ಜೆಕರ್ಯ 10
10
ಕಣಿಯವರಲ್ಲಿ ನಂಬಿಕೆ ಇಡಕೂಡದು
1ಮಳೆಯಾಗುವಂತೆ ಹಿಂಗಾರಿನಲ್ಲಿ ಯೆಹೋವನನ್ನು ಬೇಡಿಕೊಳ್ಳಿರಿ;
ಯೆಹೋವನೇ ವಿುಂಚುಗಳನ್ನು ಉಂಟುಮಾಡುತ್ತಾನೆ,
ಮನುಷ್ಯರಿಗೆ ಸಮೃದ್ಧಿಯಾದ ಮಳೆಯನ್ನು ದಯಪಾಲಿಸುತ್ತಾನೆ,
ಎಲ್ಲರಿಗೂ ಹೊಲದ ಪೈರನ್ನು ಅನುಗ್ರಹಿಸುತ್ತಾನೆ.
2ವಿಗ್ರಹಗಳು ನುಡಿಯುವದು ಜೊಳ್ಳು;
ಕಣಿಯವರು ಕಾಣುವದು ಸುಳ್ಳು,
ತಿಳಿಸುವ ಕನಸುಗಳು ಕಲ್ಪಿತ,
ಹೇಳುವ ಸಮಾಧಾನವು ವ್ಯರ್ಥ,
ಆದದರಿಂದ ನನ್ನ ಜನರು ದಿಕ್ಕಾಪಾಲಾಗಿದ್ದಾರೆ;
ಕುರುಬನು ಇಲ್ಲದ ಕಾರಣ ಬಾಧೆಗೆ ಒಳಗಾಗಿದ್ದಾರೆ.
ಇಸ್ರಾಯೇಲಿನ ನೂತನ ಬಲ
3ನನ್ನ ಕೋಪವು ಕುರುಬರ ಮೇಲೆ ಧಗಧಗಿಸುತ್ತದೆ,
ನಾನು ಹೋತಗಳನ್ನು ದಂಡಿಸುವೆನು;
ಸೇನಾಧೀಶ್ವರ ಯೆಹೋವನು ತನ್ನ ಮಂದೆಯಾದ ಯೆಹೂದ ವಂಶವನ್ನು ಪರಾಂಬರಿಸಿ
ಘನವಾದ ಯುದ್ಧಾಶ್ವವನ್ನಾಗಿ ಮಾಡಿಕೊಳ್ಳುವನು.
4ಆ#10.4 ಅಥವಾ: ಆತನಿಂದ. ವಂಶದಿಂದ ಮೂಲೆಗಲ್ಲು, ಆ#10.4 ಅಥವಾ: ಆತನಿಂದ. ವಂಶದಿಂದ ಮೊಳೆ,
ಆ#10.4 ಅಥವಾ: ಆತನಿಂದ. ವಂಶದಿಂದ ಯುದ್ಧದ ಬಿಲ್ಲು,
ಅಂತು ಆ#10.4 ಅಥವಾ: ಆತನಿಂದ. ವಂಶದೊಳಗಿಂದ ಸಕಲ ಅಧಿಕಾರಿಗಳು ಉಂಟಾಗುವರು.
5ಇವರು ವೀರರಾಗಿ
ರಣದೊಳಗೆ [ಶತ್ರುಗಳನ್ನು] ಬೀದಿಗಳ ಕೆಸರಿನಲ್ಲಿ ತುಳಿದುಬಿಡುವರು;
ಯೆಹೋವನು ತಮ್ಮ ಸಂಗಡ ಇದ್ದಾನೆಂದು ಯುದ್ಧಮಾಡುವರು;
ಎದುರಿಸುವ ಸವಾರರು ಭಂಗಪಡುವರು.
6ನಾನು ಯೆಹೂದ ವಂಶವನ್ನು ಬಲಗೊಳಿಸಿ
ಯೋಸೇಫ ವಂಶವನ್ನು ಉದ್ಧರಿಸುವೆನು;
ನನ್ನ ಕನಿಕರವು ಅವರ ಮೇಲೆ ಇರುವದರಿಂದ
ಅವರನ್ನು ಹಿಂದಕ್ಕೆ ಬರಮಾಡುವೆನು;
ಆಗ ನಾನು ಅವರನ್ನು ತಳ್ಳಿಬಿಟ್ಟದ್ದು ಇಲ್ಲದಂತಾಗುವದು;
ನಾನು ಅವರ ದೇವರಾದ ಯೆಹೋವನಾಗಿದ್ದೇನಲ್ಲಾ,
ಅವರ ಮೊರೆಯನ್ನು ಲಾಲಿಸುವೆನು.
ಚದರಿದವರ ಹಿಂದಿರುಗುವಿಕೆ
7ಎಫ್ರಾಯೀಮ್ಯರು ಶೂರನಂತಿರುವರು,
ದ್ರಾಕ್ಷಾರಸಕುಡಿದಂತೆ ಅವರ ಮನಸ್ಸು ಉತ್ಸಾಹಗೊಳ್ಳುವದು;
ಅವರ ಸಂತಾನದವರು ಇದನ್ನು ನೋಡಿ ಸಂತೋಷಪಡುವರು,
ಅವರ ಹೃದಯವು ಯೆಹೋವನಲ್ಲಿ ಆನಂದಿಸುವದು.
8ನಾನು ಅವರನ್ನು ಸಿಳ್ಳುಹಾಕಿ ಕರೆದು ಕೂಡಿಸುವೆನು;
ಅವರನ್ನು ವಿಮೋಚಿಸಿದ್ದೇನಲ್ಲಾ;
ಅವರು ಹಿಂದೆ ವೃದ್ಧಿಯಾದಂತೆ ಮುಂದೆಯೂ ವೃದ್ಧಿಯಾಗುವರು.
9ನಾನು ಅವರನ್ನು ಜನಾಂಗಗಳೊಳಗೆ ಚೆಲ್ಲಿದರೂ
ಅವರು ದೂರದೇಶಗಳಲ್ಲಿ ನನ್ನನ್ನು ಸ್ಮರಿಸಿಕೊಂಡು
ಸಂತಾನಸಮೇತವಾಗಿ ಬದುಕಿ ಬಾಳಿ ಹಿಂದಿರುಗಿ ಬರುವರು.
10ನಾನು ಅವರನ್ನು ಐಗುಪ್ತ ದೇಶದೊಳಗಿಂದ ಹಿಂದಕ್ಕೆ ಕರತರುವೆನು;
ಅಶ್ಶೂರದಿಂದ ಕೂಡಿಸುವೆನು;
ಗಿಲ್ಯಾದುಲೆಬನೋನುಗಳ ಪ್ರಾಂತಕ್ಕೆ ಬರಮಾಡುವೆನು;
ಅವರಿಗೆ ಸಾಕಾದಷ್ಟು ಸ್ಥಳ ಸಿಕ್ಕದು.
11ಅವರು#10.11 ಅಥವಾ: ಯೆಹೋವನು ಕಷ್ಟವೆಂಬ ಕಡಲನ್ನು ದಾಟುವನು…ಸೀಳಿಬಿಡುವನು. ಮೂಲ: ಅವನು… ಕಷ್ಟವೆಂಬ ಕಡಲನ್ನು ದಾಟಿ ಬರುವರು,
ಅಲ್ಲಕಲ್ಲೋಲವಾದ ಸಮುದ್ರವನ್ನು ಭೇದಿಸಿಬಿಡುವರು,
ನೈಲ್ನದಿಯೆಲ್ಲಾ ತಳದ ತನಕ ಒಣಗುವದು,
ಅಶ್ಶೂರದ ಗರ್ವವು ತಗ್ಗಿಸಲ್ಪಡುವದು,
ಐಗುಪ್ತದ ರಾಜದಂಡವು ತಪ್ಪಿಹೋಗುವದು.
12ಅವರು ಯೆಹೋವನಲ್ಲಿ ಬಲಗೊಳ್ಳುವರು,
ಆತನ ಹೆಸರಿನಲ್ಲಿ ನಡೆದುಕೊಳ್ಳುವರು;
ಇದು ಯೆಹೋವನ ನುಡಿ.
Currently Selected:
ಜೆಕರ್ಯ 10: KANJV-BSI
Highlight
Share
Copy
Want to have your highlights saved across all your devices? Sign up or sign in
Kannada J.V. Bible © The Bible Society of India, 2016.
Used by permission. All rights reserved worldwide.