YouVersion Logo
Search Icon

ಕೀರ್ತನೆಗಳು 63

63
ಭಕ್ತನು ದೇವದರ್ಶನವನ್ನು ಕಾಂಕ್ಷಿಸಿ ಸಂತೃಪ್ತಿಹೊಂದಿದ್ದು
(ಕೀರ್ತ. 42, 61)
ದಾವೀದನು ಯೆಹೂದ ಸೀಮೆಯ ಅರಣ್ಯದಲ್ಲಿದ್ದಾಗ ರಚಿಸಿದ ಕೀರ್ತನೆ
1ದೇವರೇ, ನೀನೇ ನನ್ನ ದೇವರು;
ನಾನು ನಿನ್ನ ದರ್ಶನವನ್ನು ಕುತೂಹಲದಿಂದ ಎದುರುನೋಡುತ್ತೇನೆ.
ನೀರಿಲ್ಲದೆ ಒಣಗಿದ ಭೂವಿುಯಲ್ಲಿದ್ದವನು ನೀರಿಗಾಗಿಯೋ ಎಂಬಂತೆ
ನನ್ನ ಆತ್ಮವು ನಿನಗಾಗಿ ಆತುರಗೊಳ್ಳುತ್ತದೆ;
ಶರೀರವು ಕಂದಿಹೋಗುತ್ತದೆ.
2ನಿನ್ನ ಮಂದಿರದಲ್ಲಿ ನಾನು ನಿನ್ನ ಮಹತ್ತನ್ನೂ ಪ್ರಭಾವವನ್ನೂ ಕಂಡ ಪ್ರಕಾರ
ಈಗಲೂ ಕಾಣಬೇಕೆಂದು ಅಪೇಕ್ಷಿಸುತ್ತೇನೆ.
3ನಿನ್ನ ಪ್ರೇಮಾನುಭವವು ಜೀವಕ್ಕಿಂತಲೂ ಶ್ರೇಷ್ಠ;
ನನ್ನ ಬಾಯಿ ನಿನ್ನನ್ನು ಕೀರ್ತಿಸುವದು.
4ನನ್ನ ಜೀವಮಾನದಲ್ಲೆಲ್ಲಾ ಹೀಗೆಯೇ ನಿನ್ನನ್ನು ಹಾಡಿಹರಸುತ್ತಾ
ನಿನ್ನ ಹೆಸರೆತ್ತಿ ಕೈಮುಗಿಯುವೆನು.
5ಮೃಷ್ಟಭೋಜನದಿಂದಲೋ ಎಂಬಂತೆ ನನ್ನ ಮನಸ್ಸು ಸಂತುಷ್ಟವಾಗಿರುವದು;
ನನ್ನ ಬಾಯಿ ಉತ್ಸಾಹಧ್ವನಿಮಾಡುತ್ತಾ ನಿನ್ನನ್ನು ಕೊಂಡಾಡುವದು.
6ನಾನು ಹಾಸಿಗೆಯ ಮೇಲಿದ್ದುಕೊಂಡು ನಿನ್ನನ್ನು ಸ್ಮರಿಸುವಾಗ
ರಾತ್ರಿಯ ಜಾವಗಳಲ್ಲಿ ನಿನ್ನನ್ನು ಧ್ಯಾನಿಸುತ್ತಿರುವೆನು.
7ನೀನು ನನಗೆ ಸಹಾಯಕನಾಗಿದ್ದಿಯಲ್ಲಾ;
ನಿನ್ನ ರೆಕ್ಕೆಗಳ ಮರೆಯಲ್ಲಿ ಸುರಕ್ಷಿತನಾಗಿದ್ದುಕೊಂಡು ಆನಂದಘೋಷ ಮಾಡುತ್ತಿರುವೆನು.
8ನನ್ನ ಆತ್ಮವು ನಿನ್ನನ್ನು ಅಂಟಿಕೊಂಡು ಹಿಂಬಾಲಿಸಿರುವದು;
ನಿನ್ನ ಬಲಗೈ ನನಗೆ ಆಧಾರವಾಗಿರುವದು.
9ನನ್ನ ಜೀವಕ್ಕೆ ಕೇಡುಬಗೆಯುವವರೋ
ಅಧೋಲೋಕಕ್ಕೆ ಇಳಿದುಹೋಗುವರು.
10ಕತ್ತಿಗೆ ಬಲಿಯಾಗುವರು;
ನರಿಗಳ ಪಾಲಾಗುವರು.
11ಅರಸನೋ ದೇವರಲ್ಲಿ ಆನಂದಿಸುವನು.
ದೇವರ ಮೇಲೆ ಆಣೆಯಿಡುವವರೆಲ್ಲರು
ಸುಳ್ಳುಬಾಯಿ ಮುಚ್ಚಿಹೋಗುವದನ್ನು ಕಂಡು ಹಿಗ್ಗುವರು.

Highlight

Share

Copy

None

Want to have your highlights saved across all your devices? Sign up or sign in