ದೇವರ ಕಡೆಗೆ ನಿಮ್ಮ ಮಾರ್ಗವನ್ನು ಹುಡುಕುವುದುಮಾದರಿ
ನನ್ನಷ್ಟಕ್ಕೆ ಇದನ್ನು ಮಾಡಲು ಸಾಧ್ಯವಿಲ್ಲ
ದೇವರ ಕಡೆಗಿನ ಮಾರ್ಗವನ್ನು ಹುಡುಕುವ ಪ್ರಯಾಣದಲ್ಲಿ ನಾವು ಎಲ್ಲಿಯೇ ಇದ್ದರೂ ಸಹ, ನಮ್ಮೆಲ್ಲರ ಜೀವನದಲ್ಲಿ ಹಿಡಿದುಕೊಂಡೇ ಇರುವ ಕೆಲವು ವಿಷಯಗಳು ಇದ್ದೇ ಇವೆ. ಕೆಲವರಿಗೆ, ಅದೊಂದು ರಹಸ್ಯವಾದ ಚಟುವಟಿಕೆ ಇರಬಹುದು ಅಥವಾ ಯಾರಿಗೂ ತಿಳಿಯದ ಒಂದು ಹವ್ಯಾಸ ಇರಬಹುದು. ಬೇರೆಯವರಿಗೆ, ನಾವು ಏನನ್ನು ಹಿಂಬಾಲಿಸಿ ಓಡುತ್ತಿದ್ದೇವೆ ಎನ್ನುವುದು ಸ್ವಲ್ಪ ಸ್ಪಷ್ಟವಾಗಿಯೇ ಇದೆ.
ನಿಮಗೆ ಆ ವಿಷಯವು ಯಾವುದು? ನಿಮಗೆ ಬಿಡಬೇಕಾಗಿರುವ ವಿಷಯವಾದರೂ ಯಾವುದು? ನೀವು ಹಳೆಯದಾದ ಮತ್ತು ಒಡೆದುಹೋಗಿರುವ ವಿಷಯಗಳನ್ನು ಬಿಡುವವರೆಗು ನಿಮ್ಮ ಜೀವನದಲ್ಲಿ ದೇವರು ಹೊಸ ವಿಷಯವನ್ನು ಹಾಕುವುದು ಅಪರೂಪ.
ಅದಕ್ಕಾಗಿಯೇ ಪಶ್ಚಾತಾಪಕ್ಕಾಗಿ ನೀಡುವ ಎಚ್ಚರಿಕೆಯಿಂದ ಆಚೆಗೆ ಇರುವ ಮುಂದಿನ ಹಂತವೇ ಸಹಾಯ ಮಾಡುವುದಕ್ಕಾಗಿ ಇರುವ ಎಚ್ಚರಿಕೆ. ಈ ಮೂರನೇ ಎಚ್ಚರಿಕೆಯು ನಮ್ಮನ್ನು ದೇವರ ಬಳಿಗೆ ಕರೆದೊಯ್ಯುವ ಒಂದು ಅತಿ ದೊಡ್ಡ ಹೆಜ್ಜೆ ಏಕೆಂದರೆ ನಮ್ಮೊಬ್ಬರಿಂದ ಅವೆಲ್ಲವನ್ನು ಮಾಡಲು ಸಾಧ್ಯವಿಲ್ಲ ಎಂದು ನಮಗೆ ಅರಿವಾಗುತ್ತದೆ. ಮುಂದೆ ಏನಾಗಬಹುದು?
ನಾವು ಕರೆ ಮಾಡುತ್ತೇವೆ. ನಾವು ಸಂಭಾಷಣೆ ನಡೆಸುತ್ತೇವೆ. ನಾವು ಒಂದು ಬೆಂಬಲಿಸುವ ಗುಂಪನ್ನು ಭೇಟಿ ಮಾಡುತ್ತೇವೆ. ದೇವರ ಆಲಯಕ್ಕೆ ತೆರಳಿ ಅಲ್ಲಿ ಹಿಂದಿನ ಆಸನದಲ್ಲಿ ನಾವು ಕುಳಿತಿರುವುದನ್ನು ಕಾಣಬಹುದು. ನಾವು ನಮ್ಮ ಮೊಣಕಾಲಿನ ಮೇಲೆ ನಿಂತು ಕೂಗುತ್ತೇವೆ, "ದೇವರೇ, ನೀನು ನಿಜವಾಗಿಯೂ ಇದ್ದರೆ. . . !”
ವಿನಾಶಕಾರಿಯಾದ ಆಯ್ಕೆಗಳಿಂದ ತಿರುಗಿಕೊಂಡು ಸಹಾಯವನ್ನು ಬೇಡುವುದು ಪಶ್ಚಾತಾಪದ ಒಂದು ಭಾಗವಾಗಿದೆ. ಪಶ್ಚಾತಾಪ ಪಡುವುದು ಎಂದರೆ ಮನೆಗೆ ಹಿಂತುರುಗುವುದು, ನೀವು ಎಲ್ಲಿಂದ ಬಂದಿದ್ದೀರಿ ಮತ್ತು ಎಲ್ಲಿಗೆ ಸೇರುತ್ತೀರಿ ಅಲ್ಲಿಗೇ ಹಿಂತಿರುಗುವುದು. ಮನೆಗೆ ಹಿಂತಿರುಗುವುದು ಎನ್ನುವ ವಿಷಯ ಕ್ಷಮಿಸಲ್ಪಡುವುದು ಮತ್ತು ಈ ಜೀವನದ ನಂತರದ ಜೀವನದ ಭರವಸೆಯನ್ನು ಪಡೆದುಕೊಳ್ಳುವುದರ ಬಗ್ಗೆ ಆಗಿದೆ, ಆದರೆ ಅದು ನಿಮ್ಮ ಜೀವನಕ್ಕೆ ನಿಮಗೆ ಎಲ್ಲಿಯೂ ಸಿಗದ ಹೊಸ ಅರ್ಥ ಮತ್ತು ದಿಕ್ಕನ್ನು ಹುಡುಕುವುದರ ಬಗ್ಗೆ ಆಗಿದೆ. ಅದು ದೇವರ ಜೊತೆಗೆ ಸಂಬಂಧವನ್ನು ಇಟ್ಟುಕೊಳ್ಳುವುದರ ಬಗ್ಗೆ ಆಗಿದೆ. ಅದು ನೀವು ಎಲ್ಲಿಂದ ಬಂದಿದ್ದೀರಿ ಮತ್ತು ಎಲ್ಲಿಗೆ ಸೇರುತ್ತೀರಿ ಅಲ್ಲಿಗೆ ನಿಮ್ಮ ಜೀವನವನ್ನು ಮರುನಿರ್ದೇಶಿಸಿ ಹಿಂತಿರುಗುವಂತದ್ದಾಗಿದೆ. ನೀವು ಪಶ್ಚಾತಾಪ ಪಟ್ಟರೆ, ದೇವರು ನಿಮ್ಮನ್ನು ಬದಲಾಯಿಸುತ್ತಾರೆ. ನೀವು ವಿಭಿನ್ನವಾಗಿದ್ದೀರಿ. ಸತ್ಯವೇದವು ದೇವರ ಆತ್ಮವು ನಿಮ್ಮೊಳಗೆ ಬಂದು ಜೀವಿಸುತ್ತದೆ ಎಂದು ಹೇಳುತ್ತದೆ, ಮತ್ತು ಅದು ಗುರುತಿಸಬಹುದಾದ ಹಾಗೂ ಪ್ರಗತಿಯಲ್ಲಿ ಉಳಿಯುವ ಬದಲಾವಣೆಗೆ ಕಾರಣವಾಗುತ್ತದೆ.
ಪಶ್ಚಾತಾಪ ಪಡುವುದು ಎಂದರೆ ನಮಗಾಗಿ ಕೆಟ್ಟದ್ದನ್ನು ಭಾವಿಸುತ್ತಿದ್ದೇವೆ ಎನ್ನುವ ಅರ್ಥ ಬರುವುದಿಲ್ಲ ಎಂಬ ವಿಷಯ ನಿಮ್ಮ ತಲೆಯಲ್ಲಿರಲಿ. ಸಂಗತಿಗಳ ವಿಷಯವೆಂದರೆ, ನಿಜವಾದ ಪಶ್ಚಾತಾಪವು ಕರ್ತನಿಂದ ಬರುವ "ಹೊಸ ಚೈತನ್ಯ ಬರುವ ಕಾಲ" ದ ಕಡೆಗೆ ಕರೆದೊಯ್ಯುತ್ತದೆ ಎಂದು ಸತ್ಯವೇದವು ಹೇಳುತ್ತದೆ. ಪಶ್ಚಾತಾಪವೆಂದರೆ ಮತ್ತೊಮ್ಮೆ ಮೊದಲಿನಿಂದ ಪ್ರಾರಂಭಿಸುವುದು ಮತ್ತು "ನನಗೆ ಸಹಾಯ ಬೇಕು" ಎಂದು ಒಪ್ಪಿಕೊಳ್ಳುವುದು. ಪಶ್ಚಾತಾಪ ಪಡಲು, ನಮ್ಮ ಪಾಪಗಳಿಂದ ತಿರುಗಿಕೊಳ್ಳುವುದಕ್ಕೆ ಮತ್ತು ದೇವರ ಗುಡಾರಕ್ಕೆ ಹಿಂತಿರುಗಲು ಇರುವ ಕರೆ, ಎಲ್ಲರಿಗೂ ಇರುವುದು ಆಗಿದೆ.
ಇದು ನೀವು ಗುಡಾರಕ್ಕೆ ಹಿಂತಿರುಗಿದ ದಿನವೂ ಆಗಿರಬಹುದು. ನೀವು ಈಗಿರುವ ಸ್ಥಳದಿಂದ ಎದ್ದು ನೀವು ಸೇರಬೇಕಾಗಿರುವ ಸ್ಥಳಕ್ಕೆ ಬನ್ನಿರಿ. ನಿಮ್ಮ ಗತಿಸಿದ ಕಾಲದಲ್ಲಿ ನೀವು ಯಾವುದೇ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದ್ದರೂ ಪರವಾಗಿಲ್ಲ. ದೇವರು ನಿಮಗೆ ಹೇಳುತ್ತಿದ್ದಾರೆ, "ನೀವು ಏನೇ ಮಾಡಿದ್ದರು, ನೀವು ಏನೇ ಆಗಿದ್ದರು, ಅದು ಮುಖ್ಯವಾಗುವುದಿಲ್ಲ. ಗುಡಾರಕ್ಕೆ ಹಿಂತಿರುಗಿರಿ."
ಇಂದು ನೀವು ಯಾವುದಕ್ಕೆ ಪಶ್ಚಾತಾಪ ಪಡಬೇಕೆಂದಿದ್ದೀರಿ? ಪಶ್ಚಾತಾಪವು ನಿಮ್ಮನ್ನು ದೇವರೊಡನೆ "ಹೊಸ ಚೈತನ್ಯ ಬರುವ ಕಾಲ"ಕ್ಕೆ ಹೇಗೆ ನೆಡೆಸುತ್ತದೆ
Scripture
About this Plan
ಜೀವನದಿಂದ ಹೆಚ್ಚಿನದನ್ನು ನೀವು ಎದುರು ನೋಡುತ್ತಿರುವಿರಾ? ಹೆಚ್ಚಿನದನ್ನು ಬಯಸುವುದು ಎಂದರೆ ನಿಜವಾಗಿಯೂ ದೇವರ ಕಡೆಗೆ ಹಿಂದಿರುಗುವುದು—ದೇವರೊಡಗಿನ ನಿಮ್ಮ ಸಂಬಂಧ ಈಗ ಎಲ್ಲಿಯೇ ಇದ್ದರೂ. ನಾವೆಲ್ಲರೂ ದೇವರ ಕಡೆಗೆ ಹಿಂದಿರುಗುವ ದಾರಿಯಲ್ಲಿ ಮೈಲಿ ಗುರುತುಗಳ ಅನುಭವವನ್ನು—ಅಥವಾ ಎಚ್ಚರಿಕೆಗಳನ್ನು—ಪಡೆದಿರುತ್ತೇವೆ. ಇಲ್ಲಿರುವ ಪ್ರತಿಯೊಂದು ಮೈಲಿ ಗುರುತುಗಳ ಮೂಲಕ ಪ್ರಯಾಣ ನಡೆಸಿರಿ ಹಾಗೂ ನೀವು ಎಲ್ಲಿದ್ದೀರಿ ಮತ್ತು ಎಲ್ಲಿ ಇರಬೇಕು ಎಂದುಕೊಂಡಿದ್ದೀರಿ ಎಂಬುದರ ನಡುವೆ ಇರುವ ಅಂತರವನ್ನು ಚಿಕ್ಕದಾಗಿಸಿ. ನಾವು ದೇವರನ್ನು ಹುಡುಕಲು ಬಯಸುತ್ತೇವೆ, ಆತನು ನಾವು ಇನ್ನೂ ಹೆಚ್ಚಿನದನ್ನು ಹುಡುಕಲಿ ಎಂದು ಬಯಸುತ್ತಾನೆ.
More