ಯೆಜೆಕಿಯೇಲನು ಮುನ್ನುಡಿ

ಮುನ್ನುಡಿ
ಕ್ರಿ. ಪೂ. 586ರಲ್ಲಿ ಆದ ಜೆರುಸಲೇಮಿನ ಪತನದ ಮುಂಚೆ ಹಾಗೂ ಅದರ ಅನಂತರ ಬಾಬಿಲೋನಿಗೆ ಸೆರೆಹೋದವರಲ್ಲಿ ಪ್ರವಾದಿ ಯೆಜೆಕಿಯೇಲನು ಒಬ್ಬನು. ಆತ ನೀಡಿದ ದೈವೋಕ್ತಿಗಳು ಬಾಬಿಲೋನಿನಲ್ಲಿ ಸೆರೆಹೋದವರಿಗೆ ಮಾತ್ರವಲ್ಲ, ಜೆರುಸಲೇಮಿನಲ್ಲೇ ಉಳಿದಿದ್ದ ನಿವಾಸಿಗಳಿಗೂ ಅನ್ವಯಿಸುತ್ತವೆ.
ಯೆಜೆಕಿಯೇಲನ ಗ್ರಂಥದಲ್ಲಿ ಆರು ಮುಖ್ಯ ಭಾಗಗಳಿವೆ: 1. ಯೆಜೆಕಿಯೇಲನು ಪ್ರವಾದಿಯಾಗಲು ದೇವರಿತ್ತ ಕರೆ; 2. ದೇವರ ತೀರ್ಪು, ಬರಲಿರುವ ಜೆರುಸಲೇಮಿನ ವಿನಾಶ ಹಾಗೂ ಪತನದ ಬಗ್ಗೆ ಎಚ್ಚರಿಕೆ; 3. ತನ್ನ ಜನರನ್ನು ಶೋಷಣೆಗೆ ಗುರಿಮಾಡಿ, ಅವರು ದಾರಿತಪ್ಪುವಂತೆ ಮಾಡಿದ ರಾಷ್ಟ್ರಗಳ ಬಗ್ಗೆ ಸರ್ವೇಶ್ವರನು ನೀಡಿದ ಸಂದೇಶ ಹಾಗೂ ದೈವ ತೀರ್ಪು; 4. ಜೆರುಸಲೇಮಿನ ಪತನದ ನಂತರ ಇಸ್ರಯೇಲಿಗೆ ದೊರೆತ ಉಪಶಮನ; ಭವ್ಯ ಭವಿಷ್ಯದ ವಾಗ್ದಾನ; 5. ಗೋಗನಿಗೆ ವಿರುದ್ಧವಾದ ಪ್ರವಾದನೆ; 6. ಮಹಾದೇವಾಲಯದ ಪುನರ್ನಿರ್ಮಾಣ ಹಾಗೂ ರಾಷ್ಟ್ರದ ಅಭ್ಯುದಯ ಕುರಿತು ಪ್ರವಾದಿಯ ಚಿತ್ರೀಕರಣ.
ಯೆಜೆಕಿಯೇಲನ ವಿಶ್ವಾಸ ಅಚಲವಾಗಿತ್ತು. ಅವನ ಕಲ್ಪನಾಶಕ್ತಿ ಅಗಾಧವಾಗಿತ್ತು. ದಿವ್ಯದರ್ಶನಗಳು ಹಾಗೂ ಸಾಂಕೇತಿಕ ಕಾರ್ಯಗಳು ದೈವಪ್ರೇರಿತವಾದ ಅವನ ಅನಿಸಿಕೆಗಳು ಇಲ್ಲಿ ಪ್ರತಿಬಿಂಬಿಸುತ್ತವೆ. ಅಂತರಂಗದಲ್ಲಿ ಮಾನವನು ಹೊಸಬನಾಗಬೇಕು; ತನ್ನ ಪಾಪಗಳಿಗೆ ತಾನೇ ಹೊಣೆಯಾಗಬೇಕು; ಅವುಗಳ ಪರಿಣಾಮವನ್ನು ತಾನೇ ಅನುಭವಿಸಬೇಕು ಎಂಬುವು ಅವನ ಈ ಗ್ರಂಥದ ಮುಖ್ಯಾಂಶಗಳು ಎನ್ನಬಹುದು. ಯೆಜೆಕಿಯೇಲನು ಯಾಜಕ ಹಾಗು ಪ್ರವಾದಿಯಾಗಿದ್ದುದರಿಂದ ಮಹಾದೇವಾಲಯದ ಹಾಗೂ ಪವಿತ್ರತೆಯ ಬಗ್ಗೆ ಅಪಾರ ಆಸಕ್ತಿಯನ್ನು ವ್ಯಕ್ತಪಡಿಸುತ್ತಾನೆ.
ಪರಿವಿಡಿ
1. ಯೆಜೆಕಿಯೇಲನಿಗೆ ಬಂದ ಕರೆ 1:1—3:27
2. ಜೆರುಸಲೇಮಿನ ವಿನಾಶ ಕುರಿತ ಸಂದೇಶ 4:1—24:27
3. ರಾಷ್ಟ್ರಗಳ ಮೇಲೆ ದೇವರ ತೀರ್ಪು 25:1—32:32
4. ದೇವರು ತನ್ನ ಜನರಿಗಿತ್ತ ವಾಗ್ದಾನ 33:1—37:28
5. ಗೋಗಿನ ವಿರುದ್ಧ ಪ್ರವಾದನೆ 38:1—39:29
6. ಮಹಾದೇವಾಲಯದ ಹಾಗೂ ರಾಷ್ಟ್ರದ ದರ್ಶನ 40:1—48:35

ಪ್ರಸ್ತುತ ಆಯ್ಕೆ ಮಾಡಲಾಗಿದೆ:

ಯೆಜೆಕಿಯೇಲನು ಮುನ್ನುಡಿ: KANCLBSI

Highlight

ಶೇರ್

ಕಾಪಿ

None

Want to have your highlights saved across all your devices? Sign up or sign in