ಪ್ರಲಾಪಗಳು ಮುನ್ನುಡಿ

ಮುನ್ನುಡಿ
ಕ್ರಿಸ್ತಪೂರ್ವ 586ರಲ್ಲಿ ಜೆರುಸಲೇಮ್ ಪಟ್ಟಣವು ನೆಲಸಮವಾಯಿತು. ಯೆಹೂದ ಜನತೆ ನಾಡನ್ನು ಬಿಟ್ಟು ವಲಸೆ ಹೋಗಬೇಕಾಯಿತು. ಈ ದುಃಖಕರವಾದ ಘಟನೆಯನ್ನು ಕುರಿತು ಐದು ಶೋಕಗೀತೆಗಳನ್ನು ಒಂದಾಗಿ ಪೋಣಿಸಿ ಇದಕ್ಕೆ “ಪ್ರಲಾಪಗಳು” ಎಂದು ಹೆಸರಿಸಲಾಗಿದೆ. ಇವುಗಳಲ್ಲಿ ಶೋಖಭಾವನೆಗಳು ತುಂಬಿವೆಯಾದರೂ ದೇವರಲ್ಲಿ ನಂಬಿಕೆ ಹಾಗೂ ಭವಿಷ್ಯದಲ್ಲಿ ಭರವಸೆ ಇರುವ ಗುಣಗಳು ಎದ್ದು ಕಾಣಿಸಿಕೊಳ್ಳುತ್ತವೆ.
ವಾರ್ಷಿಕ ಉಪವಾಸ ದಿನಗಳಲ್ಲೂ ಶೋಕ ಸಂದರ್ಭಗಳಲ್ಲೂ ಈ ಪ್ರಲಾಪನೆಗಳನ್ನು ಪಠಿಸುವ ವಾಡಿಕೆ ಯೆಹೂದ್ಯರಲ್ಲಿ ಹಾಗೂ ಕ್ರೈಸ್ತರಲ್ಲಿ ಇಂದಿಗೂ ಉಂಟು.
ಪರಿವಿಡಿ
ಜೆರುಸಲೇಮಿನ ದುಃಖ 1:1-22
ಜೆರುಸಲೇಮಿಗೆ ದಂಡನೆ 2:1-22
ದುಃಖ, ದಂಡನೆ ಮತ್ತು ಭರವಸೆ 3:1-66
ಜಜ್ಜರಿತವಾದ ಜೆರುಸಲೇಮ್ 4:1-22
ಕರುಣೆಗಾಗಿ ಪ್ರಾರ್ಥನೆ 5:1-22

ಪ್ರಸ್ತುತ ಆಯ್ಕೆ ಮಾಡಲಾಗಿದೆ:

ಪ್ರಲಾಪಗಳು ಮುನ್ನುಡಿ: KANCLBSI

Highlight

ಶೇರ್

ಕಾಪಿ

None

Want to have your highlights saved across all your devices? Sign up or sign in