ಚಿಂತೆಯನ್ನು ಅದರ ಆಟದಲ್ಲೇ ಸೋಲಿಸುವುದುಮಾದರಿ
ಎರಡು ಕವಲುಗಳ ದಾರಿ
ನ್ಯೂ ಲಿವಿಂಗ್ ಟ್ರಾನ್ಸಲೆಶನ್ ಫಿಲಿಪ್ಪಿ 4:6 ಹೀಗೆ ಹೇಳುತ್ತದೆ: “ಯಾವುದರ ಬಗ್ಗೆಯೂ ಚಿಂತಿಸದೆ ಎಲ್ಲದರ ಬಗ್ಗೆಯೂ ಪ್ರಾರ್ಥಿಸಿರಿ.”
ಎಂತಹ ಮುಚ್ಚುಮರೆಯಿಲ್ಲದ ಆಜ್ಞೆ, ಅದರಲ್ಲಿ ಯಾವುದೇ ಒಗಟುತನವಿಲ್ಲ. ಹೀಗಿದ್ದರೂ ಅದನ್ನು ಅನುಸರಿಸುವುದು ಏಕೆ ಕಷ್ಟಕರ? ಚಿಂತೆಯೊಂದಿಗೆ ಮಾಡುವ ಹೋರಾಟವು ನಮ್ಮ ಮನಸ್ಸುಗಳನ್ನು ಮತ್ತು ಹೃದಯಗಳನ್ನು ವೇಗಗೊಳ್ಳುವಂತೆ ಮಾಡುವವು, ಅಂದರೆ ನಾವು ಯೋಚಿಸುವಂತದ್ದು ಮತ್ತು ಸಂಸ್ಕರಿಸುತ್ತಿದ್ದೇವೋ ಅದು ನಮ್ಮ ಪ್ರಸ್ತುತ ಪರಿಸ್ಥಿತಿಯ ಅಗತ್ಯತೆಗಳನ್ನು ಬಹಳವಾಗಿ ಮೀರಿ ಸಾಗುತ್ತದೆ. ಆ ಕಾರಣದಿಂದಲೇ ಅಪೊಸ್ತಲನಾದ ಪೌಲನು ಫಿಲಿಪ್ಪಿಯವರಿಗೆ 8ನೇ ವಚನದಲ್ಲಿ ಬರೆಯುವದೇನೆಂದರೆ: "ಅವರು ತಮ್ಮ ಆಲೋಚನೆಗಳನ್ನು ಯಾವುದು ಸತ್ಯವೂ, ಮಾನ್ಯವೂ, ನ್ಯಾಯವೂ, ಶುದ್ಧವೂ, ಪ್ರೀತಿಕರವೂ, ಮನೋಹರವೂ ಆಗಿದೆಯೋ ಅದರ ಮೇಲೆ ಲಕ್ಷ್ಯವಿಡುವಂತೆ ಮಾಡಿರಿ". ನಾವು ಒಂದು ವಿಷಯದಿಂದ ಮುಳುಗಿ ಹೋಗಿರುವ ಜಗತ್ತಿನಲ್ಲಿ ಜೀವಿಸಬೇಕೆಂದರೆ ನಮ್ಮ ಆಲೋಚನೆಗಳನ್ನು ಸಂಷ್ಕರಣೆ ಮಾಡುವುದು ಅಗತ್ಯ. ನಮ್ಮ ಆಲೋಚನೆಗಳನ್ನು ಸಂಷ್ಕರಣೆ ಮಾಡುವುದು ಎಂದರೆ ಉದ್ದೇಶಪೂರ್ವಕವಾಗಿ ಮತ್ತು ನಾಚಿಕೆಯನ್ನು ಬಿಟ್ಟು ನಕಾರಾತ್ಮಕ, ಭಯಭರಿತ, ಮತ್ತು ಚಿಂತೆ ಹುಟ್ಟಿಸುವ ಆಲೋಚನೆಗಳನ್ನು ಹೊರಕ್ಕೆ ದಬ್ಬಬೇಕು ಮತ್ತು ಅವುಗಳಿಗೆ ಬದಲಾಗಿ ಸತ್ಯವೂ, ಮಾನ್ಯವೂ, ನಿರ್ಮಲವೂ ಆಗಿರುವ ಆಲೋಚನೆಗಳನ್ನು ತುಂಬಿಸಿಕೊಳ್ಳಬೇಕು. ಇಲ್ಲೊಂದು ಸವಾಲು ಇರುತ್ತದೆ- ವಿನಿಮಯ ಮಾಡಿಕೊಳ್ಳುವುದು ಅಷ್ಟೊಂದು ನೇರವಾಗಿ ನಡೆಯುವಂಥದ್ದಲ್ಲ. ನಾವು ಕಂಪ್ಯೂಟರ್ ರೀತಿಯಲ್ಲಿ ನಕಾರಾತ್ಮಕ ಆಲೋಚನೆಗಳನ್ನು ಕಂಡು ಹಿಡಿದು ಅವುಗಳನ್ನು ತೆಗೆದು ಹಾಕಿ ಸಂತೋಷದ ಆಲೋಚನೆಗಳನ್ನು ತುಂಬಿಸಿಕೊಳ್ಳುವಂತೆ ಕ್ರಮವಿಧಿಗೊಳಿಸಲ್ಪಟ್ಟಿರುವವರಲ್ಲ. ಹಾಗಾದರೆ ಮುಂದೆ ಸಾಗುವ ದಾರಿ ಯಾವುದು? ಅದಕ್ಕೊಂದು ಪರಿಹಾರೋಪಾಯ ಇದೆಯಾ? ಹೌದು ಇದೆ ಮತ್ತು ಅದು ಸ್ತೋತ್ರದೊಂದಿಗೆ ಆರಂಭವಾಗುತ್ತದೆ. ನಾವು ಆಲೋಚನೆಗಳ ಸುಳಿಯಿಂದ ಹೊರ ಹೆಜ್ಜೆಯಿಟ್ಟು ದೇವರು ಯಾರೆಂಬುದಕ್ಕಾಗಿ, ಏನು ಮಾಡಿದ್ದಾನೆಂಬುದಕ್ಕಾಗಿ, ಏನು ಮಾಡುವೆನೆಂದು ವಾಗ್ಧಾನ ಮಾಡಿದ್ದಾನೆ ಎಂಬುದಕ್ಕಾಗಿ ಹಾಗೂ ಆತನು ನಮ್ಮ ಮೇಲಿಟ್ಟಿರುವ ಶಾಶ್ವತ ಪ್ರೀತಿಗಾಗಿ ಹೀಗೆ ಇತ್ಯಾದಿ ಸಂಗತಿಗಳಿಗೆ ಆತನನ್ನು ಸ್ತುತಿಸಬೇಕಾಗುತ್ತದೆ. ಸ್ತೋತ್ರ ಸಲ್ಲಿಸುವುದು ನಮ್ಮ ಮೇಲಿನ ದೃಷ್ಟಿಯನ್ನು ದೇವರ ಕಡೆಗೆ ತಿರುಗಿಸಿಕೊಳ್ಳುವಂತೆ ಮಾಡುವ ಒಂದು ಉದ್ದೇಶಪೂರ್ವಕ ಬದಲಾವಣೆ ಆಗಿದೆ. ಸ್ತೋತ್ರವು ಭಾರ ಮತ್ತು ಮಂಕಾದ ವಾತಾವರಣವನ್ನು ನಿರೀಕ್ಷೆ ಹಾಗೂ ಸಂತೋಷದ ವಾತಾವರಣವಾಗಿ ಮಾರ್ಪಡು ಮಾಡುತ್ತದೆ. ಸ್ತೋತ್ರವು ದೇವರನ್ನು ಪುನಃ ಆತನ ಹಕ್ಕುಳ್ಳ ಸ್ಥಾನವಾದ ನಮ್ಮ ಜೀವನದ ಹೃದಯವೆಂಬ ಸಿಂಹಾಸನದ ಮೇಲೆ ಆಸೀನನಾಗುವಂತೆ ಮಾಡಿ ನಾವು ಅನುಮತಿಸಿರುವ ಅನಾರೋಗ್ಯಕರ ಸಂಗತಿಗಳನ್ನು ಪದಚ್ಯುತಿಗೊಳಿಸುವದಾಗಿದೆ.
ಸ್ತೋತ್ರದ ಬಳಿಕ ಪ್ರಾರ್ಥನೆ ಬರುವದಾಗಿದ್ದು ನಿನ್ನೆಯ ವಾಚನದಲ್ಲಿ ನಾವು ಪ್ರಸ್ತಾಪಿಸಿದಂತಹ ಒಪ್ಪಿಸಿ ಕೊಡುವಂತದ್ದು ಸಂಭವಿಸುತ್ತದೆ. ಈ ಪ್ರಾರ್ಥನೆಯು ನಮ್ಮ ಚಿಂತೆಗಳನ್ನು ಪೂರ್ಣ ಶಕ್ತನಾಗಿರುವ ದೇವರ ಕೈಗಳಲ್ಲಿ ಶರಣಾಗತಗೊಳಿಸುವುದು ಆಗಿದೆ. ಆತನು ಸರ್ವಶಕ್ತನು, ಸರ್ವಜ್ಞಾನಿ ಮತ್ತು ಒಂದೇ ಸಮಯದಲ್ಲಿ ಎಲ್ಲೆಡೆಯೂ ಇರುವಂತ ದೇವರು. ಈ ಅತ್ಯಾದ್ಭುತನಾದ ರಕ್ಷಕನಲ್ಲದೆ ನಮ್ಮ ಸಮಸ್ಯೆಗಳ ಹೊರೆಯನ್ನು ಒಪ್ಪಿಸಿಕೊಳ್ಳುವದಕ್ಕೆ ಉತ್ತಮನು ಬೇರೆ ಇನ್ಯಾರು ಇದ್ದಾರೆ?. ಒಂದು ಚಿಂತೆಯ ಸರಣಿಯ ಯಾತನೆಗಳಲ್ಲಿ ಇರುವಾಗ ನಮ್ಮ ಚಿಂತೆಗಳನ್ನು ನೇರವಾಗಿ ಪ್ರಾರ್ಥನೆಗಳಾಗಿ ಪರಿವರ್ತಿಸುವುದು ಪ್ರಾಮುಖ್ಯವಾದದ್ದು. ದೇವರು ನಮ್ಮ ಭಯವನ್ನು ನಿಭಾಯಿಸಬಲ್ಲನು, ಆತನು ನಿಜಕ್ಕೂ ನಿಭಾಯಿಸಬಲ್ಲನು! ಪವಿತ್ರಾತ್ಮನು ಈ ಪ್ರಾರ್ಥನೆಯ ಸಮಯಗಳಲ್ಲಿ ನಮ್ಮ ಆಲೋಚನಾಕರ್ತನೆಂದು ಕರೆಯಲ್ಪಟ್ಟಿದ್ದು, ಆತನು ನಿಮಗೆ ಆದರಣೆಯುಂಟು ಮಾಡುವನು ಮತ್ತು ಆತನ ವಾಕ್ಯದಿಂದ ನಿಮಗೆ ತನ್ನ ಆಲೋಚನೆಯನ್ನು ಹೇಳುವನು. ನೀವು ಯೋಚಿಸುವದಕ್ಕೆ ತದ್ವಿರುದ್ಧವಾಗಿ, ನೀವು ಒಬ್ಬಂಟಿಗರಲ್ಲ, ನಿಮಗೆ ಸಹಾಯವಿಲ್ಲದೆ ಇರುವದಿಲ್ಲ ಮತ್ತು ನಿಮ್ಮ ಭಾವನಾತ್ಮಕ ಆರೋಗ್ಯವು ಬಹಳ ಪ್ರಾಮುಖ್ಯವಾದದ್ದು. ನಾವು ನಮ್ಮ ಹೃದಯ ಮತ್ತು ಮನಸ್ಸುಗಳನ್ನು ಸ್ತೋತ್ರ ಹಾಗೂ ಪ್ರಾರ್ಥನೆಯಿಂದ ಪುನಃ ಒಗ್ಗಿಕೊಳ್ಳುವಂತೆ ಮಾಡುವಾಗ ನಾವು ಆ ಮನೋಹರವೂ ಕೀರ್ತಿಗೆ ಯೋಗ್ಯವಾದ ಹಾಗೂ ಸತ್ಯಭರಿತ ಆಲೋಚನೆಗಳನ್ನು ಕರೆದು ನಮ್ಮ ಆತ್ಮವನ್ನು ತೊಳೆದು ನಮ್ಮನ್ನು ಆಂತರ್ಯದಲ್ಲಿ ನವೀಕರಿಸುವಂತೆ ಅನುಮತಿಸುವೆವು. ನೀವು ಚಿಂತೆಯೊಂದಿಗೆ ಕಾದಾಡಿ ಅದನ್ನು ಬಂದ ಸ್ಥಳಕ್ಕೆ ಹೊಡೆದೋಡಿಸಲು ಈ ಎರಡು ಕವಲುಳ್ಳ ದಾರಿಯನ್ನು ಅನುಸರಿಸಲು ಸಿದ್ಧರಿದ್ದೀರಾ?
ಪ್ರಾರ್ಥನೆ
ಪ್ರಿಯ ಕರ್ತನೇ,
ಅಂತಹ ಒಬ್ಬ ನಂಬಿಗಸ್ತ ದೇವರಾಗಿರುವದಕ್ಕೆ ನಿನಗೆ ಕೃತಜ್ಞತೆ ಸಲ್ಲಿಸುವೆನು, ನನ್ನನ್ನು ಕಾಲೋತ್ಪತ್ತಿಯ ಮುಂಚಿನಿಂದಲೂ ಪ್ರೀತಿಸಿದಿ. ನನಗಾಗಿ ತನ್ನ ಒಬ್ಬನೇ ಮಗನನ್ನು ಮರಣ ಹೊಂದಲು ಕಳುಹಿಸಿದ ಉದಾರ ಮನಸ್ಸಿನ ತಂದೆಗೆ ಕೃತಜ್ಞತೆ. ನನ್ನನ್ನು ಎಂದಿಗೂ ಬಿಟ್ಟುಕೊಡದಿದ್ದಕ್ಕಾಗಿ ನಿನಗೆ ಕೃತಜ್ಞತೆಗಳು. ನನ್ನ ಚಿಂತೆಯ ಮೇಲೆ ನಾನು ಜಯ ಹೊಂದಲು ಹಾಗೂ ನೀನು ನನ್ನ ಜೀವನದ ಮೂಲಕವಾಗಿ ಮಹಿಮೆಗೊಳ್ಳುವದನ್ನು ಕಾಣುವ ಹಾಗೆ ನನಗೆ ಸಹಾಯ ಮಾಡು.
ತಂದೆಯೇ ನಿನ್ನನ್ನು ಪ್ರೀತಿಸುತ್ತೇನೆ.
ಯೇಸುವಿನ ನಾಮದಲ್ಲಿ,
ಆಮೆನ್!
About this Plan
ಎಲ್ಲಾ ವಿಧವಾದ ಚಿಂತೆಯು ನಮ್ಮನ್ನು ಎಡವುವಂತೆ ಮಾಡಿ ಭಯದಲ್ಲಿ ಕಟ್ಟಿ ಹಾಕುವದಾಗಿದ್ದು ನಮ್ಮನ್ನು ದುರ್ಬಲಗೊಳಿಸಬಲ್ಲದು. ಇದೇ ಕಥೆಯ ಅಂತ್ಯವಲ್ಲವಷ್ಟೇ, ಏಕೆಂದರೆ ಯೇಸುವಿನಲ್ಲಿ ನಮಗೆ ಹೋರಾಟವನ್ನು ಜಯಿಸುವದಕ್ಕೆ ಸ್ವಾತಂತ್ರ ಮತ್ತು ಕೃಪೆ ದೊರಕುತ್ತವೆ. ನಾವು ಅದನ್ನು ಕೇವಲ ಜಯಿಸುವುದಷ್ಟೇ ಅಲ್ಲ, ಆದರೆ ದೇವರ ವಾಕ್ಯದ ಹಾಗೂ ದೇವರ ಸಮ್ಮುಖವು ನಮ್ಮೊಂದಿಗೆ ಇರುತ್ತದೆಂಬ ನಿರಂತರವಾದ ನಿಶ್ಚಯತೆಯ ನಿನಿಮಿತ್ತವಾಗಿ ನಾವು ಅದಕ್ಕಾಗಿ ಉತ್ತಮಗೊಳಿಸಲ್ಪಡಬಲ್ಲೆವು.
More
ಈ ಯೋಜನೆಯನ್ನು ಒದಗಿಸಿದ್ದಕ್ಕಾಗಿ ನಾವು ಆರ್ ಜಿಯಾನ್ ಗೆ ಧನ್ಯವಾದ ಹೇಳಲು ಬಯಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ: https://www.wearezion.co/bible-plan