Logo YouVersion
Ikona vyhledávání

ಆದಿಕಾಂಡ 10

10
ನೋಹನ ಮಕ್ಕಳಿಂದ ಉತ್ಪತ್ತಿಯಾದ ಜನಾಂಗಗಳ ಪಟ್ಟಿ
1ನೋಹನ ಮಕ್ಕಳಾದ ಶೇಮ್ ಹಾಮ್ ಯೆಫೆತರ ವಂಶದವರ ಚರಿತ್ರೆಯು - ಜಲಪ್ರಳಯವಾದ ಮೇಲೆ ಅವರಿಗೆ ಮಕ್ಕಳು ಹುಟ್ಟಿದರು.
2ಯೆಫೆತನ#10.2 1-5ವಚನಗಳಲ್ಲಿ ಬರೆದಿರುವ ಸಂಗತಿಗಳು 1 ಪೂರ್ವ. 1.5-7ರಲ್ಲಿಯೂ ಬರೆದಿವೆ. ಯೆಹೆ. 38.1-6 ನೋಡಿರಿ. ಸಂತಾನದವರು ಯಾರಂದರೆ - ಗೋಮೆರ್, ಮಾಗೋಗ್, ಮಾದಯ್, ಯಾವಾನ್, ತೂಬಲ್, ಮೆಷೆಕ್, ತೀರಾಸ್ ಎಂಬವರೇ.
3ಗೋಮೆರನ ಸಂತಾನದವರು - ಅಷ್ಕೆನಸ್, ರೀಫತ್,#10.3 ಅಥವಾ: ದೀಫತ್; 1 ಪೂರ್ವ. 1.6. ತೋಗರ್ಮ ಎಂಬವರು.
4ಯಾವಾನನ ಸಂತಾನದವರು - ಎಲೀಷಾ, ತಾರ್ಷೀಷ್, ಕಿತ್ತೀಮ್, ದೋದಾ#10.4 ಅಥವಾ: ರೋದಾ; 1 ಪೂರ್ವ. 1.7. ಎಂಬ ಸ್ಥಳಗಳವರು; ಇವರು ಸಮುದ್ರದ ರೇವುಗಳಲ್ಲಿ ಹರಡಿಕೊಂಡರು.
5ದೇಶಭಾಷಾ ಕುಲಜನಾಂಗಗಳ ಪ್ರಕಾರ [ಇವರೇ ಯೆಫೆತನ ವಂಶದವರು].
6ಹಾಮನ#10.6 6-8 ವಚನಗಳಲ್ಲಿ ಬರೆದಿರುವ ವಿಷಯಗಳು 1 ಪೂರ್ವ. 1.8-10 ರಲ್ಲಿಯೂ ಬರೆದಿವೆ. ಸಂತಾನದವರು ಯಾರಂದರೆ - ಕೂಷ್, ವಿುಚ್ರಯಿಮ್,#10.6 ವಿುಚ್ರಯಿಮ್, ಅಂದರೆ ಐಗುಪ್ತ. ಪೂತ್, ಕಾನಾನ್ ಎಂಬವರೇ.
7ಕೂಷನ ಸಂತಾನದವರು - ಸೆಬಾ, ಹವೀಲ, ಸಬ್ತಾ, ರಗ್ಮ, ಸಬ್ತಕಾ ಎಂಬ ಜನಾಂಗಗಳು. ರಗ್ಮ ಸಂತಾನದವರು - ಶೆಬಾ, ದೆದಾನ್ ಎಂಬ ಜನಾಂಗಗಳು.
8ಕೂಷನು ನಿಮ್ರೋದನನ್ನು ಪಡೆದನು. ಅವನು ಪರಾಕ್ರಮದಿಂದ ಮೊದಲನೆಯ ಭೂರಾಜನಾದನು. 9ಅವನು ಅತಿ#10.9 ಮೂಲ: ಯೆಹೋವನ ದೃಷ್ಟಿಯಲ್ಲಿ. ಸಾಹಸಿಯಾದ ಬೇಟೆಗಾರನು. ನಿಮ್ರೋದನಂತೆ ಅತಿ#10.9 ಮೂಲ: ಯೆಹೋವನ ದೃಷ್ಟಿಯಲ್ಲಿ. ಸಾಹಸಿಯಾದ ಬೇಟೆಗಾರನೆಂದು ಈಗಲೂ ಹೇಳುವದುಂಟಲ್ಲಾ. 10ಶಿನಾರ್ ದೇಶದಲ್ಲಿರುವ ಬಾಬೆಲ್, ಯೆರೆಕ್, ಅಕ್ಕದ್, ಕಲ್ನೇ ಎಂಬ ಪಟ್ಟಣಗಳೇ ಅವನ ರಾಜ್ಯದ ಮೂಲ ಪಟ್ಟಣಗಳು. 11ಅವನು ಆ ದೇಶದಿಂದ ಹೊರಟು ಅಶ್ಶೂರ್ ದೇಶಕ್ಕೆ ಬಂದು ನಿನೆವೆ, ರೆಹೋಬೋತೀರ್, ಕೆಲಹ ಎಂಬ ಪಟ್ಟಣಗಳನ್ನೂ 12ನಿನೆವೆಗೂ ಕೆಲಹಕ್ಕೂ ನಡುವೆ ಇರುವ ರೆಸೆನ್ ಪಟ್ಟಣವನ್ನೂ ಕಟ್ಟಿಸಿದನು. ಇವೆಲ್ಲಾ ಒಟ್ಟಾಗಿ ಮಹಾ ಪಟ್ಟಣವೆಂದು ಪ್ರಸಿದ್ಧವಾಗಿದೆ.
13ವಿುಚ್ರಯಿಮ್ಯರಿಂದ#10.13 13-18 ವಚನಗಳಲ್ಲಿ ಬರೆದಿರುವ ವಿಷಯಗಳು 1 ಪೂರ್ವ. 1.11-16ರಲ್ಲಿಯೂ ಬರೆದಿವೆ. ಲೂದ್ಯರೂ ಅನಾಮ್ಯರೂ ಲೆಹಾಬ್ಯರೂ ನಫ್ತುಹ್ಯರೂ ಪತ್ರುಸ್ಯರೂ ಕಸ್ಲುಹ್ಯರೂ ಕಫ್ತೋರ್ಯರೂ ಹುಟ್ಟಿದರು. 14ಕಸ್ಲುಹ್ಯರ#10.14 ಅಥವಾ: ಕಫ್ತೋರ್ಯರ; ಆಮೋ. 9.7; ಯೆರೆ. 47.4 ನೋಡಿರಿ. ಬಳಿಯಿಂದ ಫಿಲಿಷ್ಟಿಯರು ಹೊರಟುಬಂದರು.
15ಕಾನಾನ್ ವಂಶದಲ್ಲಿ ಮೊದಲು ಹುಟ್ಟಿದವನು ಸೀದೋನ್; ಆಮೇಲೆ ಹೇತ್ ಹುಟ್ಟಿದನು. 16ಇದಲ್ಲದೆ ಯೆಬೂಸಿಯರೂ ಅಮೋರಿಯರೂ ಗಿರ್ಗಾಷಿಯರೂ 17ಹಿವ್ವಿಯರೂ ಅರ್ಕಿಯರೂ ಸೀನಿಯರೂ 18ಅರ್ವಾದಿಯರೂ ಚೆಮಾರಿಯರೂ ಹಮಾತಿಯರೂ ಕಾನಾನನಿಂದ ಹುಟ್ಟಿದರು. ಕಾಲಕ್ರಮದಿಂದ ಈ ಕಾನಾನ್ ಕುಲಗಳವರು ಹರಡಿಕೊಂಡರು. 19ಕಾನಾನ್ಯರ ಸೀಮೆಯು ಸೀದೋನ್ ಪಟ್ಟಣದಿಂದ ಗೆರಾರಿಗೆ ಹೋಗುವ ದಾರಿಯಲ್ಲಿರುವ ಗಾಜಾ ಪಟ್ಟಣದವರೆಗೂ ಮತ್ತು ಸೊದೋಮ್, ಗೊಮೋರ, ಅದ್ಮಾ, ಚೆಬೋಯಿಮ್ ಎಂಬ ಪಟ್ಟಣಗಳಿಗೆ ಹೋಗುವ ದಾರಿಯಲ್ಲಿರುವ ಲೆಷಾ ಊರಿನವರೆಗೂ ಇತ್ತು.
20ಕುಲಭಾಷಾ ದೇಶಜನಾಂಗಗಳ ಪ್ರಕಾರ ಇವರೇ ಹಾಮನ ವಂಶದವರು.
21ಇಬ್ರಿಯರೆಲ್ಲರಿಗೆ ಮೂಲಪುರುಷನೂ ಯೆಫೆತನ ಅಣ್ಣನೂ ಆಗಿದ್ದ ಶೇಮನಿಗೆ ಸಹ ಸಂತಾನವಾಯಿತು. 22ಶೇಮನ#10.22 22-29 ವಚನಗಳಲ್ಲಿ ಬರೆದಿರುವ ವಿಷಯಗಳು 1 ಪೂರ್ವ. 1.17- 25ರಲ್ಲಿಯೂ ಬರೆದಿವೆ. ಸಂತಾನದವರು - ಏಲಾಮ್, ಅಶ್ಶೂರ್, ಅರ್ಪಕ್ಷದ್, ಲೂದ್, ಅರಾಮ್ ಎಂಬವರೇ.
23ಅರಾಮ್ ಸಂತಾನದವರು - ಊಸ್, ಹೂಲ್, ಗೆತೆರ್, ಮಷ್ ಎಂಬವರೇ.
24ಅರ್ಪಕ್ಷದನಿಂದ#10.24 ಕೆಲವು ಪ್ರತಿಗಳಲ್ಲಿ - ಅರ್ಪಕ್ಷದನಿಂದ ಕಾಯಿನಾನನೂ, ಕಾಯಿನಾನನಿಂದ ಶೆಲಹನೂ ಎಂದು ಬರೆದದೆ; ಲೂಕ. 3.35,36 ನೋಡಿರಿ. ಶೆಲಹನೂ ಶೆಲಹನಿಂದ ಎಬರನೂ ಹುಟ್ಟಿದರು.
25ಎಬರನಿಗೆ ಇಬ್ಬರು ಮಕ್ಕಳು ಹುಟ್ಟಿದರು. ಒಬ್ಬನಿಗೆ ಪೆಲೆಗೆಂಬ#10.25 ಪೆಲೆಗ್ ಅಂದರೆ ವಿಂಗಡ. ಹೆಸರು; ಅವನ ಕಾಲದಲ್ಲಿ ಭೂವಿುಯ ಜನಗಳು ವಿಂಗಡವಾದವು. ಅವನ ತಮ್ಮನ ಹೆಸರು ಯೊಕ್ತಾನ್. 26ಯೊಕ್ತಾನನ ಸಂತಾನದವರು - ಅಲ್ಮೋದಾದ್ ಶೆಲೆಪ್ ಹಚರ್ಮಾವೆತ್ ಯೆರಹ ಹದೋರಾಮ್ 27,28ಊಜಾಲ್ ದಿಕ್ಲಾ ಓಬಾಲ್ ಅಬೀಮಯೇಲ್ ಶೆಬಾ 29ಓಫೀರ್‍‍ಹವೀಲ ಯೋಬಾಬ್ ಎಂಬ ಸ್ಥಳಗಳವರು. ಈ ಕುಲಗಳೆಲ್ಲಾ ಯೊಕ್ತಾನನಿಂದ ಹುಟ್ಟಿದವು. 30ಇವರ ನಿವಾಸವು ಮೇಶಾಸೀಮೆ ಮೊದಲುಗೊಂಡು ಮೂಡಲಲ್ಲಿರುವ ಸೆಫಾರ್ ಎಂಬ ಬೆಟ್ಟದವರೆಗೂ ಇತ್ತು.
31ಕುಲಭಾಷಾ ಜನಾಂಗಗಳ ಪ್ರಕಾರ ಇವರೇ ಶೇಮನ ವಂಶದವರು.
32ಸಂತತಿ ಜನಾಂಗಗಳ ಪ್ರಕಾರ ಇವರೇ ನೋಹನ ವಂಶದವರು. ಜಲಪ್ರಳಯವಾದನಂತರ ಭೂವಿುಯ ಮೇಲೆ ಹರಡಿಕೊಂಡ ಜನಾಂಗಗಳವರು ಇವರೇ.

Zvýraznění

Sdílet

Kopírovat

None

Chceš mít své zvýrazněné verše uložené na všech zařízeních? Zaregistruj se nebo se přihlas