YouVersion Logo
Search Icon

ಜೆಕರ್ಯ 3

3
ಮಹಾಯಾಜಕನ ಉಡುಪು ಮಾರ್ಪಡುವ ಕನಸು
1ಅನಂತರ ಮಹಾಯಾಜಕನಾದ ಯೆಹೋಶುವನು ಯೆಹೋವನ ದೂತನ ಮುಂದೆ ನಿಂತಿರುವದನ್ನು ಯೆಹೋವನು ನನಗೆ ತೋರಿಸಿದನು; ಸೈತಾನನು ಯೆಹೋಶುವನಿಗೆ#3.1 ಅಥವಾ: ವಿವರಿಸುವ ದೇವದೂತನ; ಮೂಲ: ಅವನು. ಪ್ರತಿಕಕ್ಷಿಯಾಗಿ ಅವನ ಬಲಗಡೆಯಲ್ಲಿ ನಿಂತಿದ್ದನು. 2ಆಗ ಯೆಹೋವನ#3.2 ಮೂಲ: ಯೆಹೋವನು. ದೂತನು ಸೈತಾನನಿಗೆ - ಸೈತಾನನೇ, ಯೆಹೋವನು ನಿನ್ನನ್ನು ಖಂಡಿಸಲಿ, ಹೌದು, ಯೆರೂಸಲೇಮನ್ನು ಆರಿಸಿಕೊಂಡಿರುವ ಯೆಹೋವನು ನಿನ್ನನ್ನು ಖಂಡಿಸಲಿ! ಅದು ಉರಿಯಿಂದ ಎಳೆದ ಕೊಳ್ಳಿಯಾಗಿದೆಯಲ್ಲಾ ಎಂದು ಹೇಳಿದನು. 3ಯೆಹೋಶುವನು ದೇವದೂತನ ಮುಂದೆ ಕೊಳೆಬಟ್ಟೆಯಾಗಿ ನಿಂತಿರಲು 4ದೇವದೂತನು ತನ್ನ ಸೇವಕರಿಗೆ - ಇವನ ಕೊಳೆಬಟ್ಟೆಗಳನ್ನು ತೆಗೆದುಬಿಡಿರಿ ಎಂದು ಅಪ್ಪಣೆಕೊಟ್ಟು ಅವನಿಗೆ - ಇಗೋ, ನಿನ್ನ ದೋಷವನ್ನು ನಿನ್ನಿಂದ ತೊಲಗಿಸಿದ್ದೇನೆ, ನಿನಗೆ ಶ್ರೇಷ್ಠವಸ್ತ್ರಗಳನ್ನು ತೊಡಿಸುವೆನು ಎಂದು ಹೇಳಿದನು. 5ಇವನ ತಲೆಗೆ ಶುಭ್ರವಾದ ಮುಂಡಾಸವನ್ನು ಸುತ್ತಿರಿ#3.5 ಪಾಠಾಂತರ: ಸುತ್ತಲೆಂದು. ನಾನು ಸೂಚಿಸಲು. ಎಂದು ಅವನು ಅಪ್ಪಣೆಕೊಡಲು ಅವರು ಅವನ ತಲೆಗೆ ಶುಭ್ರವಾದ ಮುಂಡಾಸವನ್ನು ಸುತ್ತಿ ಅವನಿಗೆ ವಸ್ತ್ರಗಳನ್ನು ಹಾಕಿದರು; ಆಗ ಯೆಹೋವನ ದೂತನು ಎದ್ದು ನಿಂತಿದ್ದನು. 6ಮತ್ತು ಯೆಹೋವನ ದೂತನು ಯೆಹೋಶುವನಿಗೆ ಈ ಮಾತು ಕೊಟ್ಟನು - 7ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ - ನೀನು ನನ್ನ ಮಾರ್ಗಗಳಲ್ಲಿ ನಡೆದು ನಾನು ನಿನಗೆ ವಹಿಸಿದ ಪಾರುಪತ್ಯವನ್ನು ನೆರವೇರಿಸಿದರೆ ನನ್ನ ಆಲಯದ ಮುಖ್ಯಾಧಿಕಾರಿಯಾಗಿ ನನ್ನ ಪ್ರಾಕಾರಗಳನ್ನು ನೋಡಿಕೊಳ್ಳುವಿ; ಈ ಸನ್ನಿಧಾನದೂತರ ನಡುವೆ ಪ್ರವೇಶಿಸುವ ಹಕ್ಕನ್ನು ನಿನಗೆ ಕೊಡುವೆನು. 8ಮಹಾಯಾಜಕನಾದ ಯೆಹೋಶುವನೇ, ನೀನೂ ನಿನ್ನ ಮುಂದೆ ಕೂತುಕೊಳ್ಳುವ ನಿನ್ನ ಸಹಕಾರಿಗಳೂ ಕೇಳಿರಿ; ಇಗೋ, ಮೊಳಿಕೆ ಎಂಬ ನನ್ನ ಸೇವಕನನ್ನು ಹೊರಡಿಸುತ್ತೇನೆಂಬದಕ್ಕೆ ಇವರೇ ಮುಂಗುರುತು. 9ನಾನು ಯೆಹೋಶುವನ ಮುಂದೆ ಇಟ್ಟಿರುವ ಕಲ್ಲನ್ನು#3.9 ಅಥವಾ: ರತ್ನವನ್ನು ನೋಡಿರಿ; ಆ ಒಂದು ರತ್ನಕ್ಕೆ ಏಳು ಮುಖಗಳಿವೆ. ನೋಡಿರಿ; ಆ ಒಂದೇ ಕಲ್ಲಿನಲ್ಲಿ ಏಳು#3.9 ಅಥವಾ: ಏಳು. ಕಣ್ಣುಗಳು ಚಿತ್ರಿಸಲ್ಪಟ್ಟಿವೆ. ಜೆಕ. 4.10; ಪ್ರಕ. 5.6. ಕಣ್ಣುಳ್ಳಾತನ ದೃಷ್ಟಿಯು ಬಿದ್ದಿದೆ; ಇಗೋ, ನಾನೇ ಅದರಲ್ಲಿ ಕೆತ್ತನೆ ಕೆತ್ತುವೆನು; ಇದು ಸೇನಾಧೀಶ್ವರ ಯೆಹೋವನ ನುಡಿ; ಒಂದೇ ದಿನದೊಳಗೆ ದೇಶದ ಪಾಪವನ್ನು ಪರಿಹರಿಸುವೆನು. 10ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ - ಆ ದಿನದಲ್ಲಿ ನೀವೆಲ್ಲರು ನಿಮ್ಮ ನಿಮ್ಮ ನೆರೆಹೊರೆಯವರನ್ನು ದ್ರಾಕ್ಷಾಲತೆ ಅಂಜೂರಗಿಡ ಇವುಗಳ ನೆರಳಿಗೆ ಕರೆಯುವಿರಿ.

Highlight

Share

Copy

None

Want to have your highlights saved across all your devices? Sign up or sign in

Videos for ಜೆಕರ್ಯ 3