1 ಪೂರ್ವ 2
2
ಇಸ್ರಾಯೇಲನ ಮಕ್ಕಳು
1ಇಸ್ರಾಯೇಲನ ಮಕ್ಕಳು ಯಾರೆಂದರೆ ರೂಬೇನ್, ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಜೆಬುಲೂನ್, 2ದಾನ್, ಯೋಸೇಫ್, ಬೆನ್ಯಾಮೀನ್, ನಫ್ತಾಲಿ, ಗಾದ್ ಮತ್ತು ಆಶೇರ್.
3ಯೆಹೂದನಿಗೆ ಏರ್, ಓನಾನ್ ಮತ್ತು ಶೇಲಾಹ ಎಂಬ ಮೂರು ಮಕ್ಕಳು ಶೂನನ ಮಗಳಾದ ಕಾನಾನಳಿಂದ ಹುಟ್ಟಿದರು. ಯೆಹೂದನ ಚೊಚ್ಚಲ ಮಗನಾದ ಏರನು ಯೆಹೋವನ ಚಿತ್ತಕ್ಕೆ ವಿರೋಧವಾಗಿ ನಡೆದುಕೊಂಡದ್ದರಿಂದ ಯೆಹೋವನು ಅವನನ್ನು ಕೊಂದು ಹಾಕಿದನು. 4ಯೆಹೂದನ ಸೊಸೆಯಾದ ತಾಮಾರಳು ಅವನಿಂದ ಪೆರೆಚ್ ಮತ್ತು ಜೆರಹ ಎಂಬವರನ್ನು ಹೆತ್ತಳು.
5ಯೆಹೂದನಿಗೆ ಐದು ಮಕ್ಕಳು. ಪೆರೆಚನ ಮಕ್ಕಳು ಹೆಚ್ರೋನ್ ಮತ್ತು ಹಮೂಲ್. 6ಜೆರಹನ ಐದು ಮಕ್ಕಳು ಜಿಮ್ರಿ, ಏತಾನ್, ಹೇಮಾನ್, ಕಲ್ಕೋಲ್ ಮತ್ತು ದಾರಾ. 7ಯೆಹೋವನಿಗೆ ಮೀಸಲಾದ ವಸ್ತುಗಳನ್ನು ಕದ್ದುಕೊಂಡು ಇಸ್ರಾಯೇಲ್ಯರನ್ನು ಆಪತ್ತಿಗೆ ಗುರಿಮಾಡಿದ #2:7 ಆಕಾರ ದೇವರಿಗೆ ಸಮರ್ಪಿಸಲ್ಪಟ್ಟಿದ್ದ ಕೊಳ್ಳೆಯ ವಸ್ತುಗಳನ್ನು ಕದ್ದು ಬಚ್ಚಿಡುವ ಮೂಲಕ ಇವನು ಇಸ್ರಾಯೇಲ್ಯರ ಮೇಲೆ ಕೇಡನ್ನು ಬರಮಾಡಿದನು. ಯೆಹೋಶುವ ಅಧ್ಯಾಯ 7 ನೋಡಿರಿ.ಆಕಾರನು ಕರ್ಮೀಯನ ಮಗನು. 8ಏತಾನನ ಮಗನು ಅಜರ್ಯನು. 9ಹೆಚ್ರೋನನ ಮಕ್ಕಳು ಯೆರಹ್ಮೇಲನು, ರಾಮ್ ಮತ್ತು ಕೆಲೂಬಾಯ್ ಎಂಬುವರು.
ರಾಮನ ವಂಶಾವಳಿ ಮತ್ತು ದಾವೀದನ ಪೂರ್ವಜರು
10ರಾಮನು ಅಮ್ಮೀನಾದಾಬನನ್ನು ಪಡೆದನು; ಅಮ್ಮಿನಾದಾಬನು ಯೆಹೂದ ಕುಲದ ಪ್ರಭುವಾದ ನಹಶೋನನ್ನು ಪಡೆದನು. 11ನಹಶೋನನು ಸಲ್ಮನನ್ನು ಪಡೆದನು; ಸಲ್ಮನು ಬೋವಜನನ್ನು ಪಡೆದನು. 12ಬೋವಜನು ಓಬೇದನನ್ನು ಪಡೆದನು; ಓಬೇದನು ಇಷಯನನ್ನು ಪಡೆದನು. 13ಇಷಯನ ಚೊಚ್ಚಲ ಮಗನು ಎಲೀಯಾಬ್, ಎರಡನೆಯ ಮಗ ಅಬೀನಾದಾಬ್, 14ಮೂರನೆಯವನು ಶಿಮ್ಮ, ನಾಲ್ಕನೆಯವನು ನೆತನೇಲ್, ಐದನೆಯವನು ರದ್ದೈ. 15ಆರನೆಯವನು ಓಚೆಮ್, ಏಳನೆಯವನು ದಾವೀದ್. 16ಚೆರೂಯ ಮತ್ತು ಅಬೀಗೈಲರು ಅವರ ಸಹೋದರಿಯರು. ಅಬ್ಷೈ, ಯೋವಾಬ ಮತ್ತು ಅಸಾಹೇಲ್ ಎಂಬವರು ಚೆರೂಯಳ ಮಕ್ಕಳು. 17ಅಬೀಗೈಲಳು ಅಮಾಸನ ತಾಯಿ. ಇಷ್ಮಾಯೇಲನಾದ ಯೆತೆರ್ ಎಂಬವನು ಅವನ ತಂದೆ.
ಕಾಲೇಬನ ವಂಶಾವಳಿ
18ಹೆಚ್ರೋನನ ಮಗ ಕಾಲೇಬ. ಇವನು ತನ್ನ ಹೆಂಡತಿ ಅಜೂಬಳಿಂದಲೂ ಮತ್ತು ಯೆರ್ಯೋತಳಿಂದಲೂ ಮಕ್ಕಳನ್ನು ಪಡೆದನು. ಆಕೆಯಲ್ಲಿ ಅವನಿಗೆ ಹುಟ್ಟಿದ ಮಕ್ಕಳು ಯೇಷೆರ್, ಶೋಬಾಬ್ ಮತ್ತು ಅರ್ದೋನ್ ಎಂಬವರು. 19ಅಜೂಬಳು ಸತ್ತ ಮೇಲೆ ಕಾಲೇಬನು ಎಫ್ರಾತಳನ್ನು ಮದುವೆಮಾಡಿಕೊಂಡನು. ಆಕೆಯಲ್ಲಿ ಅವನಿಗೆ ಹೂರನು ಹುಟ್ಟಿದನು. 20ಹೂರನು ಊರಿಯನನ್ನು ಪಡೆದನು; ಊರಿಯನು ಬೆಚಲೇಲನನ್ನು ಪಡೆದನು.
21ಹೆಚ್ರೋನನು ಅರವತ್ತು ವರ್ಷದವನಾದಾಗ ಗಿಲ್ಯಾದ್ಯರ ಮೂಲಪುರುಷನಾದ ಮಾಕೀರನ ಮಗಳನ್ನು ಮದುವೆಮಾಡಿಕೊಂಡನು. ಆಕೆಯು ಅವನಿಂದ ಸೆಗೂಬನನ್ನು ಪಡೆದಳು. 22ಸೆಗೂಬನು ಯಾಯೀರನನ್ನು ಪಡೆದನು; ಇವನಿಗೆ ಗಿಲ್ಯಾದ್ ದೇಶದಲ್ಲಿ ಇಪ್ಪತ್ತ್ಮೂರು ಪಟ್ಟಣಗಳು ಇದ್ದವು. 23ಗೆಷೂರ್ಯರು ಮತ್ತು ಅರಾಮ್ಯರು ಯಾಯೀರನ ಸಂತಾನದವರಿಂದ ಯಾಯೀರಿನ ಗ್ರಾಮಗಳನ್ನೂ ಕೆನತ್ ಪ್ರಾಂತ್ಯದ ಗ್ರಾಮಗಳನ್ನು, ಒಟ್ಟು ಅರವತ್ತು ಸಂಸ್ಥಾನಗಳನ್ನು ಗೆದ್ದುಕೊಂಡರು. ಈ ಸಂಸ್ಥಾನದವರೆಲ್ಲರೂ ಗಿಲ್ಯಾದ್ಯರ ಮೂಲಪುರುಷನಾದ ಮಾಕೀರನ ಗೋತ್ರದವರು. 24ಹೆಚ್ರೋನನು ಕಾಲೇಬನ ಎಫ್ರಾತದಲ್ಲಿ ಮರಣಹೊಂದಿದ ನಂತರ ಅವನ ಹೆಂಡತಿಯಾದ ಅಬೀಯ ಎಂಬಾಕೆಯು ಅಷ್ಹೂರನನ್ನು ಹೆತ್ತಳು. ಇವನು ತೆಕೋವದವರ ಮೂಲಪುರುಷನು.
ಯೆರಹ್ಮೇಲನ ವಂಶಾವಳಿ
25ಹೆಚ್ರೋನನ ಚೊಚ್ಚಲಮಗನಾದ ಯೆರಹ್ಮೇಲನಿಗೆ ಐದು ಮಕ್ಕಳು: ರಾಮ್ ಚೊಚ್ಚಲು ಮಗನು ಹಾಗೆಯೇ ಬೂನ, ಓರೆನ್, ಓಚೆಮ್, ಅಹೀಯ ಎಂಬುವರು ಅನಂತರ ಹುಟ್ಟಿದವರು. 26ಯೆರಹ್ಮೇಲನಿಗೆ ಅಟಾರ ಎಂಬ ಇನ್ನೊಬ್ಬ ಹೆಂಡತಿಯಿದ್ದಳು. ಈಕೆಯು ಓನಾಮನ ತಾಯಿ. 27ಯೆರಹ್ಮೇಲನ ಚೊಚ್ಚಲ ಮಗನಾದ ರಾಮನ ಮಕ್ಕಳು ಮಾಚ್, ಯಾಮೀನ್ ಮತ್ತು ಏಕೆರ್ ಇವರೇ. 28ಓನಾಮನ ಮಕ್ಕಳು ಶಮ್ಮೈ ಮತ್ತು ಯಾದ ಎಂಬುವವರು. ಶಮ್ಮೈನ ಮಕ್ಕಳು ನಾದಾಬ್ ಮತ್ತು ಅಬಿಷೂರ್. 29ಅಬಿಷೂರನ ಹೆಂಡತಿಯ ಹೆಸರು ಅಬೀಹೈಲ್. ಈಕೆಯಲ್ಲಿ ಅಹ್ಬಾನ್ ಮತ್ತು ಮೊಲೀದ್ ಎಂಬುವವರು ಹುಟ್ಟಿದರು. 30ನಾದಾಬನ ಮಕ್ಕಳು ಸೆಲೆದ್ ಮತ್ತು ಅಪ್ಪಯಿಮ್ ಎಂಬುವವರು. ಸೇಲೆದನು ಮಕ್ಕಳಿಲ್ಲದೆ ಸತ್ತುಹೋದನು. 31ಅಪ್ಪಯಿಮನ ಮಗ ಇಷ್ಷೀ. ಇಷ್ಷೀಯನ ಮಗ ಶೇಷಾನ್. ಶೇಷಾನನ ಮಗ ಅಹ್ಲೈ. 32ಶಮ್ಮೈಯ ತಮ್ಮನಾದ ಯಾದನ ಮಕ್ಕಳು ಯೆತೆರ್ ಮತ್ತು ಯೋನಾತಾನ್ ಇವರೇ. ಯೆತೆರನು ಮಕ್ಕಳಿಲ್ಲದೆ ಸತ್ತನು. 33ಯೋನಾತಾನನ ಮಕ್ಕಳು ಪೆಲೆತ್ ಮತ್ತು ಜಾಜ ಎಂಬುವವರು. ಇವರೆಲ್ಲರೂ ಯೆರಹ್ಮೇಲನ ಸಂತಾನದವರು.
34ಶೇಷಾನನಿಗೆ ಹೆಣ್ಣು ಮಕ್ಕಳಿದ್ದರೇ ಹೊರತು ಗಂಡು ಮಕ್ಕಳಿರಲಿಲ್ಲ. ಇದಲ್ಲದೆ ಅವನಿಗೆ ಯರ್ಹನೆಂಬ ಒಬ್ಬ ಐಗುಪ್ತ ಸೇವಕನಿದ್ದನು. 35ಶೇಷಾನನು ತನ್ನ ಮಗಳನ್ನು ಸೇವಕನಾದ ಯರ್ಹನಿಗೆ ಮದುವೆಮಾಡಿಕೊಟ್ಟನು. ಆಕೆಯು ಅವನಿಂದ ಅತ್ತೈಯನ್ನು ಹೆತ್ತಳು. 36ಅತ್ತೈ ನಾತಾನನನ್ನು ಪಡೆದನು; ನಾತಾನನು ಜಾಬಾದನನ್ನು ಪಡೆದನು. 37ಜಾಬಾದನು ಎಫ್ಲಾಲನನ್ನು ಪಡೆದನು; ಎಫ್ಲಾಲನು ಓಬೇದನನ್ನು ಪಡೆದನು. 38ಓಬೇದನು ಯೇಹೂವನ್ನು ಪಡೆದನು; ಯೇಹೂವು ಅಜರ್ಯನನ್ನು ಪಡೆದನು. 39ಅಜರ್ಯನು ಹೆಲೆಚನನ್ನು ಪಡೆದನು; ಹೆಲೆಚನು ಎಲ್ಲಾಸನನ್ನು ಪಡೆದನು. 40ಎಲ್ಲಾಸನು ಸಿಸ್ಮೈಯನ್ನು ಪಡೆದನು; ಸಿಸ್ಮೈಯು ಶಲ್ಲೂಮನನ್ನು ಪಡೆದನು. 41ಶಲ್ಲೂಮನು ಯೆಕಮ್ಯಾಹನನ್ನು ಪಡೆದನು; ಯೆಕಮ್ಯಾಹನನು ಎಲೀಷಾಮನನ್ನು ಪಡೆದನು.
ಕಾಲೇಬನ ಗೋತ್ರಗಳು
42ಯೆರಹೇಲ್ಮನ ಸಹೋದರನಾದ ಕಾಲೇಬನ ಸಂತಾನದವರು: ಚೊಚ್ಚಲನು ಜೀಫ್ಯರ ಮೂಲಪುರುಷನಾದ ಮೇಷನು, ಎರಡನೆಯವನು ಮಾರೇಷನು. 43ಮಾರೇಷನು ಹೆಬ್ರೋನ್ಯರ ಮೂಲಪುರುಷನು. ಹೆಬ್ರೋನ್ಯರ ಮಕ್ಕಳು ಕೋರಹ, ತಪ್ಪೂಹ, ರೆಕೆಮ್ ಮತ್ತು ಶೆಮ. 44ಶೆಮ್ಯರಿಂದ ರಹಮ್ಯರು, ರಹಮ್ಯರಿಂದ ಯೊರ್ಕೆಯಾಮ್ಯರು ಹುಟ್ಟಿದರು. 45ರೆಕೆಮನು ಶಮ್ಮೈನನ್ನು ಪಡೆದನು. ಶಮ್ಮೈನಿಂದ ಮವೋನ್ಯರು, ಮವೋನ್ಯರಿಂದ ಬೇತ್‌ಚೂರಿನವರು ಹುಟ್ಟಿದರು.
46ಕಾಲೇಬನ ಉಪಪತ್ನಿಯಾದ ಏಫಳಲ್ಲಿ ಹಾರಾನ್, ಮೋಚ ಮತ್ತು ಗಾಜೇಜ್ ಎಂಬುವವರು ಹುಟ್ಟಿದರು. 47ಹಾರಾನನು ಗಾಜೇಜನನ್ನು ಪಡೆದನು. ಯಾದೈಯಳಲ್ಲಿ ರೆಗೆಮ್, ಯೋತಾಮ್, ಗೇಷಾನ್, ಪೆಲೆಟ್, ಏಫ ಮತ್ತು ಶಾಫ್ ಎಂಬುವವರು ಹುಟ್ಟಿದರು. 48ಕಾಲೇಬನ ಉಪಪತ್ನಿಯಾದ ಮಾಕಳಲ್ಲಿ ಶೆಬೆರ್ ಮತ್ತು ತಿರ್ಹನ್ ಎಂಬುವವರು ಹುಟ್ಟಿದರು. 49ಇವಳಲ್ಲಿ ಮದ್ಮನ್ನದವರ ಮೂಲಪುರುಷನಾದ ಶಾಫ್; ಮಕ್ಬೇನಾ ಮತ್ತು ಗಿಬ್ಯ ಪಟ್ಟಣದವರ ಮೂಲಪುರುಷನಾದ ಶೆವ ಇವರು ಹುಟ್ಟಿದರು. ಕಾಲೇಬನ ಮಗಳು ಅಕ್ಷಾ. 50ಕಾಲೇಬನ ಹೆಂಡತಿಯಾದ ಎಫ್ರಾತಳ ಚೊಚ್ಚಲ ಮಗನಾದ ಹೂರನ ಮಕ್ಕಳು ಕಿರ್ಯತ್ಯಾರೀಮರ ಮೂಲಪುರುಷನಾದ ಶೋಬಾಲ್, 51ಬೇತ್ಲೆಹೇಮ್ಯರ ಮೂಲಪುರುಷನಾದ ಸಲ್ಮ ಮತ್ತು ಬೇತ್ಗಾದೇರಿನ ಮೂಲಪುರುಷನಾದ ಹಾರೇಫ್. 52ಕಿರ್ಯತ್ಯಾರೀಮಿನ ಮೂಲಪುರುಷನಾದ ಶೋಬಾಲನ ಸಂತಾನದವರು ಹಾರೋಯೆ, ಮಾನಹತಿಯರ ಅರ್ಧ ಜನರು, 53ಕಿರ್ಯತ್ಯಾರೀಮ್ ಕುಟುಂಬಗಳವರು, ಯೆತೆರಿನವರು, ಪೂತ್ಯರು, ಶುಮಾತ್ಯರು ಮತ್ತು ಮಿಷ್ರಾಗ್ಯರು ಇವರೇ. ಇವರಿಂದ ಹುಟ್ಟಿದ ಜನಾಂಗ ಚೊರ್ರಾತ್ಯರೂ ಮತ್ತು ಎಷ್ಟಾವೋಲ್ಯರೂ. 54ಸಲ್ಮನಿಂದ ಬೇತ್ಲೆಹೇಮ್, ನೆಟೋಫಾ, ಅಟರೋತ್, ಬೇತ್ಯೋವಾಬ್ ಊರುಗಳವರೂ, ಚೊರ್ಗದಲ್ಲಿ ವಾಸಿಸುವ ಮಾನಹತಿಯರಲ್ಲಿ ಅರ್ಧ ಜನರೂ ಹುಟ್ಟಿದರು. 55ಯಾಬೇಚಿನಲ್ಲಿ ವಾಸಿಸುವ ಬರವಣಿಗೆಯಲ್ಲಿ ಮತ್ತು ದಾಖಲೆಗಳನ್ನು ಬರೆಯುವುದರಲ್ಲೂ ಮತ್ತು ಪ್ರತಿಗಳನ್ನು ಮಾಡುವುದರಲ್ಲೂ ಪ್ರವೀಣರಾದ ತಿರ್ರಾತ್ಯರು, ಶಿಮ್ಗಾತ್ಯರು ಮತ್ತು ಸೂಕಾತ್ಯರು, ಇವರು ರೇಕಾಬನ ಮನೆಯವರ ಮೂಲ ಪುರುಷನಾಗಿರುವ ಹಮತನಿಂದ ಹುಟ್ಟಿದ ಕೇನ್ಯರು.
Currently Selected:
1 ಪೂರ್ವ 2: IRVKan
Highlight
Share
Copy

Want to have your highlights saved across all your devices? Sign up or sign in
KAN-IRV
Creative Commons License
Indian Revised Version (IRV) - kannada (ಭಾರತೀಯ ಪರಿಷ್ಕೃತ ಆವೃತ್ತಿ - ಕನ್ನಡ), 2019 by Bridge Connectivity Solutions Pvt. Ltd. is licensed under a Creative Commons Attribution-ShareAlike 4.0 International License. This resource is published originally on VachanOnline, a premier Scripture Engagement digital platform for Indian and South Asian Languages and made available to users via vachanonline.com website and the companion VachanGo mobile app.