YouVersion 標識
搜索圖示

ಆದಿಕಾಂಡ 7

7
1ಆಗ ಯೆಹೋವನು ನೋಹನಿಗೆ - ನೀನೂ ನಿನ್ನ ಮನೆಯವರೆಲ್ಲರೂ ನಾವೆಯಲ್ಲಿ ಸೇರಿರಿ; ಈಗಿನವರಲ್ಲಿ ನೀನೊಬ್ಬನೇ ನನ್ನ ಮುಂದೆ ನೀತಿವಂತನಾಗಿ ನಡೆಯುವದನ್ನು ನೋಡಿದ್ದೇನೆ. 2ಎಲ್ಲಾ ಶುದ್ಧಪಶುಗಳಲ್ಲಿ ಏಳೇಳು ಗಂಡು ಹೆಣ್ಣುಗಳನ್ನೂ ಶುದ್ಧವಲ್ಲದ ಪಶುಗಳಲ್ಲಿ ಎರಡೆರಡು ಗಂಡು ಹೆಣ್ಣುಗಳನ್ನೂ ನಿನ್ನೊಂದಿಗೆ ತೆಗೆದುಕೋ. 3ಪಕ್ಷಿಗಳಲ್ಲಿಯೂ ಏಳೇಳು ಗಂಡುಹೆಣ್ಣುಗಳನ್ನು ತೆಗೆದುಕೋ. ಹೀಗೆ ಆಯಾ ಜಾತಿಯನ್ನು ಭೂವಿುಯ ಮೇಲೆ ಉಳಿಸಿ ಕಾಪಾಡಬೇಕು. 4ಏಳುದಿನಗಳ ನಂತರ ನಾನು ಭೂವಿುಯ ಮೇಲೆ ನಾಲ್ವತ್ತು ದಿವಸ ಹಗಲಿರುಳು ಮಳೆಯನ್ನು ಸುರಿಸಿ ನನ್ನಿಂದಾದ ಜೀವರಾಶಿಗಳನ್ನೆಲ್ಲಾ ಭೂವಿುಯ ಮೇಲಿನಿಂದ ಅಳಿಸಿಬಿಡುತ್ತೇನೆ ಎಂದು ಹೇಳಿದನು. 5ಯೆಹೋವನು ಆಜ್ಞಾಪಿಸಿದ್ದನ್ನೆಲ್ಲಾ ನೋಹನು ಮಾಡಿದನು.
6ಭೂವಿುಯ ಮೇಲೆ ಜಲಪ್ರಳಯವುಂಟಾದಾಗ ನೋಹನು ಆರುನೂರು ವರುಷದವನಾಗಿದ್ದನು. 7ಆಗ ನೋಹನು ಪ್ರಳಯವನ್ನು ತಪ್ಪಿಸಿಕೊಳ್ಳುವದಕ್ಕೆ ಹೆಂಡತಿ ಮಕ್ಕಳು ಸೊಸೆಯರು ಸಹಿತವಾಗಿ ನಾವೆಯಲ್ಲಿ ಸೇರಿದನು. 8ದೇವರು ನೋಹನಿಗೆ ಅಪ್ಪಣೆಕೊಟ್ಟಂತೆ ಶುದ್ಧಾಶುದ್ಧ ಪಶುಗಳಲ್ಲಿಯೂ ಪಕ್ಷಿಗಳಲ್ಲಿಯೂ ಕ್ರಿವಿುಕೀಟಗಳಲ್ಲಿಯೂ 9ಗಂಡುಹೆಣ್ಣುಗಳು ಜೋಡಿಜೋಡಿಯಾಗಿ ಬಂದು ನೋಹನ ಬಳಿಗೆ ನಾವೆಯಲ್ಲಿ ಸೇರಿದವು. 10ಆ ಏಳು ದಿವಸಗಳಾದನಂತರ ಜಲಪ್ರಳಯವು ಭೂವಿುಯ ಮೇಲೆ ಬಂತು. 11ನೋಹನ ಜೀವಮಾನದ ಆರುನೂರನೆಯ ವರುಷದ ಎರಡನೆಯ ತಿಂಗಳಿನ ಹದಿನೇಳನೆಯ ದಿನದಲ್ಲಿ ಭೂವಿುಯ ಕೆಳಗಿರುವ ಸಾಗರದ ಸೆಲೆಗಳು ಒಡೆದವು; ಆಕಾಶದ ತೂಬುಗಳು#7.11 ದ್ವಾರಗಳು. ಆದಿ. 8.2; 2 ಅರಸು. 7.19; ಯೆಶಾ. 24.18; ಮಲಾ. 3.10. ತೆರೆದವು. 12ನಾಲ್ವತ್ತು ದಿನವೂ ಹಗಲಿರುಳು ಭೂವಿುಯ ಮೇಲೆ ದೊಡ್ಡ ಮಳೆ ಸುರಿಯಿತು. 13ಆ ದಿನದಲ್ಲಿ ನೋಹನೂ ಶೇಮ್, ಹಾಮ್, ಯೆಫೆತರೆಂಬ ಅವನ ಮಕ್ಕಳೂ ಅವನ ಹೆಂಡತಿಯೂ ಮೂರು ಮಂದಿ ಸೊಸೆಯರೂ ನಾವೆಯಲ್ಲಿ ಸೇರಿದರು. 14ಎಲ್ಲಾ ಪ್ರಾಣಿಗಳಲ್ಲಿ ಅಂದರೆ ಸಕಲ ವಿಧವಾದ ಮೃಗ ಪಶು ಕ್ರಿವಿುಕೀಟಗಳಲ್ಲಿಯೂ ಪಕ್ಷಿ ಮೊದಲಾದ ರೆಕ್ಕೆಯಿರುವ ಎಲ್ಲಾ ಜೀವಿಗಳಲ್ಲಿಯೂ 15ಎರಡೆರಡು ತಮ್ಮ ತಮ್ಮ ಜಾತಿಗನುಸಾರವಾಗಿ ನೋಹನ ಬಳಿಗೆ ಬಂದು ನಾವೆಯಲ್ಲಿ ಸೇರಿದವು. 16ದೇವರು ನೋಹನಿಗೆ ಅಪ್ಪಣೆಕೊಟ್ಟಂತೆ ಎಲ್ಲಾ ಪ್ರಾಣಿಗಳಲ್ಲಿ ಒಂದು ಗಂಡು ಒಂದು ಹೆಣ್ಣು ಈ ಮೇರೆಗೆ ಸೇರಿದವು. ಯೆಹೋವನು ನೋಹನನ್ನು ಒಳಗಿಟ್ಟು ಮುಚ್ಚಿದನು. 17ಜಲಪ್ರಳಯವು ನಾಲ್ವತ್ತು ದಿನ ಭೂವಿುಯ ಮೇಲೆ ಇದ್ದು ನೀರು ಹೆಚ್ಚುತ್ತಾ ನಾವೆಯನ್ನು ಎತ್ತಲು ಅದು ನೀರಿನ ಮೇಲೆ ತೇಲಾಡಿತು. 18ನೀರು ಪ್ರಬಲವಾಗಿ ಬಲು ಹೆಚ್ಚಲು ನಾವೆಯು ಅದರ ಮೇಲೆ ಚಲಿಸಿತು. 19ನೀರು ಭೂವಿುಯ ಮೇಲೆ ಅತ್ಯಧಿಕವಾಗಿ ಪ್ರಬಲವಾದ್ದರಿಂದ ಆಕಾಶಮಂಡಲದ ಕೆಳಗಿರುವ ಎಲ್ಲಾ ದೊಡ್ಡ ಬೆಟ್ಟಗಳೂ ಮುಚ್ಚಿಹೋದವು. 20ನೀರು ಆ ಬೆಟ್ಟಗಳಿಗಿಂತಲೂ ಹದಿನೈದು ಮೊಳ ಹೆಚ್ಚಲು ಅವುಗಳು ಸಂಪೂರ್ಣವಾಗಿ ಮುಚ್ಚಿಹೋದದರಿಂದ 21ಪಶುಪಕ್ಷಿ ಮೃಗಕ್ರಿವಿುಗಳು ಮನುಷ್ಯರು ಸಹಿತವಾಗಿ ಭೂವಿುಯ ಮೇಲೆ ಸಂಚರಿಸುವ ಸಕಲ ಪ್ರಾಣಿಗಳೂ ಲಯವಾದವು. 22ಮೂಗಿನಿಂದ ಶ್ವಾಸಬಿಡುವ ಭೂಜಂತುಗಳೆಲ್ಲಾ ಸತ್ತವು. 23ಮನುಷ್ಯರು ಮೊದಲುಗೊಂಡು ಪಶುಪಕ್ಷಿಕ್ರಿವಿುಗಳವರೆಗೂ ಭೂವಿುಯ ಮೇಲಿದ್ದದ್ದೆಲ್ಲಾ ನಾಶವಾಯಿತು; ಅವು ಭೂವಿುಯ ಮೇಲಿನಿಂದ ಲಯವಾಗಿ ಹೋದವು. ನೋಹನೂ ಅವನೊಂದಿಗೆ ನಾವೆಯಲ್ಲಿದ್ದ ಜೀವಿಗಳೂ ಮಾತ್ರ ಉಳಿದರು.
24ಪ್ರಳಯದ ನೀರು ಭೂವಿುಯ ಮೇಲೆ ನೂರೈವತ್ತು ದಿನ ಪ್ರಬಲವಾಯಿತು.

醒目顯示

分享

複製

None

想要在所有設備上保存你的醒目顯示嗎? 註冊或登入