ಆದಿಕಾಂಡ ಮುನ್ನುಡಿ
ಮುನ್ನುಡಿ
“ಆದಿ” (ಜೆನೆಸಿಸ್) ಎಂದರೆ ಮೊದಲು ಆಥವಾ ಮೂಲ. ಈ ಜಗದ ಹಾಗೂ ಇದರ ಜನತೆಯ ಮೂಲ ಯಾವುದು? ಆದು ಮೊದಲು ಆದುದು ಹೇಗೆ? ಈ ಲೋಕದಲ್ಲಿ ನಾವು ಅನುಭವಿಸುತ್ತಿರುವ ಸಾವುನೋವುಗಳು, ದುಃಖದುಗುಡಗಳು ಹೇಗೆ ತಲೆಯೆತ್ತಿಕೊಂಡವು? ಇವು ಈ ಪುಸ್ತಕದ ವಿಷಯಗಳು.
ಈ ಲೋಕಕ್ಕೂ ಇದರ ನಿವಾಸಿಗಳಿಗೂ ಮೂಲ ಕಾರಣಕರ್ತ ದೇವರೇ. ತನಗೂ ದೇವರಿಗೂ ಆದಿಯಿಂದ ಇದ್ದ ಸಂಬಂಧವನ್ನು ಮಾನವ ಪಾಪದ ಮೂಲಕ ಕಡಿದುಕೊಂಡ. ಆದರೆ ದೇವರ ಕರುಣೆ ಅಷ್ಟಕ್ಕೆ ನಿಂತುಹೋಗಲಿಲ್ಲ.
ಮಾನವರೆಲ್ಲರನ್ನು ಉದ್ಧಾರಮಾಡಲು ದೇವರು ಅಬ್ರಹಾಮನನ್ನು ಆರಿಸಿಕೊಂಡರು. ಈ ಪುನರುದ್ಧಾರದ ಕಾರ್ಯದಲ್ಲಿ ಅಬ್ರಹಾಮನ ವಿಶ್ವಾಸ ಅಚಲವಾಗಿತ್ತಾದರೂ, ವಿಧೇಯತೆ ಅಪ್ರತಿಮವಾಗಿತ್ತಾದರೂ ದೇವರ ಪಾತ್ರವೇ ಪ್ರಪ್ರಥಮ ಹಾಗೂ ಪ್ರಧಾನ. ಅವರು ಪೂರ್ವಜರಾದ ಅಬ್ರಹಾಮ, ಇಸಾಕ ಮತ್ತು ಯಕೋಬರಿಗೆ ಮಾಡಿದ ವಾಗ್ದಾನ ನೆರವೇರಿಯೇ ತೀರುವುದು ಎಂಬ ದೃಢನಂಬಿಕೆಯೊಂದಿಗೆ ಈ ಪುಸ್ತಕ ಮುಕ್ತಾಯಗೊಳ್ಳುತ್ತದೆ.
ಈ ಆದಿಕಾಂಡ ಮೂರು ಪ್ರಾಮುಖ್ಯ ಸಂಪ್ರದಾಯ ಮೂಲಗಳಿಂದ ಬೆರೆತಿದೆ ಎಂದು ಪರಿಣಿತರ ಅಭಿಪ್ರಾಯ. ಇವುಗಳನ್ನು ಆಂಗ್ಲ ಭಾಷೆಯಲ್ಲಿ “ಯಾವಿಸ್ಟಿಕ್”, “ಎಲೊವಿಸ್ಟಿಕ್” ಮತ್ತು “ಪ್ರೀಸ್ಟ್ಲೀ” ಮೂಲಗಳೆಂದು ಕರೆಯುತ್ತಾರೆ.
ಪರಿವಿಡಿ
ಭೂಮ್ಯಾಕಾಶಗಳ ಹಾಗು ಮಾನವಕುಲದ ಸೃಷ್ಟಿ 1:1—2:25
ಪಾಪ ಮತ್ತು ಪರಿತಾಪದ ಆರಂಭ 3:1-24
ಆದಾಮನಿಂದ ನೋಹನವರೆಗೆ 4:1—5:32
ನೋಹ ಮತ್ತು ಪ್ರಳಯ 6:1—10:32
ಬಾಬೆಲ್ ಗೋಪುರ 11:1-9
ಶೇಮ್ನಿಂದ ಅಬ್ರಹಾಮನವರೆಗೆ 11:10-32
ಪಿತಾಮಹರಾದ ಅಬ್ರಹಾಮ, ಇಸಾಕ ಹಾಗು ಯಕೋಬ 12:1—35:28
ಏಸಾವನ ಸಂತತಿ36:1-42
ಜೋಸೆಫ್ ಮತ್ತು ಸಹೋದರರು 37:1—45:28
ಈಜಿಪ್ಟಿನಲ್ಲಿ ಇಸ್ರಯೇಲರು 46:1—50:26
Jelenleg kiválasztva:
ಆದಿಕಾಂಡ ಮುನ್ನುಡಿ: KANCLBSI
Kiemelés
Megosztás
Másolás
Szeretnéd, hogy a kiemeléseid minden eszközödön megjelenjenek? Regisztrálj vagy jelentkezz be
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.