ದೇವರ ಕಡೆಗೆ ನಿಮ್ಮ ಮಾರ್ಗವನ್ನು ಹುಡುಕುವುದುಮಾದರಿ

Finding Your Way Back To God

DAY 4 OF 5

ಅಂತಿಮವಾಗಿ ದೇವರು ನನ್ನನ್ನು ಆಳವಾಗಿ ಪ್ರೀತಿಸುತ್ತಾರೆ

ತಂದೆಯ ಜೊತೆಗಿನ ನಿಮ್ಮ ನೂತನ ಜೀವನದ ಸುಳಿಯಲ್ಲಿ, ಮುಂದಿನ ಎಚ್ಚರಿಕೆಯು ಒಂದು ಹೆಜ್ಜೆ ಮುಂದೆ ಎಂಬುದಕ್ಕಿಂತಲೂ ಒಂದು ಹೆಜ್ಜೆ ಹಿಂದೆ ಎಂಬ ಭಾವನೆ ಹೆಚ್ಚಾಗಿ ನೀಡುತ್ತದೆ. ದೇವರು ನಿಮಗೆ ಬೇಕಾಗಿರುವ ಮತ್ತು ಅಗತ್ಯವಿರುವ ಒಂದು ಅಂಶವನ್ನು ನೀಡುತ್ತಿದ್ದಾರೆ—ಮನೆಗೆ ಸ್ವಾಗತ. ಆದರೆ ನಿಮ್ಮ ಒಳಗಿರುವ ಒಂದು ವಿಷಯವು ಇದಕ್ಕೆ ಪ್ರತಿರೋಧ ಒಡ್ಡುತ್ತದೆ. ಪರಲೋಕ ತಂದೆಯಿಂದ ಗುಡಾರಕ್ಕೆ ಸ್ವಾಗತ ಪಡೆದುಕೊಂಡ ನಂತರ ಕುಟುಂಬಕ್ಕೆ ಸ್ವಾಗತ ಪಡೆದುಕೊಳ್ಳುವುದು—ಯಾವುದೇ ಪ್ರಶ್ನೆಗಳಿಲ್ಲದೆ—ಬಹಳಷ್ಟು ದೂರ ಮತ್ತು ಬಹಳಷ್ಟು ಕಾಲ ಅಲೆದಾಡಿದ ಯಾರೋ ಒಬ್ಬರಿಗೆ ಇದು ಸಂಪೂರ್ಣವಾಗಿ ನಿಜವಲ್ಲವೆಂದು ಭಾಸವಾಗಬಹುದು.

ನಿಮ್ಮ ಪ್ರಯಾಣದ ಈ ಹಂತವನ್ನು ನಾವು ಪ್ರೀತಿಸುವುದಕ್ಕೆ ಎಚ್ಚರಿಕೆ ಎಂದು ಕರೆಯುತ್ತೇವೆ. ಈ ಹಂತದಲ್ಲಿ ನಾವು, "ಇದು ನನಗೆ ಯೋಗ್ಯವಾದುದಲ್ಲ." ಎಂದು ಹೇಳಿ ಪ್ರಾರಂಭಿಸುತ್ತೇವೆ. ದೇವರ ಸ್ವೀಕಾರವು ನಂಬಲು ಅತ್ಯಂತ ಅಸಾಧ್ಯವಾದ ವಿಷಯ. ಆದರೆ ದೇವರು ಹೇಳುವ ವಿಷಯವು ಮತ್ತು ನಮಗೆ ಯೋಗ್ಯವಿರುವ ವಿಷಯವು ಒಂದಕ್ಕೊಂದು ತದ್ವಿರುದ್ಧ ಇರುವುದರಿಂದಲೇ ಅದು ನಮ್ಮನ್ನು ಕರಗಿಸಿ ಒಂದು ಅದ್ಭುತವಾದ ಅರಿಕೆ ಮಾಡುವಂತೆ ಮಾಡುತ್ತದೆ: "ಅಂತಿಮವಾಗಿ ದೇವರು ನನ್ನನ್ನು ಆಳವಾಗಿ ಪ್ರೀತಿಸುತ್ತಾರೆ."

ನಮ್ಮ ಗುಡಾರಕ್ಕೆ ಹಿಂದಿರುಗುವ ಕಾರ್ಯಾದಲ್ಲಿ ಆತ್ಮೀಕ ಹಗ್ಗ ಜಗ್ಗಾಟ ಜೊತೆಗೂಡಿರುತ್ತದೆ ಎಂದು ನಾವು ಹೇಳುವುದಕ್ಕೆ ಇರುವ ಕಾರಣವನ್ನು ನೀವು ಕಾಣಬಹುದು. ನಮಗೆ ನಮ್ಮ ಬಗ್ಗೆ ಒಂದು ಬಗೆಯ ಅಪರಾಧ ನಿರ್ಣಯ ಇರುತ್ತದೆ, ಮತ್ತು ದೇವರಿಗೆ ಮತ್ತೊಂದಿರುತ್ತದೆ. ನಾವು ನಮ್ಮ ಹಳೆಯ ಜೀವಿತವನ್ನು ಸೋಲಿನಿಂದ ಮತ್ತು ಅವಮಾನದಿಂದ ತುಂಬಿರುವುದನ್ನು ನೋಡುತ್ತೇವೆ, ಮತ್ತು ಆತನು ನಾವು ಯಾರು ಎಂಬುದನ್ನು ಪ್ರೀತಿ ಮತ್ತು ದಯೆಯಿಂದ ನೋಡುತ್ತಾನೆ.

ಅದಕ್ಕಾಗಿಯೇ ಈ ಎಚ್ಚರಿಕೆಯು ಒಂದು ದೊಡ್ಡ ತಿರುವು. ನಮ್ಮಲ್ಲಿ ಯಾರಿಗೂ ಎರಡನೆಯ ಅವಕಾಶದ ಯೋಗ್ಯತೆಯಿಲ್ಲ, ನಮ್ಮಲ್ಲಿ ಯಾರಿಗೂ ಕ್ಷಮಾಪಣೆಯ ಯೋಗ್ಯತೆಯಿಲ್ಲ, ಮತ್ತು ನಿರ್ಬಂಧವಿಲ್ಲದೆ ಪ್ರೀತಿಸಲ್ಪಡುವುದಕ್ಕೆ ಖಂಡಿತವಾಗಿಯೂ ಯೋಗ್ಯತೆಯಿಲ್ಲ ಎಂದು, ಬಹುಶಃ ಮೊದಲನೆಯ ಬಾರಿಗೆ, ನಮಗೆ ಅರಿವಾಗುತ್ತಿದೆ. ಆದರೆ ನಮಗೆ ಯೋಗ್ಯತೆಯಿಲ್ಲ! ನಿಮಗೆ ಯೋಗ್ಯತೆಯಿಲ್ಲ! ನಿಮಗೆ ಯೋಗ್ಯತೆ ಇಲ್ಲದಿದ್ದರೂ, ದೇವರು ನಿಮಗೆ ಹೇಗೋ ನೀಡುತ್ತಾರೆ.

ನೀವು ಸಹ ನಮ್ಮೆಲ್ಲರಂತೆಯೇ ಆಗಿದ್ದರೆ, ನಿಮಗೆ ಲಜ್ಜೆಯ ಧ್ವನಿವಾಹಿನಿಯ ಬಗ್ಗೆ ಪೂರ್ತಿಯಾಗಿ ತಿಳಿದಿದೆ. ಲಜ್ಜೆಯು ಪಿಸುಗುಟ್ಟುತ್ತದೆ, "ನಿನಗೆ ಬೆಲೆಯಿಲ್ಲ" ಮತ್ತು "ನೀನು ಪ್ರೀತಿಸಲ್ಪಡಲು ಸಾಧ್ಯವಿಲ್ಲ." ಲಜ್ಜೆಯು ಕೂಗಿಕೊಳ್ಳುತ್ತದೆ, "ನಿನಗೆ ಎರಡನೆಯ ಅವಕಾಶವಿಲ್ಲ!". ಲಜ್ಜೆಯು ಸ್ವ-ದೂಷಣೆ ತರುತ್ತದೆ, ಮತ್ತು ಕೃಪೆಯನ್ನು ಮೊದಲಾನೆಯ ಬಾರಿಗೆ ಭೇಟಿಯಾದಾಗ, ನಾವು "ನಾನು ಇದಕ್ಕೆ ಯೋಗ್ಯವಾಗಿಲ್ಲ." ಎಂದು ಹೇಳಿಕೊಳ್ಳುವುದನ್ನು ಕಾಣಬಹುದು.

ನಿಮ್ಮ ಹಿಂದಿನ ಜೀವಿತದ ತಪ್ಪುಗಳಿಗೆ ಮತ್ತು ಸೋಲುಗಳಿಗೆ ನಿಮ್ಮ ಬಗ್ಗೆ ವರ್ಣಿಸಲು ಬಿಡಬೇಡಿ. ಅದೇ ಲಜ್ಜೆಯ ಧ್ವನಿ. ನೀವು ಏನು ಮಾಡಿದ್ದೀರಿ ಅಥವಾ ಮಾಡಲಿಲ್ಲ ಎನ್ನುವುದರ ಮೇಲೆ ನಿಮ್ಮ ವ್ಯಕ್ತಿತ್ವ ಬರುವುದಿಲ್ಲ. ನಿಮಗೆ ಏನು ಮಾಡಿದ್ದಾರೆ ಎನ್ನುವುದರ ಮೇಲೆ ನಿಮಗೆ ವ್ಯಕ್ತಿತ್ವ ಬರುವುದಿಲ್ಲ. ದೇವರು ನಿಮಗೆ ಏನೆಂದು ಹೇಳುತ್ತಾರೋ ಅದೇ ನೀವು. ಆತನ ಮಗು.

ನಿಮ್ಮೊಳಗೆ ಆತ್ಮೀಕ ಹಗ್ಗ ಜಗ್ಗಾಟದ ಅನುಭವ ಆಗುತ್ತಿದೆಯೇ? ಹೌದಾದರೆ, ಅದನ್ನು ಹೇಗೆ ವರ್ಣಿಸುತ್ತೀರಿ?

ದೇವರ ವಾಕ್ಯ

ದಿನ 3ದಿನ 5

About this Plan

Finding Your Way Back To God

ಜೀವನದಿಂದ ಹೆಚ್ಚಿನದನ್ನು ನೀವು ಎದುರು ನೋಡುತ್ತಿರುವಿರಾ? ಹೆಚ್ಚಿನದನ್ನು ಬಯಸುವುದು ಎಂದರೆ ನಿಜವಾಗಿಯೂ ದೇವರ ಕಡೆಗೆ ಹಿಂದಿರುಗುವುದು—ದೇವರೊಡಗಿನ ನಿಮ್ಮ ಸಂಬಂಧ ಈಗ ಎಲ್ಲಿಯೇ ಇದ್ದರೂ. ನಾವೆಲ್ಲರೂ ದೇವರ ಕಡೆಗೆ ಹಿಂದಿರುಗುವ ದಾರಿಯಲ್ಲಿ ಮೈಲಿ ಗುರುತುಗಳ ಅನುಭವವನ್ನು—ಅಥವಾ ಎಚ್ಚರಿಕೆಗಳನ್ನು—ಪಡೆದಿರುತ್ತೇವೆ. ಇಲ್ಲಿರುವ ಪ್ರತಿಯೊಂದು ಮೈಲಿ ಗುರುತುಗಳ ಮೂಲಕ ಪ್ರಯಾಣ ನಡೆಸಿರಿ ಹಾಗೂ ನೀವು ಎಲ್ಲಿದ್ದೀರಿ ಮತ್ತು ಎಲ್ಲಿ ಇರಬೇಕು ಎಂದುಕೊಂಡಿದ್ದೀರಿ ಎಂಬುದರ ನಡುವೆ ಇರುವ ಅಂತರವನ್ನು ಚಿಕ್ಕದಾಗಿಸಿ. ನಾವು ದೇವರನ್ನು ಹುಡುಕಲು ಬಯಸುತ್ತೇವೆ, ಆತನು ನಾವು ಇನ್ನೂ ಹೆಚ್ಚಿನದನ್ನು ಹುಡುಕಲಿ ಎಂದು ಬಯಸುತ್ತಾನೆ.

More

Dave Ferguson, Jon Ferguson ಮತ್ತು WaterBrook Multnomah Publishing Group ಅವರಿಗೆ ಈ ಯೋಜನೆ ನೀಡಿದ್ದಕ್ಕೆ ನಮ್ಮ ಕೃತಜ್ಞತೆಯನ್ನು ಅರ್ಪಿಸಲು ಇಷ್ಟ ಪಡುತ್ತೇವೆ. ಹೆಚ್ಚಿನ ಮಾಹಿತಿಗಾಗಿ, ಭೇಟಿ ನೀಡಿ: http://yourwayback.org/