ಆದಿಕಾಂಡ 10
10
ನೋಹನ ಮಕ್ಕಳ ಸಂತಾನ
(೧ ಪೂರ್ವ. 1:5-23)
1ನೋಹನ ಮಕ್ಕಳಾದ ಶೇಮ್, ಹಾಮ್ ಮತ್ತು ಯೆಫೆತರಿಗೆ ಜಲಪ್ರಳಯ ಮುಗಿದ ಮೇಲೆ ಮಕ್ಕಳಾದರು. ಅವರ ವಂಶಾವಳಿ ಇದು :
ಯೆಫೆತನ ಸಂತಾನ
2ಯೆಫೆತನ ಮಕ್ಕಳು ಇವರು - ಗೋಮೆರ್, ಮಾಗೋಗ್, ಮಾದಯ್, ಯಾವಾನ್, ತೂಬಲ್, ಮೆಷೆಕ್ ಮತ್ತು ತೀರಾಸ್. 3ಗೋಮೆರನ ಮಕ್ಕಳು ಅಷ್ಕೆನಸ್, ರೀಫತ್ ಮತ್ತು ತೋಗರ್ಮ. 4ಯಾವಾನನ ಮಕ್ಕಳು - ಎಲಿಷಾ, ಸ್ಪೇಯಿನ್ (ತಾರ್ಷಿಸ್), ಸೈಪ್ರಸ್ (ಕಿತ್ತೀಮ್) ಮತ್ತು ದೋದಾ ಎಂಬ ಸ್ಥಳದವರು. ಇವರು ಸಮುದ್ರದ ರೇವುಗಳಲ್ಲಿ ಹರಡಿಕೊಂಡರು. 5ದೇಶ - ಭಾಷಾ - ಕುಲ - ಜನಾಂಗಗಳ ಪ್ರಕಾರ ಇವರೇ ಯೆಫೆತನ ವಂಶದವರು.
ಹಾಮನ ಸಂತಾನ
6ಹಾಮನ ಮಕ್ಕಳು ಯಾರೆಂದರೆ - ಕೂಷ್, ಈಜಿಪ್ಟ್ (ಮಿಚ್ರಯಿಮ್) ಲಿಬಿಯಾ (ಪೂತ್) ಮತ್ತು ಕಾನಾನ್ ಎಂಬುವರು. 7ಕೂಷನ ಮಕ್ಕಳು - ಸೆಬಾ, ಹವೀಲ, ಸಬ್ತಾ, ರಗ್ಮ, ಸಬ್ತಕಾ ಎಂಬ ಜನಾಂಗಗಳು. ರಗ್ಮ ಸಂತಾನದವರು - ಶೆಬಾ, ದೆದಾನ್ ಎಂಬ ಜನಾಂಗಗಳು. 8ಕೂಷನು ನಿಮ್ರೋದನನ್ನು ಪಡೆದನು. ಇವನೇ ಪರಾಕ್ರಮದಲ್ಲಿ ಮೊದಲನೆಯ ಭೂರಾಜ. 9ದೇವರ ದೃಷ್ಟಿಯಲ್ಲಿ ದಿಟ್ಟ ಬೇಟೆಗಾರ. "ಪ್ರಭು ನಿನ್ನನ್ನು ನಿಮ್ರೋದನಂಥ ದಿಟ್ಟಬೇಟೆಗಾರನಾಗಿಸಲಿ" ಎಂಬ ನಾಣ್ನುಡಿ ಇಂದಿಗೂ ಇದೆ. 10ಬಾಬಿಲೋನಿಯ (ಶಿನಾರ್) ನಾಡಿನಲ್ಲಿರುವ ಯೆರೆಕ್, ಅಕ್ಕದ್ ಬಾಬಿಲೋನ್ ಕಲ್ನೇ ಈ ಎಲ್ಲ ಪಟ್ಟಣಗಳೇ ಅವನ ರಾಜ್ಯದ ಮೂಲ ಪಟ್ಟಣಗಳು. 11ಅವನು ಆ ನಾಡಿನಿಂದ ಹೊರಟು ಅಸ್ಸೀರಿಯಾ ನಾಡಿಗೆ ಬಂದು ನಿನೆವೆ, ರಹೋಬೋತೀರ್, ಕೆಲಹ ಎಂಬ ಪಟ್ಟಣಗಳನ್ನೂ 12ನಿನೆವೆಗೂ ಮಹಾ ಪಟ್ಟಣವಾದ ಕೆಲಹಕ್ಕೂ ನಡುವೆ ಇರುವ ರೆಸೆನ್ ಪಟ್ಟಣವನ್ನೂ ಕಟ್ಟಿಸಿದನು.
13ಈಜಿಪ್ಟ್ (ಮಿಚ್ರಯಿಮ್)ನವರಿಂದ ಲಿಡ್ಯರೂ ಅನಾಮ್ಯರೂ ಲೆಹಾಬ್ಯರೂ ನಪ್ತುಹ್ಯರೂ ಪತ್ರುಸ್ಯರೂ 14ಕಸ್ಲುಹ್ಯರೂ ಕೆಪ್ತೋರ್ಯರೂ ಹುಟ್ಟಿದರು. ಕಸ್ಲುಹ್ಯರಿಂದ ಬಂದವರು ಫಿಲಿಷ್ಟಿಯರು.
15ಕಾನಾನ್ ವಂಶದಲ್ಲಿ ಮೊದಲು ಹುಟ್ಟಿದವನು ಸೀದೋನ್; ಆಮೇಲೆ ಹೇತ್ ಹುಟ್ಟಿದನು. 16ಇದಲ್ಲದೆ ಯೆಬೂಸಿಯರೂ ಅಮೋರಿಯರೂ ಗಿರ್ಗಾಷಿಯರೂ 17ಹಿವ್ವಿಯರೂ ಅರ್ಕಿಯರೂ ಸೀನಿಯರೂ. 18ಅರ್ವಾದಿಯರೂ ಚೆಮಾರಿಯರೂ ಹಮಾತಿಯರೂ ಕಾನಾನನಿಂದ ಹುಟ್ಟಿದರು. ಕಾಲಕ್ರಮೇಣ ಈ ಕಾನಾನ್ ಕುಲಗಳವರು ಹರಡಿಕೊಂಡರು. 19ಕಾನಾನ್ಯರ ನಾಡು ಸೀದೋನ್ ಪಟ್ಟಣದಿಂದ ಗೆರಾರಿಗೆ ಹೋಗುವ ದಾರಿಯಲ್ಲಿ ಇರುವ ಗಾಜಾ ಪಟ್ಟಣದವರೆಗೂ ಮತ್ತು ಸೊದೋಮ್, ಗೊಮೋರ, ಆದ್ಮಾ, ಚೆಬೋಯಿಮ್ ಎಂಬ ಪಟ್ಟಣಗಳಿಗೆ ಹೋಗುವ ದಾರಿಯಲ್ಲಿದ್ದ ಲೆಷಾ ಊರಿನವರೆಗೂ ಹಬ್ಬಿತ್ತು. 20ಕುಲ - ಭಾಷಾ - ದೇಶ - ಜನಾಂಗಗಳ ಪ್ರಕಾರ ಇವರೇ ಹಾಮನ ವಂಶದವರು.
ಶೇಮನ ಸಂತಾನ
21ಹಿಬ್ರಿಯರೆಲ್ಲರಿಗೆ ಮೂಲಪುರುಷನೂ ಯೆಫೆತನ ಅಣ್ಣನೂ ಆಗಿದ್ದ ಶೇಮನಿಗು ಸಹ ಮಕ್ಕಳಾದರು. 22ಶೇಮನ ಮಕ್ಕಳು ಇವರು - ಏಲಾಮ್, ಅಶ್ಯೂರ್, ಅರ್ಪಕ್ಷದ್, ಲೂದ್ ಮತ್ತು ಆರಾಮ್. 23ಆರಾಮ್ ಸಂತಾನದವರು - ಊಸ್, ಹೂಲ್, ಗೆತೆರ್ ಮತ್ತು ಮಷ್. 24ಅರ್ಪಕ್ಷದನಿಂದ ಶೆಲಹನೂ ಶೆಲಹನಿಂದ ಎಬರನೂ ಹುಟ್ಟಿದರು. 25ಎಬರನಿಗೆ ಇಬ್ಬರು ಮಕ್ಕಳು. ಒಬ್ಬನಿಗೆ ಪೆಲೆಗೆಂಬ ಹೆಸರು. ಇವನ ಕಾಲದಲ್ಲೇ ಭೂಜನದ ವಿಭಜನೆ ಆದುದು. ಅವನ ತಮ್ಮನ ಹೆಸರು ಯೊಕ್ತಾನ್. 26ಯೊಕ್ತಾನನ ಮಕ್ಕಳು ಇವರು - ಆಲ್ಮೋದಾದ್, ಶೆಲಿಪ್, ಹಜರ್ಮಾವೆತ್, ಯೆರೆಹ. 27ಹದೋರಾಮ್, ಊಜಾಲ್, ದೀಕ್ಲಾ, 28ಓಬಾಲ್, ಅಬೀಮಯೇಲ್, ಶೆಬಾ, 29ಓಫೀರ್, ಹವೀಲ, ಯೋಬಾಬ್ ಎಂಬ ಸ್ಥಳಗಳವರು. ಈ ಕುಲಗಳೆಲ್ಲ ಯೋಕ್ತಾನನಿಂದ ಹುಟ್ಟಿದವು. 30ಇವರ ನಿವಾಸವು ಮೇಶಾ ನಾಡು ಮೊದಲುಗೊಂಡು ಪೂರ್ವಕ್ಕಿರುವ ಸೆಫಾರ್ ಎಂಬ ಬೆಟ್ಟದವರೆಗೂ ಹರಡಿತ್ತು. 31ಕುಲ, ಭಾಷೆ, ಜನಾಂಗಗಳ ಪ್ರಕಾರ ಇವರೇ ಶೇಮನ ವಂಶದವರು.
32ಸಂತತಿ - ಜನಾಂಗಗಳ ಪ್ರಕಾರ ಇವರೇ ನೋಹನ ವಂಶದವರು. ಜಲಪ್ರಳಯವಾದ ನಂತರ ಭೂಮಿಯ ಮೇಲೆ ಹರಡಿಕೊಂಡ ಜನಾಂಗಗಳು ಇವರೇ.
Currently Selected:
ಆದಿಕಾಂಡ 10: KANCLBSI
Tõsta esile
Share
Copy
Want to have your highlights saved across all your devices? Sign up or sign in
Kannada C.L. Bible - ಸತ್ಯವೇದವು C.L.
Copyright © 2016 by The Bible Society of India
Used by permission. All rights reserved worldwide.