YouVersion Logo
Search Icon

ಕೀರ್ತನೆಗಳು 11

11
ಯೆಹೋವನ ಶರಣರಿಗೆ ದುರ್ಗತಿಯಿಲ್ಲವೆಂಬದು ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ತೆಗೆದದ್ದು; ದಾವೀದನದು
1ಯೆಹೋವನನ್ನು ಆಶ್ರಯಿಸಿಕೊಂಡಿದ್ದೇನೆ.
2ನೀವು - ದುಷ್ಟರು ಕತ್ತಲಲ್ಲಿ ಯಥಾರ್ಥ ಹೃದಯವುಳ್ಳವರನ್ನು ಕೊಲ್ಲಬೇಕೆಂದು
ಬಿಲ್ಲುಬೊಗ್ಗಿಸಿ ಹೆದೆಗೆ ಬಾಣವನ್ನು ಹೂಡಿದ್ದಾರೆ ನೋಡಿರಿ;
3ಪಕ್ಷಿಗಳಂತೆ ನಿಮ್ಮ ಬೆಟ್ಟಗಳಿಗೆ ಓಡಿಹೋಗಿರಿ.
ಆಧಾರಗಳೇ ಕೆಡವಲ್ಪಟ್ಟ ಮೇಲೆ
ನೀತಿವಂತನ ಗತಿ ಏನಾದೀತು ಎಂದು ನನಗೆ ಹೇಳುವದೇಕೆ?
4ಯೆಹೋವನು ತನ್ನ ಪರಿಶುದ್ಧ ಮಂದಿರದಲ್ಲಿದ್ದಾನೆ;
ಆತನು ತನ್ನ ಸಿಂಹಾಸನವನ್ನು ಪರಲೋಕದಲ್ಲಿ ಸ್ಥಾಪಿಸಿದ್ದಾನೆ.
ಆತನ ಕಣ್ಣುಗಳು ಮಾನವರನ್ನು ನೋಡುತ್ತವೆ;
ಆತನು ಅವರನ್ನು ಬಹು ಸೂಕ್ಷ್ಮವಾಗಿ ಪರಿಶೋಧಿಸುತ್ತಾನೆ.
5ಯೆಹೋವನು ನೀತಿವಂತರನ್ನೂ ಅನೀತಿವಂತರನ್ನೂ ಪರೀಕ್ಷಿಸುತ್ತಾನೆ;
ಬಲಾತ್ಕಾರಿಗಳನ್ನು ದ್ವೇಷಿಸುತ್ತಾನೆ.
6ಆತನು ದುಷ್ಟರ ಮೇಲೆ ಪಾಶಗಳನ್ನು ಸುರಿಸಲಿ.
ಬೆಂಕಿ ಗಂಧಕ ಉರಿಗಾಳಿ ಇವುಗಳನ್ನು ಅವರ ಪಾನವಾಗಮಾಡಲಿ.
7ಯಾಕಂದರೆ ನೀತಿಸ್ವರೂಪನಾದ ಯೆಹೋವನು ನೀತಿಯನ್ನು ಮೆಚ್ಚುವವನಾಗಿದ್ದಾನೆ.
ಸಜ್ಜನರು ಆತನ ಸಾನ್ನಿಧ್ಯದಲ್ಲಿ ಇರುವರು.

Highlight

Share

Copy

None

Want to have your highlights saved across all your devices? Sign up or sign in

Videos for ಕೀರ್ತನೆಗಳು 11