ಚಿಂತೆಯನ್ನು ಅದರ ಆಟದಲ್ಲೇ ಸೋಲಿಸುವುದುSample
ಆಳವಾಗಿ ಉಸಿರಾಡಿರಿ
ನಮ್ಮ ಮಾನವ ದೇಹದಲ್ಲಿ ಒಂದು ಸ್ವಾಯತ್ತ ನರಮಂಡಲವಿದ್ದು ಅದರಲ್ಲಿ ಅನುವೇದನೆ ಮತ್ತು ಉಪಾನುವೇದನೆ ಎಂಬ ಎರಡು ಉಪ-ಮಂಡಲಗಳಿರುತ್ತವೆ. ಈ ಮೊದಲನೆಯ ನರಮಂಡಲವು ಚಿಂತೆಗಳಿಗೆ ನಾವು ನೀಡುವ ಪ್ರತಿಕ್ರಿಯೆಗಳನ್ನು ನಿಯಂತ್ರಿಸುತ್ತದೆ, ಅದು ತಾಂತ್ರಿಕತೆಯ ವಿರುದ್ಧ ಹೋರಾಡುತ್ತಲೇ ಇರುತ್ತದೆ. ಈ ಪ್ರತಿಕ್ರಿಯೆಗಳಿಂದಾಗಿ ಹೃದಯ ಬಡಿತ ಅಧಿಕವಾಗುತ್ತದೆ, ರಕ್ತದೊತ್ತಡ ಹೆಚ್ಚುತ್ತದೆ ಮತ್ತು ಕಾರ್ಟಿಸೊಲ್ ಸ್ರವಿಸುವಕೆ ಸಂಭವಿಸುತ್ತದೆ. ಎರಡನೆಯ ನರಮಂಡಲವು, ಅಂದರೆ ಉಪಾನುವೇದನ ನರಮಂಡಲವು ಚಿಂತೆಗಳಿಗೆ ಪ್ರತ್ಯುತ್ತರ ನೀಡುವ ವಿಶ್ರಾಂತಿ ಮತ್ತು ಆತಂಕವಿಲ್ಲದ ಕಾರ್ಯವಿಧಾನ ಆಗಿರುತ್ತದೆ. ನಾವು ಆಳವಾಗಿ ಉಸಿರು ಎಳೆದುಕೊಳ್ಳುವಾಗ ಇದು ಸಕ್ರಿಯಗೊಳಿಸಲ್ಪಡುತ್ತದೆ, ನಾವು ಸಮಾನ್ಯವಾಗಿ ಮಾಡುವಂತೆ ನಮ್ಮ ಎದೆಯಿಂದ ಉಸಿರಾಡುವದಲ್ಲ, ಆದರೆ ನಮ್ಮ ವಪೆಯಿಂದ ಉಸಿರಾಡುವುದು ಆಗಿದೆ. ಅಪಾಯವಿಲ್ಲದ ಕಾರಣ ಶಾಂತವಾಗಿದ್ದು ಭಯವಿಲ್ಲದೆ ಇರುವಂತೆ ಮೆದುಳಿನ ಗ್ರಂಥಿಗೆ ಒಂದು ಸೂಚನೆ ಕಳುಹಿಸುವ ಹಾಗೆ ಎಚ್ಚರಿಕೆಯಿಂದ ಉಸಿರು ಒಳಗೆ ಎಳೆದುಕೊಳ್ಳಬೇಕು ಮತ್ತು ಹೊರಗೆ ಬಿಡಬೇಕು.
ಏಕೆ ಈ ಚಿಕ್ಕ ವಿಜ್ಞಾನ ಪಾಠ ಅಗತ್ಯವಿತ್ತು? ಆಳವಾದ ಉಸಿರಾಟ ಮತ್ತು ಚಿಂತೆಯಿಂದ ಪ್ರಕ್ರಿಯಿಸುವದರಲ್ಲಿ ಕಡಿಮೆಗೊಳ್ಳುವದರ ನಡುವೆ ನೇರವಾದ ಸಂಬಂಧವಿರುತ್ತದೆ ಎಂದು ಸಾಬೀತುಗೊಂಡಿದೆ. ನೀವು ಆತಂಕಗೊಂಡರೆ ನಿಮ್ಮಲ್ಲಿ ಕಾಣಿಸುತ್ತಿರುವ ಎಲ್ಲಾ ಲಕ್ಷಣಗಳಿಂದ ನಿಮಗೆ ತಿಳಿದು ಬರುವದೇನೆಂದರೆ ನಿಮ್ಮ ದೇಹವನ್ನು ಶಾಂತಗೊಳಿಸಲು ಉಸಿರಾಡುತ್ತಿದ್ದೀರಿ ಎಂದು ನಿಮ್ಮ ಸಮಾಲೋಚಕನು ನಿಮಗೆ ತಿಳಿಸುವನು. ಈ ಭೂಮಿಯ ಮೇಲೆ ಇರುವ ಮಾನವರಾದ ನಮ್ಮಲ್ಲಿ ಪ್ರತಿಯೊಬ್ಬರು ಪರಿಣಿತನಾದ ಒಬ್ಬ ಸೃಷ್ಟಿಕರ್ತನಿಂದ ಸೃಷ್ಟಿಸಲ್ಪಟ್ಟಿದ್ದು ಆತನು ಯಾವ ತಪ್ಪುಗಳಿಲ್ಲದೆ ಸೃಷ್ಟಿಸಿದ್ದಾನೆ. ಆತನು ನಮ್ಮನ್ನು ಸೃಷ್ಟಸಿದ ವೇಳೆ ನಮ್ಮ ಶ್ವಾಸನಾಳಗಳಲ್ಲಿ ಜೀವಶ್ವಾಸ ಊದಿದನು ಮತ್ತು ಮರಣದಲ್ಲಿ ನಾವು ನಮ್ಮ ಕಣ್ಣುಗಳನ್ನು ಮುಚ್ಚುವ ತನಕ ಹಾಗೂ ಉಸಿರು ನಮ್ಮ ದೇಹವನ್ನು ಬಿಟ್ಟು ಹೋಗುವ ತನಕ ಇದೇ ಉಸಿರು ನಮ್ಮನ್ನು ಬದುಕಿಸುತ್ತದೆ. ಯೇಸುವನ್ನು ವೈಯಕ್ತಿಕವಾಗಿ ನಮ್ಮ ರಕ್ಷಕನೆಂದು ಅರಿತುಕೊಂಡು ನಮ್ಮ ಜೀವಿತಗಳಲ್ಲಿ ಆತನ ಅಗತ್ಯವಿದೆ ಎಂಬುದನ್ನು ಒಪ್ಪಿಕೊಳ್ಳುವದರಲ್ಲಿ, ಪವಿತ್ರಾತ್ಮನನ್ನು ನಾವು ನಮ್ಮೊಳಗೆ ಆಮಂತ್ರಿಸುತ್ತೇವೆ, ಆತನನ್ನು ಇಬ್ರಿಯ ಭಾಷೆಯಲ್ಲಿ "ರೂವಾಕ್" ಎಂದು ಕರೆಯಲಾಗಿದೆ. ರೂವಾಕ್ ಎಂಬ ಪದದ ಅರ್ಥವು "ಆತ್ಮ" ಎಂದಾಗಿದ್ದು "ಗಾಳಿ" ಅಥವಾ "ಉಸಿರು" ಎಂದು ಸಹ ಅರ್ಥವನ್ನು ಹೊಂದಿದೆ. ಯೇಸು ತನ್ನ ಪುನರುತ್ಥಾನದ ಬಳಿಕ ತನ್ನ ಶಿಷ್ಯರನ್ನು ಭೇಟಿಯಾದಾಗ ತನ್ನ ಶಿಷ್ಯರ ಮೇಲೆ ಊದಿ ಪವಿತ್ರಾತ್ಮನನ್ನು ಸ್ವೀಕರಿಸಿಕೊಳ್ಳಿರಿ ಎಂದು ಹೇಳಿದನು. ಹಳೆಯ ಒಡಂಬಡಿಕೆಯಲ್ಲಿ, ಯೆಹೆಜ್ಕೇಲ ಪ್ರವಾದಿಗೆ ಒಣಗಿದ ಮೂಳೆಗಳಿಂದ ತುಂಬಿದ್ದ ಒಂದು ಕಣಿವೆಯ ದರ್ಶನವು ಕೊಡಲ್ಪಡುತ್ತದೆ. ಆ ಮೂಳೆಗಳಿಗೆ ಪ್ರವಾದನೆ ನುಡಿದು (ಆ ಮೂಳೆಗಳು ಇಸ್ರಾಯೇಲ್ಯರನ್ನು ಪ್ರತಿನಿಧಿಸುತ್ತವೆ) ಮತ್ತು ಯೆಹೋವನಿಗಾಗಿ ಒಂದು ಸೈನ್ಯವನ್ನು ಎಬ್ಬಿಸು ಎಂದು ಆತನಿಗೆ ಹೇಳಲ್ಪಡುತ್ತದೆ. ಬಳಿಕ ನಿರ್ದಿಷ್ಟವಾಗಿ ಆತನಿಗೆ ಮೂಳೆಗಳೊಳಗೆ ಜೀವ ತುಂಬುವಂತೆ ನಾಲ್ಕು ದಿಕ್ಕುಗಳಿಂದ ಗಾಳಿಗಳಿಗೆ ಅಪ್ಪಣೆ ಕೊಟ್ಟು ಅವುಗಳೊಳಗೆ ಸೇರಿಕೊಳ್ಳುವಂತೆ ಆಜ್ಞಾಪಿಸು ಎಂದು ಹೇಳಲಾಗುತ್ತದೆ. ನಾವು ಬದುಕಬೇಕೆಂದರೆ ನಮ್ಮ ಜೀವಶ್ವಾಸವು ಅತ್ಯಾವಶ್ಯಕ ಎಂದು ಸ್ಪಷ್ಟವಾಗುತ್ತದಲ್ಲವೇ? ಚಿಂತೆಯು ನಮ್ಮನ್ನು ಹಿಡಿದುಕೊಳ್ಳುವಾಗ, ಅದು ನಮ್ಮನ್ನು ನಿಷ್ಕ್ರಿಯೆಗೊಳಿಸುತ್ತದೆ ಮತ್ತು ಕೆಲವೊಮ್ಮೆ ನಮ್ಮನ್ನು ಹಿಸುಕಿ ಜೀವವನ್ನೇ ತೆಗೆದು ಬಿಡುವಂತೆ ಬೆದರಿಕೆಯೊಡ್ಡುತ್ತದೆ. ಅಂತಹ ಸಮಯದಲ್ಲಿಯೇ ನಾವು ಪವಿತರಾತ್ಮನಿಗೆ ಗರ್ಭಗುಡಿಯಾಗಿರುವ ನಮ್ಮ ದೇಹಗಳ ಮೇಲೆ ಪುನಃ ನಿಯಂತ್ರಣವನ್ನು ಸಾಧಿಸಿಕೊಳ್ಳುವೆವು. ನೀವು ತೆಗೆದುಕೊಳ್ಳುವ ಪ್ರತಿ ಉಸಿರು ನಮ್ಮ ಜೀವ-ದಾಯಕ ಪವಿತ್ರಾತ್ಮನಂತೆಯೇ ಇರುತ್ತದೆ ಮತ್ತು ಹೊರ ಬಿಡುವ ಪ್ರತಿ ಶ್ವಾಸವು ದೇವರಿಂದ ಬರದಿರುವ ಎಲ್ಲವನ್ನು ಹೊರಗೆ ಹಾಕುವಂತಿರುತ್ತದೆ. ಮುಂದಿನ ಸಾರಿ ನಿಮ್ಮ ಆಲೋಚನೆಗಳು ನಿಮ್ಮ ಹತೋಟಿ ಮೀರಿ ಜಾರುವದಕ್ಕೆ ಆರಂಭಿಸುವಾಗ, ನಿಮ್ಮ ಮನಸ್ಸಿನಲ್ಲಿರುವ "ವಿರಾಮ" ಬಟನ್ ಒತ್ತಿರಿ ಮತ್ತು ದೇವರ ಗಾಳಿಯ ಒಳಹರಿವುಗಳನ್ನು ಆಳವಾಗಿ ಎಳೆದುಕೊಳ್ಳಿರಿ (ಕೀರ್ತನೆ 42; MSG ಆವೃತ್ತಿ) ಮತ್ತು ದೇವರ ಪ್ರೀತಿಯು ನಿಮ್ಮನ್ನು ತೊಳೆದು ದೇವರ ಸಮಾಧಾನವು ನಿಮ್ಮ ದಣಿದಿರುವ ಆತ್ಮವನ್ನು ತೇವಗೊಳಿಸುವಂತೆ ಅನುಮತಿಸಲು ನಿಧಾನವಾಗಿ ಉಸಿರು ಹೊರ ಬಿಡಿರಿ.
ಪ್ರಾರ್ಥನೆ:
ಪ್ರಿಯ ಕರ್ತನೇ,
ನನ್ನ ದೇಹದಲ್ಲಿರುವ ಪ್ರತಿ ಶ್ವಾಸದಿಂದ ನಾನು ನಿನ್ನನ್ನು ಆರಾಧಿಸಿ ನಿನಗೆ ಯೋಗ್ಯವಾದ ಸಕಲ ಮಹಿಮೆಯನ್ನು ಸಲ್ಲಿಸುವೆನು. ನಿನ್ನನ್ನು ಸಂಪೂರ್ಣ ಹೊಸ ಮಟ್ಟದಲ್ಲಿ ಅನುಭವಿಸುವಂತೆ ನನಗೆ ಸಹಾಯ ಮಾಡು ಮತ್ತು ಯೇಸುವಿನಲ್ಲಿ ನನಗೆ ವಾಗ್ದಾನ ಮಾಡಲ್ಪಟ್ಟಿರುವ ಐಶ್ವರ್ಯಗಳನ್ನು ಪೂರ್ಣವಾಗಿ ಅನುಭವಿಸುವಂತಾಗಲಿ. ನನಗೆ ಚಿಂತೆಯುಂಟಾಗುವ ಪ್ರತಿ ಸಾರಿ ನನ್ನ ಪರಿಸ್ಥಿತಿಯೊಳಗೆ ನಿನ್ನನ್ನು ಆಮಂತ್ರಿಸುವಂತಾಗಲಿ ಮತ್ತು ನೀನು ನನ್ನನ್ನು ನೋಡಿಕೊಳ್ಳುವಿ ಎಂದು ವಿಶ್ವಾಸಿಸುವಂತಾಗಲಿ.
ಇದೆಲ್ಲವನ್ನು ಯೇಸುವಿನ ನಾಮದಲ್ಲಿ ಬೇಡಿಕೊಳ್ಳುತ್ತೇನೆ,
ಆಮೆನ್!
About this Plan
ಎಲ್ಲಾ ವಿಧವಾದ ಚಿಂತೆಯು ನಮ್ಮನ್ನು ಎಡವುವಂತೆ ಮಾಡಿ ಭಯದಲ್ಲಿ ಕಟ್ಟಿ ಹಾಕುವದಾಗಿದ್ದು ನಮ್ಮನ್ನು ದುರ್ಬಲಗೊಳಿಸಬಲ್ಲದು. ಇದೇ ಕಥೆಯ ಅಂತ್ಯವಲ್ಲವಷ್ಟೇ, ಏಕೆಂದರೆ ಯೇಸುವಿನಲ್ಲಿ ನಮಗೆ ಹೋರಾಟವನ್ನು ಜಯಿಸುವದಕ್ಕೆ ಸ್ವಾತಂತ್ರ ಮತ್ತು ಕೃಪೆ ದೊರಕುತ್ತವೆ. ನಾವು ಅದನ್ನು ಕೇವಲ ಜಯಿಸುವುದಷ್ಟೇ ಅಲ್ಲ, ಆದರೆ ದೇವರ ವಾಕ್ಯದ ಹಾಗೂ ದೇವರ ಸಮ್ಮುಖವು ನಮ್ಮೊಂದಿಗೆ ಇರುತ್ತದೆಂಬ ನಿರಂತರವಾದ ನಿಶ್ಚಯತೆಯ ನಿನಿಮಿತ್ತವಾಗಿ ನಾವು ಅದಕ್ಕಾಗಿ ಉತ್ತಮಗೊಳಿಸಲ್ಪಡಬಲ್ಲೆವು.
More