ವೆಚ್ಚ预览

ವೆಚ್ಚ

3天中的第2天

ನೀವು ಪಾವತಿಸಬೇಕಾದ ವೆಚ್ಚ

ಸಂಪನ್ಮೂಲಗಳು ಮತ್ತು ಬಹಿರಂಗಸೇವೆಯನ್ನು ಪುನರ್ ಪರಿಶೀಲಿಸುವುದು

ಸತ್ಯವೇದ ಯೋಜನೆಯ ದಿನ 2ಕ್ಕೆ ಸ್ವಾಗತ. ಇಂದು, ನಾವು ವೆಚ್ಚದೊಂದಿಗೆ ಬರುವ ಮೂರು ನಿರ್ಣಾಯಕ

ಹಂತಗಳನ್ನು ಅನ್ವೇಷಿಸುತ್ತೇವೆ: ಸಂಪನ್ಮೂಲಗಳನ್ನು ಮರುನಿರ್ದೇಶಿಸುವುದು, ನಮ್ಮ ಸೇವೆಯನ್ನು

ಮರುಮೌಲ್ಯಮಾಪನ ಮಾಡುವುದು ಮತ್ತು ನಮ್ಮ ಜೀವನಶೈಲಿಯನ್ನು ಮರುವಿನ್ಯಾಸಗೊಳಿಸುವುದು.

ಸಂಬಂಧಿತ ವಚನಗಳು ಮತ್ತು ಅವಲೋಕನಗಳಿಂದ ಈ ಹಂತಗಳಿಗೆ ಮುಂದೆಸಾಗೋಣ.

ಹಂತ 1: ಸಂಪನ್ಮೂಲಗಳನ್ನು ಮರುನಿರ್ದೇಶಿಸಿ

ಅಪೊಸ್ತಲ ಕೃತ್ಯಗಳು 1:8 - "ಆದರೆ ಪವಿತ್ರಾತ್ಮ ನಿಮ್ಮ ಮೇಲೆ ಬರಲು ನೀವು ಬಲವನ್ನು ಹೊಂದಿ

ಯೆರೂಸಲೇವಿುನಲ್ಲಿಯೂ ಎಲ್ಲಾ ಯೂದಾಯ ಸಮಾರ್ಯ ಸೀಮೆಗಳಲ್ಲಿಯೂ ಭೂಲೋಕದ ಕಟ್ಟಕಡೆಯವರೆಗೂ

ನನಗೆ ಸಾಕ್ಷಿಗಳಾಗಿರಬೇಕು ಅಂದನು."

ಕ್ರೈಸ್ತ ಪ್ರಭಾವ ಮತ್ತು ಸುವಾರ್ತಾಸೇವೆಯಲ್ಲಿ ಸಂಪನ್ಮೂಲಗಳ ಪ್ರಸ್ತುತ ಹಂಚಿಕೆಯನ್ನು ಅವಲೋಕನ ಮಾಡಿ.

ಅನಾದೃಷ್ಟವಾಗಿ, ಅಂಕಿಅಂಶಗಳು ಈ ಪ್ರಯತ್ನಗಳಲ್ಲಿ ಗಮನಾರ್ಹ ಶೇಕಡಾವಾರು (91%) ಪ್ರಾಥಮಿಕವಾಗಿ

ಅಕ್ರೈಸ್ತರಿಗೆ ಬದಲಾಗಿ ಕ್ರೈಸ್ತರನ್ನು ಗುರಿಮಾಡಿಕೊಂಡಿದೆ ಎಂದು ಸೂಚಿಸುತ್ತದೆ. ಇನ್ನೂ ಸುವಾರ್ತೆಯನ್ನು

ಕೇಳದವರನ್ನು ಪರಿಣಾಮಕಾರಿಯಾಗಿ ಸಂಧಿಸಲು ಸಂಪನ್ಮೂಲಗಳನ್ನು ಮರುನಿರ್ದೇಶಿಸುವ ಪರಿಣಾಮವನ್ನು

ಪರಿಗಣಿಸಿ.

ಅಷ್ಟೇ ಅಲ್ಲದೆ, ಮಿಷನರಿಗಳು ಹರಡಿಕೊಂಡಿರುವ ಬಗ್ಗೆ ಆಲೋಚಿಸಿ, ಅವರು ಹೆಚ್ಚಿನ ಪ್ರಮಾಣವು (76%)

ತಲುಪಿರುವ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ಆದರೆ ಕೇವಲ ಒಂದು ಸಣ್ಣ ಶೇಕಡಾವಾರು (1%)

ಸುವಾರ್ತೆಯನ್ನು ಎಂದಿಗೂ ಕೇಳದವರನ್ನು ಕೇಂದ್ರೀಕರಿಸುತ್ತಿದ್ದಾರೆ. ತಲುಪದ ಮತ್ತು ಸುವಾರ್ತೆ ಕೇಳದೆ

ಇರುವವರನ್ನು ತಲುಪಲು ಆದ್ಯತೆಗಳ ಬದಲಾವಣೆಗಾಗಿ ಪ್ರಾರ್ಥಿಸಿ.

ಹಂತ 2: ನಮ್ಮ ಸೇವೆಯನ್ನು ಮರುಮೌಲ್ಯಮಾಪನ ಮಾಡಿ

ಮಾರ್ಕ 11:12-14 ಓದಿ, ಅಲ್ಲಿ ಯೇಸು ಫಲಕೊಡದ ಅಂಜೂರದ ಮರವನ್ನು ಶಪಿಸುತ್ತಾನೆ.

ನಮ್ಮ ಸೇವೆಯ ಅಭ್ಯಾಸಗಳನ್ನು ಮೌಲ್ಯಮಾಪನ ಮಾಡುವ ಪ್ರಾಮುಖ್ಯತೆಯನ್ನು ಅವಲೋಕಿಸಿ.

"ಸುವಾರ್ತೆ ಬಡತನ"ವನ್ನು ನಿರ್ಮೂಲನೆ ಮಾಡುವುದು ಮತ್ತು ನಮ್ಮ ಪ್ರಯತ್ನಗಳು ಸುವಾರ್ತೆಯನ್ನು

ಪರಿಣಾಮಕಾರಿಯಾಗಿ ಸಾರುವುದರಲ್ಲಿ ಹೊಂದಿಕೆಯಾಗುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ

ಗುರಿಯಾಗಿರಬೇಕು. ನಮ್ಮ ಕಾರ್ಯತಂತ್ರಗಳು, ವಿಧಾನಗಳು ಮತ್ತು ಸಂಧಿಸುವ ರೀತಿಗಳ ಮರುಮೌಲ್ಯಮಾಪನ

ಮಾಡಲು ಜ್ಞಾನಕ್ಕಾಗಿ ಪ್ರಾರ್ಥಿಸಿ, ಇದರಿಂದ ನಾವು ದೇವರ ರಾಜ್ಯಕ್ಕಾಗಿ ಫಲ ಕೊಡಬಹುದು.

ಹಂತ 3: ನಮ್ಮ ಜೀವನಶೈಲಿಯನ್ನು ಮರುವಿನ್ಯಾಸಗೊಳಿಸಿ

ಮತ್ತಾಯ 6:25 ಓದಿ, ಅಲ್ಲಿ ಯೇಸು ನಮ್ಮ ಅಗತ್ಯಗಳಿಗಾಗಿ ಚಿಂತಿಸಬಾರದೆಂದು ಬೊಧಿಸುತ್ತಾನೆ.

2 ಕೊರಿಂಥ 11:27 ರಲ್ಲಿ ವಿವರಿಸಿದಂತೆ ಅಪೊಲಸ್ತಲನಾದ ಪೌಲನ ಜೀವನಶೈಲಿಯನ್ನು ಪರಿಗಣಿಸಿ. ಪೌಲನು

ತನ್ನನ್ನು ಪೂರ್ಣಹೃದಯದಿಂದ ಸೇವೆಗೆ ಸಮರ್ಪಿಸಿಕೊಂಡನು, ಅನೇಕವೇಳೆ ನಿದ್ರೆ, ಆಹಾರ, ಸೌಕರ್ಯ ಮತ್ತು

ಭದ್ರತೆಯನ್ನು ತ್ಯಾಗಮಾಡಿದನು. ಸಿ.ಟಿ. ಸ್ಟಡ್ ಅವರ ಕಥೆಯನ್ನು ನೋಡಿರಿ, ಅವರು ಸುವಾರ್ತೆಯನ್ನು

ಸಾರುವುದು, ತನ್ನ ಸ್ವಂತ ಸೌಕರ್ಯವನ್ನು ತ್ಯಾಗ ಮಾಡುವುದು ಮತ್ತು ಶಾಶ್ವತವಾದ ಪ್ರಭಾವವನ್ನು

ಬೀರುವುದರಲ್ಲಿ ಮಾದರಿಯಾಗಿದ್ದರು.

ನಿಮ್ಮ ಸ್ವಂತ ಜೀವನಶೈಲಿಯನ್ನು ಮೌಲ್ಯಮಾಪನ ಮಾಡಿ ಮತ್ತು ಅದು ಸುವಾರ್ತೆಯನ್ನು ಸಾರುವ

ಧ್ಯೇಯದೊಂದಿಗೆ ಹೇಗೆ ಹೊಂದಿಕೊಳ್ಳುತ್ತದೆ. ತ್ಯಾಗದ ಮನಸ್ಥಿತಿಯನ್ನು ಅಂಗೀಕರಿಸುವ ಇಚ್ಛೆಗಾಗಿ ಪ್ರಾರ್ಥಿಸಿ,

ದೇವರನ್ನು ನಂಬಿ ಆತನ ರಾಜ್ಯದ ಪ್ರಗತಿಗೆ ಆದ್ಯತೆ ಕೊಡಿ.

ಮುಕ್ತಾಯ:

ಇಂದು, ಸಂಪನ್ಮೂಲಗಳನ್ನು ಮರುನಿರ್ದೇಶಿಸುವ, ನಮ್ಮ ಸೇವೆಯನ್ನು ಮರುಮೌಲ್ಯಮಾಪನ ಮಾಡುವ ಮತ್ತು

ನಮ್ಮ ಜೀವನಶೈಲಿಯನ್ನು ಮರುವಿನ್ಯಾಸಗೊಳಿಸುವ ಹಂತಗಳನ್ನು ನಾವು ಅನ್ವೇಷಿಸಿದ್ದೇವೆ. ಈ ಹಂತಗಳನ್ನು

ನಿಮ್ಮ ಜೀವನಕ್ಕೆ ಅನ್ವಯಿಸಲು ದೇವರ ಮಾರ್ಗದರ್ಶನಕ್ಕಾಗಿ ಪ್ರಾರ್ಥಿಸಲು ಮತ್ತು ಅವಲೋಕನ ಮಾಡಲು

ಸಮಯ ತೆಗೆದುಕೊಳ್ಳಿರಿ. ಭಾರತದಲ್ಲಿ ಮತ್ತು ಹೊರದೇಶದಲ್ಲಿ ತಲುಪದವರನ್ನು ತಲುಪುವಲ್ಲಿ ಬದಲಾವಣೆಯನ್ನು

ಮಾಡಲು ದೇವರು ನಮಗೆ ಶಕ್ತಿಯನ್ನು ಕೊಡಲಿ

读经计划介绍

ವೆಚ್ಚ

ಭಾರತದಲ್ಲಿ ಸಂಧಿಸದವರನ್ನು ಸಂಧಿಸಲು ಕೇಂದ್ರೀಕರಿಸಿರುವ ಈ ಸತ್ಯವೇದದ ಯೋಜನೆಗೆ ಸ್ವಾಗತ. ಭಾರತದಲ್ಲಿರುವ ಪ್ರಮುಖ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ನಾವು ವೇದಿಕೆಯನ್ನು ಸಿದ್ದಪಡಿಸುತ್ತೇವೆ, ನಂತರ ನಾವು ವೆಚ್ಚದೊಂದಿಗೆ ಬರುವ ಹಂತಗಳನ್ನು ಅನ್ವೇಷಿಸುತ್ತೇವೆ ಮತ್ತು ಅಂತಿಮವಾಗಿ ನಾವು ಅಂತಿಮ ವೆಚ್ಚ – ಅಂದರೆ ದೇವರು ನಮಗಾಗಿ ತನ್ನ ಪ್ರಾಣವನ್ನು ಕೊಡುವ ಮೂಲಕ ಮಾಡಿದ ಬಲಿದಾನ ಬಗ್ಗೆ ಮಾತನಾಡುತ್ತೇವೆ.

More