YouVersion 標誌
搜尋圖標

ಆದಿಕಾಂಡ 6

6
ಜಲಪ್ರಳಯ
1ಭೂವಿುಯ ಮೇಲೆ ಜನರು ಹೆಚ್ಚುತ್ತಾ ಅವರಿಗೆ ಹೆಣ್ಣು ಮಕ್ಕಳು ಹುಟ್ಟಲು 2ದೇವಪುತ್ರರು ಮನುಷ್ಯಪುತ್ರಿಯರ ಸೌಂದರ್ಯವನ್ನು ನೋಡಿ ತಮಗೆ ಇಷ್ಟರಾದವರನ್ನು ಹೆಂಡರನ್ನಾಗಿ ಮಾಡಿಕೊಂಡರು.
3ಆಗ ಯೆಹೋವನು - ನನ್ನ#6.3 ಆದಿ. 2.7 ನೋಡಿರಿ. ಅಥವಾ: ನನ್ನ ಆತ್ಮವು ಮನುಷ್ಯರೊಡನೆ ಯಾವಾಗಲೂ ವಾದಿಸುವದಿಲ್ಲ. 1 ಪೇತ್ರ 3.19,20; ನೆಹೆ. 9.30; ಗಲಾ. 5.16,17 ಗಳನ್ನೂ ನೋಡಿರಿ. ಆತ್ಮವು ಮನುಷ್ಯರಲ್ಲಿ ಶಾಶ್ವತವಾಗಿರುವದಿಲ್ಲ; ಅವರು#6.3 ಅಥವಾ: ಅವರು ಸಹ ಮರ್ತ್ಯರೇ. ಭ್ರಷ್ಟರಾದದರಿಂದ ಮರ್ತ್ಯರೇ. ಅವರ ಆಯುಷ್ಯವು ನೂರ ಇಪ್ಪತ್ತು ವರುಷವಾಗಿರಲಿ ಅಂದನು.
4ಆ ಕಾಲದಲ್ಲಿ ಅಂದರೆ ದೇವಪುತ್ರರು ಮನುಷ್ಯಪುತ್ರಿಯರನ್ನು ಕೂಡಿ ಅವರಲ್ಲಿ ಮಕ್ಕಳನ್ನು ಪಡೆಯುವ ಕಾಲದಲ್ಲಿ ಮಹಾಶರೀರಿಗಳು#6.4 ಮೂಲ: ನೆಫೀಲಿಯರು. ಭೂವಿುಯ ಮೇಲಿದ್ದರು; ಅನಂತರದಲ್ಲಿಯೂ ಇದ್ದರು. ಪೂರ್ವದಲ್ಲಿ ಹೆಸರುಗೊಂಡ ಪರಾಕ್ರಮಶಾಲಿಗಳು ಇವರೇ.
5ಮನುಷ್ಯರ ಕೆಟ್ಟತನವು ಭೂವಿುಯ ಮೇಲೆ ಹೆಚ್ಚಾಗಿರುವದನ್ನೂ ಅವರು ಹೃದಯದಲ್ಲಿ ಯೋಚಿಸುವದೆಲ್ಲವು ಯಾವಾಗಲೂ ಬರೀ ಕೆಟ್ಟದ್ದಾಗಿರುವದನ್ನೂ 6ಯೆಹೋವನು ನೋಡಿ ತಾನು ಭೂವಿುಯ ಮೇಲೆ ಮನುಷ್ಯರನ್ನು ಉಂಟುಮಾಡಿದ್ದಕ್ಕೆ ಪಶ್ಚಾತ್ತಾಪಪಟ್ಟು ತನ್ನ ಹೃದಯದಲ್ಲಿ ನೊಂದುಕೊಂಡನು. 7ಮತ್ತು ಯೆಹೋವನು - ನಾನು ಸೃಷ್ಟಿಸಿದ ಮನುಷ್ಯ ಜಾತಿಯನ್ನು ಭೂವಿುಯ ಮೇಲಿನಿಂದ ಅಳಿಸಿಬಿಡುವೆನು; ಅದನ್ನು ಉಂಟುಮಾಡಿದ್ದಕ್ಕೆ ನನ್ನಲ್ಲಿ ಪಶ್ಚಾತ್ತಾಪ ಹುಟ್ಟಿತು; ಮನುಷ್ಯರೊಂದಿಗೆ ಸಕಲಮೃಗ ಕ್ರಿವಿುಪಕ್ಷಿಗಳನ್ನೂ ಅಳಿಸಿ ಬಿಡುವೆನು ಅಂದುಕೊಂಡನು. 8ಆದರೆ ನೋಹನಿಗೆ ಯೆಹೋವನ ದಯವು ದೊರಕಿತು.
9ನೋಹನ ಚರಿತ್ರೆಯು - ನೋಹನು ನೀತಿವಂತನೂ ತನ್ನ ಕಾಲದವರಲ್ಲಿ ತಪ್ಪಿಲ್ಲದವನೂ ಆಗಿದ್ದನು; ಅವನು ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಂಡನು. 10ಶೇಮ್, ಹಾಮ್, ಯೆಫೆತ್ ಎಂಬ ಮೂರು ಮಂದಿ ಮಕ್ಕಳನ್ನು ಪಡೆದನು. 11ಭೂಲೋಕದವರು ದೇವರ ದೃಷ್ಟಿಗೆ ಕೆಟ್ಟುಹೋಗಿದ್ದರು; ಅನ್ಯಾಯವು ಲೋಕವನ್ನು ತುಂಬಿಕೊಂಡಿತ್ತು. 12ದೇವರು ಲೋಕವನ್ನು ನೋಡಿದಾಗ ಅದು ಕೆಟ್ಟುಹೋಗಿತ್ತು; ಭೂನಿವಾಸಿಗಳೆಲ್ಲರೂ ತಮ್ಮ ನಡವಳಿಕೆಯನ್ನು ಕೆಡಿಸಿಕೊಂಡಿದ್ದರು.
13ಆಗ ದೇವರು ನೋಹನಿಗೆ - ಎಲ್ಲಾ ದೇಹಿಗಳಿಗೂ ಅಂತ್ಯವನ್ನು ತೀರ್ಮಾನಿಸಿದ್ದೇನೆ; ಭೂಲೋಕವು ಅವರ ಅನ್ಯಾಯದಿಂದ ತುಂಬಿ ಅದೆ; ನಾನು ಅವರನ್ನೂ ಭೂವಿುಯ ಮೇಲಿರುವದೆಲ್ಲವನ್ನೂ ಅಳಿಸಿಬಿಡುತ್ತೇನೆ. 14ನೀನು ತುರಾಯಿ ಮರದಿಂದ ನಾವೆಯನ್ನು#6.14 ಮೂಲ: ಪೆಟ್ಟಿಗೆಯನ್ನು. ಮಾಡಿಕೋ; ಅದರಲ್ಲಿ ತುಂಬ ಕೋಣೆಗಳು ಇರಬೇಕು; ಒಳಕ್ಕೂ ಹೊರಕ್ಕೂ ರಾಳವನ್ನು ಹಚ್ಚು. 15ನೀನು ಅದನ್ನು ಮಾಡಬೇಕಾದ ವಿಧಾನ ಹೇಗಂದರೆ - ಅದು ಮುನ್ನೂರು ಮೊಳ ಉದ್ದವೂ ಐವತ್ತು ಮೊಳ ಅಗಲವೂ ಮೂವತ್ತು ಮೊಳ ಎತ್ತರವೂ ಉಳ್ಳದ್ದಾಗಿರಬೇಕು. 16ಅದರ ಚಾವಣಿಯ ಕೆಳಗೆ ಸುತ್ತಲೂ ಒಂದು ಮೊಳ ಎತ್ತರದ ಬೆಳಕು ಕಂಡಿಯನ್ನು ಮಾಡಬೇಕು; ಪಕ್ಕದಲ್ಲಿ ಬಾಗಲನ್ನಿಡಬೇಕು. ನಾವೆಯಲ್ಲಿ ಒಂದರ ಮೇಲೆ ಒಂದಾಗಿ ಮೂರು ಅಂತಸ್ತುಗಳನ್ನು ಮಾಡಬೇಕು. 17ನಾನಂತೂ ಭೂವಿುಯ ಮೇಲೆ ಜಲಪ್ರಳಯವನ್ನು ಬರಮಾಡಿ ಆಕಾಶದ ಕೆಳಗಿರುವ ಸಕಲ ಪ್ರಾಣಿಗಳನ್ನೂ ಅಳಿಸಿಬಿಡುವೆನು; ಭೂವಿುಯಲ್ಲಿರುವ ಸಮಸ್ತವೂ ಲಯವಾಗುವದು. 18ಆದರೆ ನಿನ್ನ ಕೂಡ ನನ್ನ ನಿಬಂಧನೆಯನ್ನು ಮಾಡುತ್ತೇನೆ. ನೀನು ಹೆಂಡತಿ ಮಕ್ಕಳು ಸೊಸೆಯರು ಸಹಿತವಾಗಿ ನಾವೆಯಲ್ಲಿ ಸೇರಬೇಕು. 19ಇದಲ್ಲದೆ ಜೀವಿಗಳ ಪ್ರತಿಜಾತಿಯಲ್ಲಿಯೂ ಒಂದು ಗಂಡು ಒಂದು ಹೆಣ್ಣು ಹೀಗೆ ಎರಡೆರಡನ್ನು ನಾವೆಯಲ್ಲಿ ಸೇರಿಸಿ ನಿನ್ನೊಂದಿಗೆ ಉಳಿಸಿ ಕಾಪಾಡಬೇಕು. 20ಪಶು, ಪಕ್ಷಿ, ಕ್ರಿವಿು ಇವುಗಳ ಸಕಲ ಜಾತಿಗಳಲ್ಲಿಯೂ ಎರಡೆರಡು ಬದುಕುವದಕ್ಕಾಗಿ ನಿನ್ನ ಬಳಿಗೆ ಬರುವವು. 21ಮತ್ತು ನಿನಗೂ ಅವುಗಳಿಗೂ ಪೋಷಣೆಯಾಗುವಂತೆ ಸಕಲ ವಿಧವಾದ ಆಹಾರ ಪದಾರ್ಥಗಳನ್ನು ನಿನ್ನ ಬಳಿಯಲ್ಲಿ ಕೂಡಿಸಿಡಬೇಕು ಎಂದು ಹೇಳಿದನು. 22ದೇವರು ಅಪ್ಪಣೆಕೊಟ್ಟ ಪ್ರಕಾರವೇ ನೋಹನು ಮಾಡಿದನು.

醒目顯示

分享

複製

None

想在你所有裝置上儲存你的醒目顯示?註冊帳戶或登入