1 ಪೂರ್ವ 1
1
ಆದಾಮನಿಂದ ಅಬ್ರಹಾಮನವರೆಗೆ ಬೆಳೆದು ಬಂದ ವಂಶಾವಳಿ
1ಆದಾಮನ ಸಂತಾನದವರು; ಸೇತ್, ಎನೋಷ್, 2ಕೇನಾನ್, ಮಹಲಲೇಲ್, ಯೆರೆದ್, 3ಹನೋಕ್, ಮೆತೂಷೆಲಹ, ಲೆಮೆಕ್, 4ನೋಹ, ಶೇಮ್, ಹಾಮ್, ಯೆಫೆತ್ ಎಂಬವರು.
ಯೆಫೆತರು
5ಯೆಫೆತನ ಸಂತಾನದವರು ಯಾರೆಂದರೆ; ಗೋಮೆರ್, ಮಾಗೋಗ್, ಮಾದಯ್, ಯಾವಾನ್, ತೂಬಲ್, ಮೆಷೆಕ್ ಮತ್ತು ತೀರಾಸ್ ಎಂಬವರು. 6ಗೋಮೆರನ ಸಂತಾನದವರು ಯಾರೆಂದರೆ; ಅಷ್ಕೆನೆಜ್, ರೀಫತ್ ಮತ್ತು ತೋಗರ್ಮ ಎಂಬವರು. 7ಯಾವಾನನ ಸಂತಾನದವರು ಯಾರೆಂದರೆ ಎಲೀಷ, ತಾರ್ಷೀಷ್, ಕಿತ್ತೀಮ್, ದೋದಾನೀಮ್ ಎಂಬ ಸ್ಥಳಗಳವರು.
ಹಾಮನ್ಯರು
8ಹಾಮಾನ ಸಂತಾನದವರು ಯಾರೆಂದರೆ ಕೂಷ್, ಮಿಚ್ರಯಿಮ್, ಪೂಟ್, ಕಾನಾನ್ ಎಂಬವರು. 9ಕೂಷನ ಸಂತಾನದವರು: ಸೆಬಾ, ಹವೀಲ, ಸಬ್ತ, ರಮ್ಮ ಸಬ್ತೆಕ ಎಂಬುವರು. ರಮ್ಮನ ಸಂತಾನದವರು: ಶೆಬ ಮತ್ತು ದೆದಾನ್ ಎಂಬವರು. 10ಕೂಷನು ನಿಮ್ರೋದನನ್ನು ಪಡೆದನು. ಇವನು ಈ ಭೂಮಿಯ ಮೇಲಿನ ಪ್ರಥಮ ಪರಾಕ್ರಮಶಾಲಿ ರಾಜನೆಂದು ಪ್ರಸಿದ್ಧನಾದನು. 11ಮಿಚ್ರಯಿಮ್ಯರಿಂದ ಲೂದ್ಯರೂ, ಅನಾಮ್ಯರೂ, ಲೆಹಾಬ್ಯರೂ, ನಫ್ತುಹ್ಯರೂ, 12ಪತ್ರುಸ್ಯರೂ, ಕಸ್ಲುಹ್ಯರೂ, ಕಫ್ತೋರ್ಯರೂ ಹುಟ್ಟಿದರು. ಕಸ್ಲುಹ್ಯರಿಂದ ಫಿಲಿಷ್ಟಿಯರು ಬಂದರು. 13ಕಾನಾನ್ ವಂಶದಲ್ಲಿ ಮೊದಲು ಹುಟ್ಟಿದವನು ಸೀದೋನ್, ನಂತರ ಹೇತ್ ಎಂಬವನು ಹುಟ್ಟಿದನು. 14ಇದಲ್ಲದೆ ಯೆಬೂಸಿಯರೂ, ಅಮೋರಿಯರೂ, ಗಿರ್ಗಾಷಿಯರೂ, 15ಹಿವ್ವಿಯರೂ, ಅರ್ಕಿಯರೂ, ಸೀನಿಯರೂ, 16ಅರ್ವಾದಿಯರೂ, ಚೆಮಾರಿಯರೂ ಮತ್ತು ಹಮಾತಿಯರೂ ಕಾನಾನನಿಂದ ಹುಟ್ಟಿದವರು.
ಶೇಮನ ವಂಶಾವಳಿ
17ಶೇಮನ ಸಂತಾನದವರು: ಏಲಾಮ್, ಅಶ್ಶೂರ್, ಅರ್ಪಕ್ಷದ್, ಲೂದ್, ಅರಾಮ್, ಊಚ್, ಹೂಲ್, ಗೆತೆರ್ ಮತ್ತು ಮೆಷೆಕ್ ಎಂಬುವರು. 18ಅರ್ಪಕ್ಷದನಿಂದ ಶೆಲಹನೂ ಮತ್ತು ಶೆಳಹನಿಂದ ಏಬೆರನೂ ಹುಟ್ಟಿದನು. 19ಏಬೆರನಿಗೆ ಇಬ್ಬರು ಮಕ್ಕಳು ಹುಟ್ಟಿದರು. ಒಬ್ಬನಿಗೆ ಪೆಲೆಗ್ (ವಿಂಗಡನೆ) ಎಂಬ ಹೆಸರು. ಇವನ ಕಾಲದಲ್ಲಿ ಭೂಮಿಯ ಜನರು ವಿಂಗಡಿಸಲ್ಪಟ್ಟರು. ಇವನ ತಮ್ಮನ ಹೆಸರು ಯೊಕ್ತಾನ್. 20ಯೋಕ್ತಾನನ ಸಂತಾನದವರು: ಅಲ್ಮೋದಾದ್, ಶೆಲೆಫ್, ಹಚರ್ಮಾವೆತ್, ಯೆರಹ, 21ಹದೋರಾಮ್, ಊಜಾಲ್, ದಿಕ್ಲ, 22ಎಬಾಲ್, ಅಬೀಮಾಯೇಲ್, ಶೆಬಾ, 23ಓಫೀರ್, ಹವೀಲಾ ಮತ್ತು ಯೋಬಾಬ್ ಎಂಬುವರು. 24ಶೇಮನ ಸಂತಾನದವರು: ಅರ್ಪಕ್ಷದ್, ಶೆಲಹ, 25ಏಬೆರ್, ಪೆಲೆಗ್, ರೆಯೂ, 26ಸೆರೂಗ್, ನಾಹೋರ್, ತೆರಹ, 27ಅಬ್ರಾಮ್ ಎಂಬ ಹೆಸರು ಹೊಂದಿದ ಅಬ್ರಹಾಮ ಎಂಬುವರು.
ಅಬ್ರಹಾಮನ ವಂಶಾವಳಿ
28ಅಬ್ರಹಾಮನ ಮಕ್ಕಳು: ಇಸಾಕ ಮತ್ತು ಇಷ್ಮಾಯೇಲ್.
29ಇಷ್ಮಾಯೇಲರ ವಂಶಾವಳಿ: ಇಷ್ಮಾಯೇಲನಿಗೆ ಮೊದಲು ಹುಟ್ಟಿದವನು ನೆಬಾಯೋತ್, ಆ ಮೇಲೆ ಹುಟ್ಟಿದವರು ಕೇದಾರ್, ಅದ್ಬೆಯೇಲ್, ಮಿಬ್ಸಾಮ್, 30ಮಿಷ್ಮ, ದೂಮಾ, ಮಸ್ಸ, ಹದದ್, ತೇಮ, 31ಯೆಟೂರ್, ನಾಫೀಷ್ ಮತ್ತು ಕೇದೆಮ್ ಎಂಬುವರು.
32ಅಬ್ರಹಾಮನ ಉಪಪತ್ನಿಯಾದ ಕೆಟೂರಳ ಸಂತಾನದವರು: ಜಿಮ್ರಾನ್, ಯೊಕ್ಷಾನ್, ಮೆದಾನ್, ಮಿದ್ಯಾನ್, ಇಷ್ಬಾಕ್ ಮತ್ತು ಶೂಹ ಎಂಬವರು. ಯೊಕ್ಷಾನನು ಶೆಬಾ ಮತ್ತು ದೆದಾನ್ ಎಂಬವರನ್ನು ಪಡೆದನು. 33ಏಫ, ಏಫೆರ್, ಹನೋಕ್, ಅಬೀದ, ಎಲ್ದಾಯ ಎಂಬವರು ಮಿದ್ಯಾನನಿಂದ ಹುಟ್ಟಿದವರು. ಇವರೆಲ್ಲರೂ ಕೆಟೂರಳ ಸಂತತಿಯವರು. 34ಅಬ್ರಹಾಮನು ಸಾರಳಿಂದ ಇಸಾಕನನ್ನು ಪಡೆದನು. ಏಸಾವ ಮತ್ತು ಇಸ್ರಾಯೇಲ್ ಇಸಾಕನ ಮಕ್ಕಳು.
ಏಸಾವನ ವಂಶಜರು
35ಏಸಾವನ ವಂಶಸ್ಥರು ಯಾರೆಂದರೆ ಎಲೀಫಜ್, ರೆಯೂವೇಲ್, ಯೆಯೂಷ್, ಯಳಾಮ್ ಮತ್ತು ಕೋರಹ ಇವರೇ. 36ಎಲೀಫಜನ ಮಕ್ಕಳು: ತೇಮಾನ್, ಓಮಾರ್, ಜೆಫೀ, ಗತಾಮ್, ಕೆನಜ್; ತಿಮ್ನ ಮತ್ತು ಅಮಾಲೇಕ್ ಎಂಬವರು. 37ರೆಯೂವೇಲನ ಮಕ್ಕಳು: ನಹತ್, ಜೆರಹ, ಶಮ್ಮ ಮತ್ತು ಮಿಜ್ಜ.
ಎದೋಮಿನ ಮೂಲನಿವಾಸಿಗಳು
38ಸೇಯೀರನಿಂದ ಹುಟ್ಟಿದವರು ಲೋಟಾನ್, ಶೋಬಾಲ್, ಚಿಬ್ಬೋನ್, ಅನಾಹ, ದೀಶೋನ್, ಏಚೆರ್ ಮತ್ತು ದೀಶಾನ್ ಸೇಯೀರನ ಮಕ್ಕಳು. 39ಲೋಟಾನನ ಮಕ್ಕಳು ಹೋರೀ ಮತ್ತು ಹೋಮಾಮ್. ಲೋಟಾನನ ತಂಗಿ ತಿಮ್ನ. 40ಶೋಬಾಲನ ಮಕ್ಕಳು ಅಲ್ಯಾನ್, ಮಾನಹತ್, ಏಬಾಲ್, ಶೆಫೀ ಮತ್ತು ಓನಾಮ್. ಚಿಬ್ಬೋನನ ಮಕ್ಕಳು ಅಯ್ಯಾಹ ಮತ್ತು ಅನಾಹ. 41ಅನಾಹನ ಮಗನು ದೀಶೋನ್. ದೀಶೋನನ ಮಕ್ಕಳು ಹಮ್ರಾನ್, ಎಷ್ಬಾನ್, ಇತ್ರಾನ್ ಮತ್ತು ಕೆರಾನ್. 42ಏಚೆರನ ಮಕ್ಕಳು ಬಿಲ್ಹಾನ್, ಜಾವಾನ್ ಮತ್ತು ಯಾಕಾನ್. ದೀಶಾನನ ಮಕ್ಕಳು ಊಚ್ ಮತ್ತು ಅರಾನ್.
ಎದೋಮಿನಲ್ಲಿ ಆಳುತ್ತಿದ್ದ ಅರಸರು
43ಇಸ್ರಾಯೇಲರ ಅರಸರು ಆಳ್ವಿಕೆ ಮಾಡುವುದಕ್ಕಿಂತ ಮೊದಲು ಎದೋಮ್ ದೇಶದಲ್ಲಿ ಅರಸರು ಆಳುತ್ತಿದ್ದರು. ಇವರಲ್ಲಿ ಬೆಯೋರನ ಮಗನಾದ ಬೆಳನು ಮೊದಲನೆಯವನು. ಅವನ ರಾಜಧಾನಿ ಹೆಸರು ದಿನ್ಹಾಬಾ. 44ಬೆಳನು ಸತ್ತ ನಂತರ ಬೊಚ್ರದವನಾದ ಜೆರಹನ ಮಗ ಯೋಬಾಬನು ಅಧಿಪತ್ಯಕ್ಕೆ ಬಂದನು. 45ಯೋಬಾಬನು ಸತ್ತ ಮೇಲೆ ತೇಮಾನೀಯರ ದೇಶದವನಾದ ಹುಷಾಮನು ಆಳ್ವಿಕೆ ಮಾಡಿದನು. 46ಹುಷಾಮನು ಸತ್ತ ಮೇಲೆ ಮೋವಾಬ್ಯರ ಬೈಲಿನಲ್ಲಿ ಮಿದ್ಯಾನರನ್ನು ಸೋಲಿಸಿದ ಬೆದದನ ಮಗನಾದ ಹದದನು ಅರಸನಾದನು. ಅವನ ರಾಜಧಾನಿಯ ಹೆಸರು ಅವೀತ್. 47ಹದದನು ಸತ್ತ ಮೇಲೆ ಮಸ್ರೇಕದವನಾದ ಸಮ್ಲಾಹನು ಪಟ್ಟಕ್ಕೆ ಬಂದನು. 48ಸಮ್ಲಾಹನು ಸತ್ತ ಮೇಲೆ ಯೂಫ್ರೆಟಿಸ್ ನದಿ ತೀರದಲ್ಲಿರುವ ರೆಹೋಬೋತ್ ಊರಿನ ಸೌಲನು ಅರಸನಾದನು. 49ಸೌಲನು ಸತ್ತ ಮೇಲೆ ಅಕ್ಬೋರನ ಮಗನಾದ ಬಾಳ್ಹಾನಾನು ಅರಸನಾದನು. 50ಬಾಳ್ಹಾನಾನ್ ಸತ್ತ ಮೇಲೆ ಹದದನು ಅರಸನಾದನು. ಅವನ ರಾಜಧಾನಿಯ ಹೆಸರು ಪಾಗೀ. ಅವನ ಹೆಂಡತಿಯ ಹೆಸರು ಮೆಹೇಟಬೇಲ್; ಆಕೆ ಮೇಜಾಹಾಬನ ಮಗಳಾದ ಮಟ್ರೇದಳ ಮಗಳು, 51ಹದದನು ಸತ್ತ ನಂತರ ಎದೋಮ್ಯ ಕುಲಪತಿಗಳಾದವರು ಯಾರೆಂದರೆ, ತಿಮ್ನ, ಅಲ್ಯ, ಯೆತೇತ್, 52ಒಹೋಲಿಬಾಮ, ಏಲ, ಪೀನೋನ್, 53ಕೆನೆಜ್, ತೇಮಾನ್, ಮಿಬ್ಚಾರ್, 54ಮಗ್ದೀಯೇಲ್ ಮತ್ತು ಇರಾಮ್ ಇವರೇ.
Currently Selected:
1 ಪೂರ್ವ 1: IRVKan
Highlight
Share
Copy

Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.