1
ಲೂಕ 23:34
ಕನ್ನಡ ಸತ್ಯವೇದವು J.V. (BSI)
ಆಗ ಯೇಸು - ತಂದೆಯೇ, ಅವರಿಗೆ ಕ್ಷವಿುಸು; ತಾವು ಏನು ಮಾಡುತ್ತೇವೆಂಬದನ್ನು ಅರಿಯರು ಅಂದನು. ಆಮೇಲೆ ಆತನ ಬಟ್ಟೆಗಳನ್ನು ಪಾಲುಮಾಡಿ ಚೀಟು ಹಾಕಿದರು.
Comparer
Explorer ಲೂಕ 23:34
2
ಲೂಕ 23:43
ಅದಕ್ಕೆ ಯೇಸು - ಈಹೊತ್ತೇ ನನ್ನ ಸಂಗಡ ಪರದೈಸಿನಲ್ಲಿರುವಿ ಎಂದು ನಿನಗೆ ಸತ್ಯವಾಗಿ ಹೇಳುತ್ತೇನೆ ಎಂದು ಉತ್ತರಕೊಟ್ಟನು.
Explorer ಲೂಕ 23:43
3
ಲೂಕ 23:42
ಯೇಸುವೇ, ನೀನು ನಿನ್ನ ರಾಜ್ಯವನ್ನು ಪಡೆದವನಾಗಿ ಬರುವಾಗ ನನ್ನನ್ನು ನೆನಸಿಕೋ ಅಂದನು.
Explorer ಲೂಕ 23:42
4
ಲೂಕ 23:46
ಆಮೇಲೆ ಯೇಸು - ತಂದೆಯೇ, ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸಿಕೊಡುತ್ತೇನೆ ಎಂದು ಮಹಾಧ್ವನಿಯಿಂದ ಕೂಗಿದನು; ಇದನ್ನು ಹೇಳಿದ ಮೇಲೆ ಪ್ರಾಣಬಿಟ್ಟನು.
Explorer ಲೂಕ 23:46
5
ಲೂಕ 23:33
ಅವರು ಕಪಾಲವೆಂಬ ಸ್ಥಳಕ್ಕೆ ಬಂದಾಗ ಅಲ್ಲಿ ಆತನನ್ನೂ ಆ ದುಷ್ಕರ್ಮಿಗಳನ್ನೂ ಶಿಲುಬೆಗೆ ಹಾಕಿದರು, ಒಬ್ಬನನ್ನು ಆತನ ಬಲಗಡೆಯಲ್ಲಿ ಒಬ್ಬನನ್ನು ಆತನ ಎಡಗಡೆಯಲ್ಲಿ ಹಾಕಿದರು.
Explorer ಲೂಕ 23:33
6
ಲೂಕ 23:44-45
ಇಷ್ಟರಲ್ಲಿ ಹೆಚ್ಚು ಕಡಿಮೆ ಮಧ್ಯಾಹ್ನವಾಯಿತು. ಆಗಲಿಂದ ಸೂರ್ಯನು ಕಾಂತಿಗುಂದಿ ಮೂರು ಘಂಟೆಯ ತನಕ ಆ ದೇಶದ ಮೇಲೆಲ್ಲಾ ಕತ್ತಲೆ ಕವಿಯಿತು; ಇದಲ್ಲದೆ ದೇವಾಲಯದ ತೆರೆಯು ನಡುವೆ ಹರಿದುಹೋಯಿತು.
Explorer ಲೂಕ 23:44-45
7
ಲೂಕ 23:47
ಶತಾಧಿಪತಿಯು ನಡೆದ ಸಂಗತಿಯನ್ನು ನೋಡಿ - ಈ ಮನುಷ್ಯನು ಸತ್ಪುರುಷನೇ ನಿಜ ಎಂದು ದೇವರನ್ನು ಕೊಂಡಾಡಿದನು.
Explorer ಲೂಕ 23:47
Accueil
Bible
Plans
Vidéos