್ತಾನೆ. ಆದರೆ ಅದು ನಡೆಯುವುದಿಲ್ಲ ಎಂದು ಅವನಿಗೆ ಹೇಳಲಾಗಿದೆ. ಮೋಸಸ್ ಮತ್ತು ಪ್ರವಾದಿಗಳ ಮಾತನ್ನು ಕೇಳಲು ನಿರಾಕರಿಸುವವರು ಯಾರಾದರೂ ಮರಣದಿಂದ ಎದ್ದರೂ ಸಹ ಮನವೊಲಿಸುವುದಿಲ್ಲ.
ಈ ಕಥೆಯನ್ನು ಹೇಳಿದ ನಂತರ, ಇತರರಿಗೆ ನೋವುಂಟುಮಾಡುವವರಿಗೆ ಆಗುತ್ತಿರುವ ಎಲ್ಲ ನೋವುಗಳ ಬಗ್ಗೆ ಯೇಸು ಎಚ್ಚರಿಸುತ್ತಾರೆ. ಈ ನೋವುಗಳನ್ನು ತಪ್ಪಿಸಲು, ಒಬ್ಬರಿಗೊಬ್ಬರು ಗಮನಹರಿಸಲು ಮತ್ತುವಿಫಲವಾಗುವವರನ್ನು ಸರಿಪಡಿಸಲು ಅವರು ಎಲ್ಲರಿಗೂ ಕಲಿಸುತ್ತಾರೆ. ಆ ಕ್ಷಮೆ ಮತ್ತೆ ಮತ್ತೆ ಅಗತ್ಯವಿದ್ದರೂ ಸಹ, ತಿದ್ದುಪಡಿ ಕೇಳುವವರು ಕ್ಷಮಿಸಲಾಗಬೇಕು. ಯೇಸು ಕರುಣೆಯುಳ್ಳವರು. ತಡವಾಗಿ ಬರುವ ಮುನ್ನ ಎಲ್ಲರೂ ಕೇಳಬೇಕೆಂದು ಅವರು ಬಯಸುತ್ತಾರೆ. ಯೇಸುಶ್ರಮಗಳನ್ನು ಹಿಮ್ಮೆಟ್ಟಿಸಲು ಬಂದರು ಆದರೆ ಹೇಗೆ? ಅವರು ಸತ್ಯವನ್ನು ಕಳಿಸುತ್ತಾರೆ ಮತ್ತು ಅದನ್ನು ಸ್ವೀಕರಿಸುವ ಎಲ್ಲರಿಗೂ ತ್ಯಾಗವನ್ನು ಅರ್ಪಿಸುತ್ತಾರೆ. ಅಂತೆಯೇ, ಅವರ ಅನುಯಾಯಿಗಳು ಇತರರಿಗೆ ಕಳಿಸುವರು ಮತ್ತು ಕ್ಷಮೆ ನೀಡುವರು.
ಯೇಸುವಿನ ಶಿಷ್ಯರು ಇದನ್ನೆಲ್ಲ ಕೇಳುತ್ತಾರೆ ಮತ್ತು ಯೇಸುವಿನ ಮಾತುಗಳನ್ನು ಕೈಗೊಳ್ಳಲು ಬೇಕಾದ ದೇವರ ನಂಬಿಕೆ ಅವರಲ್ಲಿ ಇಲ್ಲ ಎಂದು ಗುರುತಿಸುತ್ತಾರೆ, ಆದ್ದರಿಂದ ಅವರು ಹೆಚ್ಚಿನ ವಿಶ್ವಾಸಕ್ಕಾಗಿ ಬೇಡುತ್ತಾರೆ.
Scripture
About this Plan
ಲ್ಯೂಕ್ ಮತ್ತು ಆ್ಯಕ್ಟ್ಸ್ ಮೂಲಕ ಪ್ರಯಾಣ, ವ್ಯಕ್ತಿಗಳನ್ನು, ಸಣ್ಣ ಗುಂಪುಗಳನ್ನು ಮತ್ತು ಕುಟುಂಬಗಳನ್ನು ಲ್ಯೂಕ್ ಮತ್ತು ಆ್ಯಕ್ಟ್ಸ್ ಪುಸ್ತಕಗಳನ್ನು 40 ದಿನಗಳಲ್ಲಿ ಓದಲು ಪ್ರೇರೇಪಿಸುತ್ತದೆ. ಭಾಗವಹಿಸುವವರು ಯೇಸುವನ್ನು ಎದುರಿಸಲು ಮತ್ತು ಲ್ಯೂಕ್ ಅವರ ಅದ್ಭುತ ಸಾಹಿತ್ಯ ವಿನ್ಯಾಸ ಹಾಗೂ ಚಿಂತನೆಯ ಹರಿವಿನೊಂದಿಗೆ ತೊಡಗಿಸಿಕೊಳ್ಳಲು ಈ ಯೋಜನೆ ಅನಿಮೇಟೆಡ್ ವಿಡಿಯೋ ಮತ್ತು ಒಳನೋಟವುಳ್ಳ ಸಾರಾಂಶವನ್ನು ಒಳಗೊಂಡಿದೆ.
More