ಜೆಕರ್ಯ 9
9
ಶತ್ರುಬಾಧೆಯ ಕಾಲದ ಪ್ರವಾದನೆಗಳು
(9—14)
ಅರಾಮ್, ತೂರ್, ಫಿಲಿಷ್ಟಿಯ ಈ ರಾಜ್ಯಗಳಿಗಾಗುವ ದಂಡನೆ
1ಯೆಹೋವನು ನುಡಿದ ದೈವೋಕ್ತಿಯು
ಹದ್ರಾಕ್ ದೇಶದ ಮೇಲೆ ಬಿದ್ದಿದೆ,
ದಮಸ್ಕವೇ ಅದಕ್ಕೆ ಈಡು;
ಯೆಹೋವನು ನರವಂಶದ ಮೇಲೆ ಕಣ್ಣಿಟ್ಟಿದ್ದಾನೆ,
ಹೌದು, ಇಸ್ರಾಯೇಲಿನ ಸಕಲ ಕುಲಗಳಲ್ಲಿಯೂ
2ದಮಸ್ಕದ ಪಕ್ಕದಲ್ಲಿನ ಹಮಾತಿನಲ್ಲಿಯೂ
ಬಹು ಜಾಣತನದವುಗಳು ಎಂದುಕೊಂಡಿರುವ
ತೂರ್ ಚೀದೋನ್ ಪಟ್ಟಣಗಳಲ್ಲಿಯೂ ಕಣ್ಣಿಟ್ಟಿದ್ದಾನೆ.
3ತೂರ್ ಪಟ್ಟಣವು ಕೋಟೆಯನ್ನು ಕಟ್ಟಿಕೊಂಡು
ಬೆಳ್ಳಿಯನ್ನು ದೂಳಿನಂತೆಯೂ
ಬಂಗಾರವನ್ನು ಬೀದಿಯ ಬದಿಯಂತೆಯೂ
ರಾಶಿರಾಶಿ ಮಾಡಿಕೊಂಡಿದೆ.
4ಆಹಾ, ಕರ್ತನು ಅದರ ಆಸ್ತಿಯನ್ನು ಆಕ್ರವಿುಸಿ
ಪೌಳಿಗೋಡೆಯನ್ನು ಸಮುದ್ರದೊಳಕ್ಕೆ ಹೊಡೆದು ಹಾಕುವನು;
ಪಟ್ಟಣವು ಬೆಂಕಿಗೆ ತುತ್ತಾಗುವದು.
5ಅಷ್ಕೆಲೋನು ಇದನ್ನು ನೋಡಿ ಹೆದರುವದು;
ಗಾಜವು ಸಹ ಅತಿಸಂಕಟಪಡುವದು;
ಎಕ್ರೋನು ನಿರೀಕ್ಷೆಗೆಟ್ಟು ಬಹು ವ್ಯಥೆಗೆ ಒಳಗಾಗುವದು; ಗಾಜಕ್ಕೆ ರಾಜನೇ ಇಲ್ಲವಾಗುವನು;
ಅಷ್ಕೆಲೋನು ನಿರ್ಜನವಾಗುವದು;
6ಅಷ್ಡೋದಿನಲ್ಲಿ ವಿುಶ್ರಜಾತಿಯವರು ವಾಸಮಾಡುವರು;
ಹೀಗೆ ಫಿಲಿಷ್ಟಿಯದ ಗರ್ವವನ್ನು ಭಂಗಪಡಿಸುವೆನು.
7ಅವರು ಸವಿಯುವ ರಕ್ತವನ್ನು ಬಾಯೊಳಗಿಂದ ತೆಗೆದುಬಿಡುವೆನು;
ಅವರು ಕಚ್ಚುವ ಅಸಹ್ಯಪದಾರ್ಥಗಳನ್ನು ಹಲ್ಲುಗಳ ಮಧ್ಯದಿಂದ ಕಿತ್ತುಹಾಕುವೆನು;
ಅವರೂ ಇಸ್ರಾಯೇಲಿನ#9.7 ಮೂಲ: ನಮ್ಮ. ದೇವರಿಗೆ ಶೇಷಜನವಾಗಿ ನಿಲ್ಲುವರು;
ಯೆಹೂದದಲ್ಲಿ ಕುಲಪಾಲಕನಂತಿರುವರು;
ಎಕ್ರೋನಿನವರು ಯೆಬೂಸಿಯರ ಹಾಗಿರುವರು.
8ಯಾರೂ ಹಾದುಹೋಗಿ ಬಾರದಂತೆ
ನನ್ನ ಆಲಯದ ಸುತ್ತಲು ಪಾಳೆಯಹಾಕಿ ಕಾವಲಾಗಿರುವೆನು;
ಇನ್ನು ಮುಂದೆ ಯಾವ ಬಾಧಕನೂ ನನ್ನ ಜನರ ಮೇಲೆ ಬೀಳನು;
ಏಕಂದರೆ ಈಗ ನಾನು ಕಣ್ಣಿಟ್ಟು ನೋಡುತ್ತಿದ್ದೇನೆ.
ಸಮಾಧಾನಪ್ರದರಾಜನು
9ಚೀಯೋನ್ ನಗರಿಯೇ, ಬಹು ಸಂತೋಷಪಡು;
ಯೆರೂಸಲೇಮ್ ಪುರಿಯೇ, ಹರ್ಷಧ್ವನಿಗೈ!
ನೋಡು, ನಿನ್ನ ಅರಸು ನಿನ್ನ ಬಳಿಗೆ ಬರುತ್ತಾನೆ;
ಆತನು ನ್ಯಾಯವಂತನು,#9.9 ಅಥವಾ: ನ್ಯಾಯವಂತನೆಂದು ಸ್ಥಾಪಿಸಲ್ಪಟ್ಟವನು, ರಕ್ಷಣೆಹೊಂದಿದವನು. ಸುರಕ್ಷಿತನು;
ಶಾಂತಗುಣವುಳ್ಳವನಾಗಿಯೂ
ಕತ್ತೆಯನ್ನು, ಹೌದು, ಪ್ರಾಯದ ಕತ್ತೆಮರಿಯನ್ನು
ಹತ್ತಿದವನಾಗಿಯೂ ಬರುತ್ತಾನೆ.
10ನಾನು ಎಫ್ರಾಯೀವಿುನ ರಥಬಲವನ್ನೂ ಯೆರೂಸಲೇವಿುನ ಅಶ್ವಬಲವನ್ನೂ ನಿಶ್ಶೇಷಮಾಡುವೆನು;
ಯುದ್ಧದ ಬಿಲ್ಲು ಇಲ್ಲವಾಗುವದು;
ಆತನು ಕೊಡುವ ಅಪ್ಪಣೆಯು ಜನಾಂಗಗಳಿಗೆ ಸಮಾಧಾನಕರವಾಗಿರುವದು;
ಆತನ ಆಳ್ವಿಕೆಯು ಸಮುದ್ರದಿಂದ ಸಮುದ್ರದವರೆಗೂ
[ಯೂಫ್ರೇಟೀಸ್] ನದಿಯಿಂದ ಭೂವಿುಯ ಕಟ್ಟಕಡೆಯವರೆಗೂ ಹರಡಿಕೊಂಡಿರುವದು.
ಇಸ್ರಾಯೇಲ್ಯರು ಗ್ರೀಕರನ್ನು ಜಯಿಸುವದು
11[ನನ್ನ ಜನವೇ,] ನೀನು ಒಡಂಬಡಿಕೆ ಮಾಡಿಕೊಂಡಾಗ ಸುರಿಸಿದ ರಕ್ತವನ್ನು ನಾನು ಸ್ಮರಿಸಿ
ಸೆರೆಯಾಗಿರುವ ನಿನ್ನವರನ್ನು ನೀರಿಲ್ಲದ ಆ ಬಾವಿಯೊಳಗಿಂದ ಬರಮಾಡುವೆನು.
12ಸುನಿರೀಕ್ಷೆಯುಂಟಾದ ಸೆರೆಯವರೇ,
ನಿಮ್ಮ ದುರ್ಗಕ್ಕೆ ಹಿಂದಿರುಗಿರಿ;
ನಿಮಗೆ ಎರಡರಷ್ಟು [ಸುಖವನ್ನು] ದಯಪಾಲಿಸುವೆನು ಎಂದು
ಈಗಲೂ ಪ್ರಕಟಿಸುತ್ತೇನೆ.
13ಯೆಹೂದವೆಂಬ ಬಿಲ್ಲನ್ನು ಬೊಗ್ಗಿಸಿಕೊಂಡಿದ್ದೇನೆ,
ಅದರಲ್ಲಿ ಎಫ್ರಾಯೀಮನ್ನು ಹೂಡಿದ್ದೇನೆ;
ಚೀಯೋನೇ, ನಾನು ನಿನ್ನ ಸಂತಾನವನ್ನು ಗ್ರೀಕ್#9.13 ಇಬ್ರಿಯ ಮೂಲ: ಯಾವಾನ್. ಸಂತಾನಕ್ಕೆ ವಿರುದ್ಧವಾಗಿ ಎಬ್ಬಿಸಿ
ನಿನ್ನನ್ನು ಶೂರನ ಕತ್ತಿಯನ್ನಾಗಿ ಮಾಡುವೆನು.
14ಯೆಹೋವನು ಸ್ವಜನರಿಗಾಗಿ ಅವರ ಮೇಲ್ಗಡೆ ಕಾಣಿಸಿಕೊಳ್ಳುವನು;
ಆತನ ಬಾಣವು ಸಿಡಿಲಿನಂತೆ ಹಾರುವದು;
ಕರ್ತನಾದ ಯೆಹೋವನು ತುತೂರಿಯನ್ನೂದಿ
ದಕ್ಷಿಣಪ್ರಾಂತದ ಬಿರುಗಾಳಿಗಳೊಡನೆ ನುಗ್ಗುವನು.
15ಸೇನಾಧೀಶ್ವರ ಯೆಹೋವನು ತನ್ನ ಜನರನ್ನು ಕಾಪಾಡುವನು;
ಅವರು [ಶತ್ರುಗಳನ್ನು] ನುಂಗಿಬಿಡುವರು,
ಕವಣೆಯ ಕಲ್ಲುಗಳನ್ನು ತುಳಿದುಹಾಕುವರು;
[ರಕ್ತವನ್ನು] ಕುಡಿದು ಅಮಲೇರಿದವರಾಗಿ ಭೋರ್ಗರೆಯುವರು;
ಬೋಗುಣಿಗಳಂತೆಯೂ ಯಜ್ಞವೇದಿಯ ಮೂಲೆಗಳ ಹಾಗೂ ರಕ್ತಪೂರ್ಣರಾಗಿರುವರು.
16ಆ ದಿನದಲ್ಲಿ ಅವರ ದೇವರಾದ ಯೆಹೋವನು
ಅವರನ್ನು ತನ್ನ ಹಿಂಡಾಗಿರುವ ಜನರೆಂದು ರಕ್ಷಿಸುವನು;
ಅವರು ಕಿರೀಟದಲ್ಲಿನ ರತ್ನಗಳಂತೆ
ತಮ್ಮ ದೇಶದಲ್ಲಿ ಥಳಥಳಿಸುವರು.
17ಆಹಾ, ಅವರ ಸೌಖ್ಯವೆಷ್ಟು, ಅವರ ಸೌಂದರ್ಯವೆಷ್ಟು!
ಧಾನ್ಯವು ಯುವಕರನ್ನು, ದ್ರಾಕ್ಷಾರಸವು ಯುವತಿಯರನ್ನು ಪುಷ್ಟಿಗೊಳಿಸುವದು.
Currently Selected:
ಜೆಕರ್ಯ 9: KANJV-BSI
Highlight
Share
Copy
Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.