BibleProject | ಲೂಕ ಮತ್ತು ಅಪೊಸ್ತಲರ ಕೃತ್ಯಗಳ ಮೂಲಕ ಪ್ರಯಾಣSample
ರೋಮನ್ ಸಾಮ್ರಾಜ್ಯದಾದ್ಯಂತಪೌಲನ ಪ್ರಚಾರ ಪ್ರಯಾಣದ ಬಗ್ಗೆ ಲೂಕನು ಹೇಳಲು ಮುಂದುವರೆಸುತ್ತಾನೆ. ಅವನು ಪ್ರಯಾಣಿಸುತ್ತಿದ್ದಂತೆ, ಯೇಸುವಿನ ರಾಜ್ಯದ ಬಗ್ಗೆ ಒಳ್ಳೆಯ ಸುದ್ದಿಯನ್ನು ಧೈರ್ಯದಿಂದ ಹಂಚಿಕೊಳ್ಳುತ್ತಾನೆ ಮತ್ತು ಅನೇಕರು ಪೌಲನ ಸಂದೇಶವನ್ನು ತಮ್ಮ ರೋಮನ್ ಜೀವನ ವಿಧಾನಕ್ಕೆ ಬೆದರಿಕೆಯೆಂದು ನೋಡುತ್ತಾರೆ. ಆದರೆ ಅಂತಿಮವಾಗಿ ಪೌಲನ ಸಂದೇಶವನ್ನು ಒಂದು ಸಂಪೂರ್ಣ ಹೊಸ ಜೀವನ ವಿಧಾನಕ್ಕೆ ಕಾರಣವಾಗುವ ಒಳ್ಳೆಯ ಸುದ್ದಿ ಎಂದು ಗುರುತಿಸುವ ಇತರರು ಇದ್ದಾರೆ. ಉದಾಹರಣೆಗೆ, ಫಿಲಿಪ್ಪಿಯ ಒಬ್ಬ ಸೆರೆಮನೆ ಅಧಿಕಾರಿಯ ಬಗ್ಗೆ ಲೂಕನು ಹೇಳುತ್ತಾನೆ. ಪೌಲಾ ಮತ್ತು ಸಿಲಾಸ್ ಅವರ ತಪ್ಪಾದ ಜೈಲುವಾಸದ ಕಥೆಯನ್ನು ನಾವು ಅನುಸರಿಸುತ್ತಿದ್ದಂತ, ಅವರನ್ನು ಭೇಟಿಯಾಗುತ್ತೇವೆ.
ನಗರಾದ್ಯಂತ ಗೊಂದಲಕ್ಕೆ ಕಾರಣವಾದ ಆರೋಪದ ನಂತರ, ಪುಲ ಮತ್ತು ಅವನ ಸಹೋದ್ಯೋಗಿ ಸಿಲಾಸ್ ಅವರನ್ನು ಅನ್ಯಾಯವಾಗಿ ಹೊಡೆದು ಎಸೆಯಲಾಗುತ್ತದೆ. ಸೆರೆಮನೆಯಲ್ಲಿ ಎಚ್ಚರವಾಗಿ ಮೈಗೆತ್ತಿಗೊಳಗಾಗಿ ರಕ್ತಸಿಕ್ತವಾಗಿ ಮಲಗಿರಬೇಕಾದರೆ, ಅವರು ದೇವರನ್ನು ಪ್ರಾರ್ಥಿಸಿ ಹಾಡಲು ಪ್ರಾರಂಭಿಸುತ್ತಾರೆ. ಕೈದಿಗಳು ತಮ್ಮ ಆರಾಧನಾ ಹಾಡುಗಳನ್ನು ಕೇಳುತ್ತಿರುವಾಗ, ಕೈದಿಗಳ ಸರಪಳಿಗಳು ಒಡೆದು ಸೆರೆಮನೆಯ ಎಲ್ಲಾ ಬಾಗಿಲುಗಳು ತೆರೆದುಕೊಳ್ಳುವಷ್ಟು ಹಿಂಸಾತ್ಮಕವಾಗಿ ಸೆರೆಮನೆಯ ಅಡಿಪಾಯವನ್ನು ಒಂದು ದೊಡ್ಡ ಭೂಕಂಪ ಅಲುಗಾಡಿಸುತ್ತದೆ. ಸೆರೆಮನೆ ಅಧಿಕಾರಿ ಇದನ್ನು ನೋಡಿ ಕೈದಿಗಳು ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಅವನನ್ನು ಗಲ್ಲಿಗೇರಿಸಲಾಗುವುದು ಎಂದು ತಿಳಿಯುತ್ತದೆ, ಆದ್ದರಿಂದ ಜೀವನದ ಹತಾಶೆಯಿಂದ ಅವನು ತನ್ನ ಕತ್ತಿಯನ್ನು ತನ್ನ ವಿರುದ್ಧವೇ ಸೆಳೆಯುತ್ತಾನೆ. ಆದರೆ ಪೌಲನು ಅವನ ಜೀವವನ್ನು ಉಳಿಸುವ ಸರಿಯಾದ ಸಮಯಕ್ಕೆ ಅವನನ್ನು ತಡೆಯುತ್ತಾನೆ. ಈ ಸಮಯದಲ್ಲಿ,ಕೊರಟಾದ ಸೆರೆಮನೆ ಅಧಿಕಾರಿಯು ಕುಗ್ಗಿ ಪೌಲಾ ಮತ್ತು ಸಿಲಾಸನ ಮುಂದೆ ಬೀಳುತ್ತಾನೆ. ತನ್ನ ಜೀವವನ್ನೂ ಶಾಶ್ವತವಾಗಿ ಉಳಿಸಬೇಕಾಗಿದೆ ಎಂದು ಅವನು ಗುರುತಿಸುತ್ತಾನೆ, ಮತ್ತು ಅವನು ಅದರ ದಾರಿ ತಿಳಿಯಲು ಬಯಸುತ್ತಾನೆ. ಪೌಲನು ಮತ್ತು ಸಿಲಾಸ್ ಅವನೊಂದಿಗೆ ಹಂಚಿಕೊಳ್ಳಲು ಉತ್ಸುಕರಾಗಿದ್ದಾರೆ, ಮತ್ತು ಆ ದಿನವೇ ಸೆರೆಮನೆ ಅಧಿಕಾರಿ ಮತ್ತು ಅವನ ಇಡೀ ಕುಟುಂಬವು ಯೇಸುವನ್ನು ಹಿಂಬಾಲಿಸಲು ಪ್ರಾರಂಭಿಸುತ್ತದೆ.
Scripture
About this Plan
ಲ್ಯೂಕ್ ಮತ್ತು ಆ್ಯಕ್ಟ್ಸ್ ಮೂಲಕ ಪ್ರಯಾಣ, ವ್ಯಕ್ತಿಗಳನ್ನು, ಸಣ್ಣ ಗುಂಪುಗಳನ್ನು ಮತ್ತು ಕುಟುಂಬಗಳನ್ನು ಲ್ಯೂಕ್ ಮತ್ತು ಆ್ಯಕ್ಟ್ಸ್ ಪುಸ್ತಕಗಳನ್ನು 40 ದಿನಗಳಲ್ಲಿ ಓದಲು ಪ್ರೇರೇಪಿಸುತ್ತದೆ. ಭಾಗವಹಿಸುವವರು ಯೇಸುವನ್ನು ಎದುರಿಸಲು ಮತ್ತು ಲ್ಯೂಕ್ ಅವರ ಅದ್ಭುತ ಸಾಹಿತ್ಯ ವಿನ್ಯಾಸ ಹಾಗೂ ಚಿಂತನೆಯ ಹರಿವಿನೊಂದಿಗೆ ತೊಡಗಿಸಿಕೊಳ್ಳಲು ಈ ಯೋಜನೆ ಅನಿಮೇಟೆಡ್ ವಿಡಿಯೋ ಮತ್ತು ಒಳನೋಟವುಳ್ಳ ಸಾರಾಂಶವನ್ನು ಒಳಗೊಂಡಿದೆ.
More